ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಮಧ್ಯಮ ಗಾತ್ರದ ವಿವಿಧ ಕಾರುಗಳ ಮೂಲಕ ಉತ್ತಮ ಬೇಡಿಕೆ ಹೊಂದಿರುವ ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರು ಖರೀದಿದಾರರಿಗೆ ಅತ್ಯುತ್ತಮ ಆಫರ್ ನೀಡುತ್ತಿದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಇಂಡಿಯಾ ಕಂಪನಿಯು ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಗರಿಷ್ಠ ರೂ.95 ಸಾವಿರ ತನಕ ಆಫರ್ ಅನ್ನು ನೀಡುತ್ತಿದ್ದು, ಯುಗಾದಿ ಸಂಭ್ರಮಕ್ಕಾಗಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಹೊಸ ಆಫರ್‌ಗಳು ಆಕರ್ಷಿಸುತ್ತಿವೆ. ನಿಸ್ಸಾನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಕಿಕ್ಸ್ ಎಸ್‍ಯುವಿಯ ಮೇಲಿನ ಆಫರ್ ಅನ್ನು ಘೋಷಣೆ ಮಾಡಿದ್ದು, ಎಸ್‍ಯುವಿ ಮಾರಾಟದಲ್ಲಿ ಕುಸಿತವನ್ನು ಕಂಡಿರುವ ಕಿಕ್ಸ್ ಮಾದರಿಗೆ ಆಕರ್ಷಕ ಆಫರ್‌ಗಳು ಉತ್ತಮ ಬೇಡಿಕೆ ತಂದುಕೊಡುವ ನೀರಿಕ್ಷೆಯಿದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಕಿಕ್ಸ್ ಎಸ್‍ಯುವಿ ಮೇಲಿನ ರೂ.95 ಸಾವಿರ ರಿಯಾಯಿತಿಯಲ್ಲಿ ವಿವಿಧ ಆಫರ್‌ಗಳಲ್ಲಿ ಎಕ್ಸ್‌ಚೆಂಜ್, ಕ್ಯಾಶ್‌ಬ್ಯಾಕ್, ಲಾಯಲ್ಟಿ ಬೋನಸ್ ಒಳಗೊಂಡಿದ್ದು, ವಿವಿಧ ರೂಪಾಂತರಗಳಿಗೆ ಅನುಗುಣವಾಗಿ ಇನ್ನಷ್ಟು ಆಫರ್ ಪಡೆದುಕೊಳ್ಳಬಹುದಾಗಿದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಹೊಸ ಆಫರ್‌ಗಳು ಯುಗಾದಿ ತನಕವು ಲಭ್ಯವಿರಲಿದ್ದು, ರೂ.95 ಸಾವಿರದಲ್ಲಿ ರೂ.50 ಸಾವಿರ ಎಕ್ಸ್‌ಚೆಂಜ್ ಬೋನಸ್, ರೂ.25 ಸಾವಿರ ನಗದು ರಿಯಾಯಿತಿ ಮತ್ತು ರೂ.20 ಸಾವಿರ ಲಾಯಲ್ಟಿ ಬೋನಸ್ ಅನ್ನು ಒಳಗೊಂಡಿದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಇನ್ನು ನಿಸ್ಸಾನ್ ಕಿಕ್ಸ್ ಎಸ್‍ಯುವಿಗ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಕಿಕ್ಸ್ ಕಾರಿನ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ಸಾಮರ್ಥ್ಯದ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಈ ಎಂಜಿನ್‌ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದ್ದು, ನಿಸ್ಸಾನ್ ಸರಣಿಯಲ್ಲೇ ಟರ್ಬೊ ಎಂಜಿನ್ ಅತಿ ಹೆಚ್ಚು ಪವರ್‍ ಫುಲ್ ಮಾದರಿಯಾಗಿದೆ.

MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ನಿಸ್ಸಾನ್ ಹೊಸ ಕಿಕ್ಸ್ ಎಸ್‍ಯುವಿಯಲ್ಲಿ ಹಲವಾರು ನೂತನ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿದ್ದು, ಟಾಪ್ ಅಂಡ್ ಮಾದರಿಯಲ್ಲಿ ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ಸ್ ಗಳನ್ನು ಒಳಗೊಂಡಿವೆ.

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಹಾಗೆಯೇ ಹೊಸ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಕೂಡ ಹೊಂದಿದೆ.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಕಿಕ್ಸ್ ಎಸ್‍ಯುವಿ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ನಿಸ್ಸಾನ್ ಇಂಡಿಯಾ

ಈ ಮೂಲಕ ಹೊಸ ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ನೂತನ ಫೀಚರ್ ಗಳನ್ನು ಒಳಗೊಂಡಿರುವ ಎಸ್‍ಯುವಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಕಿಕ್ಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Saturday, March 27, 2021, 17:25 [IST]
English summary
Nissan has offered heavy discount offers on Kicks SUV in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+