ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಮಹೀಂದ್ರಾ ಕಂಪನಿಯ ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಎಕ್ಸ್‌ಯುವಿ500 ಎಸ್‌ಯುವಿ ಕಾರು ಮಾದರಿಯನ್ನು ಹಲವಾರು ಹೊಸ ಬದಲಾವಣೆಗಳೊಂದಿಗೆ ಪರಿಚಯಿಸುತ್ತಿದ್ದು, ಹೊಸ ಕಾರನ್ನು ಸದ್ಯಕ್ಕೆ ಹೈ ಸ್ಪೀಡ್ ಫರ್ಪಾಮೆನ್ಸ್ ಪರೀಕ್ಷೆ ನಡೆಸಲಾಗುತ್ತಿದೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ನಡೆಸುತ್ತಿರುವ ಮಹೀಂದ್ರಾ ಮುಂಬರುವ ಕೆಲವೇ ದಿನಗಳಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಎಕ್ಸ್‌ಯುವಿ500 ಕಾರು ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಗಳಲ್ಲೇ ಹಲವು ಹೊಸ ಐಷಾರಾಮಿ ಫೀಚರ್ಸ್‌ಗಳನ್ನು ಪಡೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ನ್ಯೂ ಜನರೇಷನ್ ಮಾದರಿಯು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದ್ದು, ಸದ್ಯಕ್ಕೆ ಬಿಎಸ್-6 ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಹೊಸ ತಲೆಮಾರಿನ ಎಕ್ಸ್‌ಯುವಿ500 ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯನ್ನು ಸಹ ನೀಡಲಾಗಿದ್ದು, ಹೊಸ ಕಾರನ್ನು ಮಹೀಂದ್ರಾ ಕಂಪನಿಯ ಹೊಸ ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ನ್ಯೂ ಜನರೇಷನ್ ಮಾದರಿಯಲ್ಲಿ ನವೀಕರಿಸಲಾದ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿ ನವೀಕರಿಸಲಾದ ಬಂಪರ್ ಪ್ರಮುಖ ಆಕರ್ಷಣೆಯಾಗಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ. ಹಾಗೆಯೇ ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಭಾರೀ ಬದಲಾವಣೆಯನ್ನು ಪಡೆದುಕೊಂಡಿದ್ದು, ನವೀಕೃತ ಮುಂಭಾಗದ ಗ್ರಿಲ್, ಬ್ಯಾನೆಟ್, ಬಂಪರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಹಿಂಭಾಗದ ಬಂಪರ್, ಟೈಲ್‌ಗೆಟ್ ವಿನ್ಯಾಸವು ಆಕರ್ಷಕವಾಗಿರಲಿವೆ.

ಹೊಸ ಕಾರಿನ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಸಾಕಷ್ಟು ಬದಲಾವಣೆಗೊಳಿಸಲಾಗಿದ್ದು, ವೆಂಟೆಲೆಟೆಡ್ ಆಸನ, ರಿಯಲ್ ಸೀಟ್ ಎಸಿ ವೆಂಟ್ಸ್, ಪನೊರಮಿಕ್ ಸನ್‌ರೂಫ್, ಮೂರನೇ ಸಾಲಿನಲ್ಲಿ 50:50 ಅನುಪಾತದ ಆಸನಗಳು ಸೇರಿದಂತೆ ಹಲವು ಐಷಾರಾಮಿ ಫೀಚರ್ಸ್ ಹೊಸ ಕಾರಿನಲ್ಲಿರಲಿವೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

50:50 ಅನುಪಾತದ ಆಸನಗಳ ಸೌಲಭ್ಯದಿಂದಾಗಿ ಬೂಟ್ ಸ್ಪೆಸ್ ಸೌಲಭ್ಯವನ್ನು ಅಗತ್ಯ ಸಂದರ್ಭಗಳಲ್ಲಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದ್ದು, ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 6 ಮತ್ತು 7 ಸೀಟುಗಳ ಆಯ್ಕೆ ಪಡೆದುಕೊಳ್ಳಬಹುದು.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಇದರೊಂದಿಗೆ ಹೊಸ ಕಾರಿನಲ್ಲಿ ರಡಾರ್ ಸೌಲಭ್ಯವನ್ನು ಅಳವಡಿಸಲಾಗಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ರಸ್ತೆ ಗುಂಡಿಗಳ ಬಗೆಗೆ ಚಾಲಕನಿಗೆ ಎಚ್ಚರಿಸಲಿದೆ. ಈ ಮೂಲಕ ರಸ್ತೆ ಮೇಲೆ ನಿಗಾ ಇಡಲಿರುವ ಹೊಸ ತಂತ್ರಜ್ಞಾನ ಸೌಲಭ್ಯವು ವಾಯ್ಸ್ ಮೂಲಕ ಚಾಲಕನಿಗೆ ಎಚ್ಚರಿಕೆಯ ಸಂದೇಶ ರವಾನಿಸಲಿದ್ದು, ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸುತ್ತದೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಈ ಮೂಲಕ ಎಂಜಿ ಹೆಕ್ಟರ್ ಪ್ಲಸ್ ಮತ್ತು ಮುಂಬರುವ ಟಾಟಾ ಸಫಾರಿ ಎಸ್‍ಯುವಿ ಕಾರುಗಳಿಗೆ ನೇರ ಪೈಪೋಟಿ ನೀಡಲಿರುವ ಹೊಸ ಕಾರು ಮಾದರಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಗಮನಸೆಳೆಯಲಿವೆ.

ಹೈ ಸ್ಪೀಡ್ ಟೆಸ್ಟಿಂಗ್ ವೇಳೆ ಕಂಡುಬಂದ ಮಹೀಂದ್ರಾ ನ್ಯೂ ಜನರೇಷನ್ ಎಕ್ಸ್‌ಯುವಿ500

ಎಂಜಿನ್ ಮತ್ತು ಪರ್ಫಾಮೆನ್ಸ್

ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಮಾದರಿಯು 2.2 ಡೀಸೆಲ್ ಎಂಜಿನ್ ಜೊತೆ ಹೊಸ ಥಾರ್‌ನಲ್ಲಿ ನೀಡಲಾಗಿರುವ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದ್ದು, ಹೊಸ ಕಾರು ವಿವಿಧ ಎಂಜಿನ್ ಆಯ್ಕೆಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 18.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Most Read Articles

Kannada
English summary
New Mahindra XUV500 Spied Testing In High Speed Expressway Runs. Read in Kannada.
Story first published: Wednesday, February 10, 2021, 21:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X