ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಕೊರೊಲ್ಲಾ ಕ್ರಾಸ್ ಎಸ್‍ಯುವಿಯನ್ನು ಅಮೆರಿಕದಲ್ಲಿ ಪರಿಚಯಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಟೊಯೊಟಾ ಕಂಪನಿಯು ಈ ಹೊಸ ಕೊರೊಲ್ಲಾ ಕ್ರಾಸ್ ಎಸ್‍ಯುವಿಯನ್ನು ಥೈಲ್ಯಾಂಡ್ ನಲ್ಲಿ ಬಿಡುಗಡೆಗೊಳಿಸಿತು.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ನಂತರ ಏಷ್ಯಾದ ಇತರ ಮಾರುಕಟ್ಟೆಗಳಾದ ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ಮಲೇಷ್ಯಾಗಳಿಗೆ ವಿಸ್ತರಿಸಲಾಯಿತು. ನಂತರ ಎಸ್‌ಯುವಿಗಳು ಮತ್ತು ಕ್ರಾಸ್‌ಒವರ್‌ಗಳು ಅಮೆರಿಕಾದಲ್ಲಿ ಹೆಚ್ಚು ಜನಪ್ರಿಯವಾಗಿರುದಕ್ಕೆ ಕೊರೊಲ್ಲಾ ಕ್ರಾಸ್‌ ಅನ್ನು ಕೂಡ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಅದರಂತೆ ಇತ್ತೀಚೆಗೆ ಅಮೆರಿಕಾದಲ್ಲಿ ಸ್ಫಾಟ್ ಟೆಸ್ಟ್ ನಡೆಸುತ್ತಿರುವ ಟೊಯೊಟಾ ಕ್ರಾಸ್ ಎಸ್‍ಯುವಿಯ ಸ್ಪೈ ಚಿತ್ರಗಳು ಬಹಿರಂಗವಾಗಿತ್ತು. ಇದೀಗ ಟೊಯೊಟಾ ಕಂಪನಿಯು ಅಮೆರಿಕ ಮಾರುಕಟ್ಟೆಗಾಗಿ ಹೊಸ ಟೀಸರ್ ಬಿಡುಗಡೆಗೊಳಿಸಿದೆ.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಅಮೆರಿಕದಲ್ಲಿ ಈ ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯನ್ನು ಜೂನ್ 2ರಂದು ಪರಿಚಯಿಸಲಾಗುತ್ತದೆ. ಏಷ್ಯಾದಲ್ಲಿ ಮಾರಾಟವಾದ ಕ್ರಾಸ್‌ಒವರ್‌ಗೆ ಹೋಲಿಸಿದರೆ ಯುಎಸ್-ಸ್ಪೆಕ್ ಆವೃತ್ತಿಯು ಹಲವು ಬದಲಾವಣೆಗಳನ್ನು ಹೊಂದಿಲ್ಲ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಟೊಯೊಟಾ ಕ್ರಾಸ್ ಎಸ್‍ಯುವಿಯು ಟಿಎನ್‌ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್) ಪ್ಲಾಟ್‌ಫಾರ್ಮ್ ಆಧಾರವಾಗಿರಿಸಿಕೊಳ್ಳುತ್ತದೆ. ಹೊಸ ಕೊರೊಲ್ಲಾ ಕ್ರಾಸ್‌ನಲ್ಲಿ 1.8-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇನ್ನು ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್ ಬಾಸ್ಕ್ ಅನ್ನು ಜೋಡಿಸಲಾಗುತ್ತದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಇದರ 1.8-ಲೀಟರ್ ಎಂಜಿನ್ ನೊಂದಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಜೋಡಿಸಲಾಗುತ್ತದೆ. ಕೊರೊಲ್ಲಾ ಕ್ರಾಸ್ ಹೈಬ್ರಿಡ್ ಆವೃತ್ತಿಯೊಂದಿಗೆ ಕೂಡ ಲಭ್ಯವಿರುತ್ತದೆ. ಇದು 98 ಬಿಹೆಚ್‍ಪಿ ಪವರ್ ಮತ್ತು 142 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೆಚ್ಚುವರಿ 72 ಬಿಹೆಚ್‍ಪಿ ಪವರ್ ಮತ್ತು 163 ಎನ್‌ಎಂ ಟಾರ್ಕ್ ಗಳನ್ನು ಉತ್ಪಾದಿಸಲು ಎಲೆಕ್ಟ್ರಿಕ್ ಮೋಟರ್ ಸಹಾಯ ಮಾಡುತ್ತದೆ. ಈ ಎಲ್ಲಾ ಎಂಜಿನ್ ಆಯ್ಕೆಗಳು ಯುಎಸ್-ಸ್ಪೆಕ್ ನಲ್ಲಿ ಲಭ್ಯವಿರುತ್ತದೆ.

MOST READ: ಫೆಬ್ರವರಿ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಡೀಸೆಲ್ ಕಾರುಗಳಿವು

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯು ಒಟ್ಟಾರೆ 4,460 ಎಂಎಂ ಉದ್ದ, ಮತ್ತು1,825 ಎಂಎಂ ಅಗಲವನ್ನು ಹೊಂದಿದೆ. ಇನ್ನು ಈ ಹೊಸ ಎಸ್‍ಯುವಿಯು 1,620 ಎಂಎಂ ವ್ಹೀಲ್ ಬೇಸ್ ಅನ್ನು ಹೊಂದಿದೆ.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಇನ್ನು ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಇತ್ತಿಚ್ಗೆ ಆಗ್ಯಾ ಕಾರಿನ ವಿನ್ಯಾಸದ ಪೇಟೆಂಟ್ ಅನ್ನು ಪಡೆದಿದೆ. ಇಂಡೋನೇಷ್ಯಾದಲ್ಲಿ ಒಂದು ವರ್ಷದ ಹಿಂದೆ ಟೊಯೊಟಾ ಕಂಪನಿಯು ಆಗ್ಯಾ ಫೇಸ್‌ಲಿಫ್ಟೆಡ್ ಮಾದರಿಯನ್ನು ಪರಿಚಯಿಸಲಾಗಿತ್ತು. ಈ ಹ್ಯಾಚ್‌ಬ್ಯಾಕ್ ಅನ್ನು ಇಂಡೋನೇಷ್ಯಾದಲ್ಲಿ ಅನೇಕ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್‍ಯುವಿಯ ಟೀಸರ್ ಬಿಡುಗಡೆ

ಈ ಕೊರೊಲ್ಲಾ ಕ್ರಾಸ್‌ನ ಹೊರಭಾಗವು ಬಾಡಿಶೈಲಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡುವವರೆಗೆ ಸಾಮಾನ್ಯ ಕೊರೊಲ್ಲಾವನ್ನು ಹೋಲುತ್ತದೆ. ಇನ್ನು ಇಂಟಿರಿಯರ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟ್, ಸ್ಟೀರಿಂಗ್ ಮೌಂಟಡ್ ಕಂಟ್ರೋಲ್ ಗಳು ಮತ್ತು ಸುರಕ್ಷತಾ ಫೀಚರ್ಸ್ ಗಳೊಂದಿಗೆ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Corolla Cross Teased Again Ahead Of Debut On June 2. Read In Kannada.
Story first published: Sunday, May 30, 2021, 11:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X