ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಭಾರತೀಯ ಮಾರುಕಟ್ಟೆಯಲ್ಲಿ ಕರೋನಾ ಆತಂಕದ ನಡುವೆಯು ವಾಹನಗಳ ಮಾರಾಟದಲ್ಲಿ ಚೇತರಿಕೆಯನ್ನು ಕಂಡಿದೆ. ಕಳೆದ ತಿಂಗಳ ಮಾರಾಟದಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕೆಲವು ಕಾರು ತಯಾರಕರು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸುವಲ್ಲಿ ಹಿನ್ನಡೆಯಾಗಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಕಳೆದ ತಿಂಗಳು ಪ್ರೀಮಿಯಂ ವಾಹನಗಳ ಮಾರಾಟದಲ್ಲಿ ಚೇತರಿಕೆಯನ್ನು ಕಂಡಿದೆ. ಆದರೆ ಕರೋನಾ ಮೂರನೇ ಅಲೆಯ ಭೀತಿ ಕೂಡ ಇದೆ. ಆದರೂ ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ವಾಹನಗಳು ಉತ್ತಮವಾಗಿ ಮಾರಾಟವಾಗಿತ್ತಿದೆ. ಇದರಲ್ಲಿ ಪ್ರೀಮಿಯಂ ಕಾರುಗಳು ಕೂಡ ಉತ್ತಮ ಮಾರಾಟವಾಗುತ್ತಿದೆ. ಕಳೆದ ತಿಂಗಳು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯ ಬಲೆನೊ ಅಗ್ರಸ್ಥಾನವನ್ನು ಪಡೆದು ತನ್ನ ಪಾರುಪತ್ಯವನ್ನು ಮುಂದಿವರಿಸಿದೆ. ಇನ್ನು ಕಳೆದ ತಿಂಗಳು ಅತಿ ಹೆಚ್ಚು ಮಾರಾಟವಾದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳ ಮಾಹಿತಿ ಇಲ್ಲಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಮಾರುತಿ ಬಲೆನೊ

ಕಳೆದ ತಿಂಗಳು ಮಾರುತಿ ಬಲೆನೊ ಮಾದರಿಯ 14,729 ಯುನಿಟ್ ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 11,575 ಯುನಿಟ್‌ಗಳ ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.27 ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಬಲೆನೊ ಹ್ಯಾಚ್‌ಬ್ಯಾಕ್‌ ಮಾರುತಿ ಸುಜುಕಿ ಕಾರುಗಳ ಸರಣಿಯಲ್ಲಿ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಮಾರುತಿ ಸುಜುಕಿ ಕಂಪನಿಯು 2015ರಲ್ಲಿ ಮೊದಲ ಬಾರಿಗೆ ಬಲೆನೊ ಕಾರನ್ನು ಬಿಡುಗಡೆಗೊಳಿಸಿತ್ತು. ಮಾರುತಿ ಸುಜುಕಿ 2015 ರಲ್ಲಿ ಬಿಡುಗಡೆಯಾದಗಿನಿಂದ ತಯಾರಕರು ಹ್ಯಾಚ್‌ಬ್ಯಾಕ್‌ನಲ್ಲಿ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಿಎಸ್ 6 ಮಾಲಿನ್ಯ ನಿಮಕ್ಕೆ ಅನುಗುಣವಾಗಿ ನವೀಕರಣಗೊಂಡ ಮೊದಲ ಹ್ಯಾಚ್‌ಬ್ಯಾಕ್ ಬಲೆನೊ ಆಗಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಮಾರುತಿ ಬಲೆನೊ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 82 ಬಿಎಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಮ್ಯಾನುವಲ್ ಮತ್ತು ಸಿವಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಟಾಟಾ ಆಲ್‌‌ಟ್ರೊಜ್

2021ರ ಜುಲೈ ತಿಂಗಳಿನಲ್ಲಿ ಟಾಟಾ ಆಲ್‌‌ಟ್ರೊಜ್ ಮಾದರಿಯ 6,980 ಯುನಿಟ್‌ಗಳು ಮಾರಾಟವಾಗಿವೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಆಲ್‌‌ಟ್ರೊಜ್ ಮಾದರಿಯ 3,636 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.92% ರಷ್ಟು ಬೆಳವಣಿಗೆಯನ್ನು ಹೊಂದಿದೆ,

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಟಾಟಾ ಆಲ್‌‌ಟ್ರೊಜ್ ಕಾರು ಇಂಪ್ಯಾಕ್ಟ್ 2.0 ವಿನ್ಯಾಸ ಶೈಲಿಯನ್ನು ಹೊಂದಿದೆ. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸದೊಂದಿಗೆ ಸಖತ್ ಬೋಲ್ಡ್ ಲುಕ್ ಅನ್ನು ಹೊಂದಿದೆ. ಇನ್ನು ಈ ಹ್ಯಾಚ್‌ಬ್ಯಾಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌, ಎಲ್‌ಇಡಿ ಟೈಲ್‌ಲೈಟ್ ಮತ್ತು ಅಲಾಯ್ ವ್ಹೀಲ್‌ಗಳನ್ನು ಒಳಗೊಂಡಿವೆ. ಟಾಟಾ ಆಲ್‌‌ಟ್ರೊಜ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಮೊದಲನೆಯದು 1.2-ಲೀಟರ್ ಪೆಟ್ರೋಲ್ ಎಂಜಿನ್ ಆಗಿದ್ದು. ಇದು 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡನೆಯದು 1.5-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಆಗಿದ್ದು, ಈ ಎಂಜಿನ್ 90 ಬಿಹೆಚ್‍ಪಿ ಪವರ್ ಮತ್ತು 200 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮೂರನೇಯ 1.2-ಲೀಟರ್ ಪವರ್ ಫುಲ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದ್ದು, ಇದು 110 ಬಿಹೆಚ್‍ಪಿ ಪವರ್ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಹ್ಯುಂಡೈ ಐ20

ಕಳೆದ ತಿಂಗಳು ಹ್ಯುಂಡೈ ಕಂಪನಿಯು ಐ20 ಮಾದರಿಯ 6,518 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಐ20 ಮಾದರಿಯ 6,344 ಯುನಿಟ್‌ಗಳು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.3 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಈ ಹ್ಯುಂಡೈ ಐ20 ಕಾರು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2ಎಲ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಇದರೊಂದಿಗೆ 1.0ಎಲ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಮತ್ತು 172 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.5ಎಲ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿಯು ಕೂಡ ಲಭ್ಯವಿದೆ.

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಟೊಯೊಟಾ ಗ್ಲಾಂಝಾ

ಕಳೆದ ತಿಂಗಳು ಟೊಯೊಟಾ ಗ್ಲಾಂಝಾ ಮಾದರಿಯ 2,636 ಯುನಿಟ್‌ಗಳು ಮಾರಾಟವಾಗಿದೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಗ್ಲಾಂಝಾ ಮಾದರಿಯು 1,323 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.99.2 ರಷ್ಟು ಬಳೆವಣಿಗೆಯನ್ನು ಸಾಧಿಸಿದೆ,

ಜುಲೈ ತಿಂಗಳ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಮಾರಾಟದಲ್ಲಿ ಪಾರುಪತ್ಯ ಸಾಧಿಸಸಿದ ಮಾರುತಿ ಬಲೆನೊ

ಫೋಕ್ಸ್‌ವ್ಯಾಗನ್ ಪೊಲೊ

2021ರ ಜುಲೈ ತಿಂಗಳಿನಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಪೊಲೊ ಮಾದರಿಯ 1,616 ಯುನಿಟ್‌ಗಳು ಮಾರಾಟಗೊಳಿಸಿವೆ. ಇನ್ನು ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಪೊಲೊ ಮಾದರಿಯ 1,146 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.41 ರಷ್ಟು ಬಳೆವಣಿಗೆಯನ್ನು ಸಾಧಿಸಿದೆ,

Most Read Articles

Kannada
English summary
Most sold premium hatchbacks in july 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X