ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎಂಜಿ ಮೋಟಾರ್ (MG Motor) ಇಂಡಿಯಾ ನಾನ್ ಫಂಗಬಲ್ ಟೋಕನ್ (ಎನ್‌ಎಫ್‌ಟಿ) ಬಿಡುಗಡೆಗೊಳಿಸಿದೆ. ಈ ಮೂಲಕ ಬ್ರಿಟಿಷ್ ಮೂಲದ ಆಟೋಮೊಬೈಲ್ ಕಂಪನಿಯು ಭಾರತದಲ್ಲಿ ಎನ್‌ಎಫ್‌ಟಿ ಆರಂಭಿಸಿದ ಮೊದಲ ಕಾರು ತಯಾರಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಂಪನಿಯು ಹೇಳಿರುವಂತೆ ಎನ್‌ಎಫ್‌ಟಿಯಿಂದ ಸಂಗ್ರಹಿಸಲಾಗುವ ಹಣವನ್ನು ಸಮುದಾಯ ಸೇವೆಗಾಗಿ ಬಳಸಲಾಗುತ್ತದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ಡಿಸೆಂಬರ್ 28ರಿಂದ ಎನ್‌ಎಫ್‌ಟಿ ಮಾರಾಟವನ್ನು ಆರಂಭಿಸಲಿದೆ. ಕಂಪನಿಯು ಬಿಡುಗಡೆಯ ಭಾಗವಾಗಿ 1,111 ಯುನಿಟ್ ಗಳನ್ನು ಪರಿಚಯಿಸಲಿದೆ. ಕಂಪನಿಯು ತನ್ನ ಮೊದಲ ಎನ್‌ಎಫ್‌ಟಿಯನ್ನು KoineArt ನ NgageN ಪ್ಲಾಟ್‌ಫಾರಂನಲ್ಲಿ ಬಿಡುಗಡೆಗೊಳಿಸಲಿದೆ. ಇದನ್ನು ಎಂಜಿ ಕಂಪನಿಯವಹಿವಾಟುಗಳಿಗಾಗಿ ವಿಶೇಷವಾಗಿ ಆಪ್ಟಿಮೈಸ್ ಮಾಡಲಾಗಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎನ್‌ಎಫ್‌ಟಿ ಎಂದರೇನು?

ಎನ್‌ಎಫ್‌ಟಿ ಎಂದರೆ ನಾನ್ ಫಂಗಿಬಲ್ ಟೋಕನ್. ಎನ್‌ಎಫ್‌ಟಿ ಬಿಟ್‌ಕಾಯಿನ್ ಅಥವಾ ಇತರ ಕ್ರಿಪ್ಟೋಕರೆನ್ಸಿಗಳಂತೆಯೇ ಕ್ರಿಪ್ಟೋ ಟೋಕನ್ ಆಗಿದೆ. ಎನ್‌ಎಫ್‌ಟಿ ಒಂದು ರೀತಿಯ ಡಿಜಿಟಲ್ ಆಸ್ತಿಯಾಗಿದ್ದು, ಮೌಲ್ಯವನ್ನು ಉತ್ಪಾದಿಸುತ್ತದೆ. ಉದಾಹರಣೆಗೆ, ಇಬ್ಬರು ವ್ಯಕ್ತಿಗಳು ಬಿಟ್‌ಕಾಯಿನ್‌ಗಳನ್ನು ಹೊಂದಿದ್ದರೆ, ಅವರು ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಡಿಜಿಟಲ್ ಕಲೆ, ಸಂಗೀತ, ಚಲನಚಿತ್ರ, ಆಟಗಳು ಅಥವಾ ಯಾವುದೇ ಸಂಗ್ರಹಣೆಯಂತಹ ಡಿಜಿಟಲ್ ಸ್ವತ್ತುಗಳಲ್ಲಿ ಎನ್‌ಎಫ್‌ಟಿಗಳನ್ನು ಕಾಣಬಹುದು. ಇವು ಅನನ್ಯ ಕಲಾಕೃತಿಗಳಾಗಿರುವುದರಿಂದ, ಪ್ರತಿಯೊಂದು ಟೋಕನ್ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಅವುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಈ ಡಿಜಿಟಲ್ ಟೋಕನ್ ಮಾಲೀಕತ್ವದ ಮಾನ್ಯ ಪ್ರಮಾಣಪತ್ರವನ್ನು ಪಡೆಯುತ್ತದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಯಾವುದೇ ವ್ಯಕ್ತಿಯ ಕಲೆಯು ಈ ವರ್ಗಕ್ಕೆ ಸೇರುತ್ತದೆ, ಅವನ ಕಲೆಯು ಮಾಲೀಕತ್ವದ ಪ್ರಮಾಣಪತ್ರವನ್ನು ಪಡೆಯುತ್ತದೆ. ಡಿಜಿಟಲ್ ಪ್ರಮಾಣಪತ್ರವು ಅದನ್ನು ನಕಲಿಸಲಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಜೊತೆಗೆ ಮಾಲೀಕರಿಗೆ ಹಕ್ಕುಸ್ವಾಮ್ಯದ ಹಕ್ಕನ್ನು ನೀಡುತ್ತದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎನ್‌ಎಫ್‌ಟಿ ಹೇಗೆ ಕೆಲಸ ಮಾಡುತ್ತದೆ?

ಫಂಗಬಲ್ ಅಲ್ಲದ ಟೋಕನ್‌ಗಳನ್ನು ಡಿಜಿಟಲ್ ಸ್ವತ್ತುಗಳಿಗೆ ಅಥವಾ ಪರಸ್ಪರ ಪ್ರತ್ಯೇಕಿಸಲಾಗದ ಸರಕುಗಳಿಗೆ ಬಳಸಬಹುದು. ಇದು ಅದರ ಮೌಲ್ಯ ಹಾಗೂ ಅನನ್ಯತೆಯನ್ನು ಸಾಬೀತುಪಡಿಸುತ್ತದೆ. ಇವು ವರ್ಚುವಲ್ ಆಟಗಳಿಂದ ಹಿಡಿದು ಕಲಾಕೃತಿಯವರೆಗೆ ಎಲ್ಲದಕ್ಕೂ ಅನುಮೋದನೆ ನೀಡುತ್ತವೆ. ಎನ್‌ಎಫ್‌ಟಿಗಳನ್ನು ಪ್ರಮಾಣಿತ ಹಾಗೂ ಸಾಂಪ್ರದಾಯಿಕ ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುವುದಿಲ್ಲ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಇವುಗಳನ್ನು ಡಿಜಿಟಲ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಮಾತ್ರ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಎಂಜಿ ಮೋಟಾರ್ಸ್ ಇಂಡಿಯಾ 2021 ನವೆಂಬರ್ ತಿಂಗಳ ಮಾರಾಟದಲ್ಲಿ ಕುಸಿತವನ್ನು ದಾಖಲಿಸಿದೆ. ಕಂಪನಿಯ ಪ್ರಕಾರ, ನವೆಂಬರ್‌ನಲ್ಲಿ ಕೇವಲ 2,481 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದು 2020ರ ನವೆಂಬರ್ ತಿಂಗಳ ಮಾರಾಟಕ್ಕಿಂತ 40.4% ನಷ್ಟು ಕಡಿಮೆಯಾಗಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಎಂಜಿ ಕಂಪನಿಯು 4,163 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಕಂಪನಿಯ ಒಟ್ಟು ಮಾರಾಟದಲ್ಲಿ, 1,210 ಯುನಿಟ್‌ಗಳು ಹೆಕ್ಟರ್‌ನಿಂದ ಬಂದಿದ್ದರೇ, 1,018 ಯುನಿಟ್‌ಗಳು ಆಸ್ಟರ್'ನಿಂದ ಬಂದಿವೆ. ಎಂಜಿ ಮೋಟಾರ್ ಕಂಪನಿಯು ತನ್ನ ಎಲ್ಲಾ ಪೂರೈಕೆದಾರರು ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವುದರಿಂದ ಉತ್ಪಾದನೆ ಹಾಗೂ ಕಾರುಗಳ ವಿತರಣೆ ಮೇಲೆ ಪರಿಣಾಮ ಉಂಟಾಗಿದೆ ಎಂದು ಮಾಹಿತಿ ನೀಡಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಈ ವರ್ಷ ಆಸ್ಟರ್ ಎಸ್‌ಯುವಿಯ 5,000 ಯೂನಿಟ್‌ಗಳನ್ನು ವಿತರಿಸುವುದಾಗಿ ಕಂಪನಿಯು ಭರವಸೆ ನೀಡಿದೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದಿದ್ದರೆ ವಿತರಣೆಯನ್ನು ಮುಂದಿನ ವರ್ಷಕ್ಕೆ ಮರುಹೊಂದಿಸಬಹುದು. ಮೊದಲ ಹಂತದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಬಿಡುಗಡೆ ದರದಲ್ಲಿ ಕಾರನ್ನು ಮಾರಾಟ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎಂಜಿ ಮೋಟಾರ್ಸ್‌ ಕಂಪನಿಯು ತನ್ನ ಆಸ್ಟರ್ ಎಸ್‌ಯುವಿಯನ್ನು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಎಸ್‌ಯುವಿಯ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 9.78 ಲಕ್ಷಗಳಾಗಿದೆ. ಎಂಜಿ ಆಸ್ಟರ್ ಎಸ್‌ಯುವಿಯನ್ನು ಒಂಬತ್ತು ಮಾದರಿಗಳಲ್ಲಿ ಹಾಗೂ ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆಸ್ಟರ್ ಎಸ್‌ಯುವಿ ಭಾರತದಲ್ಲಿ ಎಂಜಿ ಮೋಟಾರ್‌ ಕಂಪನಿಯ ಐದನೇ ಮಾದರಿಯಾಗಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎಂಜಿ ಮೋಟಾರ್ ಇಂಡಿಯಾ ತನ್ನ ಉತ್ಪಾದನಾ ಘಟಕಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಬಳಕೆಗೆ ಒತ್ತು ನೀಡುತ್ತಿದೆ. ಇತ್ತೀಚೆಗೆ ಎಂಜಿ ಮೋಟಾರ್ ಇಂಡಿಯಾ ಕಂಪನಿಯು ವಿಂಡ್ - ಸೋಲಾರ್ ಹೈಬ್ರಿಡ್ ಶಕ್ತಿಯನ್ನು ಅಳವಡಿಸಿಕೊಂಡ ದೇಶದ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಂಪನಿಯು ತನ್ನ ಹಾಲೋಲ್ ಉತ್ಪಾದನಾ ಘಟಕದಲ್ಲಿ ಶಕ್ತಿಯ ಶೇಕಡಾ 50 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತದೆ ಎಂದು ಹೇಳಿದೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಕಂಪನಿಯು ಹಸಿರು ಶಕ್ತಿಯನ್ನು ಸಾಧಿಸಲು ರಾಜ್‌ಕೋಟ್‌ನಲ್ಲಿರುವ ಕ್ಲೀನ್‌ಮ್ಯಾಕ್ಸ್ ವಿಂಡ್ ಸೋಲಾರ್ ಹೈಬ್ರಿಡ್ ಪಾರ್ಕ್‌ನೊಂದಿಗೆ ಕೈಜೋಡಿಸಿದೆ. ಈ ಕ್ರಮವು ಸುಸ್ಥಿರ ಭವಿಷ್ಯದ ಕಡೆಗೆ ಕಂಪನಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ ಹೇಳಿದ್ದಾರೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಕಂಪನಿಯು ಸುಸ್ಥಿರ ಭವಿಷ್ಯಕ್ಕಾಗಿ ತನ್ನ ಬದ್ಧತೆಯನ್ನು ಖಾತ್ರಿಪಡಿಸಿದೆ. ಶೂನ್ಯ ಹೊರಸೂಸುವಿಕೆ ವಾಹನಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಸರವನ್ನು ರಕ್ಷಿಸಲು ಕೊಡುಗೆ ನೀಡುವಂತೆ ಜನರನ್ನು ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ನಾನ್ ಫಂಗಬಲ್ ಟೋಕನ್ ಬಿಡುಗಡೆಗೊಳಿಸಿದ MG Motor

ಎಂಜಿ ಮೋಟಾರ್ಸ್ ತನ್ನ ಹಾಲೋಲ್ ಉತ್ಪಾದನಾ ಘಟಕದಲ್ಲಿ 4.85 ಮೆ.ವ್ಯಾ ವಿಂಡ್ - ಸೋಲಾರ್ ಹೈಬ್ರಿಡ್ ಪವರ್ ಪಡೆಯುತ್ತದೆ. ಈ ಶಕ್ತಿಯನ್ನು ಬಳಸಿಕೊಂಡು, ಎಂಜಿ ಮೋಟಾರ್ಸ್ 15 ವರ್ಷಗಳಲ್ಲಿ ಸುಮಾರು ಎರಡು ಲಕ್ಷ ಮೆಟ್ರಿಕ್ ಟನ್ ನಷ್ಟು ಕಾರ್ಬನ್ ಡೈ ಆಕ್ಸೈಡ್ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಈ ಪ್ರಮಾಣವು 1.3 ಮಿಲಿಯನ್ ಮರಗಳನ್ನು ನೆಡುವುದಕ್ಕೆ ಸಮನಾಗಿದೆ.

Most Read Articles

Kannada
English summary
Mg motor launches nft in india details
Story first published: Thursday, December 16, 2021, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X