Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ನಿಸ್ಸಾನ್ ಕಿಕ್ಸ್(Nissan Kicks) ಎಸ್‌ಯುವಿ ಖರೀದಿ ಮೇಲೆ ಬಂಪರ್ ಆಫರ್ ಅನ್ನು ಘೋಷಿಸಿದೆ. Nissan ಕಂಪನಿಯು ಹಬ್ಬದ ಸೀಸನ್‍ನಲ್ಲಿ ಕಿಕ್ಸ್ ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ಭರ್ಜರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ನಿಸ್ಸಾನ್ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಿಕ್ಸ್ ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಇದರಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್, ಕಾರ್ಪೊರೇಟ್ ರಿಯಾಯಿತಿ ಮತ್ತು ಆನ್‌ಲೈನ್ ಬುಕ್ಕಿಂಗ್ ಕೂಡ ಸೇರಿದೆ. ಈ ರಿಯಾಯಿತಿಗಳು ಈ ತಿಂಗಳ ಅಂತ್ಯದವರೆಗೂ ಲಭ್ಯವಿರುತ್ತದೆ. ಈ ರಿಯಾಯಿತಿಗಳು ರೂಪಾಂತರಗಳು ಮತ್ತು ಸ್ಥಳಗಳಲ್ಲಿ ಬದಲಾಗುತ್ತದೆ. ಸ್ಟಾಕ್ ಇರುವವರೆಗೆ ಅನ್ವಯವಾಗುತ್ತದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಪ್ರಕಾರ, ಟರ್ಬೊ ಪೆಟ್ರೋಲ್ ರೂಪಾಂತರದ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿಯನ್ನು ನೀಡಲಾಗಿದೆ. ಅದರಂತೆ ರೂ.15,000 ನಗದು ರಿಯಾಯಿತಿ ಮತ್ತು ರೂ.70,000 ವರೆಗಿನ ವಿನಿಮಯ ಬೋನಸ್ ಅನ್ನು ನೀಡಲಾಗುತ್ತದೆ. ಇನ್ನು ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿಯನ್ನು ಬ್ರ್ಯಾಂಡ್‌ನ ವೆಬ್‌ಸೈಟ್ ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ರೂ.5,000 ಬೋನಸ್ ಅನ್ನು ಪಡೆಯಬಹುದು.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಇದರೂಂದಿಗೆ ರೂ,10,000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತದೆ. ಕಂಪನಿಯು ಗ್ರಾಹಕರಿಗೆ ವಿಶೇಷ ಶೇ .7.99 ರ ಬಡ್ಡಿದರವನ್ನು ಸಹ ಒದಗಿಸುತ್ತಿದೆ .ಗಣೇಶ ಚತುರ್ಥಿಯ ಪ್ರಯುಕ್ತ ಮಹಾರಾಷ್ಟ್ರ, ಗೋವಾ ಮತ್ತು ರಾಜಸ್ಥಾನದಲ್ಲಿ ಮಾತ್ರ ಗ್ರಾಹಕರಿಗೆ ವಿಶೇಷವಾಗಿ ಪ್ರತಿ ಖರೀದಿಯಲ್ಲೂ 2 ಗ್ರಾಂ ಚಿನ್ನದ ನಾಣ್ಯವನ್ನು ಪಡೆಯಬಹುದು.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿಗ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ ಗಳಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ. ಇನ್ನು ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ನಿಸ್ಸಾನ್ ಸರಣಿಯಲ್ಲಿ ಅತಿ ಹೆಚ್ಚು ಪವರ್‍ ಫುಲ್ ಎಂಜಿನ್ ಅನ್ನು ಕಿಕ್ಸ್ ಎಸ್‍ಯುವಿಯನ್ನು ಒಳಗೊಂಡಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ನಿಸ್ಸಾನ್ ಕಿಕ್ಸ್ ಎಸ್‍ಯುವಿಯಲ್ಲಿ ಹಲವಾರು ಫೀಚರ್‍ಗಳನ್ನು ಹೊಂದಿವೆ. ಈ ನಿಸ್ಸಾನ್ ಕಿಕ್ಸ್ ಟಾಪ್ ಅಂಡ್ ಕಾರುಗಳು ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ಸ್ ಗಳನ್ನು ಹೊಂದಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಈ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಒಳಗೊಂಡಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಇನ್ನು ನಿಸ್ಸಾನ್ ಕಂಪನಿಯು ಭಾರತದ ವಿವಿಧ ನಗರಗಳಲ್ಲಿ ಹೊಸ ಮಾರಾಟ ಮಳಿಗೆಗಳ ವಿಸ್ತರಣೆಯೊಂದಿಗೆ ಸರ್ವಿಸ್ ಸೆಂಟರ್‌ಗಳನ್ನು ಸಹ ಹೆಚ್ಚಿಸುತ್ತಿದೆ. ಹೊಸ ಖರೀದಿಗೆ ಪ್ರಮುಖ ಅಂಶವಾಗಿರುವ ಸರ್ವಿಸ್ ಕೇಂದ್ರಗಳ ಲಭ್ಯತೆ ಬಗ್ಗೆ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಮುಂದಾಗಿರುವ ನಿಸ್ಸಾನ್ ಕಂಪನಿಯು ದೇಶಾದ್ಯಂತ 18 ಹೊಸ ಅಧಿಕೃತ ಸರ್ವಿಸ್ ಸೆಂಟರ್‌ಗಳನ್ನು ತೆರೆದಿದೆ. ಇದರ ಸರ್ವಿಸ್ ಸೆಂಟರ್‌ಗಳ ಮೂಲಕ ಕಂಪನಿಯು ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ಭಾರತದಿಂದಲೇ ನಿಸ್ಸಾನ್ ಕಂಪನಿಯು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಮ್ಯಾಗ್ನೈಟ್ ಸೇರಿದಂತೆ ವಿವಿಧ ಕಾರುಗಳನ್ನು ರಫ್ತು ಕೈಗೊಳ್ಳುತ್ತಿದೆ. ಸದ್ಯ ಭಾರತದಲ್ಲಿ ಖರೀದಿಗೆ ಲಭ್ಯವಿರುವ ರೈಟ್ ಹ್ಯಾಂಡ್ ಮಾದರಿಯ ಜೊತೆಗೆ ಲೆಫ್ಟ್ ಹ್ಯಾಂಡ್ ಮಾದರಿಯನ್ನು ರಫ್ತು ಆರಂಭಿಸಿದ್ದು, ಹೊಸದಾಗಿ ನೇಪಾಳ, ಇಂಡೋನೇಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮಾರಾಟ ಪ್ರಕ್ರಿಯೆ ಆರಂಭಗೊಂಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬುಕ್ಕಿಂಗ್ ಪಡೆದುಕೊಂಡ ನಿಸ್ಸಾನ್ ಮೊದಲ ಕಾರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ನಿಸ್ಸಾನ್ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಆರಂಭಿಸಿದ್ದು, ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕಾರ್ ರೆಂಟಲ್‌ ಕಂಪನಿಗಳಲ್ಲಿ ಆಸಕ್ತ ಗ್ರಾಹಕರು ಸಬ್‌ಸ್ಕ್ರೈಬ್ ಮಾಡಿಕೊಳ್ಳಬಹುದಾಗಿದೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದೆ.

Nissan Kicks ಎಸ್‍ಯುವಿಯ ಮೇಲೆ ರೂ.1 ಲಕ್ಷದವರೆಗೆ ಭರ್ಜರಿ ಡಿಸ್ಕೌಂಟ್

ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ನೂತನ ಫೀಚರ್ ಗಳನ್ನು ಒಳಗೊಂಡಿರುವ ಎಸ್‍ಯುವಿಯಾಗಿದೆ. ಈ ನಿಸ್ಸಾನ್ ಕಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಭರ್ಜರಿ ಡಿಸ್ಕೌಂಟ್ ಅನ್ನು ನೀಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಸಹಕಾರಿಯಾಗಬಹುದು,

More from DriveSpark

Article Published On: Thursday, September 9, 2021, 10:14 [IST]
English summary
Nissan india announced discount and attracts offers for kicks suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+