ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಜೆಎಲ್ಆರ್ ಕಂಪನಿಯು ತನ್ನ ಜನಪ್ರಿಯ ಐಷಾರಾಮಿ ಎಸ್‌ಯುವಿ ಮಾದರಿಯಾದ ವೆಲಾರ್ 2021ರ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 79.87 ಲಕ್ಷ ಬೆಲೆ ಹೊಂದಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ರೇಂಜ್ ರೋವರ್ ವೆಲಾರ್ ಹೊಸ ಆವೃತ್ತಿಯಲ್ಲಿ ಈ ಹಿಂದಿನ ಎರಡು ಎಂಜಿನ್ ಮಾದರಿಗಳನ್ನು ಉನ್ನತೀಕರಿಸಲಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆ ಹೊಂದಿರುವ ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯಲ್ಲೂ ಆರ್ ಡೈಮಾನಿಕ್ ವೆರಿಯೆಂಟ್ ಹೊಂದಿವೆ. ಭಾರತದಲ್ಲಿ 2017ರಿಂದ ಮಾರಾಟಗೊಳ್ಳುತ್ತಿರುವ ಹೊಸ ಕಾರು ಈಗಾಗಲೇ ಹಲವಾರು ಬಾರಿ ಉನ್ನತೀಕರಣಗೊಂಡಿದ್ದು, 2019ರಿಂದ ಭಾರತದಲ್ಲೇ ನಿರ್ಮಾಣಗೊಳ್ಳುತ್ತಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರುವ ಹೊಸ ವೆಲಾರ್ ಕಾರು ಮಾದರಿಯು ಎಲ್ಲಾ ಮಾದರಿ ಭೂಪ್ರದೇಶಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಆಫ್ ರೋಡ್ ಕೌಶಲ್ಯತೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಅತ್ಯಾಧುನಿಕ ವಿನ್ಯಾಸ ಮತ್ತು ಸುಧಾರಿತ ತಂತ್ರಜ್ಞಾನಗಳ ಪರಿಪೂರ್ಣ ಸಮತೋಲನವನ್ನು ನೀಡುವ ಹೊಸ ಕಾರಿನಲ್ಲಿ ನಾಲ್ಕು ಸಿಲಿಂಡರ್ ಹೊಂದಿರುವ ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಡೀಸೆಲ್ ಪವರ್ ಟ್ರೈನ್‍ ಆಯ್ಕೆಗಳು ಲಭ್ಯವಿವೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಇಂಜಿನಿಯಮ್ 2.0 ಲೀಟರ್ ಪೆಟ್ರೋಲ್ ಮಾದರಿಯು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 246-ಬಿಎಚ್‌ಪಿ ಮತ್ತು 365-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಇಂಜಿನಿಯಮ್ 2.0 ಲೀಟರ್ ಡೀಸೆಲ್ ಮಾದರಿಯು ಸಹ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ 201-ಬಿಎಚ್‌ಪಿ ಮತ್ತು 430-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಹಲವಾರು ಹೊಸ ಫೀಚರ್ಸ್‌ಗಳನ್ನು ಉನ್ನತೀಕರಿಸಿದ್ದು, ಏರ್ ಸಸ್ಪೆನ್ಷನ್, 3D ಸರೌಂಡ್ ಕ್ಯಾಮೆರಾ ಮತ್ತು PM2.5 ಫಿಲ್ಟರ್‍ನೊಂದಿಗೆ ಕ್ಯಾಬಿನ್ ಏರ್ ಅಯಾನೈಸೇಶನ್ ನಂತಹ ಹೊಸ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಹಾಗೆಯೇ ಹೊಸ ಕಾರಿನ ವೈಶಿಷ್ಟ್ಯತೆಗಳನ್ನು ಮತ್ತು ವಿಶಿಷ್ಠವಾಗಿಸಲು ಹೊಸ ಕಾರಿನಲ್ಲಿ ಪಿವಿ ಪ್ರೊ ಇನ್ಫೋಟೈನ್‍ಮೆಂಟ್ ಮತ್ತು ಆಕ್ಟಿವ್ ರೋಡ್ ನಾಯ್ಸ್ ಕ್ಯಾನ್ಸಲೇಷನ್ ನಂತಹ ಫೀಚರ್ಸ್‌ಗಳನ್ನು ಸಹ ಜೋಡಣೆ ಮಾಡಲಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಹೊಸ ಫೀಚರ್ಸ್‌ಗಳೊಂದಿಗೆ ವೆಲಾರ್ ಕಾರು ಮಾದರಿಯು ಈ ಹಿಂದೆಂದಿಗಿಂತಲೂ ಆಕರ್ಷಕ, ಹೆಚ್ಚು ಸುರಕ್ಷಿತ ಮತ್ತು ಸ್ಮಾರ್ಟ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ತಾಂತ್ರಿಕವಾಗಿ ಸುಧಾರಿತ ಐಷಾರಾಮಿ ಎಸ್ಯುವಿಗಳಲ್ಲಿ ಇದೂ ಕೂಡಾ ಒಂದಾಗಿದೆ.

ಹೊಸ ವೈಶಿಷ್ಟ್ಯತೆಗಳೊಂದಿಗೆ 2021ರ ರೇಂಜ್ ರೋವರ್ ವೆಲಾರ್ ಬಿಡುಗಡೆ

ಸದ್ಯ ಉನ್ನತೀಕರಿಸಲಾದ ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮೂಲಕ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವ ರೇಂಜ್ ರೋವರ್ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ವಿತರಣೆ ಆರಂಭಿಸಲಿದ್ದು, ಹೊಸ ಕಾರು ಜಾಗ್ವಾರ್ ಎಫ್-ಪೇಸ್ ಮತ್ತು ಮರ್ಸಿಡಿಸ್ ಜಿಎಲ್‌ಇ ಕೂಪೆ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಬಲ್ಲದು.

More from DriveSpark

Article Published On: Wednesday, June 16, 2021, 16:33 [IST]
English summary
2021 Range Rover Velar Launched In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+