Just In
- 29 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 30 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 2 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- News
ಪುಟ್ಟೇನಹಳ್ಳಿ ಡಬಲ್ ಮರ್ಡರ್ : ಆರೋಪಿಗಳು ಅಂದರ್ ಆಗಿದ್ದೇ ಥ್ರಿಲ್ಲಿಂಗ್ !
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Movies
'ಅಮಿತಾಭ್ ಮಗಳ ಪಾತ್ರ ಮಾಡ್ತಿದ್ದೇನೆ' ಎಂದಾಗ ರಶ್ಮಿಕಾ ಪೋಷಕರ ಪ್ರತಿಕ್ರಿಯೆ ಹೇಗಿತ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳಿವು
ಸನ್‌ರೂಫ್ ಇಂದು ಕಾರಿನಲ್ಲಿ ನೀಡಲಾಗುವ ಅತ್ಯಂತ ಅಗತ್ಯ ಫೀಚರ್‌ಗಳಲ್ಲಿ ಒಂದಾಗಿದೆ. ಈ ಪೀಚರ್ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತೀಯರು ಹೆಚ್ಚಾಗಿ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳನ್ನು ಇಷ್ಟಪಡುತ್ತಾರೆ.

ಮೊದಲು ಐಷಾರಾಮಿ ಕಾರುಗಳಲ್ಲಿ ಮಾತ್ರ ಪನೋರಮಿಕ್ ಸನ್‌ರೂಫ್ ಅನ್ನು ನೀಡಲಾಗುತ್ತಿತ್ತು. ಆದರೆ ಇಂದು ಹೆಚ್ಚಿನ ಕಾರುಗಳು ಸನ್‌ರೂಫ್ ಸೌಲಭ್ಯವನ್ನು ಪಡೆದುಕೊಳ್ಳುತ್ತಿದೆ. ಎಲ್ಲಾ ವಯೋಮಾನವರು ಕೂಡ ಸನ್‌ರೂಫ್ ಪೀಚರ್ ಅನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕಾರು ಖರೀದಿಸುವಾಗ ಸನ್‌ರೂಫ್ ಫೀಚರ್‌ಗೆ ಹೆಚ್ಚಿನ ಅಧ್ಯತೆಯನ್ನು ನೀಡುತ್ತಾರೆ. ಕೆಲವು ಹೊಸ ಕಾರುಗಳಲ್ಲಿ ದೊಡ್ಡ ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್ ಅನ್ನು ನೀಡುತ್ತಾರೆ.

ಹಲವು ಜನಪ್ರಿಯ ಎಸ್‍ಯುವಿ ಮತ್ತು ಎಂಪಿವಿಗಳಲ್ಲಿ ಸನ್‌ರೂಫ್ ಸೌಲಭ್ಯವನ್ನು ಹೊಂದಿಲ್ಲ, ಆದರೆ ಮಧ್ಯಮವರ್ಗದ ಜನರಿಗೆ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳ ಆಯ್ಕೆಗಳು ಲಭ್ಯವಿದೆ. ಭಾರತದಲ್ಲಿ ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್‌ರೂಫ್ ಸೌಲಭ್ಯವುಳ್ಳ ಕಾರುಗಳ ಬಗ್ಗೆ ಮಾಹಿತಿ ಇಲ್ಲಿವೆ.
MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹ್ಯುಂಡೈ ಕ್ರೆಟಾ
ಪ್ರಸ್ತುತ ಭಾರತದಲ್ಲಿ ಪನೋರಮಿಕ್ ಸನ್‌ರೂಫ್‌ನೊಂದಿಗೆ ನೀಡಲಾಗುವ ಅತ್ಯಂತ ಉತ್ತಮ ಕಾರುಗಳಲ್ಲಿ ಇದು ಒಂದಾಗಿದೆ. ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯ ಎಸ್‌ಎಕ್ಸ್ ಮತ್ತು ಎಸ್‌ಎಕ್ಸ್ (ಒ) ವೆರಿಯೆಂಟ್ ಗಳಲ್ಲಿ ಪನೋರಮಿಕ್ ಸನ್‌ರೂಫ್ ಫೀಚರ್ ಗಳನ್ನು ನೀಡಲಾಗಿದೆ.

ಈ ಹ್ಯುಂಡೈ ಕ್ರೆಟಾ ಮಿಡ್ ಎಸ್‍ಯುವಿಯ ಕಾರಿನ ಬೆಲೆಯು ರೂ.13.79 ಲಕ್ಷಗಳಿಂದ ರೂ.17.53 ಲಕ್ಷಗಳಾಗಿದೆ. ಈ ಹ್ಯುಂಡೈ ಎಸ್‍ಯುವಿಯಲ್ಲಿ ಸನ್‌ರೂಫ್ ಫಿಚರ್ ನೊಂದಿಗೆ ಹಲವು ಅತ್ಯಾಧುನಿಕ ಫೀಚರ್ ಗಳೊಂದಿಗೆ ಲಭ್ಯವಿದೆ.

ಎಂಜಿ ಹೆಕ್ಟರ್
ಎಂಜಿ ಹೆಕ್ಟರ್‌ನ ರೇಂಜ್-ಟಾಪಿಂಗ್ ಶಾರ್ಪ್ ಟ್ರಿಮ್‌ನೊಂದಿಗೆ ಮಾತ್ರ ಪನೋರಮಿಕ್ ಸನ್‌ರೂಫ್ ಅನ್ನು ನೀಡುತ್ತದೆ. ಈ ವೆರಿಯೆಂಟ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಹೈಬ್ರಿಡ್ ಎಂಟಿ ಕಾನ್ಫಿಗರೇಶನ್ ಬೆಲೆಯು ರೂ.17.10 ಲಕ್ಷ, ಟರ್ಬೊ-ಪೆಟ್ರೋಲ್ ಡಿಸಿಟಿ ಅಥವಾ ಸಿವಿಟಿಗೆ ರೂ.18.10 ಲಕ್ಷ ಮತ್ತು 2.0-ಲೀಟರ್ ಮಾದರಿಯ ಬೆಲೆಯು ರೂ.18.43 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ.
MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಎಂಜಿ ಹೆಕ್ಟರ್ ಪ್ಲಸ್
ಹೆಕ್ಟರ್‌ನ ಮೂರು-ಸಾಲಿನ ಆವೃತ್ತಿಯಾದ ಹೆಕ್ಟರ್ ಪ್ಲಸ್ ಅನ್ನು ಪನೋರಮಿಕ್ ಸನ್‌ರೂಫ್‌ನೊಂದಿಗೆ ಸಹ ನೀಡಲಾಗುತ್ತದೆ. 6 ಸೀಟುಗಳ ಆವೃತ್ತಿಯಲ್ಲಿ ಶಾರ್ಪ್ ಟ್ರಿಮ್ ಮತ್ತು 7 ಆಸನಗಳ ಮಾದರಿಯಲ್ಲಿ ಸೆಲೆಕ್ಟ್ ಟ್ರಿಮ್ ಈ ಪನೋರಮಿಕ್ ಫಿಚರ್ ಅನ್ನು ಪಡೆಯುತ್ತದೆ.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಎಂಜಿ ಹೆಕ್ಟರ್ ಪ್ಲಸ್ ಪೆಟ್ರೋಲ್-ಹೈಬ್ರಿಡ್ ಎಂಟಿ, ಪೆಟ್ರೋಲ್ ಸಿವಿಟಿ, ಪೆಟ್ರೋಲ್ ಡಿಸಿಟಿ ಮತ್ತು ಡೀಸೆಲ್ ಎಂಟಿ ಸಂರಚನೆಗಳೊಂದಿಗೆ ಲಭ್ಯವಿದೆ, ಇದರ ಬೆಲೆ ರೂ.17.85 ದಿಂದ ರೂ.19.23 ಲಕ್ಷಗಳಾಗಿದೆ. 7-ಆಸನಗಳ ಆವೃತ್ತಿಯಲ್ಲಿನ ಸೆಲೆಕ್ಟ್ ಟ್ರಿಮ್ 2.0-ಲೀಟರ್ ಆಯಿಲ್ ಬರ್ನರ್ ಅನ್ನು ಮಾತ್ರ ಪಡೆಯುತ್ತದೆ,

ಟಾಟಾ ಹ್ಯಾರಿಯರ್
ಟಾಟಾ ಹ್ಯಾರಿಯರ್ ಅನ್ನು ಎಕ್ಸ್‌ಝಡ್ ಪ್ಲಸ್ ಮತ್ತು ಎಕ್ಸ್‌ಝಡ್‌ಎ ಪ್ಲಸ್ ವೆರಿಯೆಂಟ್ ಗಳಲ್ಲಿ ಡ್ಯುಯಲ್-ಪೇನ್ ಸನ್‌ರೂಫ್‌ನೊಂದಿಗೆ ನೀಡಲಾಗುತ್ತದೆ, ಜೊತೆಗೆ ಎರಡರ ಸ್ಪೆಷಲ್ ಎಡಿಷನ್ ಆದ ಕ್ಯಾಮೊ ಮತ್ತು ಡಾರ್ಕ್ ಎಡಿಷನ್ ಗಳಲ್ಲಿಯು ನೀಡಲಾಗುತ್ತದೆ. ಪನೋರಮಿಕ್ ಸನ್‌ರೂಫ್ ಹೊಂದಿದ ವೆರಿಯೆಂಟ್ ಗಳ ಬೆಲೆಗಳು ಎಕ್ಸ್ ಶೋರೂಂ ಪ್ರಕಾರ ರೂ.19.05 ಲಕ್ಷಗಳಿಂದ ರೂ.20.45 ಲಕ್ಷಗಳಾಗಿದೆ.

ಇತ್ತೀಚೆಗೆ ಪ್ರಾರಂಭಿಸಲಾದ ಹೊಸ-ಜನ್ ಸಫಾರಿ ಮೇಲೆ ತಿಳಿಸಿದ ಹ್ಯಾರಿಯರ್‌ನ ಮೂರು-ಸಾಲಿನ ಆವೃತ್ತಿಯಾಗಿದೆ ಎಂದು ನಮಗೆ ಈಗಾಗಲೇ ತಿಳಿದಿದೆ ಮತ್ತು ಆದ್ದರಿಂದ, ಐದು ಆಸನಗಳ ಎಸ್ಯುವಿಯ ವೈಶಿಷ್ಟ್ಯ ಪಟ್ಟಿಯನ್ನು ಸಹ ಎರವಲು ಪಡೆಯುತ್ತದೆ. ಎಸ್‌ಯುವಿಯ ಎಕ್ಸ್‌ಟಿ +, ಎಕ್ಸ್ Z ಡ್ + ಮತ್ತು ಎಕ್ಸ್ Z ಡ್ಎ + ರೂಪಾಂತರಗಳು ವಿಹಂಗಮ ಸನ್‌ರೂಫ್ ಪಡೆಯುತ್ತವೆ, ಇದರ ಬೆಲೆ 18.25 ಲಕ್ಷ ರೂ.ಗಳಿಂದ 21.45 ಲಕ್ಷ ರೂ. (ಎಕ್ಸ್ ಶೋರೂಮ್).

ಟಾಟಾ ಸಫಾರಿ
ಇತ್ತೀಚೆಗೆ ಬಿಡುಗಡೆಗೊಳಿಸಲಾದ ನ್ಯೂ ಜನರೇಷನ್ ಸಫಾರಿ ಮೇಲೆ ತಿಳಿಸಿದ ಹ್ಯಾರಿಯರ್‌ನ ಮೂರು-ಸಾಲಿನ ಆವೃತ್ತಿ ಎಂದು ಹೇಳಲಾಗುತ್ತದೆ. ಹ್ಯಾರಿಯರ್ ಫೀಚರ್ ಗಳನ್ನು ಸಪಾರಿ ಎಸ್‍ಯುವಿಯು ಕೂಡ ಎರವಲು ಪಡೆಯುತ್ತದೆ. ಸಫಾರಿ ಎಸ್‍ಯುವಿಯ ಎಕ್ಸ್‌ಟಿ, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ವೆರಿಯೆಂಟ್ ಗಳಲ್ಲಿ ಪನೋರಮಿಕ್ ಸನ್‌ರೂಫ್ ಪಡೆಯುತದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.18.25 ಲಕ್ಷಗಳಿಂದ ರೂ.21.45 ಲಕ್ಷಗಳಾಗಿದೆ.