ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಟಾಟಾ ಮೋಟಾರ್ಸ್ ಕಂಪನಿಯು ಇದೇ ತಿಂಗಳು 26ರಂದು ತನ್ನ ಬಹುನೀರಿಕ್ಷಿತ ಹೊಸ ಸಫಾರಿ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಕಳೆದ ವರ್ಷದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಗ್ರಾವಿಟಾಸ್ ಎಸ್‌ಯುವಿ ಮಾದರಿಯನ್ನೇ ಇದೀಗ ಸಫಾರಿ ಹೆಸರಿನೊಂದಿಗೆ ರೀ ಬ್ರಾಂಡ್ ಮಾದರಿಯಾಗಿ ರಸ್ತೆಗಿಳಿಸುತ್ತಿದ್ದು, ಎಸ್‌ಯುವಿ ಕಾರು ಮಾರಾಟದಲ್ಲಿ ತನ್ನದೆ ಜನಪ್ರಿಯತೆ ಹೊಂದಿದ್ದ ಸಫಾರಿ ಕಾರು ಮಾದರಿಯನ್ನೇ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಪ್ರತಿಸ್ಪರ್ಧಿ ಕಾರುಗಳ ಪೈಪೋಟಿ ನಡುವೆ ಸಫಾರಿ ಕಾರು ಮಾದರಿಯ ಉತ್ಪಾದನೆಯನ್ನು ಕಳೆದ 2019ರಲ್ಲಿ ಸ್ಥಗಿತಗೊಳಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು 2.0 ಯೋಜನೆ ಅಡಿ ಹೊಸ ಕಾರುಗಳತ್ತ ಗಮನಹರಿಸಿದ್ದು, ಹೊಸ ಯೋಜನೆ ಅಡಿಯಲ್ಲೇ 2020ರ ದೆಹಲಿ ಎಕ್ಸ್‌ಪೋದಲ್ಲಿ ಗ್ರಾವಿಟಾಸ್ 7 ಸೀಟರ್ ಎಸ್‌ಯುವಿ ಅನಾವರಣಗೊಳಿಸಿತ್ತು.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

2020ರ ಕೊನೆಯ ತನಕವೂ ಹೊಸ ಎಸ್‌ಯುವಿ ಕಾರು ಮಾದರಿಯನ್ನು ಗ್ರಾವಿಟಾಸ್ ಹೆಸರಿನಲ್ಲೇ ರೋಡ್ ಟೆಸ್ಟಿಂಗ್ ನಡೆಸಿದ್ದ ಟಾಟಾ ಕಂಪನಿಯು ಇದೀಗ ಹೊಸ ಕಾರನ್ನು ಈ ಹಿಂದಿನ ಜನಪ್ರಿಯ ಸಫಾರಿ ಮಾದರಿಯ ರೀ ಬ್ರಾಂಡ್ ಮಾದರಿಯಾಗಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಹೊಸ ಸಫಾರಿ ಮಾದರಿಯು ಎಸ್‌ಯುವಿ ಕಾರು ಮಾದರಿಯಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರಲಿದ್ದು, ಹ್ಯಾರಿಯರ್ ಮುಂದುವರಿದ ಭಾಗವಾಗಿರುವ ಸಫಾರಿ ಕಾರು ಮೂರನೇ ಸಾಲಿನ ಆಸದೊಂದಿಗೆ ಫುಲ್ ಸೈಜ್ ಎಸ್‌ಯುವಿ ಪ್ರಿಯರನ್ನು ಸೆಳೆಯಲಿದೆ. OMEGA ಕಾರು ಉತ್ಪಾದನಾ ತಂತ್ರಜ್ಞಾನದ ಮೂಲಕ ಹೊಸ ಕಾರುಗಳ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿರುವ ಟಾಟಾ ಕಂಪನಿಯು ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಕಾರುಗಳಲ್ಲಿ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳಯುತ್ತಿವೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಹೀಗಾಗಿ ಬಿಡುಗಡೆಯಾಗಲಿರುವ ಸಫಾರಿ ಎಸ್‌ಯುವಿ ಹೊಸ ಕಾರು ಕೂಡಾ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದ್ದು, ಪ್ರೀಮಿಯಂ ಫೀಚರ್ಸ್‌ನಲ್ಲೂ ಗಮನಸೆಳೆಯಲಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಹಾಗೆಯೇ ಹೊಸ ಕಾರಿನಲ್ಲಿ ಸ್ಪೋರ್ಟಿ ಮಾದರಿಯ ಆಸನಗಳೊಂದಿಗೆ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್ ಮೌಂಟೆಡ್, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ವಿವಿಧ ಡ್ರೈವ್ ಮೋಡ್, ಪನೊರಮಿಕ್ ಸನ್‌ರೂಫ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಈ ಮೂಲಕ ಹೊಸ ಕಾರು ಆವೃತ್ತಿಯು ಪ್ರತಿಸ್ಪರ್ಧಿ ಕಾರು ಮಾದರಿಗಳಾದ ಹ್ಯುಂಡೈ ಟ್ಯೂಸಾನ್, ಮಹೀಂದ್ರಾ ಅಲ್ಟುರಾಸ್ ಜಿ4, ಫೋರ್ಡ್ ಎಂಡೀವರ್ ಜೊತೆಗೆ ಟೊಯೊಟಾ ಫಾರ್ಚೂನರ್‌ ಕಾರಿಗೂ ಪೈಪೋಟಿ ನೀಡಲಿದ್ದು, ಉತ್ತಮ ಸ್ಥಳಾವಕಾಶದೊಂದಿಗೆ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಹೊಸ ಸಫಾರಿ ಕಾರಿನಲ್ಲಿ ಹ್ಯಾರಿಯರ್ ಮಾದರಿಯಲ್ಲೇ 2.0-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 170-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿದೆ ಟಾಟಾ ಹೊಸ ಸಫಾರಿ

ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಗಮನಸೆಳೆಯಲಿರುವ ಹೊಸ ಸಫಾರಿ ಕಾರು ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 19 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

Article Published On: Tuesday, January 12, 2021, 23:02 [IST]
English summary
Fresh Details Of 2021 Tata Safari Leaked. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+