ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಇಂಧನಗಳ ದುಬಾರಿ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಎಂಜಿ ಮೋಟಾರ್ ಕಂಪನಿಯು ಸೂಪರ್‌ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದ್ದು, ಇತ್ತೀಚೆಗೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣವನ್ನು ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆಯಿದ್ದರೂ ಚಾರ್ಜಿಂಗ್ ನಿಲ್ದಾಣಗಳ ಕೊರತೆ ಎದ್ದುಕಾಣುತ್ತಿದ್ದು, ಸರ್ಕಾರಿ ವಲಯದಲ್ಲಿ ಮಾತ್ರವಲ್ಲದೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಸಹ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಭಾರೀ ಹೂಡಿಕೆಯೊಂದಿಗೆ ಅಗತ್ಯ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಗೊಂಡಿವೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವತ್ತ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರೆತೆಯು ಇವಿ ವಾಹನಗಳ ಮಾರಾಟಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಈ ಹಿನ್ನಲೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಜಂಟಿ ಯೋಜನೆಗಳ ಅಡಿಯಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣದ ಮೂಲಕ ಗ್ರಾಹಕರ ಸೆಳೆಯಲು ಯೋಜನೆಯಲ್ಲಿದ್ದು, ಎಂಜಿ ಕಂಪನಿಯ ಸೂಪರ್‌ಫಾಸ್ಟ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಲಭ್ಯತೆಯಿದ್ದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಸುಧಾರಿಸಬಹುದು ಎನ್ನುವ ಯೋಜನೆಯಲ್ಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಪವರ್ ಕಂಪನಿಯೊಂದಿಗೆ ಜೊತೆಗೂಡಿ 50kW ಹಾಗೂ 60kW ಸಾಮರ್ಥ್ಯದ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ವಿಸ್ತರಣೆ ಮಾಡುತ್ತಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಬ್ಯಾಟರಿ ಜೋಡಣೆಯ ಆಧಾರದ ಮೇಲೆ ಕೇವಲ 50 ನಿಮಿಷದಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿದ್ದು, ಎಂಜಿ ಮತ್ತು ಟಾಟಾ ಪವರ್ ನಿರ್ಮಾಣದ ಮೊದಲ ಇವಿ ಚಾರ್ಜಿಂಗ್ ನಿಲ್ದಾಣವು ನಾಗ್ಪುರದಲ್ಲಿ ಆರಂಭವಾದ ನಂತರ ದೆಹಲಿ, ಬೆಂಗಳೂರು, ಆಗ್ರಾ, ಲಕ್ನೋ, ಕೊಯಮತ್ತೂರು, ಮಂಗಳೂರಿನಲ್ಲಿ ಹೊಸ ಸೂಪರ್‌ಫಾಸ್ಟ್ ಚಾರ್ಜಿಂಗ್ ನಿಲ್ದಾಣಕ್ಕೆ ಚಾಲನೆ ನೀಡಲಾಗಿದ್ದು, ಇದೀಗ ಕೇರಳದ ಕೊಳಿಕೋಡ್‌‌ನಲ್ಲೂ ಹೊಸ ಚಾರ್ಜಿಂಗ್ ನಿಲ್ದಾಣ ಆರಂಭವಾಗಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಎಂಜಿ ಮೋಟಾರ್ ಕಂಪನಿಯು 2021ರ ಜೆಡ್ಎಸ್ ಇವಿ ಬಿಡುಗಡೆಗೊಂದಿಗೆ ಸದ್ಯ ದೇಶದ ಪ್ರಮುಖ 31 ನಗರಗಳಲ್ಲಿ ಎಲೆಕ್ಟ್ರಿಕ್ ಕಾರು ಮಾರಾಟ ಆರಂಭಿಸಿದ್ದು, ಅಧಿಕೃತ ಕಾರು ಮಾರಾಟ ಮಳಿಗೆಗಳಲ್ಲೂ ಈಗಾಗಲೇ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ನೀಡಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಡೀಲರ್ಸ್ ಯಾರ್ಡ್‌‌ಗಳಲ್ಲಿರುವ ಚಾರ್ಜಿಂಗ್ ಪಾಯಿಂಟ್‌ಗಳು ಕೇವಲ ಎಂಜಿ ಜೆಡ್ಎಸ್ ಇವಿ ಗ್ರಾಹಕರಿಗೆ ಮಾತ್ರ ಬಳಕೆಗೆ ಲಭ್ಯವಿದ್ದು, ಇದೀಗ ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತಿರುವ ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಎಲ್ಲಾ ಬಗೆಯ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಟಾಟಾ ಪವರ್ ಜೊತೆಗೂಡಿ ಡಿಸಿ ಫಾಸ್ಟ್ ಚಾರ್ಜರ್ ನಿಲ್ದಾಣಗಳನ್ನು ನಿರ್ಮಾಣ ಮಾಡುತ್ತಿರುವ ಎಂಜಿ ಮೋಟಾರ್ ಕಂಪನಿಯು ಇದುವರೆಗೆ ವಿವಿಧ ನಗರಗಳಲ್ಲಿ ಒಟ್ಟು 17 ಡಿಸಿ ಫಾಸ್ಟ್ ಚಾರ್ಜರ್‌‌ಗಳನ್ನು ಸೇವೆಗೆ ಮುಕ್ತಗೊಳಿಸಿದ್ದು, ಈ ವರ್ಷಾಂತ್ಯಕ್ಕೆ ಡಿಸಿ ಫಾಸ್ಟ್ ಚಾರ್ಜರ್‌ಗಳ ಸಂಖ್ಯೆ 50ಕ್ಕೆ ಏರಿಕೆ ಮಾಡುವುದಾಗಿ ಹೇಳಿಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಮೊದಲ ಹಂತದಲ್ಲೇ ಬೆಂಗಳೂರಿನಲ್ಲಿ ಮಾತ್ರವೇ ಇವಿ ಕಾರು ಮಾರಾಟ ಆರಂಭಿಸಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ರಾಜ್ಯದಲ್ಲಿ ಹೊಸದಾಗಿ ಮೈಸೂರು ಮತ್ತು ಮಂಗಳೂರಿನಲ್ಲಿ ಜೆಡ್ಎಸ್ ಇವಿ ಮಾರಾಟದ ಆರಂಭದೊಂದಿಗೆ ದೇಶದ 31 ನಗರಗಳಲ್ಲಿ ಗ್ರಾಹಕರನ್ನು ತಲುಪಲು ಸಿದ್ದವಾಗಿದೆ.

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮೊದಲ ಬಾರಿಗೆ 2020ರ ಫೆಬ್ರವರಿಯಲ್ಲಿ ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ 44.5 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 340 ಕಿ.ಮೀ ಮೈಲೇಜ್ ಹೊಂದಿತ್ತು. ಇದೀಗ 2021ರ ಜೆಡ್ಎಸ್ ಇವಿ ಮಾದರಿಯಲ್ಲಿ ಈ ಹಿಂದಿನ 44.5 kWh ಬ್ಯಾಟರಿ ಪ್ಯಾಕ್ ಅನ್ನೇ ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗಿದ್ದು, ಹೊಸ ಆವೃತ್ತಿಯು ಇದೀಗ ಪ್ರತಿ ಚಾರ್ಚ್‌ಗೆ 419 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮರ್ಥ್ಯ ಹೊಂದಿದೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಇವಿ ವಾಹನಗಳಿಗೆ ಭಾರೀ ಬೇಡಿಕೆ- ಸೂಪರ್ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿಸಿದ ಎಂಜಿ

ಮುಂಬರುವ ದಿನಗಳಲ್ಲಿ 44.5 kWh ಬ್ಯಾಟರಿ ಪ್ಯಾಕ್ ಅನ್ನೇ ಪ್ರತಿ ಚಾರ್ಜ್‌ಗೆ 500 ಕಿಮೀ ಗೆ ಹೆಚ್ಟಳವಾಗುವ ನಿಟ್ಟಿಯಲ್ಲಿ ಸಂಶೋಧನೆಗಳನ್ನು ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಎಂಜಿ ಮೋಟಾರ್ ಕಂಪನಿಯ ಮುಖ್ಯಸ್ಥರು ಉನ್ನತೀಕರಿಸಿದ ಆವೃತ್ತಿಯನ್ನು 2022ರ ಆವೃತ್ತಿಯಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

Article Published On: Saturday, February 13, 2021, 13:24 [IST]
English summary
MG Motor And Tata Power Set Up The First Superfast EV Charging Station At Kozhikode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+