ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಪ್ರತಿಯೊಬ್ಬರೂ ತಮ್ಮ ಹೊಸ ಕಾರುಗಳು ವಿಶೇಷ ಫೀಚರ್ ಗಳನ್ನು ಹೊಂದಿರಬೇಕೆಂದು ಬಯಸುತ್ತಾರೆ. ಕೇಂದ್ರ ಸರ್ಕಾರವು ಹೊಸ ಕಾರುಗಳಲ್ಲಿ ಕೆಲವು ಸುರಕ್ಷತಾ ಫೀಚರ್ ಗಳನ್ನು ಕಡ್ಡಾಯಗೊಳಿಸಿದ್ದರೂ ಕೆಲವು ಕಾರುಗಳಲ್ಲಿ ಪ್ರಮುಖ ಫೀಚರ್ ಗಳನ್ನು ನೀಡುವುದಿಲ್ಲ. ಈ ಲೇಖನದಲ್ಲಿ ಎಲ್ಲಾ ಕಾರುಗಳಲ್ಲಿ ಕಡ್ಡಾಯವೆಂದು ಪರಿಗಣಿಸಲಾಗುವ ಫೀಚರ್ ಗಳು ಯಾವುವು ಎಂಬುದನ್ನು ನೋಡೋಣ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಡೆಡ್ ಪೆಡಲ್

ಇದು ಒಂದು ರೀತಿಯ ಫುಟ್ ರೆಸ್ಟ್ ಆಗಿದೆ. ಡೆಡ್ ಪೆಡಲ್ ಗಳನ್ನು ಪೆಡಲ್ ಗಳ ಎಡಭಾಗದಲ್ಲಿ ನೀಡಲಾಗುತ್ತದೆ. ಕಾರು ಚಾಲಕರು ಇದನ್ನು ಪ್ರಮುಖವಾದ ಲಕ್ಷಣವೆಂದು ಪರಿಗಣಿಸುತ್ತಾರೆ. ಹೆಚ್ಚು ಸಮಯ ಕಾರ್ ಅನ್ನು ನಿಲ್ಲಿಸಿರುವಾಗ ಕಾರು ಚಾಲಕರು ತಮ್ಮ ಎಡಗಾಲನ್ನು ಇಲ್ಲಿ ಇಟ್ಟುಕೊಳ್ಳಬಹುದು. ಆಟೋಮ್ಯಾಟಿಕ್ ಕಾರುಗಳಲ್ಲಿ ಈ ಫೀಚರ್ ಪ್ರಮುಖವಾಗಿರುತ್ತದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಈ ಫೀಚರ್ ಅನ್ನು ಮ್ಯಾನುಯಲ್ ಕಾರುಗಳಲ್ಲಿ ನೀಡುವ ಅಗತ್ಯವಿದೆ. ಇದರಿಂದ ಕಾರು ಚಾಲಕರು ದೂರದ ಪ್ರಯಾಣದಲ್ಲಿ ಆರಾಮವಾಗಿ ಸಾಗ ಬಹುದು. ಆರಾಮದಾಯಕ ಪ್ರಯಾಣದ ಜೊತೆಗೆ ಕ್ಲಚ್‌ನ ದೀರ್ಘಾಯುಷ್ಯಕ್ಕೆ ಡೆಡ್ ಪೆಡಲ್ ಅತ್ಯಗತ್ಯ. ಕ್ಲಚ್ ಅನ್ನು ಅನಾವಶ್ಯಕವಾಗಿ ತುಳಿಯುವುದರಿಂದ ಅದರ ಜೀವಿತಾವಧಿ ಕಡಿಮೆಯಾಗುತ್ತದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ವೈರ್ ಲೆಸ್ ಚಾರ್ಜಿಂಗ್

ಕಳೆದ ಕೆಲವು ವರ್ಷಗಳಿಂದ ಬಹುತೇಕ ಎಲ್ಲಾ ಕಾರುಗಳಲ್ಲಿ ಚಾರ್ಜಿಂಗ್ ಸಾಕೆಟ್ ಗಳನ್ನು ನೀಡಲಾಗುತ್ತಿದೆ. ಆದರೆ ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ಹೊಸ ತಂತ್ರಜ್ಞಾನಗಳಿಗೆ ವೇಗವಾಗಿ ಹೊಂದಿಕೊಳ್ಳಬೇಕು. ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವು ಕಾರುಗಳ ಸೌಕರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ರೇರ್ ಡಿಫಾಗರ್

ಈಗ ಡಿಫಾಗರ್ ಗಳನ್ನು ಕಾರುಗಳ ಮುಂಭಾಗದಲ್ಲಿ ನೀಡಲಾಗುತ್ತದೆ. ರೇರ್ ವಿಂಡ್‌ಶೀಲ್ಡ್ ಗಳಲ್ಲಿ ಡಿಫಾಗರ್ ಗಳನ್ನು ಕಡ್ಡಾಯವಾಗಿ ನೀಡುತ್ತಿಲ್ಲ. ಎಲ್ಲಾ ಕಾರುಗಳಲ್ಲಿ ಸ್ಟಾಂಡರ್ಡ್ ಆಗಿ ರೇರ್ ಡಿಫಾಗರ್ ಗಳನ್ನು ನೀಡುವುದರಿಂದ ಹಿಂಭಾಗದ ಗಾಜಿನ ಮೇಲೆ ಸಂಗ್ರಹವಾಗುವ ಹಿಮ ಹಾಗೂ ಮಳೆ ನೀರನ್ನು ತೆಗೆದುಹಾಕಲು ಅನುಕೂಲವಾಗುತ್ತದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ರೇರ್ ಪಾರ್ಕಿಂಗ್ ಕ್ಯಾಮೆರಾ

ಭಾರತದಲ್ಲಿ ಕಾರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಕಾರುಗಳ ಪಾರ್ಕಿಂಗ್ ಸ್ಥಳವು ಕಡಿಮೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಕಾರು ತಯಾರಿಕಾ ಕಂಪನಿಗಳು ತಮ್ಮ ಎಲ್ಲಾ ಕಾರುಗಳಲ್ಲಿ ರೇರ್ ಪಾರ್ಕಿಂಗ್ ಕ್ಯಾಮೆರಾಗಳನ್ನು ನೀಡಿದರೆ ಉತ್ತಮ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಕ್ರೂಸ್ ಕಂಟ್ರೋಲ್

ಕ್ರೂಸ್ ಕಂಟ್ರೋಲ್ ದೀರ್ಘ ಪ್ರಯಾಣದ ಸಮಯದಲ್ಲಿ ಚಾಲಕನು ಸುಸ್ತಾಗದಂತೆ ಮಾಡಲು ನೆರವಾಗುತ್ತದೆ. ಕ್ರೂಸ್ ಕಂಟ್ರೋಲ್ ಫೀಚರ್ ಇದ್ದರೆ ಚಾಲಕ ನಿರ್ದಿಷ್ಟ ವೇಗವನ್ನು ವ್ಯಾಖ್ಯಾನಿಸುವ ಮೂಲಕ ಆಯಾಸವಿಲ್ಲದೆ ಪ್ರಯಾಣಿಸಬಹುದು. ಎಲ್ಲಾ ಕಾರುಗಳು ಕ್ರೂಸ್ ಕಂಟ್ರೋಲ್ ಫೀಚಾರ್ ಹೊಂದಿದ್ದರೆ ನಿಜಕ್ಕೂ ಕಾರು ಚಾಲಕರಿಗೆ ಅನುಕೂಲವಾಗುತ್ತದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಕ್ರೂಸ್ ಕಂಟ್ರೋಲ್ ಫೀಚರ್ ಅನ್ನು ಇನ್ನೂ ಅನುಭವಿಸದವರು ಇದನ್ನು ಒಮ್ಮೆ ಪ್ರಯತ್ನಿಸಬೇಕು. ಈಗ ಕ್ರೂಸ್ ಕಂಟ್ರೋಲ್ ಫೀಚರ್ ಹೊಂದಿರುವ ಕಾರುಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಈ ಫೀಚರ್ ಎಲ್ಲಾ ಕಾರುಗಳಲ್ಲಿದ್ದರೆ ಇನ್ನೂ ಉತ್ತಮ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ

ಈಗ ಬಹುತೇಕ ಜನರು ಕೆಲಸದ ಒತ್ತಡದಿಂದ ಗಡಿಬಿಡಿಯಲ್ಲಿರುತ್ತಾರೆ. ಟಯರುಗಳ ಏರ್ ಪ್ರೆಷರ್ ಪರೀಕ್ಷಿಸಲು ಸಹ ಜನರಿಗೆ ಸಮಯವಿಲ್ಲ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಈ ಕಾರಣಕ್ಕೆ ಕಾರಿನಲ್ಲಿ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಇದ್ದರೆ ಅನುಕೂಲವಾಗುತ್ತದೆ. ಕಾರಿನ ಟಯರ್ ಅಸುರಕ್ಷಿತವಾಗಿದ್ದರೆ, ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಚಾಲಕರಿಗೆ ಎಚ್ಚರಿಕೆ ನೀಡುತ್ತದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಅನ್ನು ಈಗ ಬಹುತೇಕ ಕಾರುಗಳಲ್ಲಿ ನೀಡಲಾಗುತ್ತಿದೆ. ಆದರೆ ಈ ಫೀಚರ್ ಅನ್ನು ಎಲ್ಲಾ ಕಾರುಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಿದರೆ ಉತ್ತಮ. ಇಂದಿನ ಕಾಲಮಾನಕ್ಕೆ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಒಂದು ಪ್ರಮುಖ ಸುರಕ್ಷತಾ ಫೀಚರ್ ಆಗಿದೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಆದರೆ ನಾವು ಇಲ್ಲಿ ಹೇಳಿರುವ ಫೀಚರ್ ಗಳನ್ನು ಒದಗಿಸಿದರೆ ಕಾರುಗಳ ಬೆಲೆ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸೌಲಭ್ಯಗಳು ಆರಾಮದಾಯಕವಾಗಿದ್ದು ಸುರಕ್ಷಿತ ಪ್ರಯಾಣಕ್ಕೆ ನೆರವಾಗುತ್ತವೆ. ದಿನದಿಂದ ದಿನಕ್ಕೆ ಕಾರುಗಳು ಆಧುನಿಕವಾಗುತ್ತಿವೆ. ಇದರಿಂದ ಶೀಘ್ರದಲ್ಲಿಯೇ ಈ ಫೀಚರ್ ಗಳನ್ನು ಎಲ್ಲಾ ಕಾರುಗಳಲ್ಲೂ ನಿರೀಕ್ಷಿಸಬಹುದು.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಇದರ ಜೊತೆಗೆ ಕೇಂದ್ರ ಸರ್ಕಾರವು ಹೊಸದಾಗಿ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿಯೂ ಕಡ್ಡಾಯವಾಗಿ ಏರ್ ಬ್ಯಾಗ್ ಗಳನ್ನು ಒದಗಿಸಬೇಕೆಂದು ಎಲ್ಲಾ ಕಾರು ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ. ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.

ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲೂ ಅಗತ್ಯವಿರುವ ಫೀಚರ್'ಗಳಿವು

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡುವುದು ಸಹ ಅಪಘಾತಗಳಿಗೆ ಕಾರಣವಾಗಿದೆ. ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಇನ್ನು ಮುಂದೆ ಬಿಡುಗಡೆಯಾಗುವ ಎಲ್ಲಾ ಹೊಸ ಕಾರುಗಳಲ್ಲಿ ಸುರಕ್ಷತಾ ಫೀಚರ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ

ಈ ಮೂಲಕ ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಮುಂದಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ನಿಯಮಗಳು ಕಡ್ಡಾಯವಾಗಲಿವೆ.

Most Read Articles

Kannada
English summary
Most important features needed in new cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X