ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಅಮೆರಿಕಾ ಮೂಲದ ವಾಹನ ತಯಾರಕ ಕಂಪನಿಯಾದ ಫೋರ್ಡ್ ಕಂಪನಿಯು ತನ್ನ ಮುಂದಿನ ತಲೆಮಾರಿನ ಎಂಡೀವರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಫೋರ್ಡ್ ಎಂಡೀವರ್ ಎಸ್‍ಯುವಿಯು ಆಫ್-ರೋಡ್ ಅಧಾರಿತ ವೈಲ್ಡ್'ಟ್ರ್ಯಾಕ್ ಎಕ್ಸ್ ವೆರಿಯೆಂಟ್ ಅನ್ನು ಪಡೆಯಲಿದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಮುಂದಿನ ತಲೆಮಾರಿನ ಫೋರ್ಡ್ ಎಂಡೀವರ್ ಎಸ್‍ಯುವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 2022ರಲ್ಲಿ ಬಿಡುಗಡೆಯಾಗಲಿದೆ. ಫೋರ್ಡ್ ಎಂಡೀವರ್ ಎಸ್‍ಯುವಿಯನ್ನು ಅಂತರರಾಷ್ಟ್ರೀಯ ಮಾರುಕಟೆಯಲ್ಲಿ ಎವರೆಸ್ಟ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತದೆ. ಅದರೆ ಭಾರತದ ಮರುಕಟ್ಟೆಯಲ್ಲಿ ಎಂಡೀವರ್ ಹೆಸರಿನಲ್ಲಿ ಮಾರಾಟವವಾಗುತ್ತಿದೆ. ಫೋರ್ಡ್ ಎಂಡೀವರ್ ಹೊಸ ವಿನ್ಯಾಸ ಮತ್ತು ಒಳಭಾಗದಲ್ಲಿ ಕೆಲವು ನವೀಕರಣಗಳನ್ನು ಪಡೆಯಲಿದೆ. ಇದರೊಂದಿಗೆ ಹೊಸ ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ವರದಿಗಳ ಪ್ರಕಾರ, 2022ರ ಫೋರ್ಡ್ ಎಂಡೀವರ್ 3 ಎಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಯಾಗಲಿದೆ. ಇದರಲ್ಲಿ ಎರಡು ಡೀಸೆಲ್ ಎಂಜಿನ್ ಮತ್ತು ಹೊಸ ಪೆಟ್ರೋಲ್ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂ ಆಗಿರುತ್ತದೆ.ಇನ್ನು ಭಾರತದಲ್ಲಿ ಪ್ರಿ-ಫೇಸ್‌ಲಿಫ್ಟ್ ಎಂಡೀವರ್‌ನೊಂದಿಗೆ ನೀಡಲಾಗುತ್ತಿದ್ದ 3.2-ಲೀಟರ್ 5-ಸಿಲಿಂಡರ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಹೊಸ ಎಂಡೀವರ್ ಆಂಬಿಯೆಂಟ್, ಟ್ರೆಂಡ್, ಟ್ರೆಂಡ್ ಸ್ಪೋರ್ಟ್, ವೈಲ್ಡ್ ಟ್ರ್ಯಕ್, ಟೈಟಾನಿಯಂ ಮತ್ತು ಪ್ಲಾಟಿನಂ ಎಂಬ 6 ರೂಪಾಂತರಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಟೂ-ವ್ಹೀಲ್ ಡ್ರೈವ್ ಮತ್ತು ಫ್ಹೋರ್ ವ್ಜೀಲ್-ಡ್ರೈವ್ ಸಿಸ್ಟಂ ಆಯ್ಕೆಗಳನ್ನು ಒಳಗೊಂಡಿರುತ್ತದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಮುಂದಿನ ತಲೆಮಾರಿನ ಫೋರ್ಡ್ ಎಂಡೀವರ್‌ಗೆ 2.0-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ 4-ಸಿಲಿಂಡರ್ ಡೀಸೆಲ್ ಎಂಜಿನ್ ನೀಡಲಾಗುತ್ತದೆ. ಈ ಎಂಜಿನ್ 210 ಬಿಹೆಚ್‌ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಇನ್ನು ಟಾಪ್-ಸ್ಪೆಕ್ ವೆರಿಯೆಂಟ್ ಹೊಸ 3.0-ಲೀಟರ್ ಟರ್ಬೋಚಾರ್ಜ್ಡ್ 6-ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ ಈ ಎಂಜಿನ್ 250 ಬಿಹೆಚ್‌ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಇನ್ನು ಹೊಸ ಎಂಡೀವರ್ ಪ್ಲಗ್-ಇನ್ ಹೈಬ್ರಿಡ್ ಸಿಸ್ಟಂ ಅನ್ನು ಹೊಂದಿರುವ 2.3-ಲೀಟರ್ ಟರ್ಬೋಚಾರ್ಜ್ಡ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಸ್ವೀಕರಿಸಲಿದೆ. ಈ ಎಂಜಿನ್ 270 ಬಿಹೆಚ್‍ಪಿ ಪವರ್ ಮತ್ತು 680 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಹೊಸ ಫೋರ್ಡ್ ಎಂಡೀವರ್ ಎಸ್‍ಯುವಿಯಲ್ಲಿ ಹೊಸ 12.8-ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇಯೊಂದಿಗೆ ಬ್ರ್ಯಾಂಡ್‌ನ ಎಸ್‌ವೈಎನ್‌ಸಿ 4 ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರಲಿದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಇದರೊಂದಿಗೆ 10.25-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ನ್ನು ಸಹ ಸ್ವೀಕರಿಸಲಿದೆ. ಇನ್ಫೋಟೈನ್ಮೆಂಟ್ ಸಿಸ್ಟಂ ರಿಮೋಟ್ ಕನೆಕ್ಟಿವಿಟಿಯೊಂದಿಗೆ ವೈರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಒಳಗೊಂಡಿರುತ್ತದೆ. ಇನ್ನು ಕನಕ್ಟಿವಿಟಿ ಕಾರ್ ತಂತ್ರಜ್ಞಾನವನ್ನು ಪಡೆಯಲಿದೆ.

ಹೊಸ ಆಫ್-ರೋಡ್ ವೆರಿಯೆಂಟ್‌ನಲ್ಲಿ ಬಿಡುಗಡೆಯಾಗಲಿದೆ ಫೋರ್ಡ್ ಎಂಡೀವರ್

ಮುಂದಿನ ತಲೆಮಾರಿನ ಫೋರ್ಡ್ ಎಂಡೀವರ್ 2022ರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಫೋರ್ಡ್ ಎಂಡೀವರ್ ಎಸ್‍ಯುವಿಯು 2023ರಲ್ಲಿ ಬಿಡುಗಡೆಯಾಗಬಹುದು.

Most Read Articles

Kannada
Read more on ಫೋರ್ಡ್ ford
English summary
2022 Ford Endeavour To Get Off-Road Focused Wildtrak X Variant. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X