ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಜನರಲ್ ಮೋಟಾರ್ಸ್ ಸಂಸ್ಥೆಯು ಕೊನೆಗೂ ತನ್ನ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಐಕಾನಿಕ್ ಹಮ್ಮರ್ ಎಸ್‍ಯುವಿಯು ಎಲೆಕ್ಟ್ರಿಕ್ ರೂಪದಲ್ಲಿ ಬರುವುದರಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಜಿಎಂಸಿ ಕಂಪನಿಯು ಈ ಹೊಸ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಮುಂದಿನ ತಿಂಗಳ 3 ರಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಅದರಲ್ಲಿಯು ಅಮೆರಿಕಾ ಮಾರುಕಟ್ಟೆಯಲ್ಲಿ ಎಸ್‍ಯುವಿಗಳು ಮತ್ತು ಪಿಕಪ್ ಟ್ರಕ್ ಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುವ ಸಮಯದಲ್ಲಿ ಜಿಎಂಸಿ ತನ್ನ ಐಕಾನಿಕ್ ಹಮ್ಮರ್ ಅನ್ನು ಎಸ್‍ಯುವಿ ಮತ್ತು ಪಿಕಪ್ ಟ್ರಕ್ ಮಾದರಿಯಲ್ಲಿ ಎಲೆಕ್ಟ್ರಿಕ್ ಆವೃತ್ತಿಯಾಗಿ ಬಿಡುಗಡೆಯಾಗಲಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಐಕಾನಿಕ್ ಹಮ್ಮರ್ ಎಂಬ ಹೆಸರಿನಲ್ಲಿ ಹೊಸ ಇವಿ ಪಿಕಪ್ ಟ್ರಕ್ ಅನ್ನು ಪರಿಚಯಿಸಿರುವುದರಿಂದ ಆಫ್-ರೋಡ್ ಪ್ರಿಯರಿಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಇನ್ನು ಪಿಕಪ್ ಟ್ರಕ್ ಜೊತೆಯಲ್ಲಿ ಎಸ್‍ಯುವಿಗಳ ರೂಪದಲ್ಲಿಯು ಹಮ್ಮರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಎಲೆಕ್ಟ್ರಿಕ್ ಎಸ್‌ಯುವಿ ತನ್ನ ಫ್ರಂಟ್ ಎಂಡ್ ಮತ್ತು ಫೆಂಡರ್‌ಗಳನ್ನು ಪಿಕಪ್ ಟ್ರಕ್ ಮಾದರಿಯೊಂದಿಗೆ ಹಂಚಿಕೊಳ್ಳುತ್ತದೆ. ಇನ್ನು ಇತ್ತೀಚೆಗೆ ಅನಾವರಣಗೊಳಿಸಿದ ಹಮ್ಮರ್ ಇವಿ ಪಿಕಪ್ ಟ್ರಕ್ ಜಿಎಂಸಿ ನಿರ್ಮಿಸಿರುವ ಮೊದಲ ಎಲೆಕ್ಟ್ರಿಕ್ ಸೂಪರ್ ಟ್ರಕ್" ಆಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹೊಸ ಜಿಎಂಸಿ ಹಮ್ಮರ್ ಇವಿ 1,000 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಹಮ್ಮರ್ ನಲ್ಲಿ 24-ಮಾಡ್ಯೂಲ್, ಡಬಲ್-ಸ್ಟ್ಯಾಕ್ಡ್ ಅಲ್ಟಿಯಮ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇನ್ನು ಹಮ್ಮರ್ ಇವಿ 350 ಕಿ.ಮೀ ಗಿಂತಲೂ ಅಧಿಕ ಮೈಲೇಜ್ ನೀಡುತ್ತದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಅಂದರೆ ಸರಿಸುಮಾರು 560 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಮ್ಮರ್ ಇವಿ 800 ವೋಲ್ಟ್ ವೇಗದ ಚಾರ್ಜಿಂಗ್ ವ್ಯವಸ್ಥಯನ್ನು ಹೊಂದಿದೆ. ಈ ವಾಹನವನ್ನು ಕೇವಲ 10 ನಿಮಿಷ ಚಾರ್ಜ್ ಮಾಡಿದರೆ 100 ಕಿ.ಮೀ ನಷ್ಟು ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ. ಕೇವಲ 3 ಸೆಕೆಂಡುಗಳಲ್ಲಿ ಈ ಹಮ್ಮರ್ ಇವಿ 0-60 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ವಾಹನದಲ್ಲಿ 35 ಇಂಚಿನ ಟಯರ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ 4ಡಬ್ಲ್ಯುಡಿಯನ್ನು ಅಳವಡಿಸಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿಯಲ್ಲಿ ವಿಶಿಷ್ಟವಾದ ಡ್ರೈವಿಂಗ್ ಮೋಡ್ ಅನ್ನು ಸಹ ಹೊಂದಿದೆ. ಇದನ್ನು 'ಕ್ರಾಬ್ ಮೋಡ್' ಎಂದು ಕರೆಯಲಾಗುತ್ತದೆ. ಇದು ಆಫ್-ರೋಡ್ ನಲ್ಲಿ ಹೆಚ್ಚು ಉಪಯೋಗವಾಗುವ ಪೀಚರ್ ಆಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿಯಲ್ಲಿ 13.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ 12.3-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಇದರಲ್ಲಿ ಕ್ಲೈಮೆಂಟ್ ಕಂಟ್ರೋಲ್ ಫೀಚರ್ ಅನ್ನು ಹೊಂದಿದೆ. ಈ ವಾಹನವು ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ (ಇದು 6 ಇಂಚುಗಳಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೆಚ್ಚಿಸಬಹುದು), ಇನ್ನು ಆಫ್-ರೋಡಿಂಗ್‌ಗಾಗಿ ಅಂಡರ್‌ಬಾಡಿ ಅರ್ಮರ್ ಮತ್ತು ಕಾರಿನ ಸುತ್ತಲಿನ ದೃಶ್ಯವನ್ನು ಒದಗಿಸಲು 18 ಕ್ಯಾಮೆರಾಗಳನ್ನು ಸಹ ನೀಡುತ್ತದೆ.

ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಬಹುನಿರೀಕ್ಷಿತ ಜಿಎಂಸಿ ಹಮ್ಮರ್ ಎಲೆಕ್ಟ್ರಿಕ್ ಎಸ್‍ಯುವಿ

ಹಮ್ಮರ್ ಇವಿ ರೂಫ್ ಪ್ಯಾನೆಲ್ ಗಳನ್ನು ಸಹ ಪಡೆಯುತ್ತದೆ, ಅದು ಮುಂಭಾಗದ ಬೂಟ್‌ನೊಳಗೆ ಹೊಂದಿಕೊಳ್ಳುತ್ತದೆ. ಹೊಸ ಹಮ್ಮರ್ ಇವಿಯಲ್ಲಿ ಆಲ್-ಎಲ್ಇಡಿ ಲೈಟಿಂಗ್ ಅನ್ನು ಅಳವಡಿಸಿದೆ. ಇನ್ನು ಹಮ್ಮರ್ ಪಿಕಪ್ ಇವಿಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಟೆಸ್ಲಾ ಸೈಬರ್ಟ್ರಕ್ ಮಾದರಿಗೆ ಪೈಪೋಟಿ ನೀಡುತದೆ.

More from DriveSpark

Article Published On: Tuesday, March 9, 2021, 20:16 [IST]
English summary
Gmc Hummer uvUV EV set for debut on April 3. Read In Kannada.
Read more on ಹಮ್ಮರ್ hummer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+