ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ದಕ್ಷಿಣ ಕೊರಿಯಾದ ಕಾರು ಉತ್ಪಾದನಾ ಕಂಪನಿ ಕಿಯಾ ಮೋಟಾರ್ಸ್ ತನ್ನ ಜನಪ್ರಿಯ ಎಂಪಿವಿ ಆವೃತ್ತಿಯಾದ ಕಾರ್ನಿವಾಲ್ ಕಾರು ಮಾದರಿಯನ್ನು ಹೊಸ ತಲೆಮಾರಿನ ಮಾದರಿಯನ್ನು ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ಭಾರತದಲ್ಲೂ ಮುಂಬರುವ ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಭಾರತದಲ್ಲಿ ಮಾರಾಟವಾಗುತ್ತಿರುವ ಕಾರ್ನಿವಾಲ್ ಕಾರು ಈಗಾಗಲೇ ವಿದೇಶಿ ಮಾರುಕಟ್ಟೆಗಳಲ್ಲಿ ಮೊಡೆನಾ ಹೆಸರಿನಲ್ಲಿ ಮಾರಾಟವಾಗುತ್ತಿದ್ದು, ನ್ಯೂ ಜನರೇಷನ್ ಮಾದರಿಯು ಭಾರತದಲ್ಲಿ 2022ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ನ್ಯೂ ಜನರೇಷನ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರ್ನಿವಾಲ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ತುಸು ದುಬಾರಿ ಬೆಲೆ ಹೊಂದಿರಲಿದ್ದು, ನ್ಯೂ ಜನರೇಷನ್ ಮಾದರಿಯು ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ನ್ಯೂ ಜನರೇಷನ್ ಕಾರ್ನಿವಾಲ್ ಮಾದರಿಯು ಮುಂಭಾಗದ ವಿನ್ಯಾಸವು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಮಾರ್ಡನ್ ಡಿಸೈನ್‌ನೊಂದಿಗೆ ಸ್ಲಿಕ್ ಎಲ್‌ಇಡಿ ಹೆಡ್‌ಲ್ಯಾಂಪ್, ಇಂಟ್ರಾಗ್ರೆಟೆಡ್ ಎಲ್ಇಡಿ ಡಿಆರ್‌ಎಲ್ಎಸ್‌ಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಕಾರಿನ ಒಳಭಾಗವು ಕೂಡಾ ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ 12.3-ಇಂಚಿನ ಇನ್ಟೋಟೈನ್‌ಮೆಂಟ್ ಸಿಸ್ಟಂ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಟಚ್ ಸ್ಕ್ರೀನ್ ಮಲ್ಟಿ ಇನ್ಪೋ ಡಿಸ್ಲೈ, ಮಲ್ಟಿ ಡ್ರೈವಿಂಗ್ ಮೋಡ್, ಆರ್ಮ್ ರೆಸ್ಟ್ ಜೊತೆಗೆ ಕಪ್ ಹೋಲ್ಡರ್, ಮಲ್ಟಿ ಕಂಟ್ರೋಲ್ ಸ್ಟೀರಿಂಗ್ ವೀಲ್ಹ್ ಸೇರಿದಂತೆ ವಿವಿಧ ಮಾದರಿಯ ಹಲವು ಗುಣಮಟ್ಟದ ಫೀಚರ್ಸ್‌ಗಳು ಗ್ರಾಹಕರನ್ನು ಸೆಳೆಯಲಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಜೊತೆಗೆ ಹೊಸ ತಲೆಮಾರಿನ ಕಾರ್ನಿವಾಲ್ ಮಾದರಿಯ ಉದ್ದಳತೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, 40-ಎಂಎಂ ಹೆಚ್ಚಳದೊಂದಿಗೆ ಹೊಸ ಕಾರು 5,155-ಎಂಎಂ ಉದ್ದಳತೆ ಹೊಂದಿದೆ. ಇದರೊಂದಿಗೆ ಮೂರನೇ ಮತ್ತು ನಾಲ್ಕನೇ ಸಾಲಿನಲ್ಲಿನ ಪ್ರಯಾಣಿಕರಿಗೆ ಹೆಚ್ಚುವರಿ ಸ್ಥಳಾವಕಾಶ ಮಾಡಿಕೊಡಲಾಗಿದ್ದು, ಚಾಲಕ ಸೇರಿ 11 ಜನ ಪ್ರಯಾಣಿಕರೂ ಅರಾಮವಾಗಿ ಪ್ರಯಾಣಿಸಬಹುದಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಹೊಸ ಕಾರಿನಲ್ಲಿ ಗ್ರಾಹಕರ ಬೇಡಿಕೆಯೆಂತೆ 2+2+3=7, 2+2+2+3=9, 2+3+3+3=11 ಮಾದರಿಯ ಆಸನ ಸೌಲಭ್ಯಗಳನ್ನು ಹೊಂದಿದ್ದು, ಇದರಲ್ಲಿ 7 ಸೀಟರ್ ಮಾದರಿಯೇ ಅತ್ಯಧಿಕ ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಎಂಜಿನ್ ಮತ್ತು ಪರ್ಫಾಮೆನ್ಸ್

ಕಿಯಾ ಮೋಟಾರ್ಸ್ ಕಂಪನಿಯು ಭಾರತವನ್ನು ಹೊರತುಪಡಿಸಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಾರ್ನಿವಾಲ್ ಮಾದರಿಯಾಗಿ ಈ ಹಿಂದಿನ 2.2-ಲೀಟರ್ ಆಟೋಮ್ಯಾಟಿಕ್ ಡೀಸೆಲ್ ಎಂಜಿನ್‌ನೊಂದಿಗೆ ಹೊಸದಾಗಿ 3.5-ಲೀಟರ್ ಎನ್ಎ ವಿ6 ಪೆಟ್ರೋಲ್ ಮತ್ತು 3.5-ಲೀಟರ್ ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ ನೀಡಲಾಗಿದೆ.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಇದರಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 199-ಬಿಎಚ್‌ಪಿ, 404-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ, 3.5-ಲೀಟರ್ ಎಂಪಿಐ ಪೆಟ್ರೋಲ್ ಮಾದರಿಯು 268-ಬಿಎಚ್‌ಪಿ, 332-ಎನ್ಎಂ ಟಾರ್ಕ್ ಮತ್ತು 3.5-ಲೀಟರ್ ಜಿಡಿಐ ವಿ6 ಪೆಟ್ರೋಲ್ ಮಾದರಿಯು 290-ಬಿಎಚ್‌ಪಿ, 355-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಈ ಮೂಲಕ ದೇಶಿಯ ಮಾರುಕಟ್ಟೆಯಲ್ಲಿನ ಕಾರ್ನಿವಾಲ್ ಕಾರು ಮಾದರಿಗಿಂತಲೂ ರೂ. 10 ಲಕ್ಷದಿಂದ ರೂ.15 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆದುಕೊಂಡಿದ್ದು, ಭಾರತದಲ್ಲಿ ಮಾರಾಟವಾಗುತ್ತಿರುವ ಕಾರ್ನಿವಾಲ್ ಮಾದರಿಯು 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಮುಖ ಮೂರು ವೆರಿಯೆಂಟ್ ಹೊಂದಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ನ್ಯೂ ಜನರೇಷನ್ ಕಿಯಾ ಕಾರ್ನಿವಾಲ್ ಎಂಪಿವಿ

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಭಾರತದಲ್ಲಿ ಮಾರಾಟವಾಗುವ ಕಾರ್ನಿವಾಲ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 25.15 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.33.95 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
New-Gen Kia Carnival MPV Could Launch In India Around 2022. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X