ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಎಂಜಿ ಮೋಟಾರ್ ತನ್ನ ಬಹುನಿರೀಕ್ಷಿತ ಎಂಜಿ ಆಸ್ಟರ್ (MG Astor) ಮಿಡ್ ಸೈಜ್ ಎಸ್‍ಯುವಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಹೊಸ ಎಂಜಿ ಆಸ್ಟರ್ ಮಿಡ್ ಸೈಜ್ ಎಸ್‍ಯುವಿಯು ಇದೇ ತಿಂಗಳ 15 ರಂದು ಭಾರತದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಎಂಜಿ ಆಸ್ಟರ್ ಮಿಡ್ ಸೈಜ್ ಗಾತ್ರದ ಎಸ್‍ಯುವಿಯು ಹಲವಾರು ಸೆಗ್ಮೆಂಟ್-ಫಸ್ಟ್ ಫೀಚರ್‌ಗಳನ್ನು ಹೊಂದಿದ್ದು, ಇದು ಪ್ರತಿಸ್ಪರ್ಧಿಗಳ ಮೇಲೆ ಮೇಲುಗೈ ಸಾಧಿಸುತ್ತದೆ. ಎಂಟ್ರಿ ಲೆವೆಲ್ ರೂಪಾಂತರಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕನೆಕ್ಟಿವಿಟಿ ಫೀಚರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಇನ್ನು ಈ ಎಸ್‍ಯುವಿಯಲ್ಲಿ 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಫೀಚರ್ಸ್ ಅನ್ನು ಒಳಗೊಂಡಿದೆ. ಇದು ಮ್ಯೂಸಿಕ್/ವಿಡಿಯೋಗಳಿಗಾಗಿ JioSaavn ಆಪ್ ಅನ್ನು ಸಹ ಪಡೆಯುತ್ತದೆ. ಇದು ಫಸ್ಟ್-ಇನ್-ಸೆಗ್ಮೆಂಟ್ ಆಟೋನಮಸ್ ಲೆವೆಲ್ -2 ತಂತ್ರಜ್ಞಾನವನ್ನು ಕೂಡ ಪಡೆಯಲಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಕೊಡುಗೆಯಲ್ಲಿರುವ ADAS ವೈಶಿಷ್ಟ್ಯಗಳು ಆಟೋ ಎಮರ್ಜನ್ಸಿ ಬ್ರೇಕಿಂಗ್ ಸಿಸ್ಟಂ, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), ಫಾರ್ವರ್ಡ್ ಕೊಲೆಷನ್ ಅಲರ್ಟ್, ವೇಗ ಮಿತಿ ಸಹಾಯ, ಹೊಂದಾಣಿಕೆಯ ಕ್ರೂಸ್ ಕಂಟ್ರೋಲ್, ರಿಯರ್ ಡ್ರೈವ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಸ್ವಯಂಚಾಲಿತ ಹೈ-ಬೀಮ್ ಲೈಟಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಹೊಸ ಎಸ್‌ಯುವಿಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಸಿಸ್ಟೆನ್ಸ್ ಸೇರಿದಂತೆ ಹಲವಾರು ಫೀಚರ್ ಗಳನ್ನು ನೀಡಲಾಗುತ್ತದೆ. ಆಸ್ಟರ್ ಎಸ್‌ಯುವಿಯಲ್ಲಿರುವ ಫೀಚರ್ ಗಳು ಈ ಎಸ್‌ಯುವಿಯ ಬಳಕೆದಾರರಿಗೆ ಕೆಲವು ಎಚ್ಚರಿಕೆಗಳನ್ನು ಹಾಗೂ ಸಲಹೆಯ ಧ್ವನಿಯನ್ನು ನೀಡುತ್ತವೆ. ಎಂಜಿ ಮೋಟಾರ್ ಕಂಪನಿಯು ಅಂತಹ ಧ್ವನಿಗಳನ್ನು ಸೆಲೆಬ್ರಿಟಿಗಳ ಧ್ವನಿ ಮೂಲಕ ನೀಡುತ್ತಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಪ್ಯಾರಾಲಿಂಪಿಕ್ ಅಥ್ಲೀಟ್ ಹಾಗೂ ಖೇಲ್ ರತ್ನ ಪ್ರಶಸ್ತಿ ವಿಜೇತರಾದ ದೀಪಾ ಮಲಿಕ್ ರವರು ಎಂಜಿ ಆಸ್ಟರ್ ಎಸ್‌ಯುವಿಗಾಗಿ ಧ್ವನಿ ನೀಡಿದ್ದಾರೆ. ಈ ಎಸ್‌ಯುವಿಯಲ್ಲಿ ಅವರ ಧ್ವನಿ ಮಾತ್ರವಲ್ಲದೆ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಧ್ವನಿಯೂ ಕೇಳ ಬಹುದು. ಮಹಿಳಾ ಕ್ರೀಡಾಪಟು ದೀಪಾ ಮಲಿಕ್‌ರವರನ್ನು ಮತ್ತಷ್ಟು ಜನಪ್ರಿಯವಾಗಿಸಲು ಎಂಜಿ ಮೋಟಾರ್ ಕಂಪನಿಯು ತನ್ನ ಆಸ್ಟರ್ ಎಸ್‌ಯುವಿಯಲ್ಲಿ ಅವರ ಧ್ವನಿಯನ್ನು ಬಳಸಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಎಂಜಿ ಮೋಟಾರ್ ಕಂಪನಿಯು ಆಸ್ಟರ್ ಎಸ್‌ಯುವಿಯನ್ನು ಬಿಡುಗಡೆಗೊಳಿಸುವ ಮುನ್ನ ಭಾರತದ ರಸ್ತೆಗಳಲ್ಲಿ ಪರೀಕ್ಷಿಸುತ್ತಿದೆ. ಈ ಎಸ್‌ಯುವಿಯನ್ನು ಇತ್ತೀಚೆಗೆ ಪರ್ವತಶ್ರೇಣಿಯಲ್ಲಿ ಪರೀಕ್ಷಿಸುತ್ತಿದ್ದಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ಆಸ್ಟರ್ ಎಸ್‌ಯುವಿಗೆ ಸಂಬಂಧಿಸಿದ ಹಲವು ಮಾಹಿತಿ ಹೊರ ಬಂದಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಈ ಹೊಸ ಎಸ್‌ಯುವಿಯನ್ನು ಈ ಹಿಂದೆ ಅನಾವರಣಗೊಂಡಿದ್ದ ಕಾನ್ಸೆಪ್ಟ್ ಮಾದರಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ಬಿಡುಗಡೆಗೆ ಸಿದ್ದವಾಗಿರುವ ಈ ಎಸ್‌ಯುವಿಯ ಗ್ರಿಲ್ ರಚನೆ ಹಾಗೂ ಸೈಡ್ ಪ್ರೊಫೈಲ್ ಇತರ ಹಲವು ಕಾನ್ಸೆಪ್ಟ್ ಮಾದರಿಗಳಂತೆಯೇ ಇದೆ. ಇದರ ಜೊತೆಗೆ ಈ ಎಸ್‌ಯುವಿಯಲ್ಲಿ ಐದು ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಬಳಸಲಾಗಿದೆ ಎಂದು ತಿಳಿದುಬಂದಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಹೊಸ ಆಸ್ಟರ್ ಎಸ್‌ಯುವಿಯು ರೂಫ್ ಮೇಲೆ ಗ್ರಾಬ್ ರೇಲಿಂಗ್, ಮಿರರ್ ಗಳಲ್ಲಿ ಇಂಡಿಕೇಟರ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಇವುಗಳಿಗಿಂತ ಹೆಚ್ಚಾಗಿ ಈ ಎಸ್‌ಯುವಿಯಲ್ಲಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಹಲವರ ಗಮನ ಸೆಳೆಯುತ್ತದೆ. ಈ ಟೆಕ್ನಾಲಜಿಯು ಮೆಸೇಜ್ ಗಳನ್ನು ಓದುತ್ತದೆ, ಜೋಕ್ ಗಳನ್ನು ಹಾಗೂ ಸಂಭಾಷಣೆಗಳನ್ನು ಹೇಳುತ್ತದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಇದರೊಂದಿಗೆ ವಿಕಿಪೀಡಿಯಾ, ನ್ಯಾವಿಗೇಷನ್, ಮ್ಯೂಸಿಕ್ ಹಾಗೂ ಕಾರ್ ಅಲರ್ಟ್ ಗಳನ್ನು ಒದಗಿಸುತ್ತದೆ. ಇವುಗಳಿಗೆ ಅಮಿತಾಬ್ ಬಚ್ಚನ್ ಹಾಗೂ ದೀಪಾ ಮಲಿಕ್ ಇದಕ್ಕೆ ಧ್ವನಿ ನೀಡಿದ್ದಾರೆ. ಅವರ ಧ್ವನಿಗಳು Astor ಎಸ್‌ಯುವಿಯಲ್ಲಿರುವ ರೋಬೋಟ್‌ನ ಧ್ವನಿಯಂತೆ ಕೇಳಿಸುತ್ತವೆ. ಈ ಎಲ್ಲಾ ಕಾರ್ಯಗಳು ಈಗ ಮುಕ್ತಾಯದ ಹಂತದಲ್ಲಿವೆ ಎಂದು ವರದಿಯಾಗಿದೆ. ಇದರಿಂದ MG Astor ಎಸ್‌ಯುವಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಆಸ್ಟರ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಎರಡು ಎಂಜಿನ್ ಆಯ್ಕೆಗಳನ್ನು ನೀಡಲಾಗಿದೆ. ಇವುಗಳಲ್ಲಿ 1.0 ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳು ಸೇರಿವೆ. ಈ ಎಸ್‌ಯುವಿಯು 5 ಸ್ಪೀಡ್ ಮ್ಯಾನುಯಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದುವ ನಿರೀಕ್ಷೆಗಳಿವೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಆಸ್ಟರ್ ಎಸ್‌ಯುವಿಯು ಚಿಕ್ಕ ರೋಬೋಟ್ ನಂತಹ ವಿಶೇಷ ಗುಣ ಲಕ್ಷಣಗಳನ್ನು ಹೊಂದಿರುವುದರಿಂದ ಭಾರತೀಯ ಗ್ರಾಹಕರಲ್ಲಿ ವಿಶಿಷ್ಟವಾದ ಸ್ವಾಗತವನ್ನು ಪಡೆಯುವ ನಿರೀಕ್ಷೆಗಳಿವೆ. ಹೊಸ Astor ಎಸ್‌ಯುವಿಯಲ್ಲಿ MG Motor ಕಂಪನಿಯು ಇತರ ಕಂಪನಿಗಳ ಕಾರುಗಳಿಂತಲೂ ಹೆಚ್ಚಿನ ಫೀಚರ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಎಂಜಿ ಮೋಟಾರ್ ಕಂಪನಿಯು ಈ ಎಸ್‌ಯುವಿಯ ಮೂಲ ಮಾದರಿಯಲ್ಲೂ ಆ್ಯಪಲ್ ಕಾರ್ ಪ್ಲೇ ಹಾಗೂ ಅಂಡ್ರಾಯ್ಡ್ ಆಟೋ ಫೀಚರ್ ಗಳನ್ನು ಸ್ಟಾಂಡರ್ಡ್ ಆಗಿ ನೀಡಲಿದೆ ಎಂದು ವರದಿಯಾಗಿದೆ. ಆಸ್ಟರ್ ಎಸ್‌ಯುವಿಯು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಆಸ್ಟರ್ ಎಸ್‌ಯುವಿಯು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೊಂದಿರುವ ಭಾರತದ ಮೊದಲ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಅನಾವರಣವಾಗಲಿದೆ ಬಹುನಿರೀಕ್ಷಿತ ಹೊಸ MG Astor ಎಸ್‍ಯುವಿ

ಈಗ ಪ್ಯಾರಾಲಂಪಿಕ್ ಅಥ್ಲೀಟ್ ರವರಿಂದ ಧ್ವನಿ ನೀಡಿಸಿರುವ ಎಂಜಿ ಮೋಟಾರ್ ಕಂಪನಿಯು ಕೆಲವು ದಿನಗಳ ಹಿಂದಷ್ಟೇಜಪಾನ್ ನ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಭವಿನಾ ಪಟೇಲ್ ರವರಿಗೆ ಕಾರ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸುವುದಾಗಿ ತಿಳಿಸಿತ್ತು. ಇನ್ನು ಈ ಹೊಸ ಎಂಜಿ ಆಸ್ಟರ್ ಎಸ್‍ಯುವಿಯು ಭಾರತದಲ್ಲಿ ಬಿಡುಗಡಯಾದ ಬಳಿಕ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಸ್ಕೋಡಾ ಕುಶಾಕ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New mg astor mid size suv will be unveil on september 15 design features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X