ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ(Toyota) ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(Land Cruiser) ಎಸ್‍ಯುವಿಯನ್ನು ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಪರಿಚಯಿಸಿತು. ಈ ಹೊಸ ಲ್ಯಾಂಡ್ ಕ್ರೂಸರ್ ಸಂಚಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಈ ಟೊಯೊಟಾ ಲ್ಯಾಂಡ್ ಕ್ರೂಸರ್ ನಿಸ್ಸಂದೇಹವಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಐಕಾನಿಕ್ ಎಸ್‍ಯುವಿಗಳಲ್ಲಿ ಒಂದಾಗಿದೆ.ಕೇವಲ ಆಯ್ದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದ್ದರೂ ಲ್ಯಾಂಡ್ ಕ್ರೂಸರ್ ಎಲ್ಸಿ300 ಮಾದರಿಯ ಕಾಯುವ ಅವಧಿಯು ಈಗಾಗಲೇ ನಾಲ್ಕು ವರ್ಷಗಳವರೆಗೆ ತಲುಪಿದೆ. ಜಪಾನ್‌ನ ಇತ್ತೀಚಿನ ವರದಿಗಳ ಪ್ರಕಾರ, ಟೊಯೋಟಾ ಲ್ಯಾಂಡ್ ಕ್ರೂಸರ್ 300 ಬಿಡುಗಡೆಗೆ ಮುಂಚಿತವಾಗಿ 21,500ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ ಗಳನ್ನು ಪಡೆದುಕೊಂಡಿದೆ, ಜುಲೈ 1 ಮತ್ತು ಜುಲೈ 13ರ ನಡುವೆ ಬುಕ್ಕಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದರು.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಆಗಸ್ಟ್‌ನಲ್ಲಿ ಪ್ರಾರಂಭವಾದ ನಂತರ, ಬುಕ್ಕಿಂಗ್‌ಗಳು ಮತ್ತೆ ಪ್ರಾರಂಭವಾದಾಗ, ಬುಕ್ಕಿಂಗ್‌ಗಳ ಸುರಿಮಗಳು ಬಂದಿದೆ ಎಂದು ಹೇಳಲಾಗುತ್ತಿದೆ, ಪ್ರಪಂಚದಾದ್ಯಂತ ಸಾಕಷ್ಟು ದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ. ತಯಾರಕರು ವಾರ್ಷಿಕವಾಗಿ 5,000 ಯೂನಿಟ್‌ಗಳನ್ನು ಮಾತ್ರ ಮಾರಾಟ ಮಾಡಲು ಯೋಜಿಸಿದ್ದರು. ಆದರೆ ಭಾರೀ ಬೇಡಿಕೆಯಿಂದಾಗಿ ಕಾಯುವ ಅವಧಿಯು ನಾಲ್ಕು ವರ್ಷಗಳವರೆಗೆ ವಿಸ್ತರಿಸಿದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಜಾಗತಿಕ ಸೆಮಿಕಂಡಕ್ಟರ್ ಕೊರತೆಯು ವಿಷಯಗಳನ್ನು ಇನ್ನಷ್ಟು ಸಂಕಷ್ಟವನ್ನು ಉಂಟುಮಾಡುತ್ತಿದೆ. ಬಹುಪಾಲು ಖರೀದಿದಾರರು (ಶೇ. 90 ಕ್ಕಿಂತ ಹೆಚ್ಚು) ZX ಮತ್ತು GR ಸ್ಪೋರ್ಟ್ ಟ್ರಿಮ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ, ಇವುಗಳು ವಿತರಣೆಗೆ ಹೆಚ್ಚು ಸಮಯ ತೆಗೆದುಕೊಳ್ಳುವ ರೂಪಾಂತರಗಳಾಗಿವೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಇನ್ನು ಟೊಯೊಟಾ ಕಂಪನಿಯು ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಆಫ್-ರೋಡ್ ಪರ್ಫಾಮೆನ್ಸ್ ವೀಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ಈ ವೀಡಿಯೊಗಳಲ್ಲಿನ ವಾಯ್ಸ್‌ಓವರ್ ಕೇವಲ ಜಪಾನೀಸ್‌ನಲ್ಲಿ ಮಾತ್ರವಿದೆ. ಆದರೆ ವೀಡಿಯೊದಲ್ಲಿ ಲ್ಯಾಂಡ್ ಕ್ರೂಸರ್ ಎಷ್ಟು ಸಮರ್ಥ ಆಫ್-ರೋಡರ್ ಎಂಬುದು ತಿಳಿಯುತ್ತದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ವೀಡಿಯೋದಲ್ಲಿ ಲ್ಯಾಂಡ್ ಕ್ರೂಸರ್ ಎಸ್‍ಯುವಿ ಬೆಟ್ಟ, ಗುಡ್ಡಗಳ ಜೊತೆಯಲ್ಲಿ ಮರಳಿನಲ್ಲಿ ಸಾಗುವುದನ್ನು ಪ್ರದರ್ಶಿಸಿದ್ದಾರೆ. ಇನ್ನು ಈ ಎಸ್‍ಯುವಿಯು ಜಿಗಿಯುವುದನ್ನು ತೋರಿಸಿದ್ದಾರೆ. ಲ್ಯಾಂಡ್ ಕ್ರೂಸರ್ ಬೃಹತ್ ಗಾತ್ರದ ಆಫ್-ರೋಡ್ ಎಸ್‍ಯುವಿಯಾಗಿದೆ. ಟೊಯೊಟಾ ಕಂಪನಿಯು ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951 ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಇದುವರೆಗೂ 170 ದೇಶಗಳಲ್ಲಿ ಲ್ಯಾಂಡ್ ಕ್ರೂಸರ್‌ನ 1.04 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಿದೆ. ನ್ಯೂ ಜನರೇಷನ್ ಮಾದರಿಯನ್ನು ಹಿಂದಿನದಕ್ಕಿಂತ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಮಾದರಿಯಾಗಿದೆ. ಲ್ಯಾಂಡ್ ಕ್ರೂಸರ್' ಬ್ರ್ಯಾಂಡ್ ಹೆಸರು ಇಂದಿಗೂ ಜನಪ್ರಿಯ ಬ್ರ್ಯಾಂಡ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಟೊಯೊಟಾ ತನ್ನ ಲ್ಯಾಂಡ್ ಕ್ರೂಸರ್ ಎಸ್‍ಯುವಿಯನ್ನು 1951ರಲ್ಲಿ ಬಿಡುಗಡೆಗೊಳಿಸಿತ್ತು.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಇನ್ನು ಕಳೆದ ಕೆಲವು ವರ್ಷಗಳಿಗಿಂದ ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯ ಜನಪ್ರಿಯತೆ ಮತ್ತು ಬೇಡಿಕೆಯು ಕಡಿಮೆಯಾಗಿತ್ತು. ಈ ಟೊಯೊಟಾ ಲ್ಯಾಂಡ್ ಕ್ರೂಸರ್ ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿದ ಎಸ್‍ಯುವಿಯಾಗಿದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಹೊಸ ಟೋಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಇದು 3.5 ಎಲ್ ವಿ6 ಟ್ವಿನ್-ಟರ್ಬೊ ಪೆಟ್ರೋಲ್ ಮತ್ತು 3.3 ಎಲ್ ವಿ6 ಟ್ವಿನ್-ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಾಗಿವೆ. ಇದರಲ್ಲಿ 3.5-ಲೀಟರ್ ವಿ6 ಟ್ವಿನ್-ಟರ್ಬೊ ಎಂಜಿನ್ ಅನ್ನು 409 ಬಿಹೆಚ್‍ಪಿ ಪವರ್ ಮತ್ತು 650 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಇನ್ನು 3.3-ಲೀಟರ್ ಟ್ವಿನ್-ಟರ್ಬೊ ವಿ6 ಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 700 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಗಳೊಂದಿಗೆ 10-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗುತ್ತದೆ. ಈ ಗೇರ್ ಬಾಕ್ಸ್ ಇಂಧನ ಬಳಕೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಹಿಂದಿನದಕ್ಕಿಂತ ಶೇ.10 ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಈ ನ್ಯೂ ಜನರೇಷನ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ ಬ್ರಾಂಡ್‌ನ ಮೊದಲ ಬಾಡಿ-ಆನ್-ಫ್ರೇಮ್ ವಾಹನ ಇದಾಗಿದೆ, ಈ 2022ರ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಈ ಬ್ರ್ಯಾಂಡ್‌ನ ಹೊಸ ಪ್ರಮುಖ ಎಸ್ಯುವಿ ಹೆಚ್ಚು ಪ್ರಮುಖವಾದ ಗ್ರಿಲ್, ಹೊಸ ಲೈಟಿಂಗ್ ಸೆಟಪ್, ಪರಿಷ್ಕೃತ ಟೈಲ್‌ಗೇಟ್ ಮತ್ತು ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್‌ಗಳನ್ನು ಪಡೆಯುತ್ತದೆ. ಈ ಹೊಸ ಎಸ್‍ಯುವಿಯ ಇಂಟಿರಿಯರ್ ನಲ್ಲಿ ದೊಡ್ಡ ಟ್ಯಾಬ್ಲೆಟ್ ಶೈಲಿಯ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಹೊಸ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಪಡೆಯುತ್ತದೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಪ್ರಸ್ತುತ ಮಾದರಿಯಂತಲ್ಲದೆ 4 ಹೈ ಮತ್ತು 4 ಲೋ ಮೋಡ್‌ಗಳನ್ನು ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ. ಈ ಎಸ್‍ಯುವಿಯಲ್ಲಿ ಫಿಸಿಕಲ್ ಡಯಲ್‌ಗಳನ್ನು ಹೊಂದಿರುವ ಗೇಜ್ ಕ್ಲಸ್ಟರ್ ಮತ್ತು ಇನ್ಫೋ ಡಿಸ್ ಪ್ಲೇ, ಹೀಟಡ್ ಸೀಟುಗಳು, ಜೆಬಿಎಲ್ ಆಡಿಯೋ, ಟೊಯೊಟಾ ಸೇಫ್ಟಿ ಸೆನ್ಸ್ ಪ್ಯಾಕೇಜ್ ಮತ್ತು ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಕೂಡ ಹೊಂದಿವೆ.

ಈ Toyota ಎಸ್‍ಯುವಿ ಪಡೆಯಲು ನಾಲ್ಕು ವರ್ಷ ಕಾಯಲೇಬೇಕು!

ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ಕೈನೆಟಿಕ್ ಡೈನಾಮಿಕ್ ಸಸ್ಪೆಂಕ್ಷನ್ ಸಿಸ್ಟಮ್ (ಇ-ಕೆಡಿಎಸ್ಎಸ್) ಅನ್ನು ಒಳಗೊಂಡಿದೆ. ಮಲ್ಟಿ-ಟೆರೈನ್ ಮಾನಿಟರ್ ಅನ್ನು ಒಳಗೊಂಡಿರುವ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ, ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಉತ್ತಮ ಆಫ್-ರೋಡ್ ಎಸ್‍ಯುವಿಯಾಗಿದೆ. ಎಲ್ಲಾ ಕಡೆಗಳಲ್ಲಿಯು ಧೈರ್ಯವಾಗಿ ಈ ಕರೆದೊಯ್ಯಬಹುದು. ಈ ಎಸ್‍ಯುವಿ ಭಾರತೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ.

Most Read Articles

Kannada
Read more on ಟೊಯೊಟಾ toyota
English summary
New gen toyota laund cruiser suv gets a massive waiting period details
Story first published: Tuesday, September 14, 2021, 20:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X