8 ಲಕ್ಷ ರೂಪಾಯಿಯೊಳಗೆ ಮಾರಾಟವಾಗಲಿವೆ ಈ ಹೊಸ ಮೈಕ್ರೋ ಎಸ್‌ಯುವಿಗಳು
ಇತ್ತೀಚೆಗೆ ಹೊಸ ಕಾರುಗಳನ್ನು ಖರೀದಿಸ ಬಯಸುವ ಗ್ರಾಹಕರು ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಕಾರುಗಳ ಬದಲಿಗೆ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.

ಮಾರುತಿ ಸುಜುಕಿ ಇಗ್ನಿಸ್, ರೆನಾಲ್ಟ್ ಕ್ವಿಡ್, ಮಾರುತಿ ಸುಜುಕಿ ಎಸ್ ಪ್ರೆಸ್ಸೊ ಸೇರಿದಂತೆ ಹಲವು ಕಾರುಗಳು ಎಂಟ್ರಿ ಲೆವೆಲ್ ಎಸ್‌ಯುವಿ ಸೆಗ್'ಮೆಂಟಿನಲ್ಲಿ ಮಾರಾಟವಾಗುತ್ತವೆ. ಮುಂಬರುವ ದಿನಗಳಲ್ಲಿ ಹಲವು ಹೊಸ ಎಸ್‌ಯುವಿಗಳು ಈ ಸೆಗ್'ಮೆಂಟಿನಲ್ಲಿ ಬಿಡುಗಡೆಯಾಗಲಿವೆ. ಅವುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ:

ಟಾಟಾ ಹೆಚ್‌ಬಿಎಕ್ಸ್
ಟಾಟಾ ಮೋಟಾರ್ಸ್ 2021ರ ಮೂರನೇ ತ್ರೈಮಾಸಿಕದಲ್ಲಿ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಯ ಉತ್ಪಾದನಾ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

3,840 ಎಂಎಂ ಉದ್ದ, 1822 ಎಂಎಂ ಅಗಲ, 1635 ಎಂಎಂ ಎತ್ತರ ಮತ್ತು 2450 ಎಂಎಂ ವ್ಹೀಲ್ ಬೇಸ್ ಹೊಂದಿರುವ ಈ ಎಸ್‌ಯುವಿಯು ಮಾರುತಿ ಸುಜುಕಿ ಇಗ್ನಿಸ್ ಎಸ್‌ಯುವಿಗೆ ಪೈಪೋಟಿ ನೀಡಲಿದೆ.

ಈ ಎಂಟ್ರಿ ಲೆವೆಲ್ ಎಸ್‌ಯುವಿಯಲ್ಲಿ ಟಿಯಾಗೊ ಹಾಗೂ ಆಲ್ಟ್ರೋಜ್ ಕಾರುಗಳಲ್ಲಿರುವಂತಹ ಹೊಸ 1.2 ಲೀಟರ್ ಮೂರು ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 86 ಬಿಹೆಚ್‌ಪಿ ಪವರ್ ಹಾಗೂ 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಎಸ್‌ಯುವಿಯು 100 ಬಿಹೆಚ್‌ಪಿ ಪವರ್ ಉತ್ಪಾದಿಸುವ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಸಹ ಹೊಂದಿರಲಿದೆ. ಟ್ರಾನ್ಸ್'ಮಿಷನ್ ಆಯ್ಕೆಗಳಲ್ಲಿ ಐದು ಸ್ಪೀಡ್ ಮ್ಯಾನುವಲ್ ಹಾಗೂ ಐದು ಸ್ಪೀಡ್ ಎಎಂಟಿ ಸೇರಿರಲಿವೆ.

ಹ್ಯುಂಡೈ ಎಎಕ್ಸ್ 1
ಹ್ಯುಂಡೈ ಕಂಪನಿಯು ಎಎಕ್ಸ್ 1 ಎಂಬ ಕೋಡ್ ನೇಮ್ ಚಿಕ್ಕ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಿಸುತ್ತಿದೆ. ಈ ಹೊಸ ಎಸ್‌ಯುವಿಯು ಹೊಸ ಗ್ರ್ಯಾಂಡ್ ಐ 10 ನಿಯೋಸ್ ಪ್ಲಾಟ್‌ಫಾರಂ ಅನ್ನು ಆಧರಿಸಿದ್ದು, ಸ್ಯಾಂಟ್ರೊ ಜೊತೆಗೆ ಹ್ಯುಂಡೈ ತಂಡದಲ್ಲಿ ಸ್ಥಾನ ಪಡೆಯಲಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಹ್ಯುಂಡೈ ಕಂಪನಿಯ ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಗ್ನಿಸ್ ಹಾಗೂ ಟಾಟಾ ಹೆಚ್‌ಬಿಎಕ್ಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ. ಈ ಎಸ್‌ಯುವಿಯ ವಿನ್ಯಾಸವು ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಫೂರ್ತಿ ಪಡೆದಿದೆ.

ಈ ಎಸ್‌ಯುವಿಯಲ್ಲಿರುವ 1.2-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 82 ಬಿಹೆಚ್‌ಪಿ ಪವರ್ ಹಾಗೂ 114 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಟ್ರಾನ್ಸ್'ಮಿಷನ್ ಆಯ್ಕೆಗಳಿಗಾಗಿ ಐದು ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್‌ಬಾಕ್ಸ್'ಗಳಿರಲಿವೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಿಟ್ರನ್ ಸಿ 21
ಸಿಟ್ರನ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2021ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸಲಿದೆ. ಸಿ 21 ಕೋಡ್ ನೇಮ್ ಹೊಂದಿರುವ ಹೊಸ ಮೈಕ್ರೋ ಎಸ್‌ಯುವಿಯು ರೆನಾಲ್ಟ್ ಕಿಗರ್ ಹಾಗೂ ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಈ ಎಸ್‌ಯುವಿಯು ಪುಶೊ 208ನ ಕಾಮನ್ ಮಾಡ್ಯುಲರ್ ಪ್ಲಾಟ್‌ಫಾರಂನ ಸರಳೀಕೃತ ಆವೃತ್ತಿಯನ್ನು ಆಧರಿಸಿದೆ. ಈ ಮೈಕ್ರೋ ಎಸ್‌ಯುವಿಯನ್ನು ಚೆನ್ನೈನ ಸಿಕೆ ಬಿರ್ಲಾ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುವುದು. ಸಿ 21 ಎಸ್‌ಯುವಿಯಲ್ಲಿ ಅಳವಡಿಸಿರುವ 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 99 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಹೀಂದ್ರಾ ಎಕ್ಸ್‌ಯುವಿ 100
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಭಾರತದಲ್ಲಿ ಕೆಯುವಿ 100 ಸ್ಥಾನದಲ್ಲಿ ಎಕ್ಸ್‌ಯುವಿ 100 ಅನ್ನು ಬಿಡುಗಡೆಗೊಳಿಸಲಿದೆ. ಈ ಎಸ್‌ಯುವಿಯು ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಈ ಎಸ್‌ಯುವಿಯು ಮಾರುತಿ ಸುಜುಕಿ ಇಗ್ನಿಸ್ ಹಾಗೂ ಟಾಟಾ ಹೆಚ್‌ಬಿಎಕ್ಸ್ ಮೈಕ್ರೋ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

ಈ ಎಸ್‌ಯುವಿಯು ಹೊಸ ಮಾದರಿ ಕೆಯುವಿ 100ನ ಅಪ್'ಡೇಟೆಡ್ ಆವೃತ್ತಿಯಾಗಿರುವ ಸಾಧ್ಯತೆಗಳಿವೆ. ಈ ಎಸ್‌ಯುವಿಯಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ 1.2-ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸುವ ಸಾಧ್ಯತೆಗಳಿವೆ.


Click it and Unblock the Notifications