ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಭಾರತದಲ್ಲಿ ಹಲವು ಜನಪ್ರಿಯ ಕಾರು ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಹೊಸ ಇಕೆಯುವಿ100 ಎಂಬ ಎಲೆಕ್ಟ್ರಿಕ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಬಹುದು. ಇನ್ನು ಇಕೆಯುವಿ100 ಮಾದರಿಯು ಬ್ರ್ಯಾಂಡ್‌ನ ಇ-ಮೊಬೈಲಿಟಿ NEMO ಮಾರ್ಕೆಟಿಂಗ್ ನಿರ್ವಹಣಾ ಫ್ಲಾಟ್ ಫಾರ್ಮ,ನ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಮಹೀಂದ್ರಾ ಇಕೆಯುವಿ100 ಮಾದರಿಯು 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿತು. ಈ ಮಹೀಂದ್ರಾ ಇಕೆಯುವಿ100 ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,8.75 ಲಕ್ಷವಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ. ಕರೋನಾ ಆರ್ಭಟದ ಆಂತಕದಿಂದ ಎಲೆಕ್ಟ್ರಿಕ್ ಮೈಕ್ರೋ-ಎಸ್‌ಯುವಿಯ ಬಿಡುಗಡೆಯು ವಿಳಂಬವಾಗಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

2021ರ ಮೇ ತಿಂಗಳಿನಲ್ಲಿ ಭಾರತದಲ್ಲಿ ಮುಂದಿನ 6 ವರ್ಷಗಳಲ್ಲಿ ಒಟ್ಟು 9 ಎಸ್‍ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತು. ಮುಂದಿನ ವರ್ಷದ ಆರಂಭದಲ್ಲಿ ಇಕೆಯುವಿ100 ಬಿಡುಗಡೆಯಾಗಾಬಹುದು. ಆಟೋ ಎಕ್ಸ್‌ಪೋ ಸಮಯದಲ್ಲಿ ಘೋಷಿಸಲಾದ ಬೆಲೆ ಟ್ಯಾಗ್ ಮುಂದಿನ ವರ್ಷ ಬಿಡುಗಡೆಯಾದ ಸಮಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಆದರೂ ಬಿಡುಗಡೆಯಾದ ಬಳಿಕ ಇಕೆಯುವಿ100 ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಗ್ಗದ ಎಲೆಕ್ಟ್ರಿಕ್ ಮಾದರಿಗಳಲ್ಲಿ ಒಂದಾಗಿರುತ್ತದೆ, ಪ್ರಸ್ತುತ ಟಾಟಾ ನೆಕ್ಸಾನ್ ಎಲೆಕ್ರಿಕ್ ಕಾರಿಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಇಕೆಯುವಿ100 ಮಾದರಿಗಾಗಿ ಫ್ಲೀಟ್ ಆಪರೇಟರ್‌ಗಳ ಮೇಲೆ ಮಾರಾಟವನ್ನು ಕೇಂದ್ರೀಕರಿಸುವುದಾಗಿ ಕಂಪನಿಯು ಘೋಷಿಸಿತು. ಇನ್ನು ಖಾಸಗಿ ಖರೀದಿದಾರರಿಗೆ ಎಸ್‍ಯುವಿಯನ್ನು ಮಾರಾಟ ಮಾಡಲಾಗುತ್ತದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಈ ಮಹೀಂದ್ರಾ ಇಕೆಯುವಿ100 ಮೈಕ್ರೋ-ಎಸ್‌ಯುವಿಯಲ್ಲಿ 15.9 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ನೊಂದಿಗೆ 40 ಕಿ,ವ್ಯಾಟ್ ಮೋಟಾರ್‌ ಅನ್ನು ಅಳವಡಿಸಲಾಗಿದೆ. ಎಕ್ಲೆಕ್ಟಿಕ್ ಪವರ್ ಟ್ರೈನ್ 53 ಬಿಹೆಚ್‍ಪಿ ಪವರ್ ಮತ್ತು 120 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಇಕೆಯುವಿ100 ಮಾದರಿಯು ಒಂದು ಬಾರಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದರೆ ಗರಿಷ್ಠ 125 ಕಿಲೋಮೀಟರ್ ಚಲಿಸಬಹುದು. ಮಹೀಂದ್ರಾ ಇಕೆಯುವಿ 100 ಅನ್ನು ಸ್ಟ್ಯಾಂಡರ್ಡ್ ಮತ್ತು ಫಾಸ್ಟ್ ಚಾರ್ಜಿಂಗ್ ಆಯ್ಕೆಗಳೊಂದಿಗೆ ನೀಡಲಿದೆ. ಇಕೆಯುವಿ ಸಮಯವನ್ನು ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಆದರೆ ಡಿಸಿ ಫಾಸ್ಟ್ ಚಾರ್ಜರ್ ಬಳಸುವುದರಿಂದ ಈ ಮೈಕ್ರೊ ಎಸ್‍ಯುವಿಯು ಒಂದು ಗಂಟೆಯೊಳಗೆ ಶೇ.80 ರಷ್ಟು ಚಾರ್ಜ್ ಆಗಬಹುದು. ಇನ್ನು ಬಹಿರಂಗವಾದ ಚಿತ್ರದಲ್ಲಿ, 110 ಕಿಲೋಮೀಟರ್‌ ರೇಂಜ್ ಅನ್ನು ಪ್ರದರ್ಶಿಸಿದ್ದು, 85% ಬ್ಯಾಟರಿ ಚಾರ್ಜ್ ಉಳಿದಿದೆ. ಇದರಿಂದ ಇಕೆಯುವಿ100 100% ಬ್ಯಾಟರಿ ಚಾರ್ಜ್‌ನಲ್ಲಿ ಸುಮಾರು 125 ಕಿಮೀ ರೇಂಜ್ ಅನ್ನು ಹೊಂದಿರುತ್ತದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಚಿತ್ರಗಳಿಂದ ಸೋರಿಕೆಯಾದ ಇಕೆಯುವಿ100 ಮಾದರಿಯು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಪೂರ್ವ-ನಿರ್ಮಾಣ ಮಾದರಿಯನ್ನು ಹೋಲುತ್ತದೆ. ಈ ಎಲೆಕ್ಟಿಕ್ ಕಾರಿನ ಮುಂಭಾಗದಲ್ಲಿಕ್ಲೋಸ್ಡ್ ಗ್ರಿಲ್ ಮತ್ತು ಕೆಳಭಾಗದಲ್ಲಿ ಗ್ರಿಲ್ ಅನ್ನು ಹೊಂದಿದೆ, ಇನ್ನು ನವೀಕರಿಸಿದ ಹೆಡ್‌ಲ್ಯಾಂಪ್‌ಗಳು, ಟೈಲ್‌ಲೈಟ್‌ಗಳು ಮತ್ತು ಅಲಾಯ್ ವ್ಹೀಲ್ ಹೊಸ ವಿನ್ಯಾಸವನ್ನು ಒಳಗೊಂಡಿವೆ. ಬಾನೆಟ್ ಅಡಿಯಲ್ಲಿ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಸೂಚಿಸಲು ಎಸ್ಯುವಿ ಹಲವಾರು ನೀಲಿ ಅಸ್ಸೆಂಟ್ ಗಳನ್ನು ಹೊಂದಿವೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಈ ಇಕೆಯುವಿ100 ಒಟ್ಟಾರೆ ಸಿಲೂಯೆಟ್ ಅದರ ಪೆಟ್ರೋಲ್-ಚಾಲಿತ ಪ್ರತಿರೂಪವನ್ನು ಹೋಲುತ್ತದೆ. ಸೋರಿಕೆಯಾದ ಚಿತ್ರಗಳ ಮಾದರಿಯು ಕಡು ನೀಲಿ ಬಣ್ಣವನ್ನು ಹೊಂದಿದೆ. ಇನ್ನು ಆಕರ್ಷಕ ಲುಕ್‌ಗಾಗಿ ಆಲ್-ರೌಂಡ್ ಬಾಡಿ ಕ್ಲಾಡಿಂಗ್ ಅನ್ನು ಹೊಂದಿದೆ. ಇದು ಫ್ಲ್ಯಾಪ್‌ಗಳಿಂದ ಮುಚ್ಚಿದ ಮುಂಭಾಗದ ಫೆಂಡರ್‌ನ ಎರಡೂ ಬದಿಗಳಲ್ಲಿ ಚಾರ್ಜಿಂಗ್ ಸ್ಲಾಟ್ ಅನ್ನು ಸಹ ಒಳಗೊಂಡಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಇನ್ನು ಈ ಎಸ್‍ಯುವಿಯ ಒಳಭಾಗದಲ್ಲಿ ಗ್ಯಾಸೋಲಿನ್ ಚಾಲಿತ ಮಾದರಿಗಳಲ್ಲಿ ಕಾಣುವ ಇದೇ ರೀತಿಯ ಕ್ಯಾಬಿನ್ ವಿನ್ಯಾಸವನ್ನು ಹೊಂದಿದೆ. ಇದು ಒಂದೇ ಡ್ಯಾಶ್‌ಬೋರ್ಡ್-ಮೌಂಟೆಡ್ ಗೇರ್ ಸೆಲೆಕ್ಟರ್, ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಕ್ಲೈಮೇಟ್ ಕಂಟ್ರೋಲ್‌ಗಳನ್ನು ಒಳಗೊಂಡಿದೆ.

ಅಧಿಕ ರೇಂಜ್, ಕೈಗೆಟುಕುವ ದರದಲ್ಲಿ ಬಿಡುಗಡೆಯಾಗಲಿದೆ ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರು

ಇದರೊಂದಿಗೆ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟ್ ಆಗಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿರುತ್ತದೆ. ಈ ಎಲೆಕ್ಟ್ರಿಕ್ ವಾಹನ ಬಳಕೆಗೆ ಸಂಬಂಧಿಸಿದ ಹೆಚ್ಚು ಸೂಕ್ತವಾದ ಡೇಟಾವನ್ನು ಒದಗಿಸಲು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಸಹ ನವೀಕರಿಸಲಾಗುತ್ತದೆ. ಇದು ರೇಂಜ್, ಬ್ಯಾಟರಿ ತಾಪಮಾನ, ಸ್ಪೀಡ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಇನ್ನು ಈ ಬಹುನಿರೀಕ್ಷಿತ ಇಕೆಯುವಿ100 ಕಾರು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Most Read Articles

Kannada
English summary
New mahindra ekuv100 leaked ahead of india launch range details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X