ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಭಾರತದಲ್ಲಿ ಪ್ರತಿದಿನ 30 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಭಾರತ್ ಮಾಲಾ ಯೋಜನೆಯಡಿ ದೇಶದ ನಗರಗಳನ್ನು ಹೆದ್ದಾರಿಗಳ ಮೂಲಕ ಸಂಪರ್ಕಿಸಲಾಗುತ್ತದೆ.

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಈ ಯೋಜನೆಯಡಿಯಲ್ಲಿ ಅತ್ಯಂತ ವೇಗವಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ನಿತಿನ್ ಗಡ್ಕರಿ ಹೇಳಿದರು. ದೇಶದಲ್ಲಿ ಪ್ರತಿದಿನ 29.6 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಸಂಸತ್ತಿನಲ್ಲಿ ಹೇಳಿದರು. ಇದು ಈವರೆಗಿನ ಒಂದು ದಿನದ ದಾಖಲೆಯಾಗಿದೆ. ಇದೇ ವೇಗದಲ್ಲಿ ರಸ್ತೆಗಳನ್ನು ನಿರ್ಮಿಸಿದರೆ ಶೀಘ್ರದಲ್ಲೇ ನಾವು ಯುರೋಪ್ ಹಾಗೂ ಅಮೆರಿಕಾ ದೇಶಗಳಿಗೆ ಸರಿ ಸಾಟಿಯಾಗುತ್ತೇವೆ ಎಂದು ಅವರು ಹೇಳಿದರು.

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ರೂ.5.35 ಲಕ್ಷ ಕೋಟಿಗಳ ವೆಚ್ಚದಲ್ಲಿ ಭಾರತದಲ್ಲಿ ಭಾರತ್ ಮಾಲಾ ಯೋಜನೆಯಡಿಯಲ್ಲಿ 34,800 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈ ಪೈಕಿ 13,521 ಕಿ.ಮೀ ಕಾಮಗಾರಿಯನ್ನು ಆರಂಭಿಸಲಾಗಿದ್ದು, 16,500 ಕಿ.ಮೀ ಕಾಮಗಾರಿಯನ್ನು ಆರಂಭಿಸಬೇಕಾಗಿದೆ ಎಂದು ಅವರು ಹೇಳಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ನಂತರ 4,800 ಕಿ.ಮೀಗಾಗಿ ಪ್ರತ್ಯೇಕ ಟೆಂಡರ್ ಕರೆಯಲಾಗುವುದು. ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಒಂದು ದಿನದಲ್ಲಿ 2.54 ಕಿ.ಮೀ ಉದ್ದದ 4 ಲೇನ್ ಕಾಂಕ್ರೀಟ್ ರಸ್ತೆಯನ್ನು ಸಹ ದಾಖಲೆ ಅವಧಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಟೇಲ್ ಇನ್‌ಫ್ರಾಸ್ಟ್ರಕ್ಚರ್ ಒಂದೇ ದಿನದಲ್ಲಿ 2.54 ಕಿ.ಮೀ ರಸ್ತೆ ನಿರ್ಮಿಸಿದೆ. ಈ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಪಡೆದುಕೊಂಡಿದೆ. 2021ರ ಮಾರ್ಚ್ 31ರೊಳಗೆ ಎನ್‌ಹೆಚ್‌ಎಐ 11,000 ಕಿ.ಮೀ ರಸ್ತೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಿದೆ ಎಂದು ಗಡ್ಕರಿ ಹೇಳಿದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಚಾರ್ ಧಾಮ್ ಯೋಜನೆಯಲ್ಲಿ ಎನ್‌ಹೆಚ್‌ಎಐ 825 ಕಿ.ಮೀ ರಸ್ತೆಗಳನ್ನು ಅಗಲಗೊಳಿಸುತ್ತಿದೆ. ಈ ಯೋಜನೆಯಲ್ಲಿ ಉತ್ತರಾಖಂಡದ ಕೈಲಾಶ್-ಮಾನಸರೋವರ್ ಮಾರ್ಗದಲ್ಲಿ ಜನಕಿ ಚಟ್ಟಿ (ಯಮುನೋತ್ರಿ), ಗಂಗೋತ್ರಿ, ಗೌರಿಕುಂಡ್ (ಕೇದಾರನಾಥ) ಹಾಗೂ ಮನ (ಬದ್ರಿನಾಥ್) ರಸ್ತೆಗಳನ್ನು ರೂ.12,072 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಅಗಲಗೊಳಿಸಲಾಗುತ್ತಿದೆ.

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಚಾರ್ ಧಾಮ್ ಯೋಜನೆಯನ್ನು 2020ರ ಮಾರ್ಚ್ ತಿಂಗಳಿನಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿಷೇಧದಿಂದಾಗಿ ಯೋಜನೆಯನ್ನು ಪೂರ್ಣಗೊಳಿಸುವ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ರಸ್ತೆ ಗುಣಮಟ್ಟವನ್ನು ಸುಧಾರಿಸಲು ಕಳಪೆ ರಸ್ತೆ ನಿರ್ಮಿಸುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಎನ್‌ಹೆಚ್‌ಎಐ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರವು ಕಳಪೆ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ.

ಪ್ರತಿದಿನ ಸುಮಾರು 30 ಕಿ.ಮೀ ರಸ್ತೆ ನಿರ್ಮಿಸಿ ಹೊಸ ದಾಖಲೆ ಬರೆದ ಎನ್‌ಹೆಚ್‌ಎಐ

ಈ ಕಾನೂನಿನ ಅಡಿಯಲ್ಲಿ ಕಳಪೆ ರಸ್ತೆ ನಿರ್ಮಿಸುವ ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಸಿ ದಂಡ ವಿಧಿಸಲಾಗುತ್ತದೆ. ಕಳಪೆ ರಸ್ತೆಯಿಂದಾಗಿ ಯಾವುದೇ ರೀತಿಯ ಅಪಘಾತ ಸಂಭವಿಸಿದರೆ ಅಂತಹ ರಸ್ತೆಗಳನ್ನು ನಿರ್ಮಿಸುವವರಿಗೆ ಸರ್ಕಾರವು ರೂ.5 ಕೋಟಿಗಳಿಂದ ರೂ.10 ಕೋಟಿಗಳವರೆಗೆ ದಂಡವನ್ನು ವಿಧಿಸಲಿದೆ. ಜೊತೆಗೆ 3 ವರ್ಷ ನಿಷೇಧ ವಿಧಿಸಲಿದೆ.

Most Read Articles

Kannada
English summary
NHAI creates new record by constructing about 30 kms road per day. Read in Kannada.
Story first published: Friday, February 5, 2021, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X