ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಇತ್ತೀಚೆಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಳೆದ ತಿಂಗಳು ಎಂಜಿ ಮೋಟರ್ ಕಂಪನಿಯು ಜೆಡ್ಎಸ್ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಗೆ 600ಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಂಡಿದೆ. ಈ ವಿಷಯವನ್ನು ಎಂಜಿ ಮೋಟಾರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಾಬಾ ಅವರು ಟ್ವೀಟ್ ಮಾಡಿ ಹೇಳಿದ್ದಾರೆ. ಇದು ಎಂಜಿನ್ ಜೆಡ್ಎಸ್ ಎಲೆಕ್ಟ್ರಿಕ್ ಕಾರಿಗೆ ಪಡೆದ ಬುಕ್ಕಿಂಗ್ ನಲ್ಲಿ ಅತ್ಯಧಿಕವಾಗಿತ್ತು. ಜನರು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸುತ್ತಿದ್ದಾರೆ ಎಂದು ತಿಳಿದು ಬರುತ್ತದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಇದರಿಂದ MG Motor India ಕಂಪನಿಯು ಚೀನಾದ SAIC ಮಾಲೀಕತ್ವದ ZS ಎಲೆಕಕ್ಟ್ರಿಕ್ ಕಾರಿನ ಒಟ್ಟಾರೆ ರೇಂಜ್ ಅನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ZS ಎಲೆಕ್ಟ್ರಿಕ್ ಕಾರು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದನ್ನು ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀಗೆ ಹೆಚ್ಚಿಸಬಹುದು.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಈ ಬದಲಾವಣೆಗಳ ಹೊರತಾಗಿ, ವಿನ್ಯಾಸ ಮತ್ತು ಇತರ ವಿಶೇಷಣಗಳನ್ನು ಒಳಗೊಂಡಂತೆ ZS EV ಒಂದೇ ಆಗಿರುತ್ತದೆ. ಮೋಟಾರ್ ಬಗ್ಗೆ ಮಾತನಾಡುತ್ತಾ, ಅದು ಬದಲಾಗದೆ ಉಳಿಯುತ್ತದೆ. ಇದರಲ್ಲಿ ಈ ಎಂಜಿ ಜೆಡ್ಎಸ್ ಇವಿ ಮಾದರಿಯಲ್ಲಿ 4.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಇದನ್ನು ಮೂರು-ಹಂತದ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್‌ಗೆ ಜೋಡಿಸಲಾಗಿದೆ. ಇದು ಒಟ್ಟು 142.7 ಬಿಹೆಚ್‍ಪಿ ಮತ್ತು 353 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿ ಝಡ್ಎಸ್ ಇವಿ ಎಸ್‍ಯುವಿಯು 419 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಹೆಚ್ಚಿನ ರೇಂಜ್ ಪ್ರೀಮಿಯಂ ಜಾಗದಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಹಾಯ ಮಾಡಬಹುದು ಮತ್ತು ಇದು ಪ್ರಸ್ತುತ ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ವಿರುದ್ಧ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಆದರೆ ಟಾಟಾ ನೆಕ್ಸನ್ ಇವಿ ಪ್ರಯಾಣಿಕ ವಾಹನ ವಿಭಾಗದಲ್ಲಿ ನಿಯಮಿತವಾಗಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. MG Motor India ಕಳೆದ ವರ್ಷ ಜನವರಿಯಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಮಾದರಿಯಾದ ZS ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಸಮಯದಲ್ಲಿ ದೇಶದಲ್ಲಿ ಬ್ರ್ಯಾಂಡ್‌ನ ಎರಡನೇ ಮಾದರಿಯಾಗಿ ಈ ಜೆಡ್ಎಸ್ ಇವಿ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ ಎಂಜಿ ಜೆಡ್ಎಸ್ ಇವಿ ಮಾದರಿಯ ಆರಂಭಿಕ ಬೆಲೆಯು ರೂ, 20.99 ಲಕ್ಷಗಳಾಗಿದೆ, ಈ MG ZS ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ಹ್ಯುಂಡೈ ಕ್ರೆಟಾದಷ್ಟು ದೊಡ್ಡದಾಗಿದೆ, ಇದರ ಉದ್ದ 4,314 ಎಂಎಂ, ಅಗಲ 1,809 ಎಂಎಂ ಮತ್ತು ಎತ್ತರ 1,644 ಎಂಎಂ ಆಗಿದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

MG ZS EV ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ. ಇದರಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿ ಯೊಂದಿಗೆ ಎಬಿಎಸ್, , ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಡಿಸ್ಕ್ ಬ್ರೇಕ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಹೀಟೆಡ್ ಒಆರ್ವಿಎಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಕ್ಯಾಮರಾವನ್ನು ಒಳಗೊಂಡಿದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಇನ್ನು MG Motor India ಕಂಪನಿಯು ತನ್ನ ಇವಿ(ಎಲೆಕ್ಟ್ರಿಕ್ ವೆಹಿಕಲ್) ಪೋರ್ಟ್ಫೋಲಿಯೊವನ್ನು ಹೊಸ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ವಿಸ್ತರಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಮುಂದಿನ ಎರಡು ವರ್ಷಗಳಲ್ಲಿ ಹೊಸ ಎಂಜಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

MG ಕಂಪನಿಯು ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‍ಯುವಿ ಮತ್ತು ಹ್ಯಾಚ್‌ಬ್ಯಾಕ್ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಎರಡೂ ಮಾದರಿಗಳು 2024ರ ನಂತರ ಬಿಡುಗಡೆಗೊಳ್ಳಲಿದೆ ಎಂದು ವರದಿಯಾಗಿದೆ. ಮುಂಬರುವ ಎಂಜಿ ಇವಿಗಳ ಬೆಲೆ ರೂ.10 ಲಕ್ಷಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿರಲಿದೆ. ಇನ್ನು ಈ ಎರಡು ಮಾದರಿಗಳು SAIC ಕಂಪನಿಯ Baojun E200 ಮಾದರಿಗಳ ಆರ್ಕಿಟೆಕ್ಚರ್ ಅನ್ನು ಹೊಂದಿರುತ್ತದೆ. ಇವುಗಳು ಚೀನೀ ಮಾರುಕಟ್ಟೆಯಲ್ಲಿ ಜನಪ್ರಿಯ ಮಾದರಿಗಳಾಗಿವೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಈ ಕಾಂಪ್ಯಾಕ್ಟ್ ಎಸ್‍ಯುವಿ ಎಲೆಕ್ಟ್ರಿಕ್ ಮಾದರಿಯ ಪವರ್‌ಟ್ರೇನ್ ಸಿಸ್ಟಂ, 39 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಒಳಗೊಂಡಿರುತ್ತದೆ. ಎನ್ಇಡಿಸಿ (ನ್ಯೂ ಯುರೋಪಿಯನ್ ಡ್ರೈವಿಂಗ್ ಸೈಕಲ್) ಟೆಸ್ಟ್ ಪ್ರಕಾರ, ಪೂರ್ಣ ಪ್ರಮಾಣದ ಚಾರ್ಜ್‌ನಲ್ಲಿ 210-270 ಕಿಮೀ ರೇಂಜ್ ಅನ್ನು ನೀಡುತ್ತದೆ. ಇನ್ನು ಎರಡು ಸೀಟುಗಳ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಕಾರು 100kmph ಗರಿಷ್ಠ ವೇಗವನ್ನು ಪಡೆಯುವ ಸಾಮರ್ಥ್ಯ ಹೊಂದಿದೆ. ಇದು ಮೋಟಾರಿನ ಎರಡು ಭಾಗಗಳನ್ನು ಮತ್ತು ಪ್ರಸರಣ ಶಬ್ದ ಮತ್ತು ಮೋಟಾರ್ ಕಂಪನಕ್ಕಾಗಿ ರಿಡ್ಯೂಸರ್ ಅನ್ನು ಸಂಯೋಜಿಸುತ್ತದೆ.

ಭಾರತದಲ್ಲಿ ZS ಎಲೆಕ್ಟ್ರಿಕ್ ಕಾರಿನ ರೇಂಜ್ ಅನ್ನು 500 ಕಿ.ಮೀ ವರೆಗೆ ಹೆಚ್ಚಿಸಲಿದೆ MG Motor

ಇನ್ನು ವಿದೇಶಿ ಮಾರುಕಟ್ಟೆಗಳಲ್ಲಿ ZS ಎಲೆಕ್ಟ್ರಿಕ್ ಕಾರು 2018 ರಿಂದ ಮಾರಾಟವಾಗುತ್ತಿದೆ. ಇದರಿಂದ ಈ MG ZS ಎಲೆಕ್ಟ್ರಿಕ್ ಕಾರು ಫೇಸ್‌ಲಿಫ್ಟ್ ಸ್ವೀಕರಿಸಲು ಸಿದ್ಧವಾಗಿದೆ. ನವೀಕರಣದ ಭಾಗವಾಗಿ, ಎಸ್‌ಐಸಿ ಒಡೆತನದ ಬ್ರಿಟಿಷ್ ವಾಹನ ತಯಾರಕ ಕಂಪನಿಯು ಈಗಾಗಲೇ ಚೀನಾದಲ್ಲಿ ಪೂರ್ವವೀಕ್ಷಣೆ ಮಾಡಿರುವ ಹೊಸ ಎಂಜಿ ಲೋಗೊವನ್ನು ಜೆಡ್ಎಸ್ ಎಲೆಕ್ಟ್ರಿಕ್ ಫೇಸ್‌ಲಿಫ್ಟ್ ಕಾರಿನಲ್ಲಿ ನೀಡಬಹುದು.

Article Published On: Friday, August 27, 2021, 10:21 [IST]
English summary
Mg zs ev will get smaller battery pack soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+