ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಅಮೆರಿಕ ಮೂಲದ ಜೀಪ್ ಕಂಪನಿಯು ಮೇಡ್ ಇನ್ ಇಂಡಿಯಾ 2021ರ ರ‍್ಯಾಂಗ್ಲರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಜೀಪ್ ರ‍್ಯಾಂಗ್ಲರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ.

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಭಾರತೀಯ ಮಾರುಕಟ್ಟೆಗಾಗಿ ಗೋ-ಲೋಕಲ್ ಕಾರ್ಯತಂತ್ರದಲ್ಲಿ ಎರಡನೇ ಹೆಜ್ಜೆ ಇಟ್ಟ ಸ್ಟೆಲ್ಲಾಂಟಿಸ್ ಇಂಡಿಯಾ ಮಹಾರಾಷ್ಟ್ರದ ರಂಜಂಗಾಂವ್ ಉತ್ಪಾದನಾ ಕೇಂದ್ರದಲ್ಲಿ 2021 ಜೀಪ್ ರಾಂಗ್ಲರ್ ಆಫ್-ರೋಡರ್ ಎಸ್‍ಯುವಿಯನ್ನು ಸ್ಥಳೀಯವಾಗಿ ಜೋಡಣೆ ಮಾಡುವುದಕ್ಕೆ ಪ್ರಾರಂಭಿಸಿದೆ. ಇನ್ನು ಹೊಸ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಿರುವುದರಿಂದ ಇದರ ಬೆಲೆಯಲ್ಲಿ ಇಳಿಮುಖವಾಗುವ ಸಾಧ್ಯತೆಗಳಿದೆ.

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಜೀಪ್ ತನ್ನ ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‍ಯುವಿಯನ್ನು ಈ ಹಿಂದೆ ಇದೇ ತಿಂಗಳ 15 ರಂದು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ಬಿಡುಗಡೆಯ ದಿನಾಂಕವನ್ನು ಇದೇ ತಿಂಗಳ 17ಕೆ ಮುಂದೂಡಿಕೆ ಮಾಡಿದ್ದಾರೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಹಿಂದಿನ ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯನ್ನು ಎಕ್ಸ್ ಶೋರೂಂ ಪ್ರಕಾರ ರೂ.63.94 ಲಕ್ಷಗಳಿಗೆ ಬಿಡುಗಡೆಗೊಳಿಸಲಾಗಿತ್ತು. ಇದರ ಮೊದಲ ಬ್ಯಾಚ್ ಕಳೆದ ವರ್ಷವೇ ಮಾರಾಟವಾಯಿತು. ಇತ್ತೀಚೆಗೆ ಹೊಸ ಜೀಪ್ ರ‍್ಯಾಂಗ್ಲರ್ ಇಂಟಿರಿಯರ್ ಸ್ಪೈ ಚಿತ್ರಗಳು ಬಹಿರಂಗವಾಗಿದೆ.

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಇದರಿಂದಾಗಿ ಹೊಸ ರ‍್ಯಾಂಗ್ಲರ್ ಎಸ್‍ಯುವಿಯ ಇಂಟಿರಿಯರ್ ಮಾಹಿತಿಯು ಬಹಿರಂಗವಾಗಿದೆ. ಇದರ ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ನ್ಯಾವಿಗೇಷನ್ ಒಳಗೊಂಡಿರುವ ಹೊಸದಾಗಿ ವಿನ್ಯಾಸಗೊಳಿಸಲಾದ ಡ್ಯಾಶ್‌ಬೋರ್ಡ್ ಮತ್ತು ಯುಕನೆಕ್ಟ್ 4 ಸಿ ಎನ್‌ಎವಿ 8.4-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದೆ.

MOST READ: 2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬೆಳವಣಿಗೆ ಸಾಧಿಸಿದ ಮಹೀಂದ್ರಾ ಎಕ್ಸ್‌ಯುವಿ300

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಇನ್ನು ಇದರೊಂದಿಗೆ ವೈಟ್ ಸ್ಟಿಚಿಂಗ್, ಡ್ಯುಯಲ್-ಜೋನ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪುಶ್-ಬಟನ್ ಸ್ಟಾರ್ಟ್, ಕೀಲೆಸ್ ಎಂಟ್ರಿ, ಮತ್ತು ಇನ್ನು ಅನೇಕ ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಹೊಸ ಜೀಪ್ ರ‍್ಯಾಂಗ್ಲರ್ ಎಸ್‍ಯುವಿ ಫ್ಹೋರ್ ವ್ಹೀಲ್ ಡ್ರೈವ್ ಹೈ ಮತ್ತು ಲೋ ಮೋಡ್ ಗಳನ್ನು ಹೊಂದಿವೆ. ಈ ಹೊಸ ಫ್ಹೋರ್ ವ್ಹೀಲ್ ಡ್ರೈವ್ ಆಟೋ ಮೋಡ್ ಜೊತೆಗೆ ಟ್ರ್ಯಾಕ್ಷನ್ ಸ್ಲಿಪ್ ಸೆನ್ಸರ್ ಗಳನ್ನು ಒಳಗೊಂಡಿವೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಇನ್ನು ಈ ಆಫ್-ರೋಡ್ ಸಾಮರ್ಥ್ಯದ ಎಸ್‍ಯುವಿಯಲ್ಲಿ 2.0-ಲೀಟರ್ ಹೈ ಪವರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 268 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮೇಡ್ ಇನ್ ಇಂಡಿಯಾ ರ‍್ಯಾಂಗ್ಲರ್ ಎಸ್‌ಯುವಿ ಬಿಡುಗಡೆ ಮುಂದೂಡಿದ ಜೀಪ್

ಈ 2.0-ಲೀಟರ್ ಎಂಜಿನ್ ಅನ್ನು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. 2021ರ ಜೀಪ್ ರ‍್ಯಾಂಗ್ಲರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗಲಿರುವ ಬಹುನಿರೀಕ್ಷಿತ ಎಸ್‍ಯುವಿಗಳಲ್ಲಿ ಒಂದಾಗಿದೆ. ಆಫ್-ರೋಡ್ ವಾಹನ ಪ್ರೇಮಿಗಳು ಬಹಳ ಕಾತುರದಿಂದ ಕಾಯುತ್ತಿರುವ ಎಸ್‍ಯುವಿ ಇದಾಗಿದೆ.

Most Read Articles

Kannada
Read more on ಜೀಪ್ jeep
English summary
Made-in-India Jeep Wrangler Launch Postponed. Read In Kannada.
Story first published: Monday, March 15, 2021, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X