ಭಾರತದಲ್ಲಿ ಬಿಡುಗಡೆಯಾಗಲಿದೆ ಹೊಸ ಮಸೆರಾಟಿ ಎಂಸಿ20 ಸ್ಪೋರ್ಟ್ಸ್ ಕಾರು
ಇಟಲಿ ಮೂಲದ ಮಸೆರಾಟಿ ಕಂಪನಿ ಕಾರುಗಳು ಹೆಚ್ಚಿನ ಪರ್ಫಾಮೆನ್ಸ್ ಗಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿವೆ. ಈ ಮಸೆರಾಟಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಂಸಿ20 ಸ್ಪೋರ್ಟ್ಸ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಎಂಸಿ20 ಸ್ಪೋರ್ಟ್ಸ್ ಕಾರು 2004ರಲ್ಲಿ ಬಿಡುಗಡೆಯಾದ ಎಂಸಿ 12 ಸೂಪರ್ ಕಾರಿನ ಬದಲಿ ಮಾದರಿಯಾಗಿದೆ. ಮಸೆರಾಟಿ ಎಂಸಿ 12 ಕಾರು ಫೆರಾರಿ ಎಂಜೊ ಕಾರಿನ ಮೇಲೆ ಆಧಾರಿತವಾಗಿದೆ. ಈ ಕಾರನ್ನು ಮಸೆರಾಟಿ ಕಂಪನಿಯು 100%ನಷ್ಟು ತನ್ನ ಸ್ವಂತ ಟೆಕ್ನಾಲಜಿ ಹಾಗೂ ಆರ್ಕಿಟೆಕ್ಚರ್ ಮೂಲಕ ತಯಾರಿಸಿದೆ. ಈ ಹೊಸ ಮಸೆರಾಟಿ ಎಂಸಿ20 ಕಾರನ್ನು ಕನ್ವರ್ಟಿಬಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಿಗೆ ಆಧಾರವಾಗಿರುತ್ತದೆ

ಇದೀಗ ಮಸೆರಾಟಿ ಕಂಪನಿಯು ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಎಂಸಿ20 ಸ್ಪೋರ್ಟ್ಸ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಹೊಸ ಮಸೆರಾಟಿ ಎಂಸಿ20 ಕಾರಿನ ವಿತರಣೆಯನ್ನು ಮುಂದಿನ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭಿಸಲಾಗುತ್ತದೆ.

ಹೊಸ ಮಸೆರಾಟಿ ಎಂಸಿ20 ಕಾರಿನಲ್ಲಿ 3.0 ಲೀಟರಿನ ವಿ6 ಟ್ವಿನ್ ಟರ್ಬೊ ಎಂಜಿನ್ ಅಳವಡಿಸಲಾಗಿದೆ. ನೆಪ್ಚೂನ್ ಎಂದು ಹೆಸರಿಸಲಾದ ಈ ಎಂಜಿನ್ 621 ಬಿಹೆಚ್‌ಪಿ ಪವರ್ ಹಾಗೂ 730 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಹಿಂಬಂದಿಯ ವ್ಹೀಲ್ ಗಳಿಗೆ ಪವರ್ ಅನ್ನು ಕಳುಹಿಸಲಾಗುತ್ತದೆ. ಈ ಹೊಸ ಮಸೆರಾಟಿ ಎಂಸಿ20 ಕಾರು ಕೇವಲ 2.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಹೊಸ ಮಸೆರಾಟಿ ಎಂಸಿ20 ಕಾರು ಸಿಂಗಲ್-ಪೀಸ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಈ ಕಾರಿನ ಮುಂಭಾಗದ ಸ್ಪಾಯ್ಲರ್ ಜೊತೆಗೆ ಏರೋಡೈನಾಮಿಕ್ ವಿನ್ಯಾಸಗೊಳಿಸಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಅಗಲವಾದ ಮತ್ತು ನಯವಾದ ಎಲ್ಇಡಿ ಟೈಲ್ ಲ್ಯಾಂಪ್ ಕ್ಲಸ್ಟರ್‌ಗಳನ್ನು ಹೊಂದಿವೆ.

ಈ ಕಾರು ಫಾರ್ಮುಲಾ -1 ಸೇರಿದಂತೆ ವಿವಿಧ ಕಾರ್ ರೇಸ್‌ಗಳಲ್ಲಿ ಬಳಸುವ ಎಲ್ಲಾ ಟೆಕ್ನಿಕಲ್ ಫೀಚರ್ ಗಳನ್ನು ಹೊಂದಿದೆ. ಕಾರ್ಬನ್ ಚಾಸಿಸ್ ನೊಂದಿಗೆ ನಿರ್ಮಿಸಲಾಗಿರುವ ಈ ಕಾರು ಮೊದಲ ಬಾರಿಗೆ ಮಸೆರಾಟಿ ಕಂಪನಿಯ ಬಟರ್ ಫ್ಲೈ ಶೇಪಿನ ಡೋರ್ ಸಿಸ್ಟಂ ಅನ್ನು ಹೊಂದಿದೆ.

ಮಸೆರಾಟಿಯ ಸ್ಲೀಕ್ ರೇಡಿಯೇಟರ್ ಗ್ರಿಲ್ ಸಿಸ್ಟಂ ಕಡಿಮೆ ಲುಕ್ ಮೂಲಕ ದೊಡ್ಡ ಏರ್ ಇನ್ ಟೇಕ್ ಹೊಂದಿದೆ. ಸೈಡ್ ಪ್ರೊಫೈಲ್ ನಲ್ಲಿ ಆಕರ್ಷಕ ವಿನ್ಯಾಸದ ದೊಡ್ಡ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ. ಈ ಕಾರು 10.1 ಇಂಚಿನ ಟಚ್ ಸ್ಕ್ರೀನ್ ಹೊಂದಿರುವ ಇನ್ಫೋಟೇನ್ ಮೆಂಟ್ ಸಿಸ್ಟಂ ಹೊಂದಿದೆ.

ಮಸೆರಾಟಿಯ ಕನೆಕ್ಟೆಡ್ ಟೆಕ್ನಾಲಜಿಯ ಮೂಲಕ ಈ ಕಾರು ಸುಧಾರಿತ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಈ ಕಾರಿನಲ್ಲಿ ವೆಟ್, ಜಿಟಿ, ಸ್ಪೋರ್ಟ್, ಕೊರ್ಸಾ, ಮತ್ತು ಇಎಸ್ಸಿ ಆಫ್ ಸೆಂಟರ್ ಕನ್ಸೋಲ್‌ನಲ್ಲಿನ ಡಯಲ್‌ನಿಂದ ಆಯ್ಕೆ ಮಾಡಬಹುದಾಗಿದೆ. ಈ ಸೂಪರ್‌ಕಾರ್‌ನ ಬೆಲೆಯ ಕುರಿತು ಹೆಚ್ಚಿನ ವಿವರಗಳು ಮುಂದಿನ ತಿಂಗಳುಗಳಲ್ಲಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.


Click it and Unblock the Notifications








