ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ವಾಹನಗಳಿಂದ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ತಡೆಗಟ್ಟಲು ಗುರುಗ್ರಾಮ ಜಿಲ್ಲಾಡಳಿತವು ಪರಿವರ್ತನ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನದಡಿಯಲ್ಲಿ ಗುರುಗ್ರಾಮದಲ್ಲಿರುವ 12,000 ಡೀಸೆಲ್ ಆಟೋ ರಿಕ್ಷಾಗಳನ್ನು ಎಲೆಕ್ಟ್ರಿಕ್ ರಿಕ್ಷಾಗಳಾಗಿ ಬದಲಿಸಲಾಗುತ್ತದೆ.

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಈ ಅಭಿಯಾನದ ಮೊದಲ ಹಂತದಲ್ಲಿ ಸುಮಾರು 2,000 ಎಲೆಕ್ಟ್ರಿಕ್ ರಿಕ್ಷಾಗಳನ್ನು ಆರಂಭಿಸಲಾಗುವುದು. ಈ ಅಭಿಯಾನಕ್ಕಾಗಿ ಗುರುಗ್ರಾಮದ ಜಿಲ್ಲಾಡಳಿತವು ಆಟೋ ರಿಕ್ಷಾ ಯೂನಿಯನ್ ಹಾಗೂ ಚಾಲಕರ ಬೆಂಬಲವನ್ನು ಪಡೆದಿದೆ.

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಆಟೋ ಯೂನಿಯನ್ ಪ್ರತಿನಿಧಿಗಳು ಹಾಗೂ ಆಟೋ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಎಂಸಿಜಿ ವಲಯ 4ರ ಹೆಚ್ಚುವರಿ ಆಯುಕ್ತ ಜಸ್ಪ್ರೀತ್ ಕೌರ್, ಪರಿಸರ ಮಾಲಿನ್ಯವು ಗಂಭೀರ ಸಮಸ್ಯೆಯಾಗಿದ್ದು, ಅದನ್ನು ಪರಿಹರಿಸಲು ಕಾಲ ಕಾಲಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ದೀರ್ಘಕಾಲೀನ ಕ್ರಮಗಳು ಮುಖ್ಯವಾಗಿವೆ ಎಂದು ಹೇಳಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಗುರುಗ್ರಾಮ ಪುರಸಭೆಯು 2,000 ಎಲೆಕ್ಟ್ರಿಕ್ ವಾಹನಗಳನ್ನು ಜಾರಿಗೆ ತರುವ ಗುರಿಯನ್ನು ಹೊಂದಿದ್ದು, ಆಟೋ ರಿಕ್ಷಾ ಯೂನಿಯನ್ ಹಾಗೂ ಚಾಲಕರ ಸಹಯೋಗದೊಂದಿಗೆ ವಾಹನ ಮಾಲಿನ್ಯ ಅಭಿಯಾನವನ್ನು ನಡೆಸಲಾಗುತ್ತಿದೆ.

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಮೊದಲ ಹಂತದಲ್ಲಿ 10 ವರ್ಷಕ್ಕಿಂತ ಹೆಚ್ಚು ಹಳೆಯ ಡೀಸೆಲ್ ಆಟೋಗಳನ್ನು ಎಲೆಕ್ಟ್ರಿಕ್ ಆಟೋಗಳಾಗಿ ಪರಿವರ್ತಿಸಲಾಗುತ್ತದೆ. ಎಲೆಕ್ಟ್ರಿಕ್ ರಿಕ್ಷಾ ಖರೀದಿಸಲು ಆಟೋ ಚಾಲಕರಿಗೆ ಜಿಲ್ಲಾಡಳಿತವು ನೆರವು ನೀಡಲಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಎಲೆಕ್ಟ್ರಿಕ್ ರಿಕ್ಷಾಗಳು ಯಾವುದೇ ಮಾಲಿನ್ಯವನ್ನುಂಟು ಮಾಡುವುದಿಲ್ಲ. ಜೊತೆಗೆ ಕಡಿಮೆ ವೆಚ್ಚದಲ್ಲಿಯೂ ಚಾಲನೆ ಮಾಡಬಹುದು. ಎಲೆಕ್ಟ್ರಿಕ್ ಆಟೋಗಳನ್ನು ಚಾರ್ಜ್ ಮಾಡಲು ಗುರುಗ್ರಾಮದ ಆಡಳಿತವು ವಿವಿಧ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್'ಗಳನ್ನು ನಿರ್ಮಿಸುತ್ತಿದೆ.

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಈ ಸ್ಟೇಷನ್'ಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಜೊತೆಗೆ ಬ್ಯಾಟರಿ ವಿನಿಮಯ ಹಾಗೂ ಬ್ಯಾಟರಿ ಸರ್ವೀಸ್ ಮಾಡುವ ಸೌಲಭ್ಯಗಳೂ ಇರಲಿವೆ. ಡೀಸೆಲ್ ಆಟೋಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಹೆಚ್ಚು ಅಡ್ವಾನ್ಸ್ದ್ ಆಗಿವೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಅವುಗಳನ್ನು ನಿರ್ವಹಣೆ ಮಾಡಲು ಕಡಿಮೆ ವೆಚ್ಚವಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ದೇಶದ ಹಲವು ನಗರಗಳಲ್ಲಿ ಎಲೆಕ್ಟ್ರಿಕ್ ರಿಕ್ಷಾಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವು ಫೇಮ್ -2 ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ರಿಯಾಯಿತಿ ನೀಡುತ್ತದೆ.

ಎಲೆಕ್ಟ್ರಿಕ್'ಗೆ ಬದಲಾಗಲಿವೆ 12,000ಕ್ಕೂ ಹೆಚ್ಚು ಆಟೋ ರಿಕ್ಷಾಗಳು

ಫೇಮ್ -2 ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ, ಎಲೆಕ್ಟ್ರಿಕ್ ತ್ರಿಚಕ್ರ ಹಾಗೂ ಎಲೆಕ್ಟ್ರಿಕ್ ನಾಲ್ಕು ಚಕ್ರ ವಾಹನಗಳನ್ನು ಸೇರಿಸಲಾಗಿದೆ. ಈ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ಹಾಗೂ ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ.

Most Read Articles

Kannada
English summary
More than 12000 auto rickshaws to be converted into electric in Gurugram. Read in Kannada.
Story first published: Friday, April 9, 2021, 16:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X