ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) 2020-21ರ ಹಣಕಾಸು ವರ್ಷದಲ್ಲಿ 4,350 ಕಿ.ಮೀ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಲಿದೆ. ಹೊಸ ವರದಿಯ ಪ್ರಕಾರ ಮಾರ್ಚ್ 2021ರ ಕೊನೆಯ ವೇಳೆಗೆ ಎನ್‌ಹೆಚ್‌ಎಐ 2,000 ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಇದರ ಜೊತೆಗೆ ಮುಂದಿನ ಹಣಕಾಸು ವರ್ಷದಲ್ಲಿ ಹೊಸ ಹೆದ್ದಾರಿ ಯೋಜನೆಗಳಿಗೆ ಅನುಮೋದನೆ ನೀಡಲು ಎನ್‌ಹೆಚ್‌ಎಐ ತಯಾರಿ ನಡೆಸುತ್ತಿದೆ.ವರದಿಗಳ ಪ್ರಕಾರ, 2021-22ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎನ್‌ಹೆಚ್‌ಎಐ ರೂ.50,000 ಕೋಟಿ ಯೋಜನೆಗೆ ಅನುಮೋದನೆ ನೀಡಲಿದೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಕಳೆದ ಹಣಕಾಸು ವರ್ಷದಲ್ಲಿ ಎನ್‌ಹೆಚ್‌ಎಐ 3,217 ಕಿ.ಮೀ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ರೂ.80,000 ಕೋಟಿ ಯೋಜನೆಗೆ ಅನುಮೋದನೆ ನೀಡಿತ್ತು. ಈ ಹಣಕಾಸು ವರ್ಷದಲ್ಲಿ ಲಾಕ್‌ಡೌನ್ ತೆಗೆದು ಹಾಕಿದ ನಂತರ ರಸ್ತೆ ನಿರ್ಮಾಣ ಕಾರ್ಯಗಳನ್ನು ವೇಗಗೊಳಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಹೆಚ್‌ಎಐ 2,350 ಕಿ.ಮೀ ಹೆದ್ದಾರಿ ಯೋಜನೆಗಳಿಗೆ ರೂ.1.3 ಲಕ್ಷ ಕೋಟಿಗಳ ಅನುಮೋದನೆ ನೀಡಲಿದೆ. ಇದೇ ವೇಳೆ ಎನ್‌ಹೆಚ್‌ಎಐ ಮಾರ್ಚ್ ಕೊನೆಯಲ್ಲಿ 2,000 ಕಿ.ಮೀ ಯೋಜನೆಗಳಿಗೆ ಅನುಮೋದನೆ ನೀಡಲಿದೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಪ್ರಸಕ್ತ ಹಣಕಾಸು ವರ್ಷದಲ್ಲಿ ಎನ್‌ಹೆಚ್‌ಎಐ ಯೋಜನೆಗಳಿಗೆ ಅನುಮೋದನೆ ನೀಡುವ ವೇಗವನ್ನು ಹೆಚ್ಚಿಸಿದ್ದರೂ, ಪ್ರಸ್ತಾವಿತ ಯೋಜನೆಗಳನ್ನು ಸಮಯೋಚಿತವಾಗಿ ಪೂರ್ಣಗೊಳಿಸುವುದು ಸವಾಲಿನ ಕೆಲಸವಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿಯ ಸಂಸದೀಯ ಸ್ಥಾಯಿ ಸಮಿತಿಯು ಹೆದ್ದಾರಿ ಯೋಜನೆಗಳಿಗೆ ಆದ್ಯತೆ ನೀಡುವಂತೆ ಎನ್‌ಹೆಚ್‌ಎಐಗೆ ಸೂಚಿಸಿದೆ.ಇದುವರೆಗೂ ರೂ.3.15 ಲಕ್ಷ ಕೋಟಿ ವೆಚ್ಚದ 888 ಹೆದ್ದಾರಿ ಯೋಜನೆಗಳು ವಿಳಂಬವಾಗಿವೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಸಮಿತಿಯು ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ಇಲಾಖೆ ಹಾಗೂ ಅದಕ್ಕೆ ಸಂಬಂಧಿಸಿದ ಏಜೆನ್ಸಿಗಳು ಹೊಸ ಯೋಜನೆಗಳನ್ನು ಘೋಷಿಸುವ ಬದಲು ಈಗಾಗಲೇ ಘೋಷಿಸಿದ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸಬೇಕು ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಗಡಿ ಪ್ರದೇಶಗಳನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ನಿರ್ಮಿಸುವತ್ತ ಕೇಂದ್ರ ಸರ್ಕಾರವು ಗಮನ ಹರಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ತೀವ್ರವಾಗಿ ತತ್ತರಿಸಿರುವ ಸಾರಿಗೆ ಕ್ಷೇತ್ರಕ್ಕೆ ಹೆದ್ದಾರಿ ಯೋಜನೆಗಳು ವರದಾನವಾಗುವ ನಿರೀಕ್ಷೆಗಳಿವೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಎನ್‌ಹೆಚ್‌ಎಐ ಇತ್ತೀಚಿಗಷ್ಟೇ ಕೇವಲ 18 ಗಂಟೆಗಳಲ್ಲಿ 25.54 ಕಿ.ಮೀ ಉದ್ದದ ಸಿಂಗಲ್ ಲೇನ್ ರಸ್ತೆಯನ್ನು ನಿರ್ಮಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ಬರೆದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ವಿಜಯಪುರ - ಸೋಲಾಪುರ ನಡುವೆ ಎನ್‌ಹೆಚ್ -52 ರಲ್ಲಿ ನಿರ್ಮಿಸಲಾಗುತ್ತಿರುವ ನಾಲ್ಕು ಪಥದ ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ದಾಖಲೆಯನ್ನು ಬರೆದಿದೆ.

ಎರಡು ಸಾವಿರ ಕಿ.ಮೀ ರಸ್ತೆ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಿದೆ ಎನ್‌ಹೆಚ್‌ಎಐ

ಈ ಹೆದ್ದಾರಿಯಲ್ಲಿ ಕೇವಲ 18 ಗಂಟೆಗಳಲ್ಲಿ 25 ಕಿ.ಮೀಗಿಂತ ಹೆಚ್ಚು ಉದ್ದವಾದ ರಸ್ತೆಯನ್ನು ನಿರ್ಮಿಸಲಾಗಿದೆ. ಈ ಬಗ್ಗೆ ಹೆಚ್‌ಟಿ ಆಟೋ ವಿಸ್ತೃತವಾದ ವರದಿ ಮಾಡಿದೆ.

Most Read Articles

Kannada
English summary
NHAI to give approval for 2000 kms highway projects in next two weeks. Read in Kannada.
Story first published: Friday, March 19, 2021, 15:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X