ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಜಗತ್ತಿನಾದ್ಯಂತ ಇಂಧನಗಳ ಬೆಲೆ ಹೆಚ್ಚಳ ಮತ್ತು ವಾಯುಮಾಲಿನ್ಯದ ಕಾರಣಕ್ಕೆ ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬಹುತೇಕ ವಾಹನ ಉತ್ಪಾದನಾ ಕಂಪನಿಗಳು ವಿನೂತನ ಮಾದರಿಯ ವಿವಿಧ ಎಲೆಕ್ಟ್ರಿಕ್ ಕಾರು ಮಾದರಿಗಳ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿವೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

2030ರಿಂದಲೇ ಸಂಪೂರ್ಣವಾಗಿ ಇಂಧನ ಚಾಲಿತ ವಾಹನಗಳ ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಪ್ರಮುಖ ರಾಷ್ಟ್ರಗಳಿಂದ ಮಹತ್ವದ ನಿರ್ಣಯ ಕೈಗೊಂಡಿರುವ ಪರಿಣಾಮ ಡೀಸೆಲ್ ವಾಹನಗಳ ಮಾರಾಟವು ಸಾಕಷ್ಟು ಇಳಿಕೆಯಾಗುತ್ತಿದ್ದು, ಹೈಬ್ರಿಡ್ ಮತ್ತು ಪೂರ್ಣ ಪ್ರಮಾಣದ ಎಲೆಕ್ಟ್ರಿಕ್ ವಾಹನಗಳ ಮಾರಾಟವದಲ್ಲಿ ಸಾಕಷ್ಟು ಬೆಳವಣಿಗೆ ಕಂಡುಬಂದಿದೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

2020ರಲ್ಲೇ ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಬರೋಬ್ಬರಿ 5 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದ್ದು, ಭವಿಷ್ಯ ಯೋಜನೆಗಳಿಗಾಗಿ ಬ್ರಿಟಿಷ್ ಕಾರು ಉತ್ಪಾದನಾ ಕಂಪನಿಯಾಗಿರುವ ಎಂಜಿ ಮೋಟಾರ್ ಕೂಡಾ ಇವಿ ವಾಹನ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಿದ್ದತೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಚೀನಿ ಮೂಲದ ಸೈಕ್ ಮೋಟಾರ್ ಜೊತೆಗೂಡಿ ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಈಗಾಗಲೇ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಎಂಜಿ ಮೋಟಾರ್ ಬಿಡುಗಡೆಗೊಳಿಸಲು ನಿರ್ಧರಿಸಿರುವ ಸೈಬರ್ಸ್ಟರ್ ಸ್ಪೋರ್ಟ್ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಇತರೆ ಕಾರು ಮಾದರಿಗಳಿಂತಲೂ ಹೆಚ್ಚಿನ ಮೈಲೇಜ್ ಹೊಂದಿದ್ದು, ಕಂಪನಿಯು ಇದೇ ತಿಂಗಳು 31ರಂದು ಹೊಸ ಕಾರಿನ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಲಿದೆ. ಸದ್ಯಕ್ಕೆ ಹೊಸ ಕಾರಿನ ವಿನ್ಯಾ,ಸದ ಕುರಿತಾಗಿ ಟೀಸರ್ ಚಿತ್ರಗಳನ್ನು ಮಾತ್ರ ಹಂಚಿಕೊಂಡಿದ್ದು, ಕಾನ್ಸೆಪ್ಟ್ ಆವೃತ್ತಿಯ ಅನಾವರಣದೊಂದಿಗೆ ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಬಹಿರಂಗವಾಗಲಿವೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಸದ್ಯ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿರುವ ಎಂಜಿ ಸೈಬರ್ಸ್ಟರ್ ಸ್ಪೋರ್ಟ್ ಕಾರು ಮಾದರಿಯು ಪ್ರತಿ ಚಾರ್ಜ್‌ಗೆ 800 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್‌ನೊಂದಿಗೆ ಪರ್ಫಾಮೆನ್ಸ್ ಆವೃತ್ತಿಯಾದಗಿ ಗುರುತಿಸಿಕೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಪ್ರತಿ ಚಕ್ರಕ್ಕೂ ಪ್ರತ್ಯೇಕ ಮೋಟಾರ್ ಶಕ್ತಿ ಪೂರೈಕೆ ತಂತ್ರಜ್ಞಾನ ಹೊಂದಿರುವ ಸೈಬರ್ಸ್ಟರ್ ಕಾರು ಮಾದರಿಯು ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗಪಡೆದುಕೊಳ್ಳಬಲ್ಲ ಶಕ್ತಿ ಹೊಂದಿದ್ದು, ಚಾಲನೆಗೆ ಪೂರಕವಾದ ಹಲವಾರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಪರ್ಫಾಮೆನ್ಸ್‌ಗೆ ಪೂರಕವಾಗಿ ಏರ್ ಡೈನಾಮಿಕ್ ವೈಶಿಷ್ಟ್ಯತೆ ಹೊಂದಿರುವ ಹೊಸ ಕಾರು ಮಾದರಿಯು 5ಜಿ ಕಾರ್ ಕೆನೆಕ್ಟ್ ಟೆಕ್ನಾಲಜಿಯೊಂದಿಗೆ ಹಲವಾರು ಎಲೆಕ್ಟ್ರಿಕ್ ಐಷಾರಾಮಿ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಕಾರನ್ನು ಅನಾವರಣಗೊಳಿಸಿ ಮುಂದಿನ ಕೆಲವೇ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಸದ್ಯ ಭಾರತದಲ್ಲಿ ಜೆಡ್ಎಸ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಎಂಜಿ ಕಂಪನಿಯು ಬ್ಯಾಟರಿ ತಂತ್ರಜ್ಞಾನ ಸುಧಾರಣೆ ಮೂಲಕ ಹೊಸ ಕಾರಿನ ಮೈಲೇಜ್ ರೇಂಜ್ ಹೆಚ್ಚಿಸುತ್ತಿದ್ದು, ಹೊಸ ಸೈಬರ್ಸ್ಟರ್ ಕಾರು ಮಾದರಿಯು ಸದ್ಯಕ್ಕೆ ಭಾರತದಲ್ಲಿ ಬಿಡುಗಡೆಯಾಗುವುದಿಲ್ಲ ಎನ್ನಲಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಪ್ರತಿ ಚಾರ್ಜ್‌ಗೆ 800ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರು ಅನಾವರಣಕ್ಕೆ ಮುಂದಾದ ಎಂಜಿ

ಹೊಸ ಸೈಬರ್ಸ್ಟರ್ ಸ್ಪೋರ್ಟ್ ಕಾರು ಮಾದರಿಯನ್ನು ಸದ್ಯಕ್ಕೆ ಯುರೋಪ್ ಮಾರುಕಟ್ಟೆಗಳಿಗಾಗಿ ಸಿದ್ದಪಡಿಸಿರುವ ಎಂಜಿ ಮೋಟಾರ್ ಕಂಪನಿಯು ಹೊಸ ಕಾರಿನ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಮೈಲೇಜ್ ಮತ್ತು ಪರ್ಫಾಮೆನ್ಸ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

Article Published On: Saturday, March 27, 2021, 20:12 [IST]
English summary
MG Cyberster electric sports car to be unveiled on 31st March. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+