ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಮಧ್ಯಮ ಗಾತ್ರ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಇವಿ ಮತ್ತ ಗ್ಲೊಸ್ಟರ್ ಕಾರುಗಳ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿದ ಸುಮಾರು 2 ವರ್ಷ ಪೂರೈಸಿದ್ದು, ಇದುವರೆಗೆ ಕಂಪನಿಯು ಭಾರತದಲ್ಲಿ 60 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಿಎಸ್-4 ಹೆಕ್ಟರ್ ಮಾರಾಟದೊಂದಿಗೆ ಆರಂಭವಾದ ಎಂಜಿ ಮೋಟಾರ್ ಪಯಣವು ಇತ್ತೀಚೆಗೆ ಬಿಡುಗಡೆಯಾದ ಬಿಎಸ್‌6 ಗ್ಲೊಸ್ಟರ್ ಮಾದರಿಯ ತನಕ ಉತ್ತಮ ಬೇಡಿಕೆ ದಾಖಲಿಸಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

2019ರ ಜೂನ್‌ನಲ್ಲಿ ಬಿಎಸ್-4 ಹೆಕ್ಟರ್ ಮಾದರಿಯನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಎಂಜಿ ಕಂಪನಿಯು 2020ರ ಏಪ್ರಿಲ್ 1ರಿಂದ ಜಾರಿಗೆ ಬಂದ ಬಿಎಸ್-6 ಎಮಿಷನ್ ಅನುಸಾರವಾಗಿ ಹೊಸ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಎಂಜಿ ಕಾರುಗಳ ಮಾರಾಟದಲ್ಲಿ ಹೆಕ್ಟರ್ ಎಸ್‌ಯುವಿ ಅಗ್ರಸ್ಥಾನದಲ್ಲಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಹೆಕ್ಟರ್ ಕಾರು ಭಾರತದಲ್ಲಿ ಸದ್ಯ ಬಿಎಸ್-6 ಎಂಜಿನ್ ಮಾರಾಟಗೊಳ್ಳುತ್ತಿದ್ದು, 50 ಸಾವಿರಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟಗೊಂಡಿವೆ. ಬಿಎಸ್-6 ಎಂಜಿನ್ ಅಳವಡಿಕೆ ನಂತರ ಹೊಸ ಹೆಕ್ಟರ್ ಕಾರಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ನಡುವೆ ಹೊಸ ಕಾರಿನಲ್ಲಿ ಕಂಡುಬಂದಿರುವ ತಾಂತ್ರಿಕ ದೋಷವು ಎಂಜಿ ಮೋಟಾರ್ ಕಂಪನಿಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆಗಳಿವೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಹೌದು, ಎಂಜಿ ಹೆಕ್ಟರ್ ಕಾರು ಮಾದರಿಯು ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪಾಲನೆಯಲ್ಲಿ ಕಳಪೆ ಪ್ರದರ್ಶನ ತೋರಿದ್ದು, ಹೆಕ್ಟರ್ ಬಿಎಸ್-6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳು ನಿಗದಿತ ಮಟ್ಟಕ್ಕಿಂತಲೂ ಹೆಚ್ಚು ಮಾಲಿನ್ಯ ಉತ್ಪತ್ತಿ ಮಾಡುತ್ತಿರುವುದು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ಟೆಸ್ಟ್‌ನಲ್ಲಿ ಬಹಿರಂಗಗೊಂಡಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಬಿಎಸ್-6 ಮಾದರಿಯ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಎಮಿಷನ್ ಮಾನದಂಡಗಳನ್ನು ಪಾಲನೆ ಮಾಡಿರುವುದಾಗಿ ಹೇಳಿಕೊಂಡಿದ್ದ ಎಂಜಿ ಮೋಟಾರ್ ಕಂಪನಿಯು ಇದೀಗ ಐಸಿಎಟಿ ಸಂಸ್ಥೆಯ ಪರೀಕ್ಷೆಯಲ್ಲಿ ಮಾನದಂಡಗಳನ್ನು ಪಾಲನೆ ಮಾಡದಿರುವುದು ಪತ್ತೆಯಾಗಿದ್ದು, ಮಾಲಿನ್ಯ ನಿಯಂತ್ರಣ ಮಾನದಂಡ ಅನುಸರಿಸದ ಸುಮಾರು 14 ಸಾವಿರ ಕಾರುಗಳ ಈಗಾಗಲೇ ಮಾರಾಟಗೊಂಡಿವೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಎಮಿಷನ್ ಮಾನದಂಡಗಳಲ್ಲಿ ಹೆಕ್ಟರ್ ಕಾರಿನ ಎಂಜಿನ್‌ಗಳು ಹೈಡ್ರೋಕಾರ್ಬನ್ ಮತ್ತು NOx ಹೊರಸೂಸುವಿಕೆಯು ನಿಗದಿತ ಮಟ್ಟಕ್ಕಿಂತೂಲೂ ಅಧಿಕವಾಗಿದ್ದು, ಮಾಲಿನ್ಯ ನಿಯಂತ್ರಕ ಮಾನದಂಡಗಳನ್ನು ಪಾಲನೆ ಮಾಡದ ಕಾರುಗಳನ್ನು ಶೀಘ್ರದಲ್ಲೇ ಹಿಂಪಡೆಯುವಂತೆ ಖಡಕ್ ಸೂಚನೆ ನೀಡಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪಾಲನೆ ಮಾಡಲು ಎಂಜಿ ಮೋಟಾರ್ ಕಂಪನಿಯು ಮಾರಾಟ ಮಾಡಲಾದ ಸುಮಾರು 14 ಸಾವಿರ ಕಾರುಗಳನ್ನು ಇದೀಗ ಹಂತ-ಹಂತವಾಗಿ ಹಿಂಪಡೆಯಲಿದ್ದು, ಮಾಲಿನ್ಯ ನಿಯಂತ್ರಣಕ್ಕಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಬೇಕಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ ಸಂಸ್ಥೆಯ ಸೂಚನೆಯೆಂತೆ ಎಂಜಿ ಮೋಟಾರ್ ಕಂಪನಿಯು ತಾಂತ್ರಿಕ ದೋಷ ಕಂಡುಬಂದಿರುವ ಕಾರು ಮಾಲೀಕರನ್ನು ಸಂಪರ್ಕಿಸುತ್ತಿದ್ದು, ಅಧಿಕೃತ ಸರ್ವಿಸ್ ಸೆಂಟರ್‌ಗಳಲ್ಲಿ ನಿಗದಿತ ಅವಧಿಯೊಳಗೆ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡುವುದಾಗಿ ತಿಳಿಸುತ್ತಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಎಮಿಷನ್ ನಿಯಮವನ್ನು ಪಾಲನೆ ಮಾಡುವಲ್ಲಿ ವಿಫಲವಾಗಿರುವುದರಿಂದ ಕಾರು ಮಾಲೀಕರಿಗೆ ನೇರ ಪರಿಣಾಮ ಉಂಟಾಗದಿದ್ದರೂ ದೀರ್ಘ ಕಾಲದವರೆಗೆ ವಿಷಕಾರಿ ಮಾಲಿನ್ಯವನ್ನು ಹೊರಸೂಸುವ ವಾಹನಗಳಿಂದ ವಾತಾವರಣ ಕಲುಷಿತಗೊಳ್ಳಲು ಪ್ರಮುಖ ಕಾರಣವಾಗಲಿದ್ದು, ಶೀಘ್ರದಲ್ಲೇ ತಾಂತ್ರಿಕ ದೋಷ ಹೊಂದಿರುವ ಹೊಸ ಕಾರುಗಳನ್ನು ಹಿಂಪಡೆದು ಮಾಲಿನ್ಯ ನಿಯಂತ್ರಣ ನಿಯಮ ಅನುಸಾರವಾಗಿ ಉನ್ನತೀಕರಿಸುವುದಾಗಿ ಎಂಜಿ ಕಂಪನಿಯು ಐಸಿಎಟಿ ಸಂಸ್ಥೆಗೆ ತಪ್ಪೊಪ್ಪಿಗೆ ಸಲ್ಲಿಸಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಹೀಗಾಗಿ ಶೀಘ್ರದಲ್ಲೇ ಎಂಜಿ ಕಂಪನಿಯು ತಾಂತ್ರಿಕ ದೋಷ ಹೊಂದಿರುವ ಕಾರುಗಳ ಎಂಜಿನ್ ಸಾಫ್ಟ್‌ವೇರ್ ಉನ್ನತೀಕರಣ ಕಾರ್ಯಗಾರವನ್ನು ಶೀಘ್ರದಲ್ಲೇ ಆರಂಭಿಸಲಿದ್ದು, ಎಂಜಿನ್ ಸಾಫ್ಟ್‌ವೇರ್ ಉನ್ನತೀಕರಣಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುತ್ತಿಲ್ಲ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಇನ್ನು ಎಂಜಿ ಹೆಕ್ಟರ್ ಫೇಸ್‌ಲಿಫ್ಟ್‌ ಎಸ್‌ಯುವಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಒಟ್ಟು ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 13.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 19.20 ಲಕ್ಷ ಬೆಲೆ ಹೊಂದಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಸ್ಟೈಲ್, ಸೂಪರ್, ಶೈನ್ ಮತ್ತು ಸ್ಮಾರ್ಟ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಹೆಕ್ಟರ್ ಕಾರು ವಿವಿಧ ಮಾದರಿಗಳಿಗೆ ಅನುಸಾರವಾಗಿ ಪೆಟ್ರೋಲ್, ಡೀಸೆಲ್ ಮತ್ತು ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಆವೃತ್ತಿಗಳನ್ನು ಹೊಂದಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಹೊಸ ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಹೈಬ್ರಿಡ್ ಹಾಗೂ 2.0 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದ್ದು, ಕಂಪನಿಯು ಹೊಸ ಕಾರಿನಲ್ಲಿ ಮೊದಲ ಬಾರಿಗೆ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಹೆಕ್ಟರ್ ಮತ್ತು ಹೆಕ್ಟರ್ ಪ್ಲಸ್ ಎಸ್‌ಯುವಿಯಲ್ಲಿ ಸದ್ಯ ಎಂಜಿ ಮೋಟಾರ್ ಕಂಪನಿಯು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ಮತ್ತು ಟರ್ಬೊ ಪೆಟ್ರೋಲ್ ಮಾದರಿಗಳಿಗಾಗಿ 6-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯನ್ನು ನೀಡುತ್ತಿದ್ದು, 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಇಕೋ ಮತ್ತು ಸ್ಪೋಟ್ ಮೋಡ್‌ಗಳನ್ನು ಹೊಸದಾಗಿ ಪರಿಚಯಿಸಿದೆ.

ತಾಂತ್ರಿಕ ದೋಷ: 14 ಸಾವಿರ ಹೆಕ್ಟರ್ ಕಾರುಗಳನ್ನು ಹಿಂಪಡೆಯಲಿದೆ ಎಂಜಿ ಮೋಟಾರ್

ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ಹೈ ಎಂಡ್ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಆರಂಭಿಕ ಪೆಟ್ರೋಲ್ ಮಾದರಿಗಳಿಗಾಗಿ 8-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

Most Read Articles

Kannada
English summary
Mg recalled 14 000 units hector for variation in pollution levels
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X