ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಹ್ಯುಂಡೈ ಮೋಟಾರ್ ಗ್ರೂಪ್‌ನ ಸ್ವತಂತ್ರ ಐಷಾರಾಮಿ ಸಬ್-ಬ್ರ್ಯಾಂಡ್ ಜೆನೆಸಿಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಸೆಡಾನ್ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಭಾರತದಲ್ಲಿ ಇತ್ತೀಚೆಗೆ ಇದರ ಹೊಸ ಜೆನೆಸಿಸ್ ಜಿ80 ಸೆಡಾನ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಈ ಹೊಸ ಜೆನೆಸಿಸ್ ಜಿ80 ಕಾರು ಮೊದಲ ಬಾರಿಗೆ ಮುಂಬೈನಲ್ಲಿ ಸ್ಪಾಟ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ. ಇದು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದರ ಸ್ಪೈ ಚಿತ್ರಗಳನ್ನು ಆಟೋಕಾರ್ ಇಂಡಿಯಾ ಬಹಿರಂಗಪಡಿಸಿದೆ. ಈ ಜೆನೆಸಿಸ್ ಜಿ80 ಕಾರನ್ನು 2020ರ ಮಾರ್ಚ್ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿತ್ತು. ಐಷಾರಾಮಿ ಜೆನೆಸಿಸ್ ಜಿ80 ಸೆಡಾನ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 5 ಸೀರಿಸ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಹೊಸ ಜಿವಿ80 ಸೆಡಾನ್ ಕಾರಿನ ಎಕ್ಸ್ ಟಿರಿಯರ್ ಹಾಗೂ ಇಂಟಿರಿಯರ್ ನಲ್ಲಿ ಅನೇಕ ಸ್ಟೈಲಿಂಗ್ ಕಾಂಪೋನೆಂಟ್ ಗಳನ್ನು ಒಳಗೊಂಡಿದೆ. ಜೆನೆಸಿಸ್ ಕಾರುಗಳು ಒಂದೇ ರೀತಿಯ ಸ್ಪ್ಲಿಟ್ ಲೈಟ್ ಕ್ಲಸ್ಟರ್ ಅನ್ನು ಹೊಂದಿವೆ. ಹೆಡ್‌ಲೈಟ್‌ಗಳಿಗೆ ಎಲ್‌ಇಡಿ ಬಲ್ಬ್‌ಗಳನ್ನು ಜೋಡಿಸಲಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಟೇಲ್‌ಲೈಟ್‌ಗಳನ್ನು ಸಹ ಇದೇ ರೀತಿ ನೀಡಲಾಗುತ್ತದೆ. ಆದರೆ ಇಂಡಿಕೇಟರ್ ಗಳು ಸ್ವಲ್ಪ ದಪ್ಪವಾದ ಸ್ಟ್ರಿಪ್ ಗಳನ್ನು ಹೊಂದಿವೆ. ಫೆಂಡರ್‌ಗಳಲ್ಲಿ ಅಳವಡಿಸಲಾಗಿರುವ ಹಿಂಭಾಗದ ಇಂಡಿಕೇಟರ್ ಗಳನ್ನು ಕಾರಿನ ಹೊರಭಾಗದ ಕಲರ್ ಪ್ಯಾನೆಲ್ ನಿಂದ ಬೇರ್ಪಡಿಸಲಾಗಿದೆ. ಇವುಗಳು ಪ್ಯಾರಾಲೆಲ್ ಆಗಿರುವ ಎಲ್‌ಇಡಿ ಸ್ಟ್ರಿಪ್ ಗಳನ್ನು ಹೊಂದಿವೆ.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಹೊಸ ಜೆನೆಸಿಸ್ ಜಿ80 ಸೆಡಾನ್‌ನಲ್ಲಿರುವ ರೂಫ್ ಅನ್ನು ವಿಶೇಷವಾಗಿ ಹಿಂದಿನ ಡೋರ್ ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೊರಭಾಗದಲ್ಲಿರುವ ಬೆಲ್ಟ್ ಲೈನ್ ಅನ್ನು ಕಾರಿನ ಚಲನೆಗೆ ತಕ್ಕಂತೆ ಪ್ಯಾರಾಲೆಲ್ ಆಗಿ ನೀಡಲಾಗಿದೆ. ವಿಂಡೋ ಫ್ರೇಮ್, ಲೋ ಡೋರ್ ಪ್ಯಾನೆಲ್, ಫೆಂಡರ್ ವೆಂಟ್ ಹಾಗೂ ಹಿಂಭಾಗದ ಬಂಪರ್‌ ಗಳನ್ನು ಹೊಂದಿರುವ ಕಾರು ಆಕರ್ಷಕವಾಗಿ ಕಾಣುತ್ತದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಹೊಸ ಜಿ 80ಯ ಹಿಂಭಾಗದಲ್ಲಿರುವ ಇಂಟಿಗ್ರೇಟೆಡ್ ಸ್ಪಾಯ್ಲರ್ ಗ್ರಾಹಕರನ್ನು ಆಕರ್ಷಿಸುತ್ತದೆ. ಕಾರಿನ ಒಳಭಾಗದಲ್ಲಿ ಈ ಹೊಸ ಸೆಡಾನ್ ಹೆಚ್ಚಿನ ಜಿವಿ 80 ಎಸ್‌ಯುವಿ ಹೊಂದಿದ್ದ ಟೆಕ್ನಾಲಜಿಗಳನ್ನು ಹೊಂದಿದೆ.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಡ್ಯುಯಲ್-ಸ್ಪೋಕ್ ಸ್ಟೀಯರಿಂಗ್ ವೀಲ್ ನ ಹಿಂದೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯಾಶ್‌ಬೋರ್ಡ್‌ನಲ್ಲಿ 14.5-ಇಂಚಿನ ಇನ್ ಫೋಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿರುವ ಗೇರ್ ಸೆಲೆಕ್ಟರ್ ಸರ್ಕ್ಯೂಲರ್ ಶೇಪಿನಲ್ಲಿದೆ. ಜೆನೆಸಿಸ್ ಕ್ಯಾಬಿನ್ ಅನ್ನು ವುಡ್ ಹಾಗೂ ಲೆದರ್ ನಿಂದ ವಿನ್ಯಾಸಗೊಳಿಸಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಜಿ80 ಸೆಡಾನ್ ಕಾರು ಕ್ರೂಸ್ ಕಂಟ್ರೋಲ್, ಆಕ್ಟಿವ್ ಬ್ಲೈಂಡ್-ಸ್ಪಾಟ್ ಮಾನಿಟರಿಂಗ್, ಆಟೋಮ್ಯಾಟಿಕ್ ಬ್ರೇಕ್, ರಿಮೋಟ್ ಪಾರ್ಕಿಂಗ್ ಹಾಗೂ ಜೆನೆಸಿಸ್ ಕಾರ್ಬ್ ಸಿಸ್ತಂಗಳನ್ನು ಹೊಂದಿದೆ. ಚಾಲಕರು ಕಾರಿನ ಇನ್ಫೋಟೇನ್‌ಮೆಂಟ್ ಸ್ಕ್ರೀನ್ ಮೂಲಕ ಈ ಕಾರ್ ಅನ್ನು ಕಂಟ್ರೋಲ್ ಮಾಡಬಹುದು.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಜಿ80 ಸೆಡಾನ್ ನಲ್ಲಿ ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. 2.5-ಲೀಟರಿನ 4-ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ 304 ಬಿಹೆಚ್‌ಪಿ ಪವರ್ ಹಾಗೂ 422 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇನ್ನು 3.5-ಲೀಟರಿನ ಟರ್ಬೋಚಾರ್ಜ್ಡ್ ವಿ6 ಪೆಟ್ರೋಲ್ ಎಂಜಿನ್ 380 ಬಿಹೆಚ್‌ಪಿ ಪವರ್ ಹಾಗೂ 530 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದ ಐಷಾರಾಮಿ ಜೆನೆಸಿಸ್ ಜಿ80 ಕಾರು

ಇದರಲ್ಲಿ 2.2-ಲೀಟರಿನ 4-ಸಿಲಿಂಡರ್ ಡೀಸೆಲ್ ಎಂಜಿನ್ 210 ಬಿಹೆಚ್‌ಪಿ ಪವರ್ ಹಾಗೂ 441 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಜೆನೆಸಿಸ್ ಜಿ80 ಕಾರು ಭಾರತದಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಡೆಸಿದೆ. ಅದರೆ ಇದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.

Most Read Articles

Kannada
English summary
Genesis G80 Sedan Spied. Read In Kannada.
Story first published: Tuesday, February 16, 2021, 12:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X