ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಜೆಎಲ್ಆರ್ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಮಾದರಿಯಾದ ಇವೋಕ್ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 64.12 ಲಕ್ಷ ಬೆಲೆ ಹೊಂದಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ರೇಂಜ್ ರೋವರ್ ಇವೋಕ್ ಹೊಸ ಆವೃತ್ತಿಯಲ್ಲಿ ಈ ಹಿಂದಿನ ಎರಡು ಎಂಜಿನ್ ಮಾದರಿಗಳನ್ನು ಉನ್ನತೀಕರಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್‌ನೊಂದಿಗೆ ಎಸ್ ವೆರಿಯೆಂಟ್ ಹೊಂದಿವೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಫ್ ರೋಡ್ ಕೌಶಲ್ಯತೆಗಾಗಿ ಹಲಾವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಲಾಗಿದ್ದು, ಆಲ್ ಟೆರೈನ್ ರೆಸ್ಪಾನ್ಸ್ ಸಿಸ್ಟಂ ಅನ್ನು ನೀಡಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಅತ್ಯಾಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಪರಿಪೂರ್ಣ ಸಮತೋಲನವನ್ನು ನೀಡುವ ಹೊಸ ಕಾರಿನಲ್ಲಿ ನಾಲ್ಕು ಸಿಲಿಂಡರ್ ಹೊಂದಿರುವ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಪವರ್ ಟ್ರೈನ್‍ ಆಯ್ಕೆಗಳು ಲಭ್ಯವಿವೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮಾದರಿಯು 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 247-ಬಿಎಚ್‌ಪಿ ಮತ್ತು 365-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಇಂಜಿನಿಯಮ್ 2.0 ಲೀಟರ್ ಡೀಸೆಲ್ ಮಾದರಿಯು ಸಹ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 201-ಬಿಎಚ್‌ಪಿ ಮತ್ತು 430-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಹಾಗೆಯೇ ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಏರ್ ಸಸ್ಪೆನ್ಷನ್, 3D ಸರೌಂಡ್ ಕ್ಯಾಮೆರಾ ಮತ್ತು PM2.5 ಫಿಲ್ಟರ್‍ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ನಂತಹ ಹೊಸ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಜೊತೆಗೆ ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಮತ್ತು ವಿಶಿಷ್ಠವಾಗಿಸಲು ಹೊಸ ಕಾರಿನಲ್ಲಿ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಆಕ್ಟಿವ್ ರೋಡ್ ನಾಯ್ಸ್ ಕ್ಯಾನ್ಸಲೇಷನ್ ನಂತಹ ಫೀಚರ್ಸ್‌ಗಳನ್ನು ಸಹ ಜೋಡಣೆ ಮಾಡಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಹೊಸ ಫೀಚರ್ಸ್‌ಗಳೊಂದಿಗೆ ಇವೋಕ್ ಕಾರು ಮಾದರಿಯು ಈ ಹಿಂದೆಂದಿಗಿಂತಲೂ ಆಕರ್ಷಕ, ಹೆಚ್ಚು ಸುರಕ್ಷಿತ ಮತ್ತು ಸ್ಮಾರ್ಟ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಡೀಪ್ ಗಾರ್ನೆಟ್ ಮತ್ತು ಎಬೊನಿ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹೊಂದಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ಇವೋಕ್ ಬಿಡುಗಡೆ

ಸದ್ಯ ಉನ್ನತೀಕರಿಸಲಾದ ಹೊಸ ಕಾರು ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವ ರೇಂಜ್ ರೋವರ್ ಕಂಪನಿಯು ಶೀಘ್ರದಲ್ಲೇ ವಿತರಣೆ ಆರಂಭಿಸಲಿದ್ದು, ಹೊಸ ಕಾರು ವೊಲ್ವೊ ಎಕ್ಸ್‌ಸಿ60, ಬಿಎಂಡಬ್ಲ್ಯು ಎಕ್ಸ್3 ಮತ್ತು ಮರ್ಸಿಡಿಸ್ ಬೆಂಝ್ ಜಿಎಲ್‌ಸಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

More from DriveSpark

Article Published On: Tuesday, July 6, 2021, 15:11 [IST]
English summary
2021 Range Rover Evoque Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+