2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಇತ್ತೀಚಿನ ದಿನಗಳಲ್ಲಿ ಭಾರತೀಯ ಕಾರು ಗ್ರಾಹಕರು ಕಾರು ಖರೀದಿಸುವಾಗ ಅವುಗಳಲ್ಲಿರುವ ಸುರಕ್ಷತಾ ಫೀಚರ್ ಗಳತ್ತ ಗಮನ ಹರಿಸುತ್ತಿದ್ದಾರೆ. ತಾವು ಖರೀದಿಸುತ್ತಿರುವ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್ ನಲ್ಲಿ ಸುರಕ್ಷತೆಗಾಗಿ ಎಷ್ಟು ರೇಟಿಂಗ್ ಪಡೆದಿದೆ ಎಂಬುದನ್ನು ಗಮನಿಸುತ್ತಾರೆ. ಈ ಕ್ರಾಶ್ ಟೆಸ್ಟ್ ಕಾರಿನ ಸುರಕ್ಷತೆಯನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಗ್ಲೋಬಲ್ ಎನ್‌ಸಿಎಪಿ, ಭಾರತದಲ್ಲಿ #SaferCarsForIndia ಎಂಬ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದಡಿಯಲ್ಲಿ ಭಾರತದಲ್ಲಿ ಹಲವು ಕಾರುಗಳನ್ನು ಪರೀಕ್ಷಿಸಲಾಗಿದೆ. ಗ್ಲೋಬಲ್ ಎನ್‌ಸಿಎಪಿ ಭಾರತದಲ್ಲಿ 2014 ರಲ್ಲಿ ಮೊದಲ ಪರೀಕ್ಷೆಯನ್ನು ನಡೆಸಿತು. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರಾಶ್ ಟೆಸ್ಟ್'ನಲ್ಲಿ ಫೋಕ್ಸ್‌ವ್ಯಾಗನ್ ಪೊಲೊ, ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 300, ಟೊಯೊಟಾ ಎಟಿಯೋಸ್, ಟಾಟಾ ನೆಕ್ಸಾನ್ ಸೇರಿದಂತೆ ಹಲವು ಕಾರುಗಳು ಸುರಕ್ಷತೆಗಾಗಿ ನಾಲ್ಕು ಅಥವಾ ಐದು ರೇಟಿಂಗ್‌ ಪಡೆದವು.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಇನ್ನು ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಹಲವು ಕಾರುಗಳು ಬಿಡುಗಡೆಯಾಗಿವೆ. ಆದರೆ ಕೆಲವು ಕಾರುಗಳು ಮಾತ್ರ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆ ನಡೆಸಿದ ಕ್ರಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿವೆ. 2021 ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಅತ್ಯಂತ ಸುರಕ್ಷಿತ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

1. ಟಾಟಾ ಪಂಚ್ (Tata Punch)

ಟಾಟಾ ಮೋಟಾರ್ಸ್‌ ಕಂಪನಿಯ ಪಂಚ್ ಕಂಪನಿಯ ಅತ್ಯಂತ ಚಿಕ್ಕ ಎಸ್‌ಯು‌ವಿಯಾಗಿದೆ. ಟಾಟಾ ಪಂಚ್ ಎಸ್‌ಯು‌ವಿಯನ್ನು ಅಕ್ಟೋಬರ್ 18 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಈ ಮೈಕ್ರೋ ಎಸ್‌ಯು‌ವಿಯು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ವಯಸ್ಕರ ಸುರಕ್ಷತೆಗಾಗಿ 17ಕ್ಕೆ 16.5 ರೇಟಿಂಗ್ ಪಡೆದಿದ್ದರೆ, ಮಕ್ಕಳ ಸುರಕ್ಷತೆಯಲ್ಲಿ 49ಕ್ಕೆ 40.89 ಅಂಕಗಳನ್ನು ಪಡೆದಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಟಾಟಾ ಪಂಚ್ ಮೈಕ್ರೋ ಎಸ್‌ಯು‌ವಿಯು ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟ್'ನಲ್ಲಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಮೈಕ್ರೋ ಎಸ್‌ಯು‌ವಿಯು ಎರಡು ಏರ್‌ಬ್ಯಾಗ್‌, ಎಬಿ‌ಎಸ್ - ಇ‌ಬಿಡಿ, ಐಸೋಫಿಕ್ಸ್ ಗಳನ್ನು ಹೊಂದಿದೆ. ಟಾಟಾ ಪಂಚ್ ಮೈಕ್ರೋ ಎಸ್‌ಯು‌ವಿಯನ್ನು 1.2 ಲೀಟರ್, 3 ಸಿಲಿಂಡರ್, ರೆವೊಟ್ರಾನ್ ಪೆಟ್ರೋಲ್ ಎಂಜಿನ್‌ನಲ್ಲಿ ನೀಡಲಾಗುತ್ತದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಈ ಎಂಜಿನ್ 6,000 ಆರ್‌ಪಿ‌ಎಂನಲ್ಲಿ 85 ಬಿ‌ಹೆಚ್‌ಪಿ ಪವರ್ ಹಾಗೂ 3,300 ಆರ್‌ಪಿ‌ಎಂನಲ್ಲಿ 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪಂಚ್ ಮೈಕ್ರೋ ಎಸ್‌ಯು‌ವಿಯು 5 ಸ್ಪೀಡ್ ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಸಹ ಹೊಂದಿದೆ. ಟಾಟಾ ಪಂಚ್‌ ಮೈಕ್ರೋ ಎಸ್‌ಯುವಿಯ ಮುಂಭಾಗದಲ್ಲಿ ಪ್ರೊಜೆಕ್ಟರ್ ಎಲ್ಇಡಿ ಹೆಡ್ಲೈಟ್ ಹಾಗೂ ಬಂಪರ್'ನಲ್ಲಿ ಫಾಗ್ ಲ್ಯಾಂಪ್'ಗಳನ್ನು ನೀಡಲಾಗಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಈ ಎಸ್‌ಯು‌ವಿಯ ಮುಂಭಾಗದಲ್ಲಿರುವ ಎಲ್ಇಡಿ ಡಿಆರ್‌ಎಲ್ ಲೈಟ್, ಟರ್ನ್ ಇಂಡಿಕೇಟರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರ ಹೊರತಾಗಿ ಮುಂಭಾಗದಲ್ಲಿ ಸ್ಲಿಮ್ ಗ್ರಿಲ್ ಹಾಗೂ ದೊಡ್ಡ ರೇಡಿಯೇಟರ್ ಗ್ರಿಲ್ ನೀಡಲಾಗಿದೆ. ಟಾಟಾ ಪಂಚ್ ಮೈಕ್ರೋ ಎಸ್‌ಯು‌ವಿಯು ಸ್ಲೀಕ್ ಆದ ಅಲಾಯ್ ವ್ಹೀಲ್, ಟ್ರೈ ಆರೋ ವಿನ್ಯಾಸದಲ್ಲಿ ಹಿಂಭಾಗದ ಎಲ್ಇಡಿ ಟೇಲ್‌ಲೈಟ್ ಅನ್ನು ಹೊಂದಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರುವ ಟಾಟಾ ಪಂಚ್ ಮೈಕ್ರೋ ಎಸ್‌ಯು‌ವಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5.49 ಲಕ್ಷಗಳಾಗಿದೆ. ಇನ್ನು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 6.99 ಲಕ್ಷಗಳಾಗಿದೆ. ಪಂಚ್ ಮೈಕ್ರೋ ಎಸ್‌ಯು‌ವಿಯ ಬೆಲೆ ಮಾರುತಿ ಸ್ವಿಫ್ಟ್ ಕಾರಿಗಿಂತ ರೂ. 36,000 ಅಗ್ಗವಾಗಿದ್ದರೆ, ಹುಂಡೈ ಗ್ರಾಂಡ್ ಐ10 ನಿಯೋಸ್ ಹಾಗೂ ಮಾರುತಿ ಇಗ್ನಿಸ್‌ ಕಾರುಗಳಿಗಿಂತ ತುಸು ದುಬಾರಿಯಾಗಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

2. ಮಹೀಂದ್ರ ಎಕ್ಸ್‌ಯು‌ವಿ 700 (Mahindra XUV 700)

ಈ ವರ್ಷ ಭಾರತದಲ್ಲಿ ಬಿಡುಗಡೆಯಾಗಿರುವ ಸುರಕ್ಷಿತ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್‌ಯು‌ವಿ 700 ಸಹ ಸೇರಿದೆ. ಮಹೀಂದ್ರಾ ಎಕ್ಸ್‌ಯು‌ವಿ 700 ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಪಡೆದಿದೆ. ಈ ಕ್ರ್ಯಾಶ್ ಟೆಸ್ಟ್‌ನಲ್ಲಿ ಎಕ್ಸ್‌ಯು‌ವಿ 700 ವಯಸ್ಕರ ಸುರಕ್ಷತೆಗಾಗಿ 5 ಸ್ಟಾರ್ ಹಾಗೂ ಮಕ್ಕಳ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಪಡೆದಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಮಹೀಂದ್ರಾ ಎಕ್ಸ್‌ಯು‌ವಿ 700 ಎರಡು ಏರ್‌ಬ್ಯಾಗ್‌, ಎಬಿಎಸ್ ಬ್ರೇಕ್‌, ಐಸೋಫಿಕ್ಸ್ ಗಳನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಮಹೀಂದ್ರಾ ಎಕ್ಸ್‌ಯು‌ವಿ 700ಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 12.49 ಲಕ್ಷಗಳಾದರೆ, ಟಾಪ್ ಎಂಡ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 17.99 ಲಕ್ಷಗಳಾಗಿದೆ. ಮಹೀಂದ್ರಾ ಎಕ್ಸ್‌ಯು‌ವಿ 700 ಆಧುನಿಕ ಫೀಚರ್ ಗಳೊಂದಿಗೆ ಹೊಸ ವಿನ್ಯಾಸವನ್ನು ಹೊಂದಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಎಕ್ಸ್‌ಯು‌ವಿ 700 ಈ ಸೆಗ್ ಮೆಂಟಿನಲ್ಲಿ ಮರ್ಸಿಡಿಸ್ ಬೆಂಝ್ ಪ್ರೇರಿತ ಡ್ಯುಯಲ್ ಡಿಸ್ಪ್ಲೇ ಸೆಟಪ್ ಹೊಂದಿರುವ ಮೊದಲ ಎಸ್‌ಯು‌ವಿಯಾಗಿದೆ. ಈ ಡಿಸ್ಪ್ಲೇ ಇನ್ಫೋಟೇನ್ ಮೆಂಟ್ ಸಿಸ್ಟಂ ಹಾಗೂ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಎಕ್ಸ್‌ಯು‌ವಿ 700 ಡೀಸೆಲ್ ಹಾಗೂ ಪೆಟ್ರೋಲ್ ಎಂಜಿನ್‌ಗಳ ಆಯ್ಕೆಯನ್ನು ಹೊಂದಿದೆ. ಎಕ್ಸ್‌ಯು‌ವಿ 700 153 ಬಿ‌ಹೆಚ್‌ಪಿ ಪವರ್ ಹಾಗೂ 360 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 2.2 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಇದರ ಜೊತೆಗೆ 188 ಬಿ‌ಹೆಚ್‌ಪಿ ಪವರ್ ಹಾಗೂ 380 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ 2.0 ಲೀಟರ್ ಎಂ ಸ್ಟಾಲಿಯನ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿದೆ. ಎಕ್ಸ್‌ಯು‌ವಿ 700 ಅನ್ನು ಮ್ಯಾನುಯಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳಲ್ಲಿ ಆಲ್ ವ್ಹೀಲ್ ಡ್ರೈವ್ ಅಥವಾ 4 ವ್ಹೀಲ್ ಡ್ರೈವ್ ಸಿಸ್ಟಂನೊಂದಿಗೆ ನೀಡಲಾಗುತ್ತದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

3. ಟಾಟಾ ಟಿಗೋರ್ ಇವಿ (Tata Tigor EV)

ಟಾಟಾ ಟಿಗೊರ್ ಇವಿ ಫೀಚರ್ ಗಳಲ್ಲಿ ಮಾತ್ರವಲ್ಲದೆ ಸುರಕ್ಷತೆಯಲ್ಲೂ ಉತ್ತಮವಾಗಿದೆ. ಈ ಕಾರು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಸುರಕ್ಷತೆಗಾಗಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಈ ಸೆಡಾನ್ ಕಾರು ವಯಸ್ಕರ ಸುರಕ್ಷತೆಯಲ್ಲಿ 17ಕ್ಕೆ 12 ಹಾಗೂ ಮಕ್ಕಳ ಸುರಕ್ಷತೆಯಲ್ಲಿ 49ಕ್ಕೆ 37.24 ಅಂಕಗಳನ್ನು ಪಡೆದಿದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ ಎಬಿ‌ಎಸ್ - ಇ‌ಬಿಡಿ, ಡ್ಯುಯಲ್ ಏರ್‌ಬ್ಯಾಗ್‌ಗಳಂತಹ ಫೀಚರ್ ಗಳನ್ನು ಎಲ್ಲಾ ಮಾದರಿಗಳಲ್ಲಿ ಸ್ಟಾಂಡರ್ಡ್ ಆಗಿ ನೀಡಲಾಗಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಹೊಸ ಟಾಟಾ ಟಿಗೋರ್ ಇವಿ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 11.99 ಲಕ್ಷಗಳಾಗಿದೆ. ಈ ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಸೆಡಾನ್ ಕಾರ್ ಅನ್ನು XE, XM ಹಾಗೂ XZ+ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಟಾಟಾ ಟಿಗೊರ್ ಎಲೆಕ್ಟ್ರಿಕ್ ಕಾರ್ ಅನ್ನು ಟಾಟಾ ಮೋಟಾರ್ಸ್ ಕಂಪನಿಯ ಜಿಪ್ಟ್ರಾನ್ ಎಲೆಕ್ಟ್ರಿಕ್ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿದೆ. ಈ ಪ್ಲಾಟ್ ಫಾರಂ ಅದರ ಶ್ರೇಣಿಯನ್ನು ಹೆಚ್ಚಿಸುತ್ತದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಈ ಹಿಂದೆ ಈ ಎಲೆಕ್ಟ್ರಿಕ್ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 90 ರಿಂದ 100 ಕಿ.ಮೀಗಳವರೆಗೆ ಚಲಿಸುತ್ತಿತ್ತು. ಜಿಪ್ಟ್ರಾನ್ ತಂತ್ರಜ್ಞಾನದಿಂದಾಗಿ ಈ ಕಾರು ಪೂರ್ತಿಯಾಗಿ ಚಾರ್ಜ್ ಆದ ನಂತರ 306 ಕಿ.ಮೀಗಳಿಗಿಂತ ಹೆಚ್ಚು ದೂರ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಐಪಿ 67 ರೇಟಿಂಗ್‌ನ 55 ಕಿ.ವ್ಯಾ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ 26 ಕಿ.ವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ.

2021ರಲ್ಲಿ ಬಿಡುಗಡೆಯಾದ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ಕಾರುಗಳಿವು

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರ್ ಅನ್ನು ಫಾಸ್ಟ್ ಚಾರ್ಜರ್‌ ಮೂಲಕ ಕೇವಲ 1 ಗಂಟೆಯಲ್ಲಿ 80%ನಷ್ಟು ಚಾರ್ಜ್ ಮಾಡಬಹುದು. ಆದರೆ ಸಾಮಾನ್ಯ ಚಾರ್ಜರ್‌ ಮೂಲಕ ಪೂರ್ತಿಯಾಗಿ ಚಾರ್ಜ್ ಮಾಡಲು 8.5 ಗಂಟೆ ಬೇಕಾಗುತ್ತದೆ. ಟಿಗೋರ್ ಎಲೆಕ್ಟ್ರಿಕ್ ಕಾರು 74 ಬಿ‌ಹೆಚ್‌ಪಿ ಪವರ್ ಹಾಗೂ 170 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಕೇವಲ 5.7 ಸೆಕೆಂಡುಗಳಲ್ಲಿ 0 - 60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

Most Read Articles

Kannada
English summary
Most safest cars launched in india during 2021 details
Story first published: Tuesday, December 14, 2021, 17:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X