2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಆರಂಭಿಕ ಕಾರು ಆವೃತ್ತಿಯಾದ ಜಿಎಲ್ಎ ಮತ್ತು ಜಿಎಲ್ಎ 35 ಕಾರುಗಳ 2021ರ ಆವೃತ್ತಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಗಳು ಸಾಕಷ್ಟು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.41.10 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 57.30 ಲಕ್ಷ ಬೆಲೆ ಹೊಂದಿದೆ. ಮರ್ಸಿಡಿಸ್ ಕಂಪನಿಯು ಸದ್ಯ ಹೊಸ ಕಾರು ಬಿಡುಗಡೆಯ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಲಾಕ್‌ಡೌನ್ ಸಡಿಲಿಕೆ ನಂತರವಷ್ಟೇ ಕಾರು ವಿತರಣೆ ಮಾಡಲಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಕಳೆದ ಮಾರ್ಚ್‌ನಲ್ಲಿಯೇ ಬಿಡುಗಡೆಯಾಗಬೇಕಿದ್ದ ಹೊಸ ಕಾರನ್ನು ಕೋವಿಡ್ ಪರಿಣಾಮ ಮುಂದೂಡಿಕೆ ಮಾಡುತ್ತಾ ಬಂದಿದ್ದ ಕಂಪನಿಯು ಇದೀಗ ಲಾಕ್‌ಡೌನ್ ನಡುವೆಯೇ ಬಿಡುಗಡೆ ಮಾಡಿ ಬುಕ್ಕಿಂಗ್ ಪ್ರಕ್ರಿಯೆ ಚಾಲನೆ ನೀಡಿದ್ದು, ಹೊಸ ಕಾರು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಮರ್ಸಿಡಿಸ್ ಬೆಂಝ್ ಕಂಪನಿಯು ವಿವಿಧ ತಾಂತ್ರಿಕ ಅಂಶಗಳನ್ನು ಒಳಗೊಂಡಂತೆ ಆರಂಭಿಕ ಮಾದರಿಯಾಗಿ ಜಿಎಲ್ಎ 200ಎ ಪ್ರೊಗ್ರೆಸ್ಸಿವ್ ಲೈನ್(ರೂ.41.10 ಲಕ್ಷ), ಜಿಎಲ್ಎ 200ಡಿ ಪ್ರೊಗ್ರೆಸ್ಸಿವ್ ಲೈನ್(ರೂ.43.70 ಲಕ್ಷ), 4ಮ್ಯಾಟಿಕ್ ಎಎಂಜಿ ಲೈನ್(ರೂ. 46.70 ಲಕ್ಷ) ಮತ್ತು ಹೈ ಎಂಡ್ ಮಾದರಿಯಾಗಿ ಎಎಂಜಿ ಜಿಎಲ್ಎ 35 4ಮ್ಯಾಟಿಕ್ (ರೂ. 57.30 ಲಕ್ಷ) ಬೆಲೆ ಹೊಂದಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಹೊಸ ಕಾರುಗಳನ್ನು ಈ ಹಿಂದೆ ಸಂಪೂರ್ಣವಾಗಿ ವಿದೇಶಿ ಮಾರುಕಟ್ಟೆಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೀಗ ಭಾರತದಲ್ಲೇ ಪ್ರಮುಖ ಕಾರುಗಳ ಅಸೆಂಬ್ಲಿ ಪ್ರಕ್ರಿಯೆ ಕೈಗೊಂಡಿದ್ದು, 2021ರ ಜಿಎಲ್ಎ ಮಾದರಿಯು ಸಹ ಭಾರತದಲ್ಲಿ ನಿರ್ಮಾಣಗೊಂಡ ಕಾರು ಮಾದರಿಯಾಗಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಹೊಸ ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವು ಹೊಸ ಫೀಚರ್ಸ್ ಮತ್ತು ಉನ್ನತೀಕರಿಸಲಾದ ಕ್ಯಾಬಿನ್ ಸ್ಪೆಸ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಆವೃತ್ತಿಯು ಈ ಹಿಂದಿನ ಮಾದರಿಗಿಂತ 30 ಎಂಎಂ ಹೆಚ್ಚುವರಿ ಉದ್ದಳತೆ ಮತ್ತು 104 ಎಂಎಂ ಕಡಿಮೆ ಎತ್ತರ ಹೊಂದಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ನವೀಕರಿಸಲಾದ ಗ್ರಿಲ್ ವಿನ್ಯಾಸ, ಮರುವಿನ್ಯಾಸಗೊಳಿಸಲಾದ ಬಂಪರ್, ದೊಡ್ಡ ಗಾತ್ರದ 19-ಇಂಚಿನ ಅಲಾಯ್ ವೀಲ್ಹ್, ಆಕ್ರಮಣಕಾರಿಯಾಗಿರುವ ಟ್ವಿನ್ ಎಕ್ಸಾಸ್ಟ್, ಆಕರ್ಷಕವಾಗಿರುವ ಎಎಂಜಿ ಬ್ಯಾಡ್ಜ್ ಸೇರಿದಂತೆ ಹಲವಾರು ಉನ್ನತೀಕರಿಸಿದ ಐಷಾರಾಮಿ ಫೀಚರ್ಸ್ ಪಡೆದುಕೊಂಡಿದೆ.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಎಂಜಿನ್ ಮತ್ತು ಪರ್ಫಾಮೆನ್ಸ್

ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಮಾದರಿಗಳಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್, 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.0-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, 1.3-ಲೀಟರ್ ಪೆಟ್ರೋಲ್ ಮಾದರಿಯು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 161-ಬಿಎಚ್‌ಪಿ ಮತ್ತು 250-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ 8.7 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪಿಡ್‌ ಪಡೆದುಕೊಳ್ಳಬಲ್ಲದು.

MOST READ: ಬಿಡುಗಡೆಯಾಗಲಿರುವ 4x4 ಡ್ರೈವ್ ಸಿಸ್ಟಂ ಸೌಲಭ್ಯವುಳ್ಳ ಟಾಪ್ 5 ಕಾರುಗಳಿವು..!

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

2.0-ಲೀಟರ್ ಟರ್ಬೊ ಡೀಸೆಲ್ ಮಾದರಿಯು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 189-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ಸ್ಪಿಡ್‌ ಪಡೆದುಕೊಳ್ಳಬಲ್ಲದು.

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

200ಡಿ ಎಎಂಜಿ ಆವೃತ್ತಿಗಳಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದು, ಟಾಪ್ ಎಂಡ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 8-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್‌ನೊಂದಿಗೆ 304-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

2021ರ ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ಎಎಂಜಿ ಜಿಎಲ್ಎ 35 ಕಾರು ಬಿಡುಗಡೆ

ಇನ್ನುಳಿದಂತೆ ಮರ್ಸಿಡಿಸ್ ಕಂಪನಿಯು ಹೊಸ ಕಾರಿನಲ್ಲಿ 'ಮಿ ಕನೆಕ್ಟ್' ಕಾರ್ ಕೆನೆಕ್ಟ್ ಟೆಕ್ನಾಲಜಿ ಮೂಲಕ ಗರಿಷ್ಠ ಸೇಫ್ಟಿ ಫೀಚರ್ಸ್‌ಗಳನ್ನು ಹೆಚ್ಚಿಸಿದ್ದು, ವಾಯ್ಸ್ ಅಸಿಸ್ಟ್ ಮತ್ತು ಗೂಗಲ್ ಹೋಂ ಸೌಲಭ್ಯಗಳು ಕಾರು ಪ್ರಯಾಣವನ್ನು ಮತ್ತಷ್ಟು ಸುಲಭ ಮತ್ತು ಸುರಕ್ಷಿತಗೊಳಿಸುತ್ತವೆ.

Article Published On: Tuesday, May 25, 2021, 18:47 [IST]
English summary
2021 Mercedes-Benz GLA & AMG GLA 35 Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+