ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಇಂಡಿಯಾ 2021ರ ನವೆಂಬರ್ ತಿಂಗಳ ಮಾಸಿಕ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ವರದಿಗಳ ಪ್ರಕಾರ ಎಂಜಿ ಕಂಪನಿಯು ಕಳೆದ ತಿಂಗಳು ಒಟ್ಟು 2,481 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಎಂಜಿ ಕಂಪನಿಯು 4,163 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.40 ಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ. ಎಂಜಿ ಹೇಳುವಂತೆ ಇದು ಮುಖ್ಯವಾಗಿ ಜಾಗತಿಕ ಸೆಮಿಕಂಡಕ್ಟರ್ ಚಿಪ್ ಕೊರತೆಯಿಂದಎಂಜಿ ವಾಹನ ಉತ್ಪಾದನೆಯ ಮಟ್ಟವನ್ನು ತೀವ್ರವಾಗಿ ನಿರ್ಬಂಧಿಸಿದೆ. ಸೆಮಿಕಂಡಕ್ಟರ್ ಚಿಪ್ ಕೊರತೆಯು ಎಂಜಿ ಕಂಪನಿಯ ಉತ್ಪಾದನೆಯ ಮೇಲೆ ಭಾರೀ ಪರಿಣಾಮವನ್ನು ಬೀರಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಎಂಜಿ ಕಂಪನಿಯು 2,863 ಯೂನಿಟ್‌ಗಳನ್ನು ಬಿಡುಗಡೆಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಎಂಜಿ ಶೇ.13 ರಷ್ಟು ಕುಸಿತವನ್ನು ಕಂಡಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ, "ಉತ್ಪಾದನಾ ಮಟ್ಟವನ್ನು ತೀವ್ರವಾಗಿ ನಿರ್ಬಂಧಿಸಿರುವ ಜಾಗತಿಕ ಸೆಮಿಕಂಡಕ್ಟರ್ ಚಿಪ್ ಕೊರತೆಯ ಉದ್ಯಮದ ಸವಾಲುಗಳನ್ನು ಸಹಿಸಿಕೊಂಡು, ಎಂಜಿ ಮೋಟಾರ್ ತಮ್ಮ ಕಾರುಗಳನ್ನು ಗ್ರಾಹಕರಿಗೆ ಸಮಯಕ್ಕೆ ತಲುಪಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಇದೀಗ, ಕಂಪನಿಯು ಮುಖ್ಯವಾಗಿ ಹೊಸದಾಗಿ ಬಿಡುಗಡೆಯಾದ ಎಂಜಿ ಆಸ್ಟರ್ ಕಾಂಪ್ಯಾಕ್ಟ್ ಎಸ್‍ಯುವಿಯ ವಿತರಣೆಗಳ ಮೇಲೆ ಕೇಂದ್ರೀಕರಿಸಿದೆ. ವಾಹನದ ಬುಕಿಂಗ್ ಸಂಖ್ಯೆಗಳು ತಿಳಿದಿಲ್ಲವಾದರೂ, 2021ರ ಅಂತ್ಯದ ವೇಳೆಗೆ ಭಾರತದಲ್ಲಿ ಸುಮಾರು 5000 ಯುನಿಟ್‌ಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಎಂಜಿ ಈ ಹಿಂದೆ ಹೇಳಿತ್ತು.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾದ ಮುಖ್ಯ ಕಮರ್ಷಿಯಲ್ ಅಧಿಕಾರಿ ಗೌರವ್ ಗುಪ್ತಾ ಅವರು ಮಾತನಾಡಿ, ಎಂಜಿ ಆಸ್ಟರ್‌ನ ಮೊದಲ ಬ್ಯಾಚ್‌ನ ಸೆಮಿಕಂಡಕ್ಟರ್ ಕ್ರಂಚ್‌ನಿಂದ ವಿತರಣೆಗಳು ವಿಳಂಬವಾಗಬಹುದು ಎಂದು ಹೇಳಿದ್ದರು. ಈ ಕ್ಯಾಲೆಂಡರ್ ವರ್ಷದಲ್ಲಿ ನಮ್ಮ ಮೊದಲ 5000 ಕಾರುಗಳನ್ನು ನಮ್ಮ ಬ್ಯಾಚ್ 1 ತಲುಪಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಅಳವಡಿಸಿಕೊಂಡಿರುವ ದೇಶದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ಪಾತ್ರವಾಗಿದೆ. ಈ ಬಗ್ಗೆ ಸ್ವತಃ ಕಂಪನಿಯೇ ಮಾಹಿತಿ ನೀಡಿದೆ. ತನ್ನ ಹಲೋಲ್ ಉತ್ಪಾದನಾ ಘಟಕದಲ್ಲಿ ಬಳಸಲಾಗುವ 50% ನಷ್ಟು ಶಕ್ತಿಯು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತದೆ ಎಂದು ಕಂಪನಿ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಕಂಪನಿಯು ಗ್ರೀನ್ ಎನರ್ಜಿ ಪಡೆಯಲು ರಾಜ್‌ಕೋಟ್‌ನಲ್ಲಿರುವ ಕ್ಲೀನ್‌ಮ್ಯಾಕ್ಸ್ ವಿಂಡ್ ಸೋಲಾರ್ ಹೈಬ್ರಿಡ್ ಪಾರ್ಕ್‌ನೊಂದಿಗೆ ಕೈಜೋಡಿಸಿದೆ. ಎಂಜಿ ಮೋಟಾರ್ ತನ್ನ ಹಲೋಲ್ ಉತ್ಪಾದನಾ ಘಟಕಕ್ಕಾಗಿ 4.85 ಮೆ.ವ್ಯಾ ವಿಂಡ್ ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಪಡೆಯುವುದಾಗಿ ತಿಳಿಸಿದೆ. ಇದರಿಂದ 15 ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಮೆಟ್ರಿಕ್ ಟನ್ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಎಂಜಿ ಮೋಟಾರ್ ಕಂಪನಿ ಹೇಳಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಈ ಪ್ರಮಾಣವು 13 ಲಕ್ಷ ಮರಗಳನ್ನು ನೆಡುವುದಕ್ಕೆ ಸಮವಾಗಿದೆ. ಈ ಯೋಜನೆಯ ಬಗ್ಗೆ ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ ಮಾತನಾಡಿ, ಈ ಕ್ರಮವು ಸುಸ್ಥಿರ ಭವಿಷ್ಯದ ಕಡೆಗೆ ಕಂಪನಿಯು ಹೊಂದಿರುವ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕಂಪನಿಯು ಸುಸ್ಥಿರ ಭವಿಷ್ಯಕ್ಕಾಗಿ ತನ್ನ ಬದ್ಧತೆಯನ್ನು ಖಾತ್ರಿಪಡಿಸಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಇದರಿಂದ ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಅಳವಡಿಸಿಕೊಳ್ಳಲು ಹಾಗೂ ಪರಿಸರವನ್ನು ರಕ್ಷಿಸಲು ಕೊಡುಗೆ ನೀದುವಂತೆ ಹಲವರನ್ನು ಉತ್ತೇಜಿಸುತ್ತದೆ. ಕ್ಲೀನ್‌ಮ್ಯಾಕ್ಸ್‌ನೊಂದಿಗಿನ ನಮ್ಮ ಒಡನಾಟವು ಶುದ್ಧ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ರಾಜೀವ್ ಛಾಬಾ ಹೇಳಿದರು. ಈ ಯೋಜನೆಯೊಂದಿಗೆ ನಮ್ಮ ಶಕ್ತಿಯ ವೆಚ್ಚವನ್ನು ಕಡಿಮೆ ಮಾಡುವಾಗ ಸುಸ್ಥಿರ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ನಮ್ಮ ಪಾತ್ರವನ್ನು ಹೆಚ್ಚಿಸುವುದಾಗಿ ನಾವು ಭಾವಿಸುತ್ತೇವೆ ಎಂದು ಅವರು ತಿಳಿಸಿದರು.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಈ ಸಹಯೋಗದ ಬಗ್ಗೆ ಮಾತನಾಡಿದ ಕ್ಲೀನ್‌ಮ್ಯಾಕ್ಸ್‌ನ ಸಂಸ್ಥಾಪಕ ಹಾಗೂ ಎಂಡಿ ಕುಲದೀಪ್ ಜೈನ್, ಎಂಜಿ ಮೋಟಾರ್ ಹೈಬ್ರಿಡ್ ಫಾರಂನಿಂದ ತನ್ನ 50% ನಷ್ಟು ವಿದ್ಯುತ್ ಅಗತ್ಯವನ್ನು ಪೂರೈಸುತ್ತಿದೆ ಎಂದು ಹೇಳಿದರು. ಈ ಎಲೆಕ್ಟ್ರಿಕ್ ಎಸ್‌ಯುವಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 419 ಕಿ.ಮೀಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು 8 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಮೂರು ಡ್ರೈವಿಂಗ್ ಮೋಡ್‌ಗಳೊಂದಿಗೆ ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ.

ನವೆಂಬರ್ ತಿಂಗಳಿನಲ್ಲಿ 2,481 ಕಾರುಗಳನ್ನು ಮಾರಾಟಗೊಳಿಸಿದ MG Motor

ಎಂಜಿ ಕಾರುಗಳ ಉತ್ಪಾದನೆಯ ಮೇಲೆ ಸೆಮಿಕಂಡಕ್ಟರ್ ಚಿಪ್‌ಗಳ ತೀವ್ರ ಕೊರತೆ ಎದುರಾಗಿದೆ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಇದರಿಂದ ಅದರ ಡೀಲರ್‌ಶಿಪ್‌ಗಳಲ್ಲಿ ಸೀಮಿತ ಸ್ಟಾಕ್‌ಗಳಿವೆ. ಆದರೆ ಕಂಪನಿಯ ಪ್ರಕಾರ ಎಂಜಿ ಕಾರುಗಳ ಬೇಡಿಕೆಯು ಕುಸಿದಿಲ್ಲ, ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆ ನಿವಾರಿಸಿ ಉತ್ಪಾದನೆಯನ್ನು ಹೆಚ್ಚಿಸಲು ಎಂಜಿ ಕಂಪನಿಯು ಪ್ರಯತ್ನಿಸುತ್ತಿದೆ.

Most Read Articles

Kannada
English summary
Mg motor india sold 2481 units in november 2021 details
Story first published: Wednesday, December 1, 2021, 19:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X