ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಇಂಡಿಯಾ ಕಂಪನಿಯು 2021ರ ಜನವರಿ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ಕಂಪನಿಯು ಜನವರಿಯಲ್ಲಿ 3,602 ಯೂನಿಟ್ ಕಾರುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಕಂಪನಿಯ ಕಾರು ಮಾರಾಟವು 15%ನಷ್ಟು ಹೆಚ್ಚಾಗಿದೆ.

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಎಂಜಿ ಕಂಪನಿಯ ಹೆಕ್ಟರ್ ಎಸ್‌ಯುವಿ ಹಾಗೂ ಗ್ಲೋಸ್ಟರ್‌ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಸದ್ಯಕ್ಕೆ ಎಂಜಿ ಹೆಕ್ಟರ್‌ ವಿತರಣೆ ಪಡೆಯಲು 2 ತಿಂಗಳು ಹಾಗೂ ಗ್ಲೋಸ್ಟರ್‌ ವಿತರಣೆ ಪಡೆಯಲು 3-4 ತಿಂಗಳು ಕಾಯಬೇಕಾಗಿದೆ. ಗುಜರಾತ್‌ನಲ್ಲಿರುವ ಹಲೋಲ್ ಘಟಕವನ್ನು 11 ದಿನಗಳ ಕಾಲ ನಿರ್ವಹಣೆಗಾಗಿ ಮುಚ್ಚಲಾಗಿದ್ದ ಕಾರಣ ಕಾರುಗಳ ವಿತರಣೆಗೆ ತೊಂದರೆಯಾಗಿದೆ.

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯ ಝಡ್ಎಸ್ ಎಲೆಕ್ಟ್ರಿಕ್ ಕಾರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಕಂಪನಿಯು ಹೊಸ ನಗರಗಳಲ್ಲಿ ಎಂಡಿ ಝಡ್ಎಸ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಕಂಪನಿಯ ಗ್ಲೋಸ್ಟರ್‌ ಕಾರಿನಲ್ಲಿ ಲೆವೆಲ್ 1 ಅಟೋನಾಮಸ್ ಡ್ರೈವಿಂಗ್ ಟೆಕ್ನಾಲಜಿಯನ್ನು ಬಳಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ವಾಹನ ತಯಾರಿಕೆಯಲ್ಲಿ 96 ವರ್ಷಗಳ ಇತಿಹಾಸವನ್ನು ಹೊಂದಿದೆ. ಕಂಪನಿಯು 1924ರಲ್ಲಿ ಇಂಗ್ಲೆಂಡಿನಲ್ಲಿ ಸ್ಥಾಪನೆಯಾಯಿತು. ಕಂಪನಿಯ ಕಾರುಗಳು ಬ್ರಿಟಿಷ್ ರಾಜ ಮನೆತನದ ನೆಚ್ಚಿನ ಕಾರುಗಳಾಗಿವೆ. ಭಾರತದಲ್ಲಿ ಎಂಜಿ ಮೋಟಾರ್ ಕಂಪನಿಯು ಗುಜರಾತ್‌ನ ಹಲೋಲ್‌ ಘಟಕದಲ್ಲಿ ಕಾರುಗಳನ್ನು ಉತ್ಪಾದಿಸುತ್ತದೆ.

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಈ ಘಟಕವು ವರ್ಷಕ್ಕೆ 80,000 ಯೂನಿಟ್ ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿಯ ಹೆಕ್ಟರ್ ಭಾರತದ ಮೊದಲ ಇಂಟರ್ ನೆಟ್ ಹೊಂದಿರುವ ಎಸ್‌ಯುವಿಯಾಗಿದೆ. ಎಂಜಿ ಮೋಟಾರ್ ಕಂಪನಿಯು ಇತ್ತೀಚೆಗೆ ಹೆಕ್ಟರ್ ಫೇಸ್‌ಲಿಫ್ಟ್ ಹಾಗೂ 7 ಸೀಟುಗಳ ಹೆಕ್ಟರ್ ಪ್ಲಸ್ ಮಾದರಿಗಳನ್ನು ಬಿಡುಗಡೆಗೊಳಿಸಿತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಇದರ ಜೊತೆಗೆ ಕಂಪನಿಯು ಝಡ್ಎಸ್ ಕಾರ್ ಅನ್ನು ಪೆಟ್ರೋಲ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಎಂಜಿ ಮೋಟಾರ್ ಕಂಪನಿಯು ಇತ್ತೀಚೆಗೆ ಝಡ್ಎಸ್ ಕಾರಿಗಾಗಿ ಚಂದಾದಾರಿಕೆ ಯೋಜನೆಯನ್ನು ಜಾರಿಗೆ ತಂದಿದೆ. ಮಾಸಿಕ ರೂ.49,999 ಪಾವತಿಸಿ ಝಡ್ಎಸ್ ಇವಿ ಪಡೆಯಬಹುದು.

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಪಾವತಿಸಿ ಕಾರು ಖರೀದಿಸಲು ಸಾಧ್ಯವಾಗದ ಗ್ರಾಹಕರಿಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶ. ಎಂಜಿ ಝಡ್ಎಸ್ ಇವಿ ಚಂದಾದಾರಿಕೆ ಯೋಜನೆ ಸದ್ಯಕ್ಕೆ ಬೆಂಗಳೂರು, ಮುಂಬೈ, ಪುಣೆ, ದೆಹಲಿ-ಎನ್‌ಸಿಆರ್'ಗಳಲ್ಲಿ ಲಭ್ಯವಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಕಂಪನಿಯು ಭಾರತದಲ್ಲಿ ಇದುವರೆಗೂ 1,000 ಯೂನಿಟ್ ಝಡ್ಎಸ್ ಕಾರ್ ಅನ್ನು ಮಾರಾಟ ಮಾಡಿದೆ. ಟಾಟಾ ಪವರ್ ಸಹಾಯದಿಂದ ಎಂಜಿ ಮೋಟಾರ್ ಕಂಪನಿಯು ದೇಶದ ಹಲವು ನಗರಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸುತ್ತಿದೆ. ಕಂಪನಿಯು ಬೆಂಗಳೂರು, ದೆಹಲಿ, ಚೆನ್ನೈ ಹಾಗೂ ಕೊಯಮತ್ತೂರುಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆದಿದೆ.

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಎಂಜಿ ಕಂಪನಿಯು 7 ಸೀಟುಗಳ ಹೆಕ್ಟರ್ ಪ್ಲಸ್ ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೆಕ್ಟರ್ ಸ್ಟ್ಯಾಂಡರ್ಡ್'ನ ಫೇಸ್‌ಲಿಫ್ಟ್‌ ಮಾದರಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ. ಕಂಪನಿಯು ಹೊಸ ವರ್ಷದಲ್ಲಿ ತನ್ನ ಎಲ್ಲಾ ಕಾರುಗಳನ್ನು ಅಪ್ ಡೇಟ್ ಮಾಡಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಜನವರಿ ತಿಂಗಳ ಮಾರಾಟದಲ್ಲಿ ಪ್ರಗತಿ ಸಾಧಿಸಿದ ಎಂಜಿ ಮೋಟಾರ್

ಕಂಪನಿಯು ಝಡ್ಎಸ್ ಕಾರಿನ ಪೆಟ್ರೋಲ್ ಮಾದರಿಯನ್ನು ಪರೀಕ್ಷಿಸುತ್ತಿದೆ. ಈ ಎಸ್‌ಯುವಿಯು ಪರೀಕ್ಷಾ ಸಮಯದಲ್ಲಿ ಹಲವು ಬಾರಿ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ. ಪೆಟ್ರೋಲ್ ಮಾದರಿಯ ವಿನ್ಯಾಸವು ಝಡ್‌ಎಸ್ ಎಲೆಕ್ಟ್ರಿಕ್‌ ಕಾರಿನಂತೆಯೇ ಇರಲಿದೆ. ಈ ಕಾರಿನಲ್ಲಿ 1.5 ಲೀಟರಿನ ವಿಟಿಐ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ 1.3-ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್‌ ಅಳವಡಿಸುವ ಸಾಧ್ಯತೆಗಳಿವೆ.

Most Read Articles

Kannada
English summary
MG motor India sold 3602 units car in January 2021. Read in Kannada.
Story first published: Monday, February 1, 2021, 20:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X