ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಅವಧಿ ಮೀರಿದ ಹಳೆಯ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಲು ಹೊಸ ಸ್ಕ್ರ್ಯಾಪೇಜ್ ನೀತಿಯನ್ನು ಕಡ್ಡಾಯ ಜಾರಿಗೆ ತರುವ ಮಹತ್ವದ ನಿರ್ಣಯ ಕೈಗೊಂಡಿದ್ದು, ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಮಾಲಿನ್ಯ ತಗ್ಗಿಸುವುದು ಮಾತ್ರವಲ್ಲದೆ ಹೊಸ ಉದ್ಯಮ ಚಟುವಟಿಕೆಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯಾಗುವ ನೀರಿಕ್ಷೆಯಿದೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಆಟೋ ಉತ್ಪಾದನಾ ತಜ್ಞರ ಅಭಿಪ್ರಾಯದಂತೆ 2021-22ರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ವೇಳೆ ವೆಹಿಕಲ್ ಸ್ಕ್ರ್ಯಾಪೇಜ್ ನೀತಿ ಜಾರಿಯನ್ನು ಪ್ರಸ್ತಾಪಿಸಿರುವ ಕೇಂದ್ರ ಸರ್ಕಾರವು ವಾಹನ ಸ್ಕ್ರ್ಯಾಪೇಜ್ ನೀತಿಯೊಂದಿಗೆ ಹೆಚ್ಚುತ್ತಿರುವ ಮಾಲಿನ್ಯ ತಡೆಯಲು ಮತ್ತು ಆರ್ಥಿಕವಾಗಿ ಭಾರೀ ನಷ್ಟದಲ್ಲಿರುವ ಆಟೋ ಉದ್ಯಮಕ್ಕೆ ನೆರವಾಗುವುದರ ಜೊತೆಗೆ ಹೊಸ ಉದ್ಯಮ ಚಟುವಟಿಕೆಯೊಂದಿಗೆ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನೀರಿಕ್ಷೆಯಿಟ್ಟುಕೊಳ್ಳಲಾಗಿದೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಕೇಂದ್ರದ ಹೊಸ ವಾಹನ ಗುಜರಿ ನೀತಿಯ ಪ್ರಯೋಜನಗಳ ಕುರಿತಾಗಿ ಸಂಸತ್‌ನಲ್ಲಿ ಬಜೆಟ್ ಮೇಲಿನ ಭಾಷಣ ವೇಳೆ ಉತ್ತರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೊಸ ನೀತಿಯು ಕೇವಲ ಆಟೊಮೊಬೈಲ್ ಕ್ಷೇತ್ರಕ್ಕೆ ಮಾತ್ರವಲ್ಲ ಹೊಸ ಉದ್ಯಮವನ್ನು ಆಧರಿಸಿ ಪ್ರತ್ಯೇಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 25 ಲಕ್ಷ ಉದ್ಯೋಗಗಳು ಸೃಷ್ಠಿಯಾಗುವ ಭರವಸೆ ನೀಡಿದರು.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಹಾಗೆಯೇ ಹಳೆಯ ವಾಹನಗಳ ಸ್ವಯಂಪ್ರೇರಣೆಯಿಂದ ಸ್ಕ್ರ್ಯಾಪೇಜ್ ಪಾಲಿಸಿ ಅಳವಡಿಸಿಕೊಳ್ಳುವ ಮಾಲೀಕರಿಗೆ ಯಾವ ರೀತಿಯಲ್ಲಿ ಪರಿಹಾರ ಸಿಗಲಿದೆ ಎನ್ನುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವರು ಸ್ವಯಂ ಪ್ರೇರಣೆಯಿಂದ ವಾಹನಗಳನ್ನು ಗುಜುರಿಗೆ ಹಾಕುವ ವಾಹನ ಮಾಲೀಕರಿಗೆ ನ್ಯಾಯಯುತ ಬೆಲೆ ನಿಗದಿಪಡಿಸಲಿದ್ದು, ಈ ಕುರಿತು ಹೊಸ ನೀತಿಯ ಸಮಗ್ರ ಪ್ರಕಟಣೆಯಲ್ಲಿ ತಿಳಿಸುವುದಾಗಿ ಸಂಸತ್‌ನಲ್ಲಿ ಉತ್ತರಿಸಿದ್ದಾರೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಇನ್ನು ಸ್ಕ್ಯಾಪೇಜ್ ನೀತಿಯು ಜಾರಿ ನಂತರ ಹಳೆಯ ವಾಹನಗಳಿಂದ ಬರುವ ಬಿಡಿಭಾಗಗಳ ನಿರ್ವಹಣೆ ಮತ್ತು ಮರುಬಳಕೆ ಉದ್ಯಮದಲ್ಲಿ ರೂ. 10 ಸಾವಿರ ಕೋಟಿ ಹೂಡಿಕೆಯಾಗಲಿದ್ದರೆ ವಾರ್ಷಿಕವಾಗಿ ರೂ. 43 ಸಾವಿರ ಕೋಟಿ ವ್ಯವಹಾರದ ನೀರಿಕ್ಷೆಯಿದೆ. ಇನ್ನು ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯನ್ನು ಪ್ರತ್ಯೇಕವಾಗಿ ಪ್ರಕಟಗೊಳ್ಳಲಿದ್ದು, ಹಳೆಯ ವಾಹನಗಳಿಗೆ ಮತ್ತು ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದಿರುವ ಕೇಂದ್ರ ಸರ್ಕಾರವು 2022ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆಗೊಳಿಸಲಿದೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

20 ವರ್ಷ ಮೇಲ್ಪಟ್ಟ ವ್ಯಯಕ್ತಿಕ ಬಳಕೆಯ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ಬಳಕೆಯ ವಾಹನಗಳನ್ನು ಹೊಸ ನೀತಿಯಡಿಯಲ್ಲಿ ಸ್ಕ್ರ್ಯಾಪ್‌ಗೊಳ್ಳಲಿದ್ದು, ಅವಧಿ ಮುಗಿದ ನಂತರವೂ ಹಳೆಯ ವ್ಯಯಕ್ತಿಕ ಬಳಕೆಯ ವಾಹನಗಳ ಸಂಚಾರವನ್ನು ಮುಂದುವರಿಸಬೇಕಿದ್ದಲ್ಲಿ ಹಲವಾರು ಕಠಿಣ ಕ್ರಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಅವಧಿ ಮುಗಿದ ವ್ಯಯಕ್ತಿಕ ವಾಹನಗಳ ಬಳಕೆಯನ್ನು ಮುಂದುವರಿಸುವ ಆಸಕ್ತಿ ಇದ್ದಲ್ಲಿ ವಿವಿಧ ಹಂತದ ಮಾಲಿನ್ಯ ಪರೀಕ್ಷೆಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ಹಸಿರು ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಆಗ ವಾಹನ ನಿರ್ವಹಣೆಯು ಸಾಮಾನ್ಯ ವಾಹನದ ನಿರ್ವಹಣೆಗಿಂತಲೂ ದುಪ್ಪಟ್ಟು ಹೆಚ್ಚಳವಾಗಲಿದ್ದು, ನಿರ್ವಹಣೆ ಹೆಚ್ಚಳವಾಗುವುದರೊಂದಿಗೆ ಮಾಲೀಕರೇ ಸ್ವಯಂಪ್ರೇರಿತರಾಗಿ ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳಲಿದೆ ಎನ್ನುವುದೇ ಈ ನೀತಿಯ ಉದ್ದೇಶವಾಗಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಹೊಸ ನೀತಿಯಿಂದಾಗಿ ಕೇವಲ ಆಟೋ ಉದ್ಯಮಕ್ಕೆ ಮಾತ್ರವಲ್ಲ ಮಾಲಿನ್ಯ ಮತ್ತು ತೈಲ ಆಮದು ತಗ್ಗಿಸಲು ಪರಿಣಾಮಕಾರಿಯಾದ ನೀತಿಯಾಗಿದ್ದು, ಅತಿ ಹೆಚ್ಚು ಇಂಧನ ದಹಿಸುವ ಹಳೆಯ ವಾಹನಗಳ ಬಳಕೆಗೆ ಬ್ರೇಕ್ ಹಾಕಿದ್ದಲ್ಲಿ ಅತಿ ಹೆಚ್ಚು ಇಂಧನ ಕಾರ್ಯಕ್ಷಮತೆಯ ಹೊಂದಿರುವ ಹೊಸ ವಾಹನಗಳ ಉತ್ತೇಜನ ನೀಡಲು ಸಹಕಾರಿಯಾಗಲಿದೆ.

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಜೊತೆಗೆ ಹೊಸ ಸ್ಕ್ರ್ಯಾಪೇಜ್ ನೀತಿಯಿಂದಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಸಾಕಷ್ಟು ಸಹಕಾರಿಯಾಗಲಿದ್ದು, ಹೊಸ ನಿಯಮದಲ್ಲಿ ಹಳೆಯ ವಾಹನಗಳಿಗೆ ಮತ್ತು ಬಳಕೆ ಯೋಗ್ಯವಲ್ಲದ ಅನರ್ಹ ವಾಹನಗಳಿಗೆ ಪ್ರತ್ಯೇಕವಾಗಿ ಸ್ಕ್ರ್ಯಾಪೇಜ್ ನಿಯಮಗಳು ಅನ್ವಯವಾಗಲಿವೆ.

MOST READ: 2021ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಎಸ್‌ಯುವಿ ಕಾರುಗಳಿವು..!

ಗುಜುರಿ ನೀತಿಯೊಂದಿಗೆ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿಯ ನೀರಿಕ್ಷೆಯಲ್ಲಿ ಕೇಂದ್ರ ಸರ್ಕಾರ

ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿಯಲ್ಲಿ ಹಳೆಯ ವಾಹನಗಳನ್ನು ಮಾಲೀಕರೇ ನೇರವಾಗಿ ಅಧಿಕೃತ ಸ್ಕ್ರ್ಯಾಪೇಜ್ ಕೇಂದ್ರಗಳಲ್ಲಿ ಸ್ಕ್ಯಾಪ್ ಮಾಡಿಸುವ ಮೂಲಕ ಹೊಸ ವಾಹನಗಳ ಖರೀದಿಗೆ ಕೆಲವು ವಿನಾಯ್ತಿ ಪಡೆದುಕೊಳ್ಳುವ ಅವಕಾಶ ನೀಡಲಾಗುತ್ತಿದೆ.

Article Published On: Monday, February 8, 2021, 18:18 [IST]
English summary
Vehicle Scrapping Policy Will Create 25 Lakh Jobs. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+