ಫಾರ್ಚೂನರ್ ಎಸ್‍ಯುವಿಗೆ ಪೈಪೋಟಿಯಾಗಿ ಬರುತ್ತಿದೆ ಜೀಪ್ ಗ್ರ್ಯಾಂಡ್ ಕಮಾಂಡರ್
ಅಮೆರಿಕ ಮೂಲದ ಜೀಪ್ ಕಂಪನಿಯು ಕಂಪಾಸ್ ಮಾದರಿಯನ್ನು ಆಧರಿಸಿ 7-ಸೀಟರ್ ಪ್ರೀಮಿಯಂ ಪೂರ್ಣ ಗಾತ್ರದ ಎಸ್‍ಯುವಿಯನ್ನು ಸಿದ್ಧಪಡಿಸುತ್ತಿದೆ. ಈ ಹೊಸ ಜೀಪ್ ಡ್ ಕಮಾಂಡರ್ 7-ಸೀಟರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಈ ಹೊಸ ಎಸ್‍ಯುವಿಗೆ ಕಮಾಂಡರ್ ಎಂಬ ಹೆಸರನ್ನು ಅಧಿಕೃತವಾಗಿ ನೀಡಿರುವುದಾಗಿ ಕಂಪನಿಯು ಟೀಸರ್ ಮೂಲಕ ಬಹಿರಂಗಪಡಿಸಿದ್ದಾರೆ.ಆದರೆ ಬ್ರೆಜಿಲ್ ಮಾರುಕಟ್ಟೆಗಾಗಿ ತನ್ನ ಹೊಸ ಕಮಾಂಡರ್ 7 ಸೀಟರ್ ಎಸ್‍ಯುವಿಯ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಕಮಾಂಡರ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಎಸ್‍ಯುವಿಯು ಭಾರತದಲ್ಲಿ ಇತ್ತೀಚೆಗೆ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಇದರ ಸ್ಪೈ ಚಿತ್ರಗಳನ್ನು ರಶ್ಲೇನ್ ಬಹಿರಂಗಪಡಿಸಿದೆ.

ಈ ಹೊಸ ಎಸ್‍ಯುವಿಯು ಎಫ್‌ಸಿಎಯ ಸ್ಮಾಲ್ ವೈಡ್ 4×4 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಇದು ರೆನೆಗೇಡ್ ಮತ್ತು ಕಂಪಾಸ್‌ಗೆ ಸಹ ಆಧಾರವಾಗಿದೆ. ಉದ್ದವಾದ ದೇಹ ಮತ್ತು ಹೆಚ್ಚಿನ ವ್ಹೀಲ್‌ಬೇಸ್‌ಗೆ ಅನುಕೂಲವಾಗುವಂತೆ ಈ ಪ್ಲಾಟ್‌ಫಾರ್ಮ್ ಅನ್ನು ಮಾರ್ಪಡಿಸಲಾಗುತ್ತದೆ.
MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮೂರು-ಸಾಲಿನ ಎಸ್‌ಯುವಿ ಜೀಪ್‌ನ ಡಿಎನ್‌ಎಯನ್ನು ಒಳಗೊಂಡಂತೆ ತುಸು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಹೊಸ ಮೂರು ಸಾಲಿನ ಎಸ್‍ಯುವಿಯಯನ್ನು ಮಿಡ್ ಎಸ್‍ಯುವಿಯ ಕಂಪಾಸ್ ಮಾದರಿಗೆ ಹೋಲಿಸಿದರೆ ವಿಭಿನ್ನ ಮಾನಿಕರ್ ಪಡೆದಿದೆ. ಇನ್ನು ಹೊಸ 7-ಸೀಟರ್ ಜೀಪ್ ಎಸ್‍ಯುವಿಯು ಆಫ್-ರೋಡಿಂಗ್ ಸಾಮರ್ಥ್ಯದ ಜೊತೆಗೆ ದುಬಾರಿ ಇಂಟಿರಿಯರ್ ಹೊಂದಿರುತ್ತದೆ.

ಹೊಸ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯ ಮುಂಭಾಗವನ್ನು ಕಂಪಾಸ್‌ಗೆ ಹೋಲಿಸಿದರೆ ವಿಭಿನ್ನ ಸ್ಟೈಲಿಂಗ್ ಅಂಶಗಳೊಂದಿಗೆ ಇದು ಹೆಚ್ಚು ಮಸ್ಕ್ಲರ್ ಲುಕ್ ಅನ್ನು ಹೊಂದಿರಬಹುದು. ಇದರಲ್ಲಿ ಲಂಬವಾದ ಗ್ರಿಲ್ ಸ್ಲ್ಯಾಟ್‌ಗಳು, ತೀಕ್ಷ್ಣವಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚು ಅಗ್ರೇಸಿವ್ ಬಂಪರ್ ಪೈಪ್‌ಲೈನ್‌ನಲ್ಲಿರಬಹುದು.
MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಕಂಪಾಸ್ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹಂಚಿಕೊಳ್ಳಲಿದೆ. ಹೊಸ ಎಸ್‍ಯುವಿಯಲ್ಲಿ ಎಸಿ ವೆಂಟ್ಸ್, ಸ್ಪೀಕರ್‌ಗಳು, ಡೋರ್ ಹ್ಯಾಂಡಲ್ಸ್ ಫ್ರೇಮ್ ಮತ್ತು ಇತರ ಭಾಗಗಳ ಸುತ್ತಲೂ ಕ್ರೋಮ್ ಔಟ್ ಲೈನ್ ಅನ್ನು ಒಳಗೊಂಡಿರುತ್ತದೆ.

ಇದರೊಂದಿಗೆ ಪನೋರಮಿಕ್ ಸನ್‌ರೂಫ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಕ್ರೂಸ್ ಕಂಟ್ರೋಲ್, ಫುಲ್ ಎಲ್ಇಡಿ ಆಟೋ ಹೆಡ್‌ಲ್ಯಾಂಪ್‌ಗಳು, ಅಪ್‌ಡೇಟೆಡ್ ಯುಕನೆಕ್ಟ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಕಾರ್ ಕನೆಕ್ಟಿವಿಟಿ ತಂತ್ರಜ್ಞಾನ ಮತ್ತು ಇತರ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರಲಿದೆ.
MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಹೊಸ ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯಲ್ಲಿ 2.0-ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಅನ್ನು ಹೊಂದಿರಬಹುದು. ಈ ಎಂಜಿನ್ 173 ಬಿಹೆಚ್‌ಪಿ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಫಿಯೆಟ್ ಮೂಲದ 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಅಳವಡಿಸಬಹುದು. ಇದು 200 ಬಿಹೆಚ್‌ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೋಡಿಸಲಾಗುವುದು. ಇದರೊಂದಿಗೆ ಎಡಬ್ಲ್ಯೂ ಸಿಸ್ಟಂ ಅನ್ನು ಒಳಗೊಂಡಿರುತ್ತದೆ ಇದು ಎರಡೂ ಆಕ್ಸಲ್‌ಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

ಜೀಪ್ ಗ್ರ್ಯಾಂಡ್ ಕಮಾಂಡರ್ ಎಸ್‍ಯುವಿಯಯು ಭಾರತೀಯ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯು ಭಾರತದಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಫೋಕ್ಸ್‌ವ್ಯಾಗನ್ ಟಿಗ್ವಾನ್ ಆಲ್‌ಸ್ಪೇಸ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ4 ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.


Click it and Unblock the Notifications








