ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಮಧ್ಯಪ್ರದೇಶದಲ್ಲಿ ಚಾಲನಾ ಪರವಾನಗಿ ಪಡೆಯುವುದು ಈಗ ಹೆಚ್ಚು ಕಷ್ಟಕರವಾಗಿದೆ. ಸಾರಿಗೆ ಇಲಾಖೆಯ ಹೊಸ ಆದೇಶದ ಪ್ರಕಾರ, ಮಧ್ಯಪ್ರದೇಶದಲ್ಲಿ ಹೊಸ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು ನಡತೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಈ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳನ್ನು ಹತ್ತಿಕ್ಕಲಾಗುವುದು ಎಂದು ಹೇಳಿದರು. ಮಹಿಳೆಯರ ಮೇಲಿನ ಅಪರಾಧದ ಆರೋಪ ಹೊತ್ತಿರುವ ವ್ಯಕ್ತಿಗಳಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಪೊಲೀಸ್ ಪ್ರಧಾನ ಕಚೇರಿಯ ಪೊಲೀಸ್ ತರಬೇತಿ ಮತ್ತು ಸಂಶೋಧನಾ ಸಂಸ್ಥೆ (ಪಿಟಿಆರ್ ಐ) ನಿಂದ ಪಡೆದ ಸೂಚನೆಯಂತೆ ಎಲ್ಲಾ ಆರ್ ಟಿಒ ಕಚೇರಿ ಅಧಿಕಾರಿಗಳಿಗೆ, ಮಹಿಳೆಯರ ಮೇಲಿನ ಅಪರಾಧದ ಆರೋಪ ಹೊತ್ತಿರುವ ಎಲ್ಲ ವ್ಯಕ್ತಿಗಳ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸುವಂತೆ ತಿಳಿಸಲಾಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಹೊಸ ಆದೇಶವನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ. ಮಧ್ಯ ಪ್ರದೇಶದ ಸಾರಿಗೆ ಸಚಿವರು ಈ ಹೊಸ ಆದೇಶದ ಬಗ್ಗೆ ಮಾತನಾಡಿ, ಈ ಕ್ರಮವುರಾಜ್ಯದ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಖಂಡಿತವಾಗಿ ನೆರವಾಗುತ್ತದೆ ಎಂದು ಹೇಳಿದರು.

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಹೊಸ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರು ನಡತೆ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಗಮನಿಸಬೇಕಾದಸಂಗತಿಯೆಂದರೆ, ನಡತೆ ಪ್ರಮಾಣಪತ್ರವನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆಯಬೇಕಾಗುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ನಡತೆ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಖಚಿತಪಟ್ಟ ನಂತರ ಪ್ರಮಾಣಪತ್ರವನ್ನುನೀಡಬೇಕೆಂದು ಸೂಚಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆ ಹೊರತುಪಡಿಸಿ ಕೆಲಸದ ಸ್ಥಳಗಳಿಂದಲೂ ನಡತೆ ಪ್ರಮಾಣಪತ್ರವನ್ನು ಪಡೆಯಬಹುದು.

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಭಾರತದಲ್ಲಿ ಚಾಲನಾ ಪರವಾನಗಿ ಪಡೆಯಲು ನಡತೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಿರುವುದು ಇದೇ ಮೊದಲು. ಇದರಿಂದಾಗಿ ಭಾರತದಲ್ಲಿ ಅಪರಾಧಿಗಳು ಚಾಲನಾ ಪರವಾನಗಿ ಪಡೆಯುವುದು ತಪ್ಪುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ನಡತೆ ಪ್ರಮಾಣಪತ್ರ ಪಡೆಯುವಾಗ ಪೊಲೀಸರು ಜನರಿಗೆ ಕಿರುಕುಳ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು. ಭಾರತದಲ್ಲಿ ರಸ್ತೆ ಅಪಘಾತಗಳನ್ನು ಹಾಗೂ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಂಚಾರಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ.

ಇನ್ಮುಂದೆ ಈ ರಾಜ್ಯದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ನಡತೆ ಪ್ರಮಾಣ ಪತ್ರ ಕಡ್ಡಾಯ

ಮಹಾರಾಷ್ಟ್ರದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಅವರಿಗೆ ನೋಟಿಸ್ ಕಳುಹಿಸುತ್ತಾರೆ. ನಂತರ ಅವರ ವಿರುದ್ಧ ಎಫ್ಐಆರ್ ಸಲ್ಲಿಸುತ್ತಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
MP Government mandates character certificate to get driving license. Read in Kannada.
Story first published: Tuesday, February 2, 2021, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X