Just In
Don't Miss!
- News
ಹುಣಸೋಡು ಸ್ಪೋಟದ ಸುತ್ತ ಒಂದು ನೋಟ: ಸಿಎಂ ಯಡಿಯೂರಪ್ಪ ಭೇಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಂಯುವಿ ಸೆಗ್'ಮೆಂಟಿನ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದ ಎರ್ಟಿಗಾ
ದೇಶಿಯ ಮಾರುಕಟ್ಟೆಯಲ್ಲಿ 2020ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟವಾದ ಎಂಯುವಿ ಸೆಗ್'ಮೆಂಟಿನ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ವಿಭಾಗದ ಮಾರಾಟದಲ್ಲಿ ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಪ್ರಥಮ ಸ್ಥಾನದಲ್ಲಿ ಮುಂದುವರೆದಿದೆ.

ಮಹೀಂದ್ರಾ ಬೊಲೆರೊ ಎರಡನೇ ಸ್ಥಾನದಲ್ಲಿದ್ದರೆ, ರೆನಾಲ್ಟ್ ಟ್ರೈಬರ್ ಮೂರನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿಯ ಎಕ್ಸ್‌ಎಲ್ 6 ಹಾಗೂ ಟೊಯೊಟಾ ಇನೊವಾ ಕ್ರಿಸ್ಟಾ ಮೊದಲ 5 ಸ್ಥಾನಗಳಲ್ಲಿ ಸ್ಥಾನ ಪಡೆದಿವೆ. ಕಳೆದ ತಿಂಗಳು ಮಾರುತಿ ಸುಜುಕಿ ಎರ್ಟಿಗಾದ 9,177 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2019ರ ಡಿಸೆಂಬರ್‌ನಲ್ಲಿ 6,650 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 38%ನಷ್ಟು ಹೆಚ್ಚು ಮಾರಾಟವಾಗಿದೆ.

ಎರ್ಟಿಗಾ ಈ ವಿಭಾಗದಲ್ಲಿ ನಿರಂತರವಾಗಿ ಪ್ರಥಮ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಕಂಪನಿಯು ಈ ಎಂಯುವಿಯನ್ನು ಪೆಟ್ರೋಲ್ ಹಾಗೂ ಸಿಎನ್‌ಜಿ ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಮಹೀಂದ್ರಾ ಬೊಲೆರೊದ 5,053 ಯುನಿಟ್‌ಗಳನ್ನು 2020ರ ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

2019ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಬೊಲೆರೊದ ಮಾರಾಟ ಪ್ರಮಾಣವು 11%ನಷ್ಟು ಕುಸಿದಿದೆ. 2019ರ ಡಿಸೆಂಬರ್‌ನಲ್ಲಿ 5,661 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಬೊಲೆರೊ, ಮಹೀಂದ್ರಾ ಕಂಪನಿಯ ಹೆಚ್ಚು ಮಾರಾಟವಾಗುವ ವಾಹನವಾಗಿದೆ.

ರೆನಾಲ್ಟ್ ಟ್ರೈಬರ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅದರ ಮಾರಾಟವು ಸಹ ಡಿಸೆಂಬರ್ ತಿಂಗಳಿನಲ್ಲಿ 12%ನಷ್ಟು ಕುಸಿದಿದೆ. 2020ರ ಡಿಸೆಂಬರ್‌ನಲ್ಲಿ ಈ ಮಾದರಿಯ 4,971 ಯುನಿಟ್‌ಗಳು ಮಾರಾಟವಾಗಿದ್ದರೆ, 2019ರ ಡಿಸೆಂಬರ್‌ನಲ್ಲಿ 5,631 ಯುನಿಟ್‌ಗಳು ಮಾರಾಟವಾಗಿದ್ದವು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾರುತಿ ಸುಜುಕಿ ಕಂಪನಿಯ ಎಕ್ಸ್‌ಎಲ್ 6, 2020ರ ಡಿಸೆಂಬರ್ ತಿಂಗಳಿನಲ್ಲಿ 22%ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ತಿಂಗಳು ಈ ಎಂಯುವಿಯ 3,088 ಯುನಿಟ್'ಗಳು ಮಾರಾಟವಾಗಿದ್ದವು.

2019ರ ಡಿಸೆಂಬರ್‌ನಲ್ಲಿ ಎಕ್ಸ್‌ಎಲ್ 6ನ 2,521 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಕಂಪನಿಯು ಈ ವಾಹನವನ್ನು ನೆಕ್ಸಾ ಡೀಲರ್'ಗಳ ಮೂಲಕ ಮಾರಾಟ ಮಾಡುತ್ತಿದೆ. ಈ ಎಂಯುವಿಯ ಮಾರಾಟವು ನಿಧಾನವಾಗಿ ಏರಿಕೆಯಾಗುತ್ತಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೊಯೊಟಾದ ಜನಪ್ರಿಯ ಎಂಪಿವಿಯಾದ ಇನೋವಾ ಕ್ರಿಸ್ಟಾದ 2,764 ಯುನಿಟ್‌ಗಳನ್ನು ಡಿಸೆಂಬರ್ ತಿಂಗಳಿನಲ್ಲಿ ಮಾರಾಟ ಮಾಡಲಾಗಿದೆ. ಈ ವಾಹನವು ಕಳೆದ ತಿಂಗಳ ಮಾರಾಟದಲ್ಲಿ 19%ನಷ್ಟು ಕುಸಿತ ಕಂಡಿದೆ.

2019ರ ಡಿಸೆಂಬರ್ ನಲ್ಲಿ ಈ ಎಂಪಿವಿಯ 3,414 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಟೊಯೊಟಾ ಕಂಪನಿಯು, ಇನೋವಾ ಕ್ರಿಸ್ಟಾದ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಳೆದ ವರ್ಷ ನಡೆದ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾದ ಕಿಯಾ ಕಾರ್ನಿವಾಲ್ ಮಾರಾಟವು ನಿರಂತರವಾಗಿ ಕುಸಿಯುತ್ತಿದೆ. ಕಳೆದ ತಿಂಗಳು ಈ ವಾಹನದ 251 ಯುನಿಟ್'ಗಳು ಮಾರಾಟವಾಗಿವೆ. ಇನ್ನು ಮಹೀಂದ್ರಾ ಮರಾಜೊ ಮಾರಾಟವು 88%ನಷ್ಟು ಕುಸಿದು 161 ಯುನಿಟ್‌ಗಳಿಗೆ ತಲುಪಿದೆ.

ಕಳೆದ ತಿಂಗಳು ಟೊಯೊಟಾ ವೆಲ್‌ಫೈರ್‌ನ 23 ಯೂನಿಟ್'ಗಳನ್ನು ಮಾರಾಟ ಮಾಡಲಾಗಿದೆ. ಎಂಯುವಿ ವಿಭಾಗದಲ್ಲಿ ಕಳೆದ ತಿಂಗಳು 25,481 ಯುನಿಟ್ ವಾಹನಗಳು ಮಾರಾಟವಾಗಿದ್ದರೆ 2019ರ ಡಿಸೆಂಬರ್‌ನಲ್ಲಿ 25,713 ಯುನಿಟ್‌ಗಳು ಮಾರಾಟವಾಗಿದ್ದವು. ಜನವರಿಯಲ್ಲಿ ಈ ವಿಭಾಗದ ಮಾರಾಟವು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.