ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಲ್ಯಾಂಡ್ ರೋವರ್ ಕಂಪನಿಯು ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಐದನೇ ತಲೆಮಾರಿನ ರೇಂಜ್ ರೋವರ್(Range Rover) ಎಸ್‍ಯುವಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿತು. ಈ 2022ರ ರೇಂಜ್ ರೋವರ್ ಎಸ್‍ಯುವಿಯು ಇತ್ತೀಚಿನ ತಂತ್ರಜ್ಞಾನಗಳು, ಹಾರ್ಡ್‌ವೇರ್‌ಗಳನ್ನು ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಈ ಹೊಸ ರೇಂಜ್ ರೋವರ್ ವಾಹನ ತಯಾರಕರ ಎಂಎಲ್ಎ-ಫ್ಲೆಕ್ಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಮತ್ತು ಸ್ಟ್ಯಾಂಡರ್ಡ್ ಮತ್ತು ಲಾಂಗ್-ವೀಲ್‌ಬೇಸ್ ಆವೃತ್ತಿಗಳಲ್ಲಿ ನೀಡಲಾಗುವುದು.ಮೊದಲ ಬಾರಿ ಆಗಿದೆ. ವಾಹನ ತಯಾರಕರು ಏಳು ಸೀಟುಗಳ ಆಯ್ಕೆಯನ್ನು ಸಹ ನೀಡುತ್ತಿದ್ದಾರೆ. ಈ ಹೊಸ ಹೊಸ ರೇಂಜ್ ರೋವರ್ ಎಸ್‍ಯುವಿಯು 200 ಎಂಎಂ ಉದ್ದದ ವ್ಹೀಲ್‌ಬೇಸ್‌ ಅನ್ನು ಹೊಂದಿದೆ. ಅಕರ್ಷಕ ವಿನ್ಯಾಸ, ಹೊಸ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಹೊಂದಿದೆ. ಇದೀಗ ಐದನೇ ತಲೆಮಾರಿನ ರೇಂಜ್ ರೋವರ್ ಎಸ್‍ಯುವಿಯ ಹೆಸರನ್ನು ಲ್ಯಾಂಡ್ ರೋವರ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಹೊಸ ರೇಂಜ್ ರೋವರ್ ಪರಿಚಿತವಾಗಿ ಕಾಣುತ್ತದೆ ಮತ್ತು ವಿಭಿನ್ನ ಸಿಲೂಯೆಟ್ ಅನ್ನು ತಕ್ಷಣವೇ ಗುರುತಿಸಬಹುದಾಗಿದೆ. ಆದರೆ ಹೊಸ ಗ್ರಿಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ಇದು ಹೆಚ್ಚು ಹೊಳಪು ತೋರುತ್ತಿದೆ. ಈ ರೇಂಜ್ ರೋವರ್ ಎಸ್‍ಯುವಿಯಲ್ಲಿ ಸಮತಟ್ಟಾದ ಮೇಲ್ಮೈಗಳು ಕೇವಲ 0.30 ಸಿಡಿಯ ಪ್ರಭಾವಶಾಲಿ ಡ್ರ್ಯಾಗ್ ಅಂಶವವನ್ನು ಒಳಗೊಂಡಿದೆ. ಈ ಮಾದರಿಯು 23-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಆದರೆ ಸಣ್ಣ ಓವರ್‌ಹ್ಯಾಂಗ್‌ಗಳು ಬೃಹತ್ ಪ್ರಮಾಣವನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸುತ್ತದೆ. ಈ ಎಸ್‍ಯುವಿಯ ಟರ್ನ್ ಇಂಡಿಕೇಟರ್‌ಗಳನ್ನು ಸಂಯೋಜಿಸುವ ಟೈಲ್‌ಗೇಟ್‌ನಲ್ಲಿನ ಬ್ಲ್ಯಾಕ್ ಅಸ್ಸೆಂಟ್ ಗಳನ್ನು ಸಂಪರ್ಕಗೊಂಡಿರುವ ಹಿಂಭಾಗದ ಸ್ಪೋರ್ಟ್ಸ್ ಬ್ಲ್ಯಾಕ್ಡ್-ಔಟ್ ಟೈಲ್‌ಲೈಟ್‌ಗಳಾಗಿವೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಐದನೇ ತಲೆಮಾರಿನ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿಯ ಇಂಟಿರಿಯರ್ ನಲ್ಲಿ 13.7-ಇಂಚಿನ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆಯುತ್ತದೆ, ಆದರೆ ಸೆಂಟರ್ ಕನ್ಸೋಲ್ ದೊಡ್ಡ 13.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ ಪ್ಲೇ ಹ್ಯಾಪ್ಟಿಕ್ ಪ್ರತಿಕ್ರಿಯೆಯೊಂದಿಗೆ ಹೊಂದಿದೆ. ಇದು ಗೊಂದಲ-ಮುಕ್ತ ವಿನ್ಯಾಸವಾಗಿದೆ ಮತ್ತು ವಿನ್ಯಾಸದ ವಿಷಯದಲ್ಲಿ ಬಹಳ ಪರಿಚಿತವಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಇನ್ನು ಹಿಂಭಾಗದಲ್ಲಿ ಪ್ರಯಾಣಿಕರು 11.4-ಇಂಚಿನ ಮನರಂಜನಾ ಡಿಸ್ ಪ್ಲೇಯನ್ನು ಪಡೆಯುತ್ತಾರೆ. ಅದನ್ನು ಮುಂಭಾಗದ ಸೀಟ್‌ಬ್ಯಾಕ್‌ಗಳಿಗೆ ಜೋಡಿಸಲಾಗಿದೆ. ಇನ್ನು ಎಕ್ಸಿಕ್ಯುಟಿವ್ ಕ್ಲಾಸ್ ಹಿಂಬದಿಯ ಸೀಟುಗಳೊಂದಿಗೆ, ಸೆಂಟರ್ ಆರ್ಮ್‌ರೆಸ್ಟ್‌ನಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಇದೆ. ಇದರೊಂದಿಗೆ ನ್ಯೂ ಜನರೇಷನ್ ರೇಂಜ್ ರೋವರ್ 1600-ವ್ಯಾಟ್, 35-ಸ್ಪೀಕರ್ ಮೆರಿಡಿಯನ್ ಸಿಗ್ನೇಚರ್ ಸೌಂಡ್ ಸಿಸ್ಟಂ ಅನ್ನು ಸಹ ಪಡೆಯುತ್ತದೆ,

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಆದರೆ ಆಟೋಬಯೋಗ್ರಫಿ ಟ್ರಿಮ್ ಹೆಡ್‌ರೆಸ್ಟ್‌ನಲ್ಲಿ ಎಂಬೆಡ್ ಮಾಡಲಾದ ವಿಶ್ವದ ಮೊದಲ ಆಕ್ಟಿವ್ ಸ್ಪೀಕರ್‌ಗಳನ್ನು ಹೊಂದಿದೆ. ಈ ಹೊಸ ರೇಂಜ್ ರೋವರ್ ಕ್ಯಾಬಿನ್‌ನಲ್ಲಿ ಹೆಚ್ಚು ಸಮರ್ಥನೀಯ ಐಷಾರಾಮಿ ವಸ್ತುಗಳನ್ನು ಬಳಸುತ್ತದೆ.ಹೊಸ ರೇಂಜ್ ರೋವರ್ ಎಸ್‍ಯುವಿಯು ಹೊಸ ಐದು-ಲಿಂಕ್ ಹಿಂಬದಿಯ ಆಕ್ಸಲ್‌ನೊಂದಿಗೆ ಅಡಾಪ್ಟಿವ್ ಏರ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇದು ನ್ಯಾವಿಗೇಷನ್ ಸಿಸ್ಟಂ ಅನ್ನು ಮುಂದಿನ ರಸ್ತೆಗೆ ಅನುಗುಣವಾಗಿ ಹೊಂದಿಸಲು ಬಳಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಈ ಯುನಿಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ರೈಡ್ ಗುಣಮಟ್ಟವನ್ನು ಮತ್ತಷ್ಟು ಸುಗಮಗೊಳಿಸಲು ಸ್ಟೀರಿಂಗ್ ಅಸಿಸ್ಟ್ ಅನ್ನು ಸಹ ನಿರ್ವಹಿಸುತ್ತದೆ. ಈ ಎಸ್‍ಯುವಿಯ ನಿಯಂತ್ರಿತ ಆ್ಯಂಟಿ-ರೋಲ್ ಬಾರ್‌ಗಳನ್ನು ಸಹ ಪಡೆಯುತ್ತದೆ, ಅದು ಈಗ ವೇಗವಾದ ರೆಸ್ಪಾನ್ಸ್ ಹೊಂದಿದೆ. ಈ ಐದನೇ ತಲೆಮಾರಿನ ರೇಂಜ್ ರೋವರ್ ಆಲ್-ವ್ಹೀಲ್ ಸ್ಟೀರಿಂಗ್‌ನೊಂದಿಗೆ ಬರುತ್ತದೆ, ಇದು ಹಿಂದಿನ ಚಕ್ರಗಳನ್ನು 7.3 ಡಿಗ್ರಿಗಳವರೆಗೆ ಎಲೆಕ್ಟ್ರಿಕಲ್ ಆಗಿ ಚಲಿಸುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ವಿಶೇಷವಾಗಿ ಬಿಗಿಯಾದ ಸ್ಥಳಗಳಲ್ಲಿ ಮತ್ತು ಟರ್ನಿಂಗ್ ವೇಳೆ 11 ಮೀಟರ್‌ಗಿಂತಲೂ ಕಡಿಮೆಗೊಳಿಸುತ್ತದೆ. ಹೊಸ ರೇಂಜ್ ರೋವರ್ ಎಸ್‍ಯುವಿಯ ನೈಟ್‌ಶಿಫ್ಟ್ ಮೋಡ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾವನ್ನು ಮತ್ತು ಆ್ಯಪ್-ಆಧಾರಿತ ಪಾರ್ಕಿಂಗ್ ವೈಶಿಷ್ಟ್ಯವನ್ನು ಸಹ ಪಡೆಯುತ್ತದೆ, ಇದು ವಾಹನದಿಂದ ಹೊರಬರಲು ಮತ್ತು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಾಹನ ಫಾರ್ಕಿಂಗ್ ಮಾಡಬಹುದು,

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಐದನೇ ತಲೆಮಾರಿನ ಲ್ಯಾಂಡ್ ರೋವರ್ ರೇಂಜ್ ರೋವರ್ ಎಸ್‍ಯುವಿ ನವೀಕರಿಸಿದ ಟೆರೈನ್ ರೆಸ್ಪಾನ್ಸ್ 2 ಸಿಸ್ಟಮ್‌ನೊಂದಿಗೆ ಸೇರಿಸಿದೆ, ಆದರೆ ನೀರಿನ ವೇಡಿಂಗ್ ಸಾಮರ್ಥ್ಯವು ಈಗ 900 ಎಂಎಂ ನಲ್ಲಿ ನಿಂತಿದೆ ಮತ್ತು ಸೋನಾರ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಅದು ವೇಡಿಂಗ್ ಆಳವು ಹೆಚ್ಚಾದರೆ ನಿಮಗೆ ತಿಳಿಸುತ್ತದೆ. ಇದರ ಹೊಸ ಚಾಸಿಸ್ ಹಿಂದಿನ ಪುನರಾವರ್ತನೆಗಿಂತ ಶೇಕಡಾ 50 ರಷ್ಟು ಗಟ್ಟಿಯಾಗಿದೆ. ಇದು ಮೊದಲಿಗಿಂತ 25 ಶೇಕಡಾ ಕಡಿಮೆ ಕಂಪನವನ್ನು ಹೊಂದಿರುತ್ತದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಎಂಜಿನ್‌ಗಳಿಗೆ ಸಂಬಂಧಿಸಿದಂತೆ, 2022ರ ರೇಂಜ್ ರೋವರ್ ಎಸ್‍ಯುವಿಯು ಎರಡು ಪ್ಲಗ್-ಇನ್ ಹೈಬ್ರಿಡ್ ಎಂಜಿನ್‌ಗಳೊಂದಿಗೆ ಮೂರು ಪೆಟ್ರೋಲ್ ಮತ್ತು ಮೂರು ಡೀಸೆಲ್ ಆಯ್ಕೆಗಳೊಂದಿಗೆ ಬರುತ್ತದೆ. ಸಂಪೂರ್ಣ ಎಲೆಕ್ಟ್ರಿಕ್ ರೇಂಜ್ ರೋವರ್ ಕೂಡ 2024ರಲ್ಲಿ ಆಗಮಿಸಲಿದೆ. ಹೊಸ 3.0-ಲೀಟರ್ ಆರು ಸಿಲಿಂಡರ್ ಪ್ಲಗ್-ಇನ್ ಹೈಬ್ರಿಡ್ ಅನ್ನು 38.2 ಕಿ.ವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಜೋಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಇದು 5.3 ಸೆಕೆಂಡ್‌ಗಳಲ್ಲಿ 0-100 ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಎಸ್‍ಯುವಿಯು ಸುಮಾರು 80 ಕಿ.ಮೀ ರೇಂಜ್ ಹೊಂದಿರಲಿದೆ. ಎಲ್ಲಾ ಮಾದರಿಗಳು ಆಲ್-ವೀಲ್ ಡ್ರೈವ್ ಮತ್ತು ಸಕ್ರಿಯ-ಲಾಕಿಂಗ್ ರಿಯರ್ ಡಿಫರೆನ್ಷಿಯಲ್ ಜೊತೆಗೆ ಸ್ಟ್ಯಾಂಡರ್ಡ್ ಬರುತ್ತವೆ. ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್ಇ, ಹೆಚ್ಎಸ್ಇ, ಆಟೋಬಯೋಗ್ರಫಿ ಮತ್ತು ಹೊಸ ಎಸ್ವಿ ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿದೆ ನ್ಯೂ ಜನರೇಷನ್ Range Rover ಎಸ್‍ಯುವಿ

ಈ ನ್ಯೂ ಜನರೇಷನ್ ರೇಂಜ್ ರೋವರ್ ಎಸ್‍ಯುವಿಯ ಹೆಸರನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಐಷಾರಾಮಿ ಎಸ್‍ಯುವಿಯು ಮುಂದಿನ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Tuesday, November 16, 2021, 10:09 [IST]
English summary
New range rover suv 2022 listed on company india website launch soon details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+