ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹಲವು ಜನಪ್ರಿಯ ವಾಹನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಇದೀಗ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಿನಿ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಮಿನಿ ಕಂಪನಿಯು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹೊಸ ಎಲೆಕ್ಟ್ರಿಕ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಆಗಿರುತ್ತದೆ. ಈ ಮಾದರಿಯನ್ನು ಕಳೆದ ವರ್ಷ ಜಾಗತಿಕವಾಗಿ ಪಾದಾರ್ಪಣೆ ಮಾಡಿತು ಮತ್ತು ಮಿನಿ ಕೂಪರ್ ಅನ್ನು ಆಧರಿಸಿದೆ. ಇದನ್ನು ಹೆಚ್ಚಾಗಿ ಕೂಪರ್ ಎಲೆಕ್ಟ್ರಿಕ್ ಎಂದು ಕರೆಯಲಾಗುತ್ತದೆ. ಮಿನಿ ಎಲೆಕ್ಟ್ರಿಕ್ ಅನ್ನು ಮೊದಲು ಭಾರತದಲ್ಲಿ 2021ರ ಫೆಬ್ರವರಿಯಲ್ಲಿ ಅನಾವರಣಗೊಳಿಸಲಾಯಿತು ಮತ್ತು ಮಾರ್ಚ್ ವೇಳೆಗೆ ಮಾರಾಟಕ್ಕೆ ಬರುಬಹುದು ಎಂದು ವರದಿಗಳಾಗಿತ್ತು.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಆದರೆ ಆ ಸಂದರ್ಭದಲ್ಲಿ ಕರೋನಾ ಎರಡನೇ ಅಲೆಯು ಪ್ರಾರಂಭವಾಗಿತ್ತು .BMW-ಬೆಂಬಲಿತ ಕಾರ್ಯಕ್ಷಮತೆಯ ಕಾರ್ ಬ್ರ್ಯಾಂಡ್ ಅಂತಿಮವಾಗಿ ಈ ಹಾಟ್ ಹ್ಯಾಚ್‌ನ ಹೊರಸೂಸುವಿಕೆ-ಮುಕ್ತ ಆವೃತ್ತಿಯನ್ನು ಭಾರತಕ್ಕೆ ತರಲಿದೆ. ಕಂಪನಿಯು ನಿಖರವಾದ ಲಾಂಚ್ ಟೈಮ್‌ಲೈನ್ ಅನ್ನು ಇನ್ನೂ ಬಹಿರಂಗಪಡಿಸಿಲ್ಲ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಮಿನಿ ಕೂಪರ್ ಎಲೆಕ್ಟ್ರಿಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಿನಿ ಎಲೆಕ್ಟ್ರಿಕ್ ಮಿನಿ ಕೂಪರ್‌ನ ನಿಖರವಾದ ಪ್ರತಿರೂಪವಾಗಿ ಕಂಡುಬರುತ್ತದೆಯಾದರೂ ಕೆಲವು ಸಣ್ಣ ವ್ಯತ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾದವು ಫಾಕ್ಸ್ ಫ್ರಂಟ್ ಗ್ರಿಲ್ ಆಗಿದ್ದು, ಇದು ರೇಡಿಯೇಟರ್‌ಗೆ ತಾಜಾ ಗಾಳಿಯನ್ನು ಬಿಡುವ ಬದಲು ಕಾರಿನ ಏರೋಡೈನಾಮಿಕ್ ಗುಣಗಳನ್ನು ಹೆಚ್ಚಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಇದು ರೂಫ್ಟಾಪ್ ಗ್ರೇ, ಐಲ್ಯಾಂಡ್ ಬ್ಲೂ ನಂತಹ ಅನೇಕ ಹೊಸ ಪೇಂಟ್ ಸ್ಕೀಮ್‌ಗಳೊಂದಿಗೆ ಬರುತ್ತದೆ, ಇದು ಬ್ಯಾಟರಿ ಚಾಲಿತ ಕಾರಿಗೆ ಒಂದು ವಿಶಿಷ್ಟ ಗುರುತನ್ನು ನೀಡುತ್ತದೆ. ಈ ಬಣ್ಣದ ಯೋಜನೆಗಳಲ್ಲಿ ಕೆಲವು ಗಮನಾರ್ಹವಾದ ಹಳದಿ ಅಸ್ಸೆಂಟ್ ಮತ್ತು ಮಿನಿ ಎಲೆಕ್ಟ್ರಿಕ್ ಬ್ಯಾಡ್ಜ್‌ನೊಂದಿಗೆ ಹ್ಯಾಚ್‌ಗೆ ತಾಜಾ ಪಾತ್ರವನ್ನು ನೀಡಲು ಒದಗಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಆದರೆ ಮಿನಿ ಐಕಾನಿಕ್ ಸುತ್ತಿನ ಹೆಡ್‌ಲೈಟ್‌ಗಳನ್ನು ಇಂಟಿಗ್ರೇಟೆಡ್ ಸರ್ಕ್ಯುಲರ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಉಳಿಸಿಕೊಂಡಿದೆ. ಎಲೆಕ್ಟ್ರಿಕ್ ಹಾಟ್ ಹ್ಯಾಚ್ ಕಾರು ಹೊಸ 17-ಇಂಚಿನ ಕರೋನಾ ಸ್ಪೋಕ್ ಡ್ಯುಯಲ್-ಟೋನ್ ಅಲಾಯ್ ವೀಲ್ ವಿನ್ಯಾಸವನ್ನು ಹಳದಿ-ಬಣ್ಣದ ರಿಮ್‌ಗಳನ್ನು ಹೊಂದಿದ್ದು ಅದು ಆಕರ್ಷಕವಾಗಿ ಕಾಣುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಇನ್ನು ಪಿಲ್ಲರ್‌ಗಳನ್ನು ಎಲ್ಲಾ ಬಣ್ಣದ ಟ್ರಿಮ್‌ಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿದೆ. ಇದು ಕಾರಿಗೆ ಆಕರ್ಷಕ ಲುಕ್ ಅನ್ನು ನೀಡುತ್ತದೆ. ಮಿನಿ ಎಲೆಕ್ಟ್ರಿಕ್ ಮೋಟಾರ್ ಅನ್ನು ನೀಡಿದ್ದು, ಇದರೊಂದಿಗೆ 32.6 ಕಿವ್ಯಾಟ್ ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ. ಡಬ್ಲ್ಯುಎಲ್‌ಟಿಪಿ ವ್ಹೀಲ್ ಪ್ರಕಾರ ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು 203 ರಿಂದ 234 ಕಿಲೋಮೀಟರ್‌ಗಳ ರೇಂಜ್ ಅನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಎಲೆಕ್ಟ್ರಿಕ್ ಪವರ್‌ಟ್ರೇನ್ 184 ಬಿಹೆಚ್‍ಪಿ ಪವರ್ ಮತ್ತು 270 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಮಿನಿ ಎಲೆಕ್ಟ್ರಿಕ್ ಕಾರು 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಅದರ ಐಸಿ ಎಂಜಿನ್ ಪ್ರತಿರೂಪದಂತೆ, ಇದು ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಏಕೈಕ ಮೋಟರ್‌ನೊಂದಿಗೆ FWD ಆಗಿ ಬರುತ್ತದೆ. ಹೆಚ್ಚಿನ ಮಿನಿ ಗಳಂತೆ, ಆಲ್-ಎಲೆಕ್ಟ್ರಿಕ್ ಕೂಪರ್ ಒಬ್ಬರ ಕಾರಿನ ಅನುಭವವನ್ನು ಹಗುರಗೊಳಿಸಲು ಟನ್ಗಟ್ಟಲೆ ಗಿಜ್ಮೊಗಳನ್ನು ಪಡೆಯುತ್ತದೆ. ಇವುಗಳಲ್ಲಿ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್‌ಗಳು ಮ್ಯಾಟ್ರಿಕ್ಸ್ ಫಂಕ್ಷನ್‌ನೊಂದಿಗೆ ಹೈ ಭೀಮ್, ಹೀಟೆಡ್ ಸ್ಟೀಯರಿಂಗ್ ವೀಲ್, ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ಹೆಡ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಇನ್ನು ಡ್ಯಾಶ್‌ಬೋರ್ಡ್ 5.5-ಇಂಚಿನ ಅಂಡಾಕಾರದ ಆಕಾರದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಧ್ಯದಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸಹ ಹೊಂದಿರುತ್ತದ. ಡಿಸ್‌ಪ್ಲೇ ವ್ಯಾಪಕವಾದ ಕನೆಕ್ಟೆಡ್ ಕಾರ್ ಫೀಚರ್‌ಗಳು ಮತ್ತು ಕನ್ಸಿಯರ್ಜ್ ಸೇವೆಗಳನ್ನು ನೀಡುತ್ತದೆ. ಇವುಗಳಲ್ಲಿ ರಿಮೋಟ್ ಕಾರ್ ಲಾಕಿಂಗ್/ಅನ್‌ಲಾಕ್ ಮತ್ತು ಒಬ್ಬರ ಸ್ಮಾರ್ಟ್‌ಫೋನ್‌ನಿಂದ ಒಳಾಂಗಣದ ಪ್ರಿ-ಕಂಡೀಷನಿಂಗ್ ಮತ್ತು ಹೆಚ್ಚಿನವು ಸೇರಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಮಿನಿ ಕಂಪನಿಯು ತನ್ನ ಕೂಪರ್ ಸೀರಿಸ್‌ನ 60ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ 3-ಡೋರಿನ ಆನಿವರ್ಸರಿ ಎಡಿಷನ್ ಅನ್ನು ಇತ್ತೀಚೆಗೆ ಪರಿಚಯಿಸತ್ತು. ಇದನ್ನು ವಿಶ್ವಾದ್ಯಂತ 740 ಯುನಿಟ್‌ಗಳಿಗೆ ಸೀಮಿತವಾಗಲಿರುವ ಮೂರು-ಡೋರಿನ ಮಾದರಿಯಾಗಿದೆ. 60ನೇ ಕೂಪರ್ ಆನಿವರ್ಸರಿ ಎಡಿಷನ್ ಮೂಲಕ 2000 ರಲ್ಲಿ ನಿಧನರಾದ ಜಾನ್ ಕೂಪರ್‌ಗೆ ಗೌರವ ಸಲ್ಲಿಸಲಿದೆ. ಕೂಪರ್ ಸೀರಿಸ್ ನಲ್ಲಿ ಮಿನಿ ಕೂಪರ್, ಮಿನಿ ಕೂಪರ್ ಎಸ್ ಮತ್ತು ಮಿನಿ ಜಾನ್ ಕೂಪರ್ ವರ್ಕ್ಸ್ ಮಾದರಿಗಳನ್ನು ಒಳಗೊಂಡಿದೆ. ಆನಿವರ್ಸರಿ ಎಡಿಷನ್ ಬ್ರಿಟಿಷ್ ರೇಸಿಂಗ್ ಗ್ರೀನ್, ಮಿಡ್ನೈಟ್ ಬ್ಲ್ಯಾಕ್ ಮತ್ತು ರೆಬೆಲ್ ಗ್ರೀನ್ ಜೊತೆ ಪಿಯಾನೋಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ಅಧಿಕ ರೇಂಜ್ ಹೊಂದಿರುವ Mini ಎಲೆಕ್ಟ್ರಿಕ್ ಕಾರು

ಇನ್ನು ಭಾರತದಲ್ಲಿ ಮಿನಿ ಎಲೆಕ್ಟ್ರಿಕ್ ಕಾರು ಸಂಪೂರ್ಣವಾಗಿ ಬಿಲ್ಟ್ ಯುನಿಟ್ ಅಗಿ (ಸಿಬಿಯು) ಬರುತ್ತದೆ. ಈ ಹೊಸ ಮಿನಿ ಎಲೆಕ್ಟ್ರಿಕ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಮಿನಿ ಎಲೆಕ್ಟ್ರಿಕ್ ಕಾರಿನ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಬಹಿರಂಗವಾಗುತ್ತದೆ.

More from DriveSpark

Article Published On: Saturday, October 23, 2021, 10:29 [IST]
English summary
Mini revealed cooper electric teaser india launch soon find here all details
Read more on ಮಿನಿ mini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+