ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಟೊಯೊಟಾ ತನ್ನ ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್ ವೆರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2021ರ ಫಾರ್ಚೂನರ್ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟು ಹಾಕಿದ ಎಸ್‍ಯುವಿಯಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಈ ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.29.98 ಲಕ್ಷಗಳಿಂದ ರೂ.37.48 ಲಕ್ಷಗಳಾಗಿದೆ. ಫಾರ್ಚೂನರ್ ಫೇಸ್‌ಲಿಫ್ಟ್ ಮಾದರಿಯೊಂದಿಗೆ ಟೊಯೊಟಾ ತನ್ನ ಎಸ್‍ಯುವಿಯ ರೇಂಜ್-ಟಾಪಿಂಗ್ ಲೆಜೆಂಡರ್' ವೆರಿಯೆಂಟ್ ಅನ್ನು ಕೂಡ ಬಿಡುಗಡೆಗೊಳಿಸಿದೆ. ಹೊಸ ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.37.58 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್ ವೆರಿಯೆಂಟ್ ಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಮಾದರಿಗಳನ್ನು ಖರೀದಿಸಲು ಬಯಸುವ ಗ್ರಾಹಕರು ಆನ್‌ಲೈನ್ ಅಥವಾ ಭಾರತದಾದ್ಯಂತದ ಅಥವಾ ಟೊಯೊಟಾ ಕಂಪನಿಯ ಯಾವುದೇ ಡೀಲರ್ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಶೀಘ್ರದಲ್ಲೇ ಹೊಸ ಫಾರ್ಚೂನರ್ ಮಾದರಿಗಳ ವಿತರಣೆಯನ್ನು ಪ್ರಾರಂಭಿಸಬಹುದು.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಮೊದಲಿಗೆ ಹೊಸ ಟೊಯೋಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುವುದಾದರೆ, 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕರಿಸಿದ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳನ್ನು ಹೊಂದಿವೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಇದರೊಂದಿಗೆ ಕ್ರೋಮ್ ಸರೌಂಡ್‌ನೊಂದಿಗೆ ದೊಡ್ಡ ಫ್ರಂಟ್ ಗ್ರಿಲ್, ಫಾಗ್ ಲ್ಯಾಂಪ್‌ಗಳಿಗಾಗಿ ಹೊಸ ಹೌಸಿಂಗ್‌ಗಳೊಂದಿಗೆ ನವೀಕರಿಸಿದ ಫ್ರಂಟ್ ಬಂಪರ್ ಹೊಂದಿದೆ. ಇನ್ನು ಹೊಸ 18 ಇಂಚಿನ ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಇನ್ನು ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಈಗ ಹೆಚ್ಚು ಪ್ರೀಮಿಯಂ ಆಗಿ ನವೀಕರಿಸಿದ್ದು, ಕೆಲವು ಹೊಸ ಫೀಚರೆ ಅನ್ನು ಅಳವಡಿಸಿದೆ. ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗಳೊಂದಿಗಿನ ಹೊಸ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಕನೆಕ್ಟಿವಿಟಿ ಕಾರು ತಂತ್ರಜ್ಞಾನವನ್ನು ಹೊಂದಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಇದರೊಂದಿಗೆ ವೆಂಟಿಲೇಟಡ್ ಮುಂಭಾಗದ ಸೀಟುಗಳು, ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 11-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ, ಆಂಬಿಯೆಂಟ್ ಲೈಟಿಂಗ್ ಮತ್ತು ಇತರ ಫೀಚರ್ ಗಳನ್ನು ಒಳಗೊಂಡಿದೆ. ಟೊಯೊಟಾ ಫಾರ್ಚೂನರ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಫೀಚರ್ ಗಳಲ್ಲಿ ಹಿಂದೆ ಇತ್ತು, ಆದರೆ ಹೊಸ ಅಪ್ದೇಟ್ ಗಳನ್ನು ಪಡೆದು ಈ ಅಪವಾದಗಳಿಗೆ ಉತ್ತರ ನೀಡಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಹೆಚ್ಚು ಅಗ್ರೇಸಿವ್ ಮತ್ತು ಸ್ಪೋರ್ಟಿಯರ್ ವಿನ್ಯಾಸವನ್ನು ಹೊಂದಿದೆ. ಈ ಟೊಯೊಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಎಸ್‍ಯುವಿಯ ಮುಂಭಾಗ ಆಕರ್ಷಕವಾಗಿ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಫಾರ್ಚೂನರ್ ಲೆಜೆಂಡರ್ ಎಸ್‍ಯುವಿಯಲ್ಲಿ ಸಂಪೂರ್ಣವಾಗಿ ಹೊಸ ನಯವಾದ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಹೊಸ ಅಲಾಯ್ ವ್ಹೀಲ್ ಗಳು ಮತ್ತು ವಿಶೇಷ ಡ್ಯುಯಲ್-ಟೋನ್ ಬಣ್ನಗಳನ್ನು ಹೊಂದಿವೆ. ಟೊಯೋಟಾ ಫಾರ್ಚೂನರ್ ಲೆಜೆಂಡರ್ ವೆರಿಯೆಂಟ್ ಒಳಭಾಗದಲ್ಲಿಯು ಕೆಲವು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಹೊಸ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಎಸ್‍ಯುವಿ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7-ಲೀಟರ್ ಪೆಟ್ರೋಲ್ ಎಂಜಿನ್ 166 ಬಿಹೆಚ್‍ಪಿ ಪವರ್ ಮತ್ತು 245 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು ಐದು-ಸ್ಪೀಡ್ ಮ್ಯಾನುವಲ್ ಅಥವಾ ಆರು-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಹೊಂದಿಕೆಯಾದಾಗ ಡೀಸೆಲ್ ಎಂಜಿನ್ 177 ಬಿಹೆಚ್‍ಪಿ ಪವರ್ ಮತ್ತು 420 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆರು-ಸ್ಪೀಡ್ ಟಾರ್ಕ್ ಕರ್ನವಾಟರ್ ಗೇರ್ ಬಾಕ್ಸ್ ಜೋಡಿಸಲಾದ ಯುನಿಟ್ 201 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಟೂ ವ್ಹೀಲ್ ಮತ್ತು ಫ್ಹೋರ್ ವ್ಹೀಲ್ ಡ್ರೈವ್ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗುವುದು. ಟಾಪ್-ರೇಜಿಂಗ್ ಫಾರ್ಚೂನರ್ ಲೆಜೆಂಡರ್ ಮಾದರಿಯನ್ನು ಕೇವಲ 4x2 ಸಂರಚನೆಯಲ್ಲಿ ನೀಡಲಾಗುವುದು.

ಬಿಡುಗಡೆಯಾಯ್ತು ಬಹುನಿರೀಕ್ಷಿತ 2021ರ ಫಾರ್ಚೂನರ್ ಫೇಸ್‌ಲಿಫ್ಟ್ ಮತ್ತು ಲೆಜೆಂಡರ್

ಹಿಂದಿನ ಫಾರ್ಚೂನರ್ ಮಾದರಿಗೆ ಹೋಲಿಸಿದರೆ ಫಾರ್ಚೂನರ್ ಫೇಸ್‌ಲಿಫ್ಟ್ ಹಲವಾರು ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ಈ ಎರಡು ಎಸ್‍ಯುವಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಭಾರತದ ಎಸ್‍ಯುವಿ ವಿಭಾಗದಲ್ಲಿ ಈ ಎರಡು ಹೊಸ ಮಾದರಿಗಳು ಸಂಚಲವನ್ನು ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

More from DriveSpark

Article Published On: Wednesday, January 6, 2021, 15:04 [IST]
English summary
2021 Toyota Fortuner Facelift & Legender Launched. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+