ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಕೋವಿಡ್ 19 ನಂತರ ಜನರು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವ ಬದಲು ಸ್ವಂತ ವಾಹನಗಳಲ್ಲಿ ಸಂಚರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದಾಗಿ ಕಳೆದ ವರ್ಷದ ಆರಂಭದಲ್ಲಿ ನಿಧಾನಗತಿಯಲ್ಲಿದ್ದ ವಾಹನ ಮಾರಾಟ ವರ್ಷದ ಕೊನೆಗೆ ಚೇತರಿಸಿಕೊಂಡಿತ್ತು.

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಈ ವರ್ಷದ ಜನವರಿ ತಿಂಗಳಿನಿಂದ ಬಹುತೇಕ ವಾಹನ ತಯಾರಕ ಕಂಪನಿಗಳು ವಾಹನಗಳ ಬೆಲೆಯನ್ನು ಹೆಚ್ಚಿಸಿವೆ. ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣಕ್ಕೆ ಬೆಲೆ ಏರಿಕೆ ಮಾಡಲಾಗಿದೆ ಎಂದು ವಾಹನ ತಯಾರಕ ಕಂಪನಿಗಳು ಹೇಳಿವೆ.

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ವಾಹನ ತಯಾರಕ ಕಂಪನಿಗಳ ಜೊತೆಗೆ ವಾಹನಗಳ ಟಯರ್ ತಯಾರಕ ಕಂಪನಿಯು ಸಹ ತನ್ನ ಟಯರ್'ಗಳ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಮುಂದಿನ ಮಾರ್ಚ್‌ನಿಂದ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಫ್ರಾನ್ಸ್ ಮೂಲದ ಟಯರ್ ತಯಾರಕ ಕಂಪನಿಯಾದ ಮಿಚೆಲಿನ್ ಘೋಷಿಸಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಮಿಚೆಲಿನ್ ಕಂಪನಿಯು ತಾನು ಸದ್ಯಕ್ಕೆ ಮಾರಾಟ ಮಾಡುತ್ತಿರುವ ಬೆಲೆಗಳ ಮೇಲೆ 8%ನಷ್ಟು ಏರಿಕೆ ಮಾಡುವುದಾಗಿ ತಿಳಿಸಿದೆ. ಹೊಸ ಬೆಲೆ ಏರಿಕೆಯು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಮಿಚೆಲಿನ್ ಕಂಪನಿಯ ಗ್ರಾಹಕರು ಈ ತಿಂಗಳ ಅಂತ್ಯದವರೆಗೆ ಹಳೆಯ ಬೆಲೆಯಲ್ಲಿಯೇ ಟಯರ್'ಗಳನ್ನು ಖರೀದಿಸಬಹುದು. ಕಳೆದ ಕೆಲವು ವಾರಗಳಿಂದ ಬೆಲೆ ಏರಿಕೆಯ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಕೆಲ ತಿಂಗಳುಗಳಿಂದ ವಾಹನ ತಯಾರಕ ಕಂಪನಿಗಳು ಮಾತ್ರ ವಾಹನಗಳ ಬೆಲೆ ಏರಿಕೆ ಮಾಡುತ್ತಿದ್ದವು. ಈಗ ಟಯರ್ ತಯಾರಕ ಕಂಪನಿಯು ಸಹ ಏರಿಕೆಗೆ ಮುಂದಾಗಿದೆ. ಮಿಚೆಲಿನ್ ಕಂಪನಿಯ ನಂತರ ಉಳಿದ ಕಂಪನಿಗಳು ಸಹ ಇದೇ ಹಾದಿಯನ್ನು ಹಿಡಿಯುವ ಸಾಧ್ಯತೆಗಳಿವೆ.

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಹಠಾತ್ ಬೆಲೆ ಏರಿಕೆಗೆ ವಾಹನ ತಯಾರಕ ಕಂಪನಿಗಳು ನೀಡಿದ ಕಾರಣಗಳನ್ನೇ ಮಿಚೆಲಿನ್ ಕಂಪನಿಯು ಸಹ ನೀಡಿದೆ. ಉತ್ಪಾದನಾ ವೆಚ್ಚ ಹೆಚ್ಚಾದ ಕಾರಣಕ್ಕೆ ವಾಹನಗಳ ಬೆಲೆ ಏರಿಸಲಾಗಿದೆ ಎಂದು ವಾಹನ ತಯಾರಕ ಕಂಪನಿಗಳು ಹೇಳಿವೆ. ಮಿಚೆಲಿನ್ ಕಂಪನಿಯು ಇದನ್ನೇ ಹೇಳಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಭಾರತದಲ್ಲಿ ಮಾತ್ರವಲ್ಲದೆ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯದಲ್ಲೂ ಬೆಲೆ ಏರಿಕೆ ಮಾಡಲು ಮಿಚೆಲಿನ್ ಕಂಪನಿಯು ನಿರ್ಧರಿಸಿದೆ. ಕಂಪನಿಯು ಎರಡು, ಮೂರು ಹಾಗೂ ನಾಲ್ಕು ಚಕ್ರ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಟಯರ್‌ಗಳನ್ನು ಉತ್ಪಾದಿಸುತ್ತದೆ.

ಟಯರ್'ಗಳ ಬೆಲೆ ಏರಿಕೆ ಮಾಡಿದ ಖ್ಯಾತ ಟಯರ್ ಉತ್ಪಾದನಾ ಕಂಪನಿ

ಕಂಪನಿಯು ವಿಶ್ವದ ಹಲವು ದೇಶಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರ ಜೊತೆಗೆ ಕಂಪನಿಯು 170ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಕಂಪನಿಯ ಪ್ರಧಾನ ಕಚೇರಿ ಫ್ರಾನ್ಸ್‌ನ ಕ್ಲರ್ಮಾಂಟ್-ಫೆರಾಂಡ್‌ನಲ್ಲಿದೆ.

Most Read Articles

Kannada
English summary
Michelin tyre company increases tyre price by 8 percent. Read in Kannada.
Story first published: Wednesday, February 3, 2021, 11:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X