Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇನ್ನಷ್ಟು ತಡವಾಗಲಿದೆ ಹೊಸ ಎಂಜಿನ್ ಪ್ರೇರಿತ ಟಾಟಾ ಹೆಕ್ಸಾ ಎಸ್‌ಯುವಿ ಬಿಡುಗಡೆ
ಹೊಸ ಎಮಿಷನ್‌ಗೆ ಅನುಗುಣವಾಗಿ ಈಗಾಗಲೇ ಬಹುತೇಕ ಕಾರು ಮಾದರಿಗಳನ್ನು ಉನ್ನತೀಕರಿಸಿ ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಹೆಕ್ಸಾ ಸೇರಿ ಇನ್ನು ಕೆಲವು ಕಾರು ಮಾದರಿಗಳ ಟೆಸ್ಟಿಂಗ್ ಪ್ರಕ್ರಿಯೆಯನ್ನು ಮುಂದುವರಿಸಿದೆ.

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಬಿಎಸ್-6 ನಿಯಮ ಅನುಗುಣವಾಗಿ ಬಹುತೇಕ ಕಾರು ಮಾದರಿಗಳನ್ನು ಉನ್ನತೀಕರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೆಕ್ಸಾ ಮಾದರಿಯನ್ನು ಹೊಸ ಎಂಜಿನ್‌ನೊಂದಿಗೆ ಬಿಡುಗಡೆಗೆ ಸಿದ್ದಗೊಳಿಸುತ್ತಿದ್ದು, ಬಿಎಸ್-6 ಮಾದರಿಯಲ್ಲಿ ಮಧ್ಯಮ ಕ್ರಮಾಂಕದ ಆವೃತ್ತಿಯಲ್ಲೂ 4x4 ಡ್ರೈವ್ ಸಿಸ್ಟಂ ಜೋಡಣೆ ಮಾಡುವ ಸುಳಿವು ನೀಡಿದೆ.

ಹೆಕ್ಸಾ ಬಿಎಸ್-6 ಆವೃತ್ತಿಯ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ವೇಳೆ ಎಕ್ಸ್ಎಂಎ ವೆರಿಯೆಂಟ್‌ನಲ್ಲೂ 4x4 ಡ್ರೈವ್ ಸಿಸ್ಟಂ ಜೋಡಣೆ ಮಾಡಿರುವುದು ಸ್ಪಷ್ಟವಾಗಿದ್ದು, ಮಲ್ಟಿ ಪರ್ಪಸ್ ವೆಹಿಕಲ್ ವಿಭಾಗದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಕರೋನಾ ವೈರಸ್ ಪರಿಣಾಮ ಹೆಕ್ಸಾ ಬಿಎಸ್-6 ಮಾದರಿಯ ಬಿಡುಗಡೆಯ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡುತ್ತ ಬಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೆಕ್ಸಾ ಬಿಡುಗಡೆಗೆ ಅಂತಿಮ ಹಂತದ ಸಿದ್ದತೆ ನಡೆಸಿದ್ದು, ಹೊಸ ಕಾರು ಎಂಜಿನ್ ಉನ್ನತೀಕರಣದೊಂದಿಗೆ ಹಲವಾರು ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಬಿಎಸ್-4 ಹೆಕ್ಸಾ ಮಾದರಿಯಲ್ಲಿ ಒಟ್ಟು ಎಳು ವೆರಿಯೆಂಟ್ ಮಾರಾಟ ಮಾಡುತ್ತಿದ್ದ ಟಾಟಾ ಕಂಪನಿಯು ಹೈ ಎಂಡ್ ಮಾದರಿಯಲ್ಲಿ ಮಾತ್ರವೇ 4x4 ಡ್ರೈವ್ ಸಿಸ್ಟಂ ಹೊಂದಿರುವ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಇದೀಗ ಮಧ್ಯಮ ಕ್ರಮಾಂಕದ ವೆರಿಯೆಂಟ್‌ನಲ್ಲೂ 4x4 ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಎಲ್ಲಾ ಮಾದರಿಗಳಲ್ಲೂ ಒಂದೇ ರೀತಿಯಾದ ಎಂಜಿನ್ ಜೋಡಣೆ ಮಾಡಲಿದೆ.

ಈ ಹಿಂದಿನ ಆವೃತ್ತಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ವೆರಿಕೊರ್ 300 ಮತ್ತು ವೆರಿಕೊರ್ 400 ಮಾದರಿಗಳಾಗಿ ಜೋಡಣೆ ಮಾಡುತ್ತಿದ್ದ ಟಾಟಾ ಕಂಪನಿಯು ಒಂದೇ ಎಂಜಿನ್ ಮೂಲಕ ಎರಡು ರೀತಿಯ ಪರ್ಫಾಮೆನ್ಸ್ ಒದಗಿಸುತ್ತಿತ್ತು.

2.2-ಲೀಟರ್ ಡೀಸೆಲ್ ಮಾದರಿಯು ವೆರಿಕೊರ್ 300 ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮೂಲಕ 148-ಬಿಹೆಚ್‌ಪಿ, 320-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ವೆರಿಕೊರ್ 400 ಆವೃತ್ತಿಯು 6-ಸ್ಪೀಕ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 154-ಬಿಎಚ್‌ಪಿ, 400-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿತ್ತು.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಇದೀಗ ಬಿಎಸ್-6 ಮಾದರಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನೇ ಮುಂದುವರಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು ಒಂದೇ ಮಾದರಿಯ ಪರ್ಫಾಮೆನ್ಸ್ ಒದಗಿಸಲಿದ್ದು, 4x4 ಡ್ರೈವ್ ಸಿಸ್ಟಂನೊಂದಿಗೆ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜೋಡಣೆ ಮಾಡಲಿದೆ.

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಸುರಕ್ಷಿತ ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಬಹುತೇಕ ಕಾರು ಮಾದರಿಗಳಲ್ಲಿ ಗರಿಷ್ಠ ಸೆಫ್ಟಿ ಫೀಚರ್ಸ್ ಅಳವಡಿಸುವ ಮೂಲಕ ಗ್ರಾಹಕರ ನೆಚ್ಚಿನ ಕಾರು ಮಾದರಿಗಳಾಗಿ ಹೊರಹೊಮ್ಮುತ್ತಿದೆ. ಹೀಗಾಗಿ ಹೆಕ್ಸಾ ಹೊಸ ಮಾದರಿಯನ್ನು ಸಹ ಗರಿಷ್ಠ ಸುರಕ್ಷಾ ಫೀಚರ್ಸ್‌ನೊಂದಿಗೆ ಪ್ರೀಮಿಯಂ ಫೀಚರ್ಸ್ ಅಳವಡಿಸಿ ಬಿಡುಗಡೆ ಮಾಡಲಿದ್ದು, ಹೊಸ ಕಾರು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಹೆಕ್ಸಾ ಕಾರು ಬಿಎಸ್-4 ಮಾದರಿಯ ಮಾರಾಟದ ಸಂದರ್ಭದಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.99 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.18.37 ಲಕ್ಷ ಬೆಲೆ ಹೊಂದಿತ್ತು. ಇದೀಗ ಬಿಎಸ್-6 ಮಾದರಿಯು ಬಿಎಸ್-4 ಮಾದರಿಗಿಂತಲೂ ರೂ.70 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಬಹುದಾಗಿದೆ.