ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಹೆಚ್ಚಿನ ಜನರು ಹೊಸ ವರ್ಷದ ಆರಂಭದಲ್ಲಿ ಹೊಸ ಕಾರು ಖರೀದಿಸಲು ಬಯಸುತ್ತಾರೆ. ಹೊಸ ವರ್ಷದಲ್ಲಿ ಹೊಸ ವಾಹನ ಚಾಲನೆ ಮಾಡಲು ಸಾಕಷ್ಟು ಜನರು ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿಯೇ ವಾಹನ ತಯಾರಕ ಕಂಪನಿಗಳು ವರ್ಷದ ಕೊನೆಯಲ್ಲಿ ಅಥವಾ ಹೊಸ ವರ್ಷದ ಆರಂಭದಲ್ಲಿ ಕಾರುಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತವೆ. ಕೆಲವು ಗ್ರಾಹಕರು ತಮ್ಮ ನೆಚ್ಚಿನ ವಾಹನಗಳು ಬಿಡುಗಡೆಯಾಗುವವರೆಗೂ ಖರೀದಿಯನ್ನು ಮುಂದೂಡುತ್ತಾರೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಈಗ ಹಲವಾರು ವಾಹನ ತಯಾರಕ ಕಂಪನಿಗಳು ತಮ್ಮ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಮುಂದಾಗುತ್ತಿವೆ. ಮುಂದಿನ ವರ್ಷದ ಆರಂಭದಲ್ಲಿ ಹಲವು ಹೊಸ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ. ಈ ಲೇಖನದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಪ್ರಮುಖ ಐದು ಕಾರುಗಳು ಯಾವುವು ಎಂಬುದನ್ನು ನೋಡೋಣ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಸ್ಕೋಡಾ ಸ್ಲಾವಿಯಾ (Skoda Slavia)

ಜೆಕ್ ರಿಪಬ್ಲಿಕ್ ಮೂಲದ ಸ್ಕೋಡಾ ಕಂಪನಿಯು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಂಪನಿಯ ಬಹು ನಿರೀಕ್ಷಿತ ಕಾರುಗಳಲ್ಲಿ ಸ್ಲಾವಿಯಾ ಸೆಡಾನ್ ಕಾರು ಸೇರಿದೆ. ಜಾಗತಿಕವಾಗಿ ಬಿಡುಗಡೆಯಾದ ಸ್ಲಾವಿಯಾ ಸೆಡಾನ್ ಕಾರ್ ಅನ್ನು MQB-A0 ಪ್ಲಾಟ್‌ಫಾರಂನಲ್ಲಿ ಭಾರತೀಯ ಗ್ರಾಹಕರು ಹಾಗೂ ಭಾರತೀಯ ರಸ್ತೆಗಳ ಅಭಿರುಚಿಗೆ ತಕ್ಕಂತೆ ನಿರ್ಮಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಕುಶಾಕ್ ಎಸ್‌ಯುವಿ ವಿನ್ಯಾಸಗೊಳಿಸಿದ ಆಪರೇಟಿಂಗ್ ಸಿಸ್ಟಂನಲ್ಲಿಯೇ ಸ್ಲಾವಿಯಾ ಸೆಡಾನ್ ಕಾರ್ ಅನ್ನು ಸಹ ವಿನ್ಯಾಸಗೊಳಿಸಲಾಗಿದೆ. ಸ್ಕೋಡಾ ಕುಶಾಕ್‌ ಎಸ್‌ಯುವಿಯಲ್ಲಿ ಅಳವಡಿಸಿರುವ 1.0 ಲೀಟರ್ ಟಿ‌ಎಸ್‌ಐ ಪೆಟ್ರೋಲ್ ಹಾಗೂ 1.5 ಲೀಟರ್ ಟಿ‌ಎಸ್‌ಐ ಎಂಜಿನ್ ಆಯ್ಕೆಗಳಲ್ಲಿಯೇ ಸ್ಲಾವಿಯಾ ಸೆಡಾನ್ ಕಾರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಸೆಡಾನ್ ಕಾರ್ ಅನ್ನು ಮುಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಹೊಸ ತಲೆಮಾರಿನ ಮಹೀಂದ್ರ ಸ್ಕಾರ್ಪಿಯೋ

ಸಾಮಾನ್ಯವಾಗಿ ಹಲವು ವರ್ಷಗಳ ನಂತರ ಹೊಸ ತಲೆಮಾರಿನ ಕಾರು ಬಿಡುಗಡೆಗೊಳಿಸುವಾಗ ಆ ಕಾರಿನ ಮೇಲೆ ನಿರೀಕ್ಷೆ ಹೆಚ್ಚುತ್ತದೆ. ಹೊಸ ಸ್ಕಾರ್ಪಿಯೋ ಕಾರಿನ ಮೇಲೆಯೂ ಈ ರೀತಿಯ ನಿರೀಕ್ಷೆಗಳು ಮೂಡುತ್ತಿವೆ. ಸುಮಾರು 10 ವರ್ಷಗಳ ನಂತರ ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾದ ಸ್ಕಾರ್ಪಿಯೋ ಕಾರ್ ಅನ್ನು ಅಪ್ ಡೇಟ್ ಮಾಡಲಾಗುತ್ತಿದೆ. ಈ ಕಾರು ಈಗಿನ ಸನ್ನಿವೇಶಕ್ಕೆ ತಕ್ಕಂತೆ ಸಂಪೂರ್ಣವಾಗಿ ಅಪ್‌ಡೇಟ್ ಆಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಪ್ರಸಕ್ತ ಹಣಕಾಸು ವರ್ಷದಲ್ಲಿ ಮಹೀಂದ್ರಾ ಕಂಪನಿಯು ಹೊಸ ಸ್ಕಾರ್ಪಿಯೊ ಕಾರ್ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ. XUV 700 ಮಾದರಿಯನ್ನು ಹೊಸ ಸ್ಕಾರ್ಪಿಯೋ ಕವರ್‌ಗಳೊಂದಿಗೆ ಹಲವು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. XUV 700 ಬಿಡುಗಡೆಯಾಗಿ ಕೆಲವು ತಿಂಗಳುಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಹೊಸ ಸ್ಕಾರ್ಪಿಯೊ ಕಾರು ಸಹ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

BMW IX

BMW ಕಂಪನಿಯ ಹೊಸ ಪೂರ್ಣ ಪ್ರಮಾಣದ IX ಎಲೆಕ್ಟ್ರಿಕ್ ಕಾರು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ. 105.2 ಕಿ.ವ್ಯಾ ಬ್ಯಾಟರಿ ಪ್ಯಾಕ್ ಹೊಂದಿರುವ IX ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 611 ಕಿ.ಮೀಗಳವರೆಗೆ ಚಲಿಸುತ್ತದೆ. ಅಂದರೆ ಸಂಪೂರ್ಣ ಚಾರ್ಜ್ ಆದ ಬ್ಯಾಟರಿಯಲ್ಲಿ ಈ ಕಾರಿನಲ್ಲಿ ಪ್ರಯಾಣಿಕರು ಗರಿಷ್ಠ 611 ಕಿ.ಮೀ ಪ್ರಯಾಣಿಸಬಹುದು.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಎಸ್‌ಯುವಿ ರೀತಿಯಲ್ಲಿ ಆಕರ್ಷಕ ನೋಟವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಕಾರು ಕೇವಲ 4.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. 515.6 ಬಿ‌ಹೆಚ್‌ಪಿ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ ಹೊಂದಿರುವ IX ಎಲೆಕ್ಟ್ರಿಕ್ ಕಾರ್ ಅನ್ನು ಡಿಸೆಂಬರ್ 13 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದಾಗಿ ಬಿ‌ಎಂಡಬ್ಲ್ಯು ಕಂಪನಿ ತಿಳಿಸಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಸಿಟ್ರೊಯೆನ್ C3

C5 ಏರ್‌ಕ್ರಾಸ್‌ನೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಫ್ರಾನ್ಸ್ ಮೂಲದ ಕಾರು ತಯಾರಕ ಕಂಪನಿಯಾದ ಸಿಟ್ರೋನ್ ತನ್ನ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯಾದ C3 ಬಿಡುಗಡೆಗೆ ಸಿದ್ದತೆ ನಡೆಸುತ್ತಿದೆ. ಸಿಟ್ರೊಯೆನ್ ಹೆಚ್ಚು ಸ್ಪರ್ಧಾತ್ಮಕವಾಗಿರುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ ಅನ್ನು CC 21 ಎಂಬ ಕೋಡ್ ನೇಮ್ ಅಡಿಯಲ್ಲಿ ಪರೀಕ್ಷಿಸಲಾಗುತ್ತಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 8 ಲಕ್ಷಗಳಿಂದ ರೂ. 12 ಲಕ್ಷಗಳವರೆಗೆ ಇರಬಹುದೆಂದು ಹೇಳಲಾಗುತ್ತಿದೆ. ಈ ಕಾರು ಎಲ್ಲಾ ಸ್ಪರ್ಧಾತ್ಮಕ ಮಾದರಿಗಳಿಗೆ ಸವಾಲಾಗಲಿದೆ. 2022ರ ಜನವರಿ ತಿಂಗಳಿನಲ್ಲಿ ಸಿಟ್ರೊಯೆನ್ C3 ಕಾರು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈ ಕಾರು ಫ್ಲೆಕ್ಸ್ ಇಂಧನಕ್ಕೆ ಹೊಂದುವ ಎಂಜಿನ್ ಆಯ್ಕೆಯನ್ನು ಹೊಂದಿರುವ ಭಾರತದ ಮೊದಲ ಕಾರ್ ಆಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

Kia Carens

ಮಾರುತಿ ಸುಜುಕಿ ಎರ್ಟಿಗಾ, ಮಹೀಂದ್ರಾ ಮೊರಾಜೊ ಹಾಗೂ ಮಾರುತಿ ಸುಜುಕಿ ಎಕ್ಸ್‌ಎಲ್ 6 ಕಾರುಗಳಿಗೆ ಪೈಪೋಟಿ ನೀಡಲು ಕಿಯಾ ಮೋಟಾರ್ಸ್ ಕಂಪನಿಯು 7 ಗೇರುಗಳನ್ನು ಹೊಂದಿರುವ 7 ಸೀಟರ್'ಗಳ Carens ಎಂಪಿವಿ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದೆ. ಈ ಕಾರು ಕಾರ್ನಿವಲ್ ಐಷಾರಾಮಿ ಎಂಪಿವಿಗಿಂತ ಭಿನ್ನವಾಗಿ ಇರಲಿದ್ದು, ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 12 ಲಕ್ಷಗಳಿಂದ ರೂ. 16 ಲಕ್ಷಗಳ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಐದು ಪ್ರಮುಖ ಕಾರುಗಳಿವು

ಈ ಕಾರು 2021ರ ಆರಂಭದಲ್ಲಿ ಜಾಗತಿಕವಾಗಿ ಬಿಡುಗಡೆಯಾದ ಹೊಸ ಕಿಯಾ ಲೋಗೋದೊಂದಿಗೆ ಬಿಡುಗಡೆಯಾಗಲಿದೆ. ಈ ಕಾರು ಸಹ ಕಿಯಾ ಮೋಟಾರ್ಸ್ ಕಂಪನಿಯ ಇತರ ಕಾರುಗಳಂತೆ ಜನಪ್ರಿಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಕಾರು 2022ರ ಮೊದಲಾರ್ಧದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Most expected cars launching in india details
Story first published: Wednesday, December 8, 2021, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X