ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

ಕಳೆದ ತಿಂಗಳು ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿಲ್ಲ. ಆದರೆ ಕೆಲವು ಹೊಸ ಕಾರುಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಕಳೆದ ಕೆಲವು ತಿಂಗಳುಗಳಲ್ಲಿ Tata Punch, Mahindra XUV 700, Tata Safari, Volkswagen Taigun ನಂತಹ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಎಲ್ಲಾ ಮಾದರಿಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಯಾವ ಯಾವ ಹೊಸ ಕಾರುಗಳು ಎಷ್ಟು ಪ್ರಮಾಣದಲ್ಲಿ ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Tata Punch

Tata Punch ಬಿಡುಗಡೆಯಾದ ಮೊದಲ ತಿಂಗಳೇ ಹೆಚ್ಚು ಜನಪ್ರಿಯವಾಗಿದೆ. ಕಳೆದ ತಿಂಗಳು Tata Punch ಮೈಕ್ರೋ ಎಸ್‌ಯುವಿಯ 8453 ಯುನಿಟ್‌ಗಳು ಮಾರಾಟವಾಗಿವೆ. Tata Motors ಕಂಪನಿಯ ಕಾರುಗಳ ಮಾರಾಟದಲ್ಲಿ Tiago ಎರಡನೇ ಸ್ಥಾನದಲ್ಲಿದ್ದು, Altroz ​​ಅನ್ನು ಹಿಂದಿಕ್ಕಿದೆ. ಕಂಪನಿಯು Punch ಮೈಕ್ರೋ ಎಸ್‌ಯುವಿಗಾಗಿ ಎಷ್ಟು ಬುಕ್ಕಿಂಗ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Tata Punch ‌ನಿಂದಾಗಿ ಕಂಪನಿಯು ಕಳೆದ ತಿಂಗಳು 33,926 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು ಮಾರಾಟದ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದೆ. ಕಂಪನಿಯ ಮಾರಾಟವು ಅಕ್ಟೋಬರ್‌ನಲ್ಲಿ 44% ನಷ್ಟು ಹೆಚ್ಚಾಗಿದ್ದು, ಮಾರುಕಟ್ಟೆ ಪಾಲು 13.7% ಕ್ಕೆ ಏರಿದೆ. ಈ ಮೈಕ್ರೋ ಎಸ್‌ಯು‌ವಿಯನ್ನು ಅಕ್ಟೋಬರ್ 18 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಸುಮಾರು 12 ದಿನಗಳಲ್ಲಿ ಈ ಮೈಕ್ರೋ ಎಸ್‌ಯುವಿ ಹೆಚ್ಚು ಮಾರಾಟವನ್ನು ದಾಖಲಿಸಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Mahindra XUV 700

ಅಕ್ಟೋಬರ್‌ನಲ್ಲಿ Mahindra ಕಂಪನಿಯ ಹೊಸ XUV 700 ಎಸ್‌ಯು‌ವಿಯ 3407 ಯುನಿಟ್‌ಗಳು ಮಾರಾಟವಾಗಿವೆ. ಬಿಡುಗಡೆಯಾದ ಒಂದು ತಿಂಗಳೊಳಗೆ Mahindra XUV 700 ಎಸ್‌ಯು‌ವಿಯು 70,000 ಯುನಿಟ್‌ ಬುಕ್ಕಿಂಗ್‌ ಪಡೆದಿದೆ. ಈ ಎಸ್‌ಯು‌ವಿಯ ಡೀಸೆಲ್ ಮಾದರಿಗಳ ವಿತರಣೆಯನ್ನು ನವೆಂಬರ್ ಕೊನೆಯ ವಾರದಿಂದ ಆರಂಭಿಸಲಾಗುವುದು. ಪೆಟ್ರೋಲ್ ಮಾದರಿಗಳ ವಿತರಣೆಯನ್ನು ಈಗಾಗಲೇ ಆರಂಭಿಸಲಾಗಿದೆ. ಕಂಪನಿಯು ಜನವರಿ ವೇಳೆಗೆ 14,000 ಯುನಿಟ್‌ಗಳನ್ನು ವಿತರಿಸಲಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Mahindra XUV 700 ಎಸ್‌ಯು‌ವಿಗಾಗಿ ಮೊದಲ ಹಂತದ ಬುಕ್ಕಿಂಗ್ ಗಳನ್ನು ಅಕ್ಟೋಬರ್ 7 ರಂದು ಆರಂಭಿಸಲಾಯಿತು. ಈ ಎಸ್‌ಯು‌ವಿಯು ಒಂದು ಗಂಟೆಯೊಳಗೆ 25,000 ಬುಕ್ಕಿಂಗ್ ಗಳನ್ನು ಪಡೆಯಿತು. ಎರಡನೇ ದಿನ ಮತ್ತೆ 25,000 ಬುಕ್ಕಿಂಗ್‌ಗಳನ್ನು ಪಡೆಯಿತು. ಡಿಸೆಂಬರ್ ತಿಂಗಳಿನಿಂದ ಈ ಎಸ್‌ಯು‌ವಿಯ ವಿತರಣೆ ವೇಗವಾಗಲಿದೆ. ಸೆಮಿ ಕಂಡಕ್ಟರ್ ಗಳ ಕೊರತೆಯಿಂದಾಗಿ ಈ ಎಸ್‌ಯು‌ವಿಯ ವಿತರಣೆ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Tata Safari

Tata Motors ಕಂಪನಿಯ 6/7 ಸೀಟರ್ ಎಸ್‌ಯುವಿಯಾದ Safari ಕೂಡ ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಅಕ್ಟೋಬರ್'ನಲ್ಲಿಕಂಪನಿಯು ಈ ಎಸ್‌ಯು‌ವಿಯ ಒಟ್ಟು 1,735 ಯುನಿಟ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. Tata Safari ಎಸ್‌ಯು‌ವಿಯನ್ನು XE, XM, XT, XT+, XZ, XZ+ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸೆಪ್ಟೆಂಬರ್‌ನಲ್ಲಿ ಈ ಎಸ್‌ಯು‌ವಿಯ ಗೋಲ್ಡ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Tata Safari ಗೋಲ್ಡ್ ಎಡಿಷನ್ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 21.89 ಲಕ್ಷಗಳಾಗಿದೆ. ಹೊಸ ಎಕ್ಸ್‌ಕ್ಲೂಸಿವ್ ಆವೃತ್ತಿಯನ್ನು ವೈಟ್ ಗೋಲ್ಡ್ ಹಾಗೂ ಬ್ಲ್ಯಾಕ್ ಗೋಲ್ಡ್ ಎಂಬ ಎರಡು ವಿಭಿನ್ನ ಬಣ್ಣಗಳಲ್ಲಿ ನೀಡಲಾಗುತ್ತದೆ. ಕಂಪನಿಯು ಈ ಮಾದರಿಯಲ್ಲಿ ಬ್ಲಾಕ್ ರೂಫ್ ನೀಡಿದೆ. ಇದು Safari ಎಸ್‌ಯು‌ವಿಗೆ ಡ್ಯುಯಲ್ ಟೋನ್ ಲುಕ್ ನೀಡುತ್ತದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Volkswagen Taigun

Volkswagen ಕಂಪನಿಯು ಕಳೆದ ತಿಂಗಳು ತನ್ನ Taigun ಎಸ್‌ಯು‌ವಿಯ 2,551 ಯುನಿಟ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ. Taigun ಎಸ್‌ಯು‌ವಿಯು ಮಾರಾಟದಲ್ಲಿ Skoda Kushaq ಎಸ್‌ಯು‌ವಿಯನ್ನು ಹಿಂದಿಕ್ಕಿದೆ. ಬಿಡುಗಡೆಯಾದ ಒಂದು ತಿಂಗಳ ನಂತರ, ಈ ಎಸ್‌ಯು‌ವಿ 18,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ಬುಕ್ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. Taigun ಎಸ್‌ಯು‌ವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 10.50 ಲಕ್ಷಗಳಾಗಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

Taigun ಎಸ್‌ಯುವಿಗಾಗಿ ಸುಮಾರು 12,000 ಯುನಿಟ್‌ ಮುಂಗಡ ಬುಕಿಂಗ್‌ಗಳನ್ನು ಸ್ವೀಕರಿಸಲಾಗಿದೆ. ಆದರೆ ಈ ಎಸ್‌ಯು‌ವಿಯು ದಿನಕ್ಕೆ ಸರಾಸರಿ 250 ಬುಕ್ಕಿಂಗ್‌ಗಳನ್ನು ಪಡೆಯುತ್ತಿದೆ ಎಂದು ಕಂಪನಿ ಹೇಳಿದೆ. 2021ರ ಹೊಸ Volkswagen Taigun ಎಸ್‌ಯು‌ವಿಯ ಸಂಪೂರ್ಣ ಉತ್ಪಾದನಾ ಬ್ಯಾಚ್ ಮಾರಾಟವಾಗಿದೆ. ಈ ಎಸ್‌ಯು‌ವಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು Taigun ಎಸ್‌ಯು‌ವಿಯ ಬುಕ್ಕಿಂಗ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬಹುದು ಎಂದು ಹೇಳಲಾಗಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

ಹೊಸ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಕಳೆದ ತಿಂಗಳು ಬಿಡುಗಡೆಯಾದ ಎರಡು ಕಾರುಗಳು ಟಾಪ್ 25 ರಲ್ಲಿ ಸ್ಥಾನ ಪಡೆದಿವೆ. ಇದರೊಂದಿಗೆ ಇತರ ಹೊಸ ಮಾದರಿಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಅಕ್ಟೋಬರ್‌ನಲ್ಲಿ ಹೆಚ್ಚು ಮಾರಾಟ ಕಂಡ ಹೊಸ ಕಾರುಗಳು

ಪ್ರತಿ ವರ್ಷವೂ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಈ ಸಂದರ್ಭದಲ್ಲಿ ವಾಹನ ತಯಾರಕ ಕಂಪನಿಗಳು ಸಹ ವಾಹನ ಖರೀದಿಸುವವರಿಗೆ ಹಲವು ರೀತಿಯ ಕೊಡುಗೆಗಳನ್ನು ನೀಡುತ್ತವೆ. ಆದರೆ ಈ ಬಾರಿ ಹೊಸ ವಾಹನಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗಿಲ್ಲ. ಜಾಗತಿಕವಾಗಿ ಸೆಮಿ ಕಂಡಕ್ಟರ್ ಗಳಿಗೆ ಕೊರತೆ ಉಂಟಾಗಿರುವುದರಿಂದ ಕಂಪನಿಗಳು ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸದೇ ಇರುವುದರಿಂದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿಲ್ಲ.

Most Read Articles

Kannada
English summary
New car sales increases in october 2021 details
Story first published: Friday, November 5, 2021, 19:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X