ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಖ್ಯಾತ ಟಯರ್ ತಯಾರಕ ಕಂಪನಿಯಾದ ಮಿಚೆಲಿನ್ 2030ರ ವೇಳೆಗೆ ತನ್ನ ಟಯರ್‌ಗಳನ್ನು ಉತ್ಪಾದಿಸಲು 40%ನಷ್ಟು ಬಾಳಿಕೆ ಬರುವ ವಸ್ತುಗಳನ್ನು ಬಳಸುವುದಾಗಿ ತಿಳಿಸಿತ್ತು.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

2050ರ ವೇಳೆಗೆ ಈ ಪ್ರಮಾಣವನ್ನು 100%ಗೆ ಹೆಚ್ಚಿಸಲಾಗುವುದು ಎಂದು ಹೇಳಿತ್ತು. ಮಿಚೆಲಿನ್ ಕಂಪನಿಯು ನಿಗದಿತ ಗುರಿಯನ್ನು ಮುಟ್ಟಲು ಕಾರ್ಬಿಯೋಸ್ ಎಂಬ ಫ್ರೆಂಚ್ ಬಯೋ ಕೆಮಿಕಲ್ ಕಂಪನಿಯೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿದೆ.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಕಾರ್ಬಿಯೊಸ್ ಕಂಪನಿಯು ಕಿಣ್ವ (ಎನ್'ಜೈಮೆಟಿಕ್) ಮರುಬಳಕೆ ಪ್ರಕ್ರಿಯೆಯ ಮೂಲಕ ಪ್ಲಾಸ್ಟಿಕ್ ಅನ್ನು ಡಿ ಪಾಲಿಮರೈಸ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದೆ. ಈ ಪ್ರಕ್ರಿಯೆಯು ಮಿಚೆಲಿನ್‌ ಕಂಪನಿಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲು ಸಹಾಯ ಮಾಡುತ್ತದೆ ಎಂಬುದು ವಿಶೇಷ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಟಯರ್‌ಗಳನ್ನು ಉತ್ಪಾದಿಸಲು ಏಕ-ಬಳಕೆಯ ಪಿಇಟಿ (ಪಾಲಿಥಿಲೀನ್ ಟೆರೆಫ್ಥಲೇಟ್) ಪ್ಲಾಸ್ಟಿಕ್ ಬಾಟಲ್'ಗಳನ್ನು ಪ್ರಮುಖ ಘಟಕಾಂಶವಾಗಿ ಬಳಸಬಹುದು. ಈ ಮೂಲಕ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದನೆಗೆ ಮಿಚೆಲಿನ್ ಮುಂದಾಗಿದೆ.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಡಿ ಪಾಲಿಮರೈಸ್ ಪ್ರಕ್ರಿಯೆಯನ್ನು 100%ನಷ್ಟು ಪಿಇಟಿ ತ್ಯಾಜ್ಯವನ್ನು ಮರುಬಳಕೆ ಮಾಡಲು ಹಾಗೂ ನಂತರ ಅವುಗಳನ್ನು ಹೆಚ್ಚಿನ ಟೆನ್ಸಿಲ್ ಫೈಬರ್ ಆಗಿ ಪರಿವರ್ತಿಸಿ ಟಯರ್‌ಗಳನ್ನು ಉತ್ಪಾದಿಸುವ ಅಗತ್ಯವನ್ನು ಪೂರೈಸಬಹುದು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಹೆಚ್ಚು ಬಳಸಲು ಯೋಗ್ಯವಾಗುವುದರಿಂದ ಹಾಗೂ ಹೆಚ್ಚು ಥರ್ಮಲ್ ಸ್ಟೆಬಿಲಿಟಿ ಹೊಂದಿರುವುದರಿಂದ ಟೆನ್ಸಿಲ್ ಪಾಲಿಯೆಸ್ಟರ್ ಟಯರ್‌ಗಳನ್ನು ತಯಾರಿಸಲು ಇದು ಸೂಕ್ತವಾಗಿದೆ ಎಂದು ಮಿಚೆಲಿನ್‌ನ ಪಾಲಿಮರ್ ಸಂಶೋಧನೆಯ ನಿರ್ದೇಶಕರಾದ ನಿಕೋಲಸ್ ಸೆಬೊತ್ ಮಾಹಿತಿ ನೀಡಿದ್ದಾರೆ.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಮಿಚೆಲಿನ್, ಟಯರ್‌ ಉತ್ಪಾದನೆಯಲ್ಲಿ ಮರುಬಳಕೆಯ ಟೆಕ್ನಿಕಲ್ ಫೈಬರ್ ಬಳಸುತ್ತಿರುವ ಮೊದಲ ಕಂಪನಿಯಾಗಿದೆ. ಈ ಬಲವರ್ಧನೆಗಳನ್ನು ಬಣ್ಣದ ಬಾಟಲಿಗಳಿಂದ ತಯಾರಿಸಲಾಯಿತು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಕಾರ್ಬಿಯೋಸ್‌ನ ಕಿಣ್ವ (ಎನ್'ಜೈಮೆಟಿಕ್) ತಂತ್ರಜ್ಞಾನವನ್ನು ಬಳಸಿಕೊಂಡು ಮರುಬಳಕೆ ಮಾಡಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. ವಿಶ್ವದಾದ್ಯಂತ ಪ್ರತಿವರ್ಷ 1.6 ಬಿಲಿಯನ್ ಕಾರ್ ಟಯರ್'ಗಳು ಮಾರಾಟವಾಗುತ್ತವೆ.

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಈ ಟಯರ್‌ಗಳ ಉತ್ಪಾದನೆಯಲ್ಲಿ 8,00,000 ಟನ್‌ಗಳಿಗಿಂತ ಹೆಚ್ಚು ಪಿಇಟಿ ಫೈಬರ್ ಬಳಸಲಾಗುತ್ತದೆ. ಟಯರ್‌ಗಳನ್ನು ಉತ್ಪಾದಿಸಲು ಹೆಚ್ಚಿನ ಸಾಂದ್ರತೆ ಹೊಂದಿರುವ ಪ್ಲಾಸ್ಟಿಕ್ ಫೈಬರ್‌ಗಳಲ್ಲಿ ಸುಮಾರು 3 ಬಿಲಿಯನ್ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಬಹುದು ಎಂದು ಮಿಚೆಲಿನ್ ಕಂಪನಿ ಹೇಳಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ಟಯರ್ ಉತ್ಪಾದಿಸಲು ಮುಂದಾದ ಮಿಚೆಲಿನ್

ಸದ್ಯಕ್ಕೆ ಕಾರ್ಬಿಯೋಸ್ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳ ಒಳಗೆ ಕ್ಲರ್ಮಾಂಟ್-ಫೆರಾಂಡ್‌ನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಪ್ರದರ್ಶನ ಘಟಕವನ್ನು ಆರಂಭಿಸುವುದಾಗಿ ಮಿಚೆಲಿನ್ ಕಂಪನಿ ಹೇಳಿದೆ.

Most Read Articles

Kannada
English summary
Michelin company to manufacture tyres from plastic bottle waste. Read in Kannada.
Story first published: Wednesday, May 12, 2021, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X