ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಈ ವರ್ಷದ ಅಕ್ಟೋಬರ್‌ನಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ತಯಾರಕ ಕಂಪನಿಯಾದ ಮಿನಿ ( MINI) ಇಂಡಿಯಾ ತನ್ನ ಎಸ್‌ಇ (SE) ಎಲೆಕ್ಟ್ರಿಕ್ ಕೂಪರ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಕಂಪನಿಯು ಈ ಎಲೆಕ್ಟ್ರಿಕ್ ಕಾರ್ ಅನ್ನು 2019ರಲ್ಲಿ ಅಧಿಕೃತವಾಗಿ ಪರಿಚಯಿಸಿತು. ಇದರ ನಂತರ, ಕಂಪನಿಯು 2021ರ ಅಕ್ಟೋಬರ್ ಅಂತ್ಯದಿಂದ ಈ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಗಳನ್ನು ಆರಂಭಿಸಿತು.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಈ ಕಾರಿನ ಮೊದಲ ಬ್ಯಾಚ್‌ನ ಬುಕ್ಕಿಂಗ್ ಪೂರ್ಣಗೊಂಡಿದೆ. ಮೊದಲ ಬ್ಯಾಚ್‌ನಲ್ಲಿ ಕಂಪನಿಯು ಈ ಕಾರಿನ 30 ಯುನಿಟ್'ಗಳಿಗಾಗಿ ಬುಕ್ಕಿಂಗ್ ಗಳನ್ನು ಸ್ವೀಕರಿಸಿತ್ತು. ಈಗ MINI ಕೂಪರ್ SE ಕಾರಿಗೆ ಸಂಬಂಧಿಸಿದ ಹೊಸ ಮಾಹಿತಿ ಹೊರಬರುತ್ತಿದೆ. ಇತ್ತೀಚಿನ ಮಾಹಿತಿಗಳ ಪ್ರಕಾರ, ಹೊಸ MINI ಕೂಪರ್ SE ಕಾರ್ ಅನ್ನು 2022ರ ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ದೃಢಪಡಿಸಿದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಸದ್ಯಕ್ಕೆ ಕಂಪನಿಯು ಈ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಕಂಪನಿಯು ಈ ಕಾರಿನ ಬಿಡುಗಡೆಯ ಸಂದರ್ಭದಲ್ಲಿ ಕಾರಿನ ಬೆಲೆಯನ್ನು ಬಹಿರಂಗಪಡಿಸಲಿದೆ. ಈ ಕಾರ್ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ ಮೂಲಕ ರೂ. 1 ಲಕ್ಷ ಮುಂಗಡ ಪಾವತಿಸಿ ಬುಕ್ ಮಾಡಬಹುದು. ಈ ಕಾರಿನ ಮೊದಲ ಬ್ಯಾಚ್‌ನ ಎಲ್ಲಾ 30 ಯುನಿಟ್‌ಗಳು ಕೇವಲ 2 ಗಂಟೆಗಳಲ್ಲಿ ಸಂಪೂರ್ಣವಾಗಿ ಬುಕ್ ಆಗಿವೆ ಎಂದು ತಿಳಿದು ಬಂದಿದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಮಿನಿ ಎಲೆಕ್ಟ್ರಿಕ್‌ ಕಾರಿನ ವಿನ್ಯಾಸವನ್ನು ಮಿನಿ ಕೂಪರ್‌ನಂತೆಯೇ ವಿನ್ಯಾಸಗೊಳಿಸಲಾಗಿದೆ. ಆದರೆ ಈ ಕಾರಿನಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಈ ಬದಲಾವಣೆಗಳಲ್ಲಿ ಅತ್ಯಂತ ಪ್ರಮುಖವಾದುದೆಂದರೆ ಮುಂಭಾಗದ ಗ್ರಿಲ್. ಇದು ಕಾರ್ ಅನ್ನು ಏರೋಡೈನಾಮಿಕ್ ಆಗಿಸುತ್ತದೆ. ಈ ಹ್ಯಾಚ್‌ಬ್ಯಾಕ್‌ ಕಾರಿಗೆ ಫೇಸ್‌ಲಿಫ್ಟ್ ನೀಡಲು, ಆಕರ್ಷಕ ಹಳದಿ ಬಣ್ಣದ ಅಸೆಂಟ್ ಸ್ಟ್ರೈಪ್ ಹಾಗೂ ಮಿನಿ ಎಲೆಕ್ಟ್ರಿಕ್ ಬ್ಯಾಡ್ಜ್‌ಗಳನ್ನು ನೀಡಲಾಗಿದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಮಿನಿ ಕಂಪನಿಯು ಈ ಕಾರಿನಲ್ಲಿ ಇಂಟಿಗ್ರೇಟೆಡ್ ಸರ್ಕ್ಯುಲರ್ ಎಲ್ಇಡಿ ಡಿ‌ಆರ್‌ಎಲ್ ಗಳನ್ನು ಹೊಂದಿರುವ ಹೆಡ್ ಲೈಟ್ ಗಳನ್ನು ನೀಡಿದೆ. ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕಾರಿನಲ್ಲಿ ಹಳದಿ ಬಣ್ಣದ ರಿಮ್‌ಗಳನ್ನು ಹೊಂದಿರುವ 17 ಇಂಚಿನ ಸ್ಪೋಕ್ ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ನೀಡಲಾಗಿದೆ. ಇದು ಕಾರಿನ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಇದರ ಜೊತೆಗೆ ಎಲ್ಲಾ ಬಣ್ಣದ ಟ್ರಿಮ್‌ಗಳಲ್ಲಿ ಕಾರಿನ ಪಿಲ್ಲರ್‌ಗಳನ್ನು ಕಪ್ಪು ಬಣ್ಣದಲ್ಲಿ ಇರಿಸಲಾಗಿದೆ. ಇದು ಈ ಎಲೆಕ್ಟ್ರಿಕ್ ಕಾರಿಗೆ ಉತ್ತಮ ಕಾಂಟ್ರಾಸ್ಟ್ ಕಲರ್ ನೀಡುತ್ತದೆ. ಮಿನಿ ಕಂಪನಿಯ ಈ ಎಲೆಕ್ಟ್ರಿಕ್ ಕಾರು 3 ಡೋರುಗಳ ಕೂಪ್ ಆಗಿದ್ದು ಗೋ ಕಾರ್ಟ್ ಅನುಭವವನ್ನು ನೀಡುತ್ತದೆ. ವೇಗವಾಗಿ ಟಾರ್ಕ್ ಉತ್ಪಾದಿಸುವ ಈ ಕಾರು ಯಾವುದೇ ಮಾಲಿನ್ಯವನ್ನು ಹೊರ ಸೂಸದೇ ಪರಿಸರ ಸ್ನೇಹಿಯಾಗಿರುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಇದರಿಂದ ಈ ಎಲೆಕ್ಟ್ರಿಕ್ ಕಾರಿನಲ್ಲಿ ಎಕ್ಸಾಸ್ಟ್ ಕೂಡ ಕಾಣಿಸುವುದಿಲ್ಲ. ಈ ಎಲೆಕ್ಟ್ರಿಕ್ ಕಾರು 184 ಬಿ‌ಹೆಚ್‌ಪಿ ಪವರ್ ಹಾಗೂ 270 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಿನಿ ಎಸ್‌ಇ ಎಲೆಕ್ಟ್ರಿಕ್ ಕಾರು ಕೇವಲ 7.3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಮಿನಿ ಎಲೆಕ್ಟ್ರಿಕ್ ಕಾರು ವಿಶಿಷ್ಟ ಚಾಲನಾ ಅನುಭವವನ್ನು ನೀಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರಿನಲ್ಲಿ 32.6 ಕಿ.ವ್ಯಾ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದ ನಂತರ 270 ಕಿ.ಮೀಗಳವರೆಗೆ ಚಲಿಸಬಹುದು. ಮಿನಿ ಕಂಪನಿಯು ಈ ಎಲೆಕ್ಟ್ರಿಕ್ ಕಾರ್ ಅನ್ನು ವೈಟ್ ಸಿಲ್ವರ್, ಮಿಡ್‌ನೈಟ್ ಬ್ಲ್ಯಾಕ್, ಮೂನ್‌ವಾಕ್ ಗ್ರೇ ಹಾಗೂ ಬ್ರಿಟಿಷ್ ರೇಸಿಂಗ್ ಗ್ರೀನ್‌ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಈ ಎಲೆಕ್ಟ್ರಿಕ್ ಕಾರ್ ಅನ್ನು 2020ರ ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ವಿತರಣೆಯು ಮುಂದಿನ ವರ್ಷ ಏಪ್ರಿಲ್ ನಿಂದ ಆರಂಭವಾಗುವ ಸಾಧ್ಯತೆಗಳಿವೆ. ಇದು ಮಿನಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದ್ದು, ಸಿಬಿಯು ಮಾದರಿಯಲ್ಲಿ ಸಂಪೂರ್ಣ ಲೋಡ್ ಮಾಡಲಾದ ರೂಪಾಂತರವಾಗಿ ಮಾರಾಟ ಮಾಡಲಾಗುವುದು.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಿನಿ ಕಂಪನಿಯು ಈ ಎಲೆಕ್ಟ್ರಿಕ್ ಕಾರ್ ಅನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸುತ್ತಿದೆ. ಮಿನಿ ಕೂಪರ್ ಎಸ್‌ಇ ಮಲ್ಟಿ ಲೆವೆಲ್ ಬ್ರೇಕ್ ರಿಜನರೇಟಿವ್ ಸಿಸ್ಟಂಗಾಗಿ ಸೆಂಟರ್ ಕನ್ಸೋಲ್‌ನಲ್ಲಿ ಹೊಸ ಟಾಗಲ್ ಸ್ವಿಚ್ ಹೊಂದಿದೆ. ಇಂಟಿರಿಯರ್'ನಲ್ಲಿರುವ ಡ್ಯಾಶ್‌ಬೋರ್ಡ್ 5.5 ಇಂಚಿನ ಒವೆಲ್ ಶೇಪಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಧ್ಯದಲ್ಲಿ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಸಹ ಹೊಂದಿದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಈ ಡಿಸ್‌ಪ್ಲೇ ಹಲವು ಕನೆಕ್ಟೆಡ್ ಕಾರ್ ಫೀಚರ್‌ ಹಾಗೂ ಕನ್ಸಿಯರ್ಜ್ ಸೇವೆಗಳನ್ನು ನೀಡುತ್ತದೆ. ಇವುಗಳಲ್ಲಿ ರಿಮೋಟ್ ಕಾರ್ ಲಾಕಿಂಗ್/ಅನ್‌ಲಾಕ್ ಹಾಗೂ ಒಬ್ಬರಸ್ಮಾರ್ಟ್‌ಫೋನ್‌ನಿಂದ ಒಳಾಂಗಣದ ಪ್ರಿ-ಕಂಡೀಷನಿಂಗ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಇನ್ನು ಯೆಲ್ಲೋ ಅಸ್ಸೆಂಟ್ ಅನ್ನು ಒಳಭಾಗಕ್ಕೂ ಸಾಗಿಸಲಾಗುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಹೊಸ ಪವರ್‌ಟ್ರೇನ್‌ನಿಂದ ಆಂತರಿಕ ಹಾಗೂ ಬೂಟ್ ಸ್ಪೇಸ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲವೆಂದು ಮಿನಿ ಕಂಪನಿ ಹೇಳಿದೆ. ಇನ್ನು ಪಿಲ್ಲರ್‌ಗಳು ಎಲ್ಲಾ ಬಣ್ಣದ ಮಾದರಿಗಳಲ್ಲಿ ಬ್ಲ್ಯಾಕ್ ಅಂಶಗಳನ್ನು ಹೊಂದಿವೆ. ಇದು ಕಾರಿಗೆ ಆಕರ್ಷಕ ಲುಕ್ ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರು ಐಸಿ ಎಂಜಿನ್ ಮಾದರಿಯಂತೆ ಮುಂಭಾಗದ ಆಕ್ಸಲ್‌ನಲ್ಲಿ ಅಳವಡಿಸಲಾಗಿರುವ ಏಕೈಕ ಮೋಟರ್‌ನೊಂದಿಗೆ FWD ಆಗಿ ಬರುತ್ತದೆ.

ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ Mini SE ಎಲೆಕ್ಟ್ರಿಕ್ ಕಾರು

ಹೆಚ್ಚಿನ ಮಿನಿ ಕಾರುಗಳಂತೆ ಈ ಮಿನಿ ಎಲೆಕ್ಟ್ರಿಕ್ ಕೂಪೆ ಕಾರಿನ ಅನುಭವವನ್ನು ಹಗುರಗೊಳಿಸಲು ಟನ್ಗಟ್ಟಲೆ ಗಿಜ್ಮೊಗಳನ್ನು ಪಡೆಯುತ್ತದೆ. ಇವುಗಳಲ್ಲಿ ಅಡಾಪ್ಟಿವ್ ಎಲ್ಇಡಿ ಹೆಡ್‌ಲೈಟ್‌ಗಳು ಮ್ಯಾಟ್ರಿಕ್ಸ್ ಫಂಕ್ಷನ್‌ನೊಂದಿಗೆ ಹೈ ಭೀಮ್, ಹೀಟೆಡ್ ಸ್ಟೀಯರಿಂಗ್ ವೀಲ್, ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್, ಹೆಡ್-ಅಪ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್ ಗಳು ಸೇರಿವೆ.

More from DriveSpark

Article Published On: Saturday, December 11, 2021, 10:19 [IST]
English summary
Mini se electric car to be launched in march 2022 details
Read more on ಮಿನಿ mini
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+