ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯು‌ವಿ ಹಾಗೂ ಸ್ವಲ್ಪ ದೊಡ್ಡ ಮಧ್ಯಮ ಗಾತ್ರದ ಎಸ್‌ಯು‌ವಿಗಳ ಮಾರಾಟವು ಕಳೆದ ಕೆಲವು ವರ್ಷಗಳಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಎಸ್‌ಯುವಿಗಳ ಮಾರಾಟ ಪ್ರಮಾಣವು ಹೆಚ್ಚಾಗುತ್ತಿರುವುದರಿಂದ ಸೆಡಾನ್‌ ಕಾರುಗಳ ಮಾರಾಟವು ಮೊದಲಿನಂತಿಲ್ಲ ಎಂದೇ ಹೇಳಬಹುದು. ಕಳೆದ ತಿಂಗಳು Maruti Suzuki ಕಂಪನಿಯು ತನ್ನ Dzire ಸೆಡಾನ್ ಕಾರಿನ 8,077 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

Dzire ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸೆಡಾನ್ ಕಾರ್ ಆಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ Maruti Suzuki Dzire ಕಾರಿನ 17,675 ಯುನಿಟ್ ಗಳು ಮಾರಾಟವಾಗಿದ್ದವು. ಕಳೆದ ತಿಂಗಳು ಇಂಡೋ - ಜಪಾನೀಸ್ ಜಂಟಿ ಸಹಭಾಗಿತ್ವದ Maruti Suzuki ಕಂಪನಿಯ ಸೆಡಾನ್ ಕಾರು ಮಾರಾಟವು ಸುಮಾರು 54.3% ನಷ್ಟು ಕುಸಿದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಕಳೆದ ತಿಂಗಳು Maruti Suzuki Dzire ಮಾತ್ರವಲ್ಲದೆ, Hyundai Verna, Skoda Superb, Skoda Octavia ಸೇರಿದಂತೆ ಪ್ರಮುಖ ಸೆಡಾನ್ ಕಾರುಗಳಮಾರಾಟವು ಗಣನೀಯ ಪ್ರಮಾಣದಲ್ಲಿ ಕುಸಿದಿದೆ. 2020ರ ಅಕ್ಟೋಬರ್'ಗೆ ಹೋಲಿಸಿದರೆ ಕಳೆದ ತಿಂಗಳು Honda City ಸೆಡಾನ್ ಕಾರಿನ ಮಾರಾಟವು 12.4% ನಷ್ಟು ಕಡಿಮೆಯಾಗಿದೆ. ಕಳೆದ ತಿಂಗಳು Honda ಕಂಪನಿಯು City ಸೆಡಾನ್ ಕಾರಿನ 3,611 ಯುನಿಟ್'ಗಳನ್ನು ಮಾರಾಟ ಮಾಡಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಈ ಪ್ರಮಾಣವು 2020ರ ಅಕ್ಟೋಬರ್'ನಲ್ಲಿ ಮಾರಾಟವಾದ 4,124 ಯುನಿಟ್'ಗಳಿಗಿಂತ ಹೆಚ್ಚಾಗಿದೆ. ಐದನೇ ತಲೆಮಾರಿನ Honda City ಕಾರು ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಯಿತು. ಹೋಂಡಾ ಸಿಟಿ ನಮ್ಮ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಗಳಲ್ಲಿಯೂ ಜನಪ್ರಿಯವಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಅಪ್ ಡೇಟ್ ಮಾಡಲಾದ ಹೊಸ ಹೋಂಡಾ ಸಿಟಿ ಕಾರನ್ನು ಕೆಲವು ದಿನಗಳ ಹಿಂದೆ ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಹೋಂಡಾ ಕಂಪನಿಯ Amaze ಕಾಂಪ್ಯಾಕ್ಟ್ ಸೆಡಾನ್ ಕಾರಿನ 3,009 ಯುನಿಟ್‌ಗಳು ಮಾರಾಟವಾಗಿವೆ. ಅಮೇಜ್ ಕಾರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 2020ರ ಅಕ್ಟೋಬರ್'ನಲ್ಲಿ ಹೋಂಡಾ ಅಮೇಜ್ ಕಾರಿನ 4,709 ಯುನಿಟ್'ಗಳು ಮಾರಾಟವಾಗಿದ್ದವು.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಈ ಪಟ್ಟಿಯ 4 ಹಾಗೂ 5 ನೇ ಸ್ಥಾನದಲ್ಲಿ Hyundai ಕಂಪನಿಯ ಕಾರುಗಳಿವೆ. ಹುಂಡೈ ಕಂಪನಿಯ Aura ಕಾಂಪ್ಯಾಕ್ಟ್ ಸೆಡಾನ್ ಕಾರಿನ ಮಾರಾಟವು ಸುಮಾರು 51.5% ನಷ್ಟು ಕಡಿಮೆಯಾಗಿದೆ. 2020ರ ಅಕ್ಟೋಬರ್'ನಲ್ಲಿ Aura ಕಾರಿನ 5,577 ಯುನಿಟ್'ಗಳು ಮಾರಾಟವಾಗಿದ್ದರೆ, ಕಳೆದ ತಿಂಗಳು ಕೇವಲ 2,701 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ತಿಂಗಳು Verna ಎಕ್ಸಿಕ್ಯೂಟಿವ್ ಸೆಡಾನ್ ಕಾರಿನ 2,438 ಯುನಿಟ್‌ಗಳು ಮಾರಾಟವಾಗಿವೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಈ ಪ್ರಮಾಣವು 2020ರ ಅಕ್ಟೋಬರ್'ನಲ್ಲಿ ಮಾರಾಟವಾದ Verna ಕಾರುಗಳಿಗಿಂತ 12.5% ನಷ್ಟು ​​ಹೆಚ್ಚು. Tata Motors ಕಂಪನಿಯ Tigor ಸೆಡಾನ್ ಕಾರು ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 2020ರ ಅಕ್ಟೋಬರ್'ಗೆ ಹೋಲಿಸಿದರೆ ಕಳೆದ ತಿಂಗಳು Tata Tigor ಕಾರಿನ ಮಾರಾಟವು ತೀವ್ರವಾಗಿ ಕುಸಿದಿಲ್ಲ. ಕಳೆದ ತಿಂಗಳು ಈ ಕಾರಿನ ಮಾರಾಟ ಪ್ರಮಾಣವು 8.4% ನಷ್ಟು ಕಡಿಮೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

Tata Motors ಕಂಪನಿಯು ಕಳೆದ ತಿಂಗಳು 1,377 ಯುನಿಟ್ Tigor ಕಾರುಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ 1,501 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. 7ನೇ ಸ್ಥಾನದಲ್ಲಿರುವ Maruti Suzuki ಕಂಪನಿಯ Ciaz ಕಾರಿನ ಒಟ್ಟು 1,069 ಯುನಿಟ್'ಗಳು ಕಳೆದ ತಿಂಗಳು ಮಾರಾಟವಾಗಿವೆ. ನಂತರದ ಸ್ಥಾನಗಳಲ್ಲಿರುವ ಮಾದರಿಗಳು ಕಳೆದ ತಿಂಗಳು 300 ಯುನಿಟ್‌ಗಳಿಗಿಂತ ಕಡಿಮೆ ಮಾರಾಟವನ್ನು ದಾಖಲಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

8ನೇ ಸ್ಥಾನದಲ್ಲಿ Skoda ಕಂಪನಿಯ Superb ಸೆಡಾನ್ ಕಾರು ಇದ್ದರೆ, Skoda ಕಂಪನಿಯ Octavia ಸೆಡಾನ್ ಕಾರು 9ನೇ ಸ್ಥಾನದಲ್ಲಿದೆ. ಈ ಎರಡು ಕಾರುಗಳ ಮಾರಾಟವು ಕಳೆದ ವರ್ಷದ ಅಕ್ಟೋಬರ್ ತಿಂಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಸ್ಕೋಡಾ ಆಕ್ಟೇವಿಯಾ ಕಾರುಗಳ ಮಾರಾಟವು ಸುಮಾರು 606% ನಷ್ಟು ಹೆಚ್ಚಾಗಿದೆ. ಸ್ಕೋಡಾ ಕಂಪನಿಯ Rapid ಈ ಟಾಪ್ 10 ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

Rapid ಸೆಡಾನ್ ಕಾರಿನ ಮಾರಾಟವು ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 86.8% ನಷ್ಟು ಕಡಿಮೆಯಾಗಿದೆ. ಭಾರತದ ಹಲವು ಭಾಗಗಳಲ್ಲಿ Rapid ಕಾರಿನ ಮಾರಾಟವನ್ನು ನಿಲ್ಲಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಭಾರತದಲ್ಲಿ ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ಆದರೆ ಈಗಿನ ಸನ್ನಿವೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ಕಾರುಗಳ ಖರೀದಿ ಪ್ರಮಾಣವು ಇಳಿಕೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿರುವ 10 ಟಾಪ್ ಸೆಡಾನ್ ಕಾರುಗಳಿವು

ಹೆಚ್ಚುತ್ತಿರುವ ಕಾರುಗಳ ಬೆಲೆ, ಹೊಸ ಕಾರುಗಳ ವಿತರಣೆ ಪಡೆಯಲು ದೀರ್ಘ ಕಾಲ ಕಾಯುವಿಕೆ, ಹೊಸ ಸ್ಕ್ರ್ಯಾಪ್ ನಿಯಮಗಳು ಹಾಗೂ ಒಂದೇ ಸಮನೆ ಏರಿಕೆಯಾಗುತ್ತಿರುವ ಇಂಧನ ಬೆಲೆಗಳಿಂದ ಗ್ರಾಹಕರು ಹೊಸ ಕಾರ್ ಅನ್ನು ಖರೀದಿಸಲು ಯೋಚಿಸುವಂತಾಗಿದೆ. ಇವುಗಳ ಜೊತೆಗೆ ಜನರು ಇಂಧನ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇದು ಹೊಸ ಕಾರುಗಳ ಖರೀದಿ ಪ್ರಮಾಣವು ಇಳಿಕೆಯಾಗಲು ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Most sold sedan cars in domestic market during october 2021 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X