ನವೆಂಬರ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳಿವು
ಎಸ್‌ಯುವಿಗಳ ಮಾರಾಟದಲ್ಲಿ ಏರಿಕೆ ಕಂಡು ಬರುತ್ತಿರುವುದರಿಂದ ಭಾರತದಲ್ಲಿ ಕಾಂಪ್ಯಾಕ್ಟ್ ಹಾಗೂ ಮಧ್ಯಮ ಗಾತ್ರದ ಸೆಡಾನ್‌ಗಳ ಮಾರಾಟವು ಗಣನೀಯವಾಗಿ ಕುಸಿಯುತ್ತಿದೆ. ಈಗ 5 ಹಾಗೂ 7 ಸೀಟ್ ಆಯ್ಕೆಗಳಲ್ಲಿ ಮಾರಾಟವಾಗುತ್ತಿರುವ ಎಸ್‌ಯುವಿಗಳು ಹೆಚ್ಚು ತಾಂತ್ರಿಕವಾಗಿ ಮುಂದುವರೆದಿರುವುದು ಮಾತ್ರವಲ್ಲದೆ ಕೈಗೆಟುಕುವ ಬೆಲೆಯನ್ನು ಸಹ ಹೊಂದಿವೆ. ಇದೂ ಸಹ ಜನರು ಎಸ್‌ಯುವಿಗಳತ್ತ ಮುಖ ಮಾಡಿರುವುದಕ್ಕೆ ಪ್ರಮುಖ ಕಾರಣವಾಗಿದೆ.

ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಏಪ್ರಿಲ್ - ಅಕ್ಟೋಬರ್ ಅವಧಿಯಲ್ಲಿ ಮಾರಾಟವಾದ ಒಟ್ಟು ಪ್ರಯಾಣಿಕ ಕಾರುಗಳಲ್ಲಿ ಸುಮಾರು 50% ನಷ್ಟು ಎಸ್‌ಯುವಿಗಳಾಗಿವೆ. ಇತ್ತೀಚಿಗೆ ಮಾರುತಿ ಸುಜುಕಿ, ಹುಂಡೈ ಹಾಗೂ ಹೋಂಡಾದಂತಹ ಪ್ರಮುಖ ವಾಹನ ತಯಾರಕ ಕಂಪನಿಗಳು ಕೆಲವು ರಿಫ್ರೆಶ್ ಕಾಣುವ ಸೆಡಾನ್‌ಗಳನ್ನು ಪರಿಚಯಿಸಿವೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 20,695 ಯುನಿಟ್ ಸೆಡಾನ್ ಕಾರುಗಳನ್ನು ಮಾರಾಟ ಮಾಡಲಾಗಿದೆ.

2020ರ ನವೆಂಬರ್ ತಿಂಗಳಿನಲ್ಲಿ ಒಟ್ಟು 29,807 ಯುನಿಟ್ ಸೆಡಾನ್ ಕಾರುಗಳು ಮಾರಾಟವಾಗಿದ್ದವು. ದೇಶಿಯ ಮಾರುಕಟ್ಟೆಯಲ್ಲಿ ಈ ವಿಭಾಗದಲ್ಲಿ ಸೆಡಾನ್ ಕಾರುಗಳ ಮಾರಾಟವು ಸುಮಾರು 30.57% ನಷ್ಟು ಕುಸಿದಿದೆ. ಟಿಗೋರ್, ವರ್ನಾ ಹಾಗೂ ಆಕ್ಟೇವಿಯಾ ಕಾರುಗಳನ್ನು ಹೊರತುಪಡಿಸಿ ಎಲ್ಲಾ ಕಾರುಗಳ ಮಾರಾಟದಲ್ಲಿಯೂ ಕುಸಿತ ಕಂಡು ಬಂದಿದೆ.

ಕಳೆದ ವರ್ಷದ ನವೆಂಬರ್ ತಿಂಗಳಿಗಿಂತ ಈ ವರ್ಷದ ನವೆಂಬರ್ ನಲ್ಲಿ ಸೆಡಾನ್ ಕಾರುಗಳು ಕಡಿಮೆ ಸಂಖ್ಯೆಯಲ್ಲಿ ಮಾರಾಟವಾಗಿವೆ. ಅತಿ ಹೆಚ್ಚು ಮಾರಾಟವಾದ ಸೆಡಾನ್ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್ ಕಾರು ಅಗ್ರಸ್ಥಾನದಲ್ಲಿದೆ. ಕಳೆದ ತಿಂಗಳು ಡಿಜೈರ್ ಕಾರಿನ ಒಟ್ಟು 8,196 ಯುನಿಟ್‌ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ ಡಿಜೈರ್ ಕಾರಿನ 13,536 ಯುನಿಟ್ ಗಳನ್ನು ಮಾರಾಟ ಮಾಡಿತ್ತು.

ಡಿಜೈರ್ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕಿಂತ ಈ ವರ್ಷ 39.45% ನಷ್ಟು ಕುಸಿದಿದೆ. ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು ಸೆಡಾನ್ ಕಾರುಗಳ ಮಾರಾಟದಲ್ಲಿ ಮಾರುತಿ ಸುಜುಕಿ ಡಿಜೈರ್ ಕಾರು 39.60% ನಷ್ಟು ಪಾಲನ್ನು ಹೊಂದಿದೆ. 2,666 ಯುನಿಟ್‌ಗಳ ಮಾರಾಟದೊಂದಿಗೆ ಜಪಾನ್ ಮೂಲದ ಹೋಂಡಾ ಸಿಟಿ ಕಾರು ಎರಡನೇ ಸ್ಥಾನದಲ್ಲಿದೆ.

ಮೊದಲ ಸ್ಥಾನದಲ್ಲಿರುವ ಡಿಜೈರ್ ಹಾಗೂ ಹೋಂಡಾ ಸಿಟಿ ಕಾರುಗಳ ನಡುವಿನ ಮಾರಾಟದ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸವನ್ನು ಕಾಣಬಹುದು. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೋಂಡಾ ಸಿಟಿ ಕಾರಿನ ಒಟ್ಟು 3,523 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಸಿಟಿ ಕಾರಿನ ಮಾರಾಟ ಪ್ರಮಾಣವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 24.33% ನಷ್ಟು ಕಡಿಮೆಯಾಗಿದೆ.

ದಕ್ಷಿಣ ಕೊರಿಯಾ ಮೂಲದ ಹುಂಡೈ ಮೋಟಾರ್ಸ್ ಕಂಪನಿಯ ಔರಾ ಕಾಂಪ್ಯಾಕ್ಟ್ ಸೆಡಾನ್ ಮಾದರಿಯು ಈ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದೆ. ಕಳೆದ ತಿಂಗಳು ಈ ಕಾರಿನ ಒಟ್ಟು 2,562 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಈ ಕಾರಿನ ಮಾರಾಟವು 3,000 ಯುನಿಟ್ ಗಳಿಗಿಂತ ಹೆಚ್ಚಿತ್ತು, ವರ್ಷದ ಮಾರಾಟದಲ್ಲಿ ಈ ಬಾರಿ 16.36% ನಷ್ಟು ಕುಸಿತವಾಗಿದೆ.

ಹೋಂಡಾ ಅಮೇಜ್ ಕಾರು 2,344 ಯುನಿಟ್‌ಗಳ ಮಾರಾಟದೊಂದಿಗೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 2020ರ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ಕಾರಿನ ಮಾರಾಟವು ಕಳೆದ ತಿಂಗಳು 50.19% ನಷ್ಟು ಕಡಿಮೆಯಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಹೋಂಡಾ ಅಮೇಜ್ ಕಾರಿನ 4,706 ಯುನಿಟ್ ಗಳು ಮಾರಾಟವಾಗಿದ್ದವು. 2020ರ ನವೆಂಬರ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ 5 ಹಾಗೂ 6 ನೇ ಸ್ಥಾನಗಳಲ್ಲಿರುವ ಟಾಟಾ ಟಿಗೋರ್ ಹಾಗೂ ಹ್ಯುಂಡೈ ವೆರ್ನಾ ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬಂದಿಲ್ಲ.

ಕಳೆದ ತಿಂಗಳು ಕ್ರಮವಾಗಿ ಈ ಕಾರುಗಳ 1,785 ಹಾಗೂ 1,648 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಅಂಕಿ ಅಂಶವು ಈ ಕಾರುಗಳ 2020ರ ನವೆಂಬರ್ ತಿಂಗಳ ಮಾರಾಟದ ಅಂಕಿ ಅಂಶಗಳಿಗಿಂತ 41.78% ಹಾಗೂ 10.83% ನಷ್ಟು ಹೆಚ್ಚಾಗಿದೆ.

ದಶಕಗಳ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಬಿಡುಗಡೆಯಾಗುತ್ತಿರುವ ಕಾರುಗಳು ಹೆಚ್ಚು ಅಡ್ವಾನ್ಸ್ ಆಗಿವೆ. ಈಗ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ವಿವಿಧ ಅತ್ಯಾಧುನಿಕ ಫೀಚರ್'ಗಳನ್ನು ಕಾಣಬಹುದು. ಈ ಫೀಚರ್'ಗಳು ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಹೆಚ್ಚು ನೆರವಾಗುತ್ತವೆ. ಈ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಆದರೆ ಕೆಲವು ಕಾರುಗಳಲ್ಲಿ ಅಗತ್ಯವಿಲ್ಲದಿದ್ದರೂ ಕೆಲವು ಫೀಚರ್'ಗಳನ್ನು ಒದಗಿಸಲಾಗಿದೆ. ಕಾರು ತಯಾರಕ ಕಂಪನಿಗಳು ಈ ಫೀಚರ್'ಗಳನ್ನು ನೀಡುವುದನ್ನು ತಪ್ಪಿಸಿದರೆ ಕಾರಿನ ಬೆಲೆ ಕೊಂಚ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಕಾರುಗಳಲ್ಲಿರುವ ಅನಗತ್ಯ ಫೀಚರ್'ಗಳು ಯಾವುವು ಎಂಬುದನ್ನು ನೋಡುವುದಾದರೆ...

ರೂಫ್ ರೇಲ್'ಗಳನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂಬುದು ನಮಗೆ ತಿಳಿದಿದೆ. ಕಾರುಗಳ ರೂಫ್ ಮೇಲೆ ಸಾಮಗ್ರಿಗಳನ್ನು ಸಾಗಿಸಲು ರೂಫ್ ರೇಲ್'ಗಳನ್ನು ಬಳಸಲಾಗುತ್ತದೆ. ಆದರೆ ಕೆಲವು ಕಂಪನಿಗಳು ತಮ್ಮ ಕಾರುಗಳಲ್ಲಿ ನಕಲಿ ಪ್ಲಾಸ್ಟಿಕ್ ರೂಫ್ ರೇಲ್ ಗಳನ್ನು ನೀಡುತ್ತವೆ. ಕಾರನ್ನು ಆಕರ್ಷಕವಾಗಿ ಕಾಣುವಂತೆ ಮಾಡಲು ಹೀಗೆ ಮಾಡಲಾಗುತ್ತದೆ. ಈ ರೂಫ್ ರೇಲ್'ಗಳಿಂದ ಯಾವುದೇ ಪ್ರಯೋಜನವಿಲ್ಲ.

ಕಾರುಗಳ ಆಕರ್ಷಣೆಯನ್ನು ಹೆಚ್ಚಿಸಲು ನಕಲಿ ಎಕ್ಸಾಸ್ಟ್ ಪೈಪ್ ಗಳನ್ನು ನೀಡಲಾಗುತ್ತದೆ. ಇವುಗಳಿಂದ ಯಾವುದೇ ಉಪಯೋಗವಿಲ್ಲ. ಕೆಲವು ಕಾರು ಕಂಪನಿಗಳು ತಮ್ಮ ಕಾರುಗಳು ಸುಂದರವಾಗಿ ಕಾಣಲಿ ಎಂದು ನಕಲಿ ಎಕ್ಸಾಸ್ಟ್ ಪೈಪ್ ಗಳನ್ನು ನೀಡುತ್ತವೆ.

ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಒದಗಿಸುವುದು ಕಾರು ತಯಾರಕ ಕಂಪನಿಗಳ ಪ್ರಮುಖ ಕರ್ತವ್ಯವಾಗಿದೆ. ಇದರ ಭಾಗವಾಗಿ, ಕಾರು ತಯಾರಕ ಕಂಪನಿಗಳು ಸ್ಥಿರವಾದ ಹೆಡ್‌ರೆಸ್ಟ್ ಹೊಂದಿರುವ ಸೀಟುಗಳನ್ನು ನೀಡುತ್ತವೆ. ಈ ಫೀಚರ್ ಅನ್ನು ಈಗ ಬಿಡುಗಡೆಯಾಗುತ್ತಿರುವ ಬಜೆಟ್ ಬೆಲೆಯ ಸಾಕಷ್ಟು ಕಾರುಗಳಲ್ಲಿ ಕಾಣಬಹುದು.

ಆದರೆ ಸ್ಥಿರ ಹೆಡ್ ರೆಸ್ಟ್ ಇರುವ ಸೀಟುಗಳು ಪ್ರಯಾಣಿಕರಿಗೆ ಆರಾಮದಾಯಕ ಅನುಭವವನ್ನು ನೀಡುವುದಿಲ್ಲ ಎಂಬುದು ಸತ್ಯ. ಕಾರು ತಯಾರಕ ಕಂಪನಿಗಳು ಸ್ಟಾಂಡರ್ಡ್ ಹೆಡ್‌ರೆಸ್ಟ್‌ಗಳ ಬದಲು ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳನ್ನು ನೀಡಬಹುದು. ಇದರಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ.

ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ 3 ನೇ ಸಾಲಿನಲ್ಲಿ ಸೀಟುಗಳನ್ನು ನೀಡುವುದು ಅನಗತ್ಯ ಸಂಗತಿಯಾಗಿದೆ. ಇದರಿಂದ ಮೂರನೇ ಸಾಲಿನಲ್ಲಿ ಲೆಗ್ ರೂಂ ಪ್ರಮಾಣ ಕಡಿಮೆಯಾಗುತ್ತದೆ. ಈ ಸಾಲಿನಲ್ಲಿರುವ ಸೀಟುಗಳು ಕಡಿಮೆ ಎತ್ತರವಿರುವವರಿಗೆ ಸೂಕ್ತವಾಗಿವೆ. ಕಡಿಮೆ ಎತ್ತರವನ್ನು ಹೊಂದಿರುವವರಿಗೆ 3 ನೇ ಸಾಲಿನ ಆಸನಗಳನ್ನು ಒದಗಿಸುವುದರಿಂದ ಕಾರಿನ ಒಟ್ಟಾರೆ ಜಾಗ ಕಡಿಮೆಯಾಗುತ್ತದೆ.


Click it and Unblock the Notifications