ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಕೋವಿಡ್ ಪರಿಣಾಮ ಉದ್ಯಮ ವ್ಯವಹಾರಗಳಲ್ಲಿ ಸಾಕಷ್ಟು ಹೊಸ ಬದಲಾವಣೆಗಳನ್ನು ಪರಿಚಯಿಸಿರುವ ಆಟೋ ಕಂಪನಿಗಳು ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ವಾಹನಗಳ ಮೇಲೆ ಲೀಸ್ ಆಯ್ಕೆಯನ್ನು ಹೆಚ್ಚಿಸುತ್ತಿದ್ದು, ನಿಸ್ಸಾನ್ ಇಂಡಿಯಾ ಕಂಪನಿಯು ಕೂಡಾ ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ವಿವಿಧ ಕಾರ್ ರೆಂಟಲ್ ಕಂಪನಿಗಳೊಂದಿಗೆ ಜೊತೆಗೂಡಿ ಲೀಸ್ ಆಯ್ಕೆ ಆರಂಭಿಸಿದೆೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಆಟೋ ಕಂಪನಿಗಳಿಗೆ ಕೋವಿಡ್‌ನಿಂದಾಗುತ್ತಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಕಾರ್ ಸಬ್‌ಸ್ಕೈಬ್ ಯೋಜನೆಗಳು ಸಾಕಷ್ಟು ಸಹಕಾರಿಯಾಗುತ್ತಿದ್ದು, ನಿಸ್ಸಾನ್ ಇಂಡಿಯಾ ಕಂಪನಿಯು ಕೂಡಾ ತನ್ನ ತನ್ನ ಪ್ರಮುಖ ಕಾರು ಮಾದರಿಗಳಾದ ಮ್ಯಾಗ್ನೈಟ್ ಮತ್ತು ಕಿಕ್ಸ್ ಕಾರುಗಳನ್ನು ಕಾರ್ ರೆಂಟಲ್‌ ಕಂಪನಿಗಳಲ್ಲಿ ಆಸಕ್ತ ಗ್ರಾಹಕರಿಗೆ ಸಬ್‌ಸ್ಕ್ರೈಬ್ ಆಯ್ಕೆ ಪರಿಚಯಿಸುತ್ತಿದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಗ್ರಾಹಕರು ಹೊಸ ವಾಹನಗಳ ಖರೀದಿಗೆ ಬದಲು ತಾತ್ಕಲಿಕವಾಗಿ ಸೆಲ್ಫ್ ಡ್ರೈವ್ ಲೀಸ್‌ ವಾಹನಗಳ ಮಾಲೀಕತ್ವವನ್ನು ಪಡೆದುಕೊಳ್ಳಲು ಮುಂದಾಗುತ್ತಿದ್ದು, ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿರುವ ಪ್ರಮುಖ ಕಾರು ಕಂಪನಿಗಳು ಲೀಸ್ ಕಾರುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಗ್ರಾಹಕರು ಹೊಸ ಕಾರು ಮಾದರಿಯನ್ನು ಪ್ರತಿ ತಿಂಗಳು ಕನಿಷ್ಠ ರೂ.18,490 ಲೀಸ್ ದರದ ಮೇಲೆ 12, 24, 36 ತಿಂಗಳ ಅವಧಿಗೆ ಮಾಲೀಕತ್ವ ಪಡೆದುಕೊಳ್ಳಬಹುದಾಗಿದ್ದು, ಕಾರುಗಳು ಮತ್ತು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಪ್ರತಿ ತಿಂಗಳ ಲೀಸ್ ದರ ಅನ್ವಯವಾಗುತ್ತದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಲೀಸ್ ಪಡೆದ ಕಾರುಗಳ ಚಂದಾ ದರವನ್ನು ಪ್ರತಿ ತಿಂಗಳು ಪಾವತಿಸಬೇಕಿರುವ ಗ್ರಾಹಕರ ತಮ್ಮ ಆದ್ಯತೆ ಮೇರೆಗೆ ಕಾರುಗಳನ್ನು 12 ರಿಂದ 24, 36 ತಿಂಗಳಿಗೆ ಲೀಸ್ ಪಡೆದುಕೊಳ್ಳಬಹುದಾಗಿದ್ದು, ಲೀಸ್ ಮೊತ್ತದಲ್ಲೇ ಕಾರಿನ ನಿರ್ವಹಣಾ ವೆಚ್ಚ, ಪಾಲಿಸಿ ಶುಲ್ಕಗಳು ಒಳಗೊಂಡಿರುತ್ತವೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಲೀಸ್‌ನಲ್ಲಿ ನೀಡಲಾಗುವ ಪ್ರತಿ ಕಾರು ಮಾದರಿಯು ಸಹ ಹೊಸ ಕಾರು ಆವೃತ್ತಿಯಾಗಿದ್ದು, ಮಾಲೀಕ್ವದ ಸಂದರ್ಭದಲ್ಲಿ ಸಾಮಾನ್ಯ ತಾಂತ್ರಿಕ ಅಂಶಗಳ ಸಮಸ್ಯೆಗಳನ್ನು ಹೊರತುಪಡಿಸಿ ತಪ್ಪು ಚಾಲನೆಯಿಂದಾಗುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆಗಳಿಗೆ ಚಂದಾದಾರರೇ ಹೊಣೆಯಾಗಿರುತ್ತಾರೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಲೀಸ್ ಹೊಂದಿರುವ ಕಾರುಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಸಲುವಾಗಿ ಕಂಪನಿಯು ಬಂಪರ್ ಟು ಬಂಪರ್ ಸುರಕ್ಷೆಗೆಗಾಗಿ ದುಬಾರಿ ಬೆಲೆಯ ಸಮಗ್ರ ವಿಮಾ ಪಾಲಿಸಿ ಹೊಂದಿರಲಿದ್ದು, ಲೀಸ್ ಸಂದರ್ಭದಲ್ಲಿ ಕಾರುಗಳ ಚಾಲನೆಗೆ ಪ್ರತಿ ತಿಂಗಳು ಇಂತಿಷ್ಟು ಕಿ.ಮೀ ನಿಗದಿಪಡಿಸಲಾಗಿರುತ್ತದೆ.

MOST READ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನ ಖರೀದಿಸುವ ಮುನ್ನ ತಿಳಿದಿರಬೇಕಾದ ಪ್ರಮುಖ ಅಂಶಗಳಿವು

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಲೀಸ್‌ಗೆ ಪಡೆದ ಕಾರುಗಳು ವಾರ್ಷಿಕವಾಗಿ ನಿಗದಿಪಡಿಸಿದ ಕಿ.ಮೀಗಿಂತಲೂ ಹೆಚ್ಚು ಸಂಚರಿಸಿದ್ದಲ್ಲಿ ಪ್ರತಿ ಕಿ.ಮೀ ಇಂತಿಷ್ಟು ಹೆಚ್ಚುವರಿ ಪಾವತಿ ಮಾಡಬೇಕಿದ್ದು, ತುರ್ತು ಸಂದರ್ಭಗಳಲ್ಲಿ ರೋಡ್ ಅಸಿಸ್ಟ್ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ.

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಇದು ಹೊಸ ಕಾರು ಖರೀದಿಯಿಂದಾಗುವ ಆರ್ಥಿಕ ಹೊರೆಗಿಂತಲೂ ತುಸು ಭಿನ್ನವಾಗಿದ್ದು, ಚಂದಾದಾರಿಕೆಯ ನಂತರ ಬಳಕೆಯ ಅವಶ್ಯಕತೆಯಿಲ್ಲ ಎಂದಾದಲ್ಲಿ ವಾಪಸ್ ನೀಡಬಹುದಾದ ಆಯ್ಕೆಯಿರುತ್ತದೆ. ಆದರೆ ಹೊಸ ವಾಹನ ಖರೀದಿ ನಂತರ ಆರ್ಥಿಕ ಹೊರೆಯಾದರೂ ನೀವು ಅದನ್ನು ನಿರ್ವಹಣೆ ಮಾಡಲೇಬೇಕಾದ ಅನಿವಾರ್ಯತೆಯಿರುತ್ತದೆ.

MOST READ: ಲಾಕ್‌ಡೌನ್ ಹಿನ್ನಲೆ ವಾಹನ ದಾಖಲೆಗಳ ಮಾನ್ಯತಾ ಅವಧಿ ಕುರಿತು ಸಾರಿಗೆ ಇಲಾಖೆಯಿಂದ ಹೊಸ ಆದೇಶ

ಕಾರ್ ಸಬ್‌ಸ್ಕ್ರೈಬ್ ಆರಂಭಿಸಿದ ನಿಸ್ಸಾನ್ ಇಂಡಿಯಾ ಕಂಪನಿ

ಹೀಗಾಗಿ ಲೀಸ್ ಕಾರುಗಳು ಅವಶ್ಯಕ ಸಂದರ್ಭಗಳಲ್ಲಿ ಸಾಕಷ್ಟು ಅನುಕೂಲ ಎನ್ನಬಹುದಾಗಿದ್ದು, ಗ್ರಾಹಕರು ವಿವಿಧ ಕಂಪನಿಗಳ ಪಾಲಿಸಿಗಳಿಗೆ ಅನುಗುಣವಾಗಿ ಗ್ರಾಹಕರು ಕನಿಷ್ಠ 12 ತಿಂಗಳುಗಳ ಕಾಲ ಕಾರ್ ಸಬ್‌ಸ್ಕ್ರೈಬ್ ಪಡೆದುದುಕೊಳ್ಳಲೇಬೇಕಾಗುತ್ತದೆ.

More from DriveSpark

Article Published On: Tuesday, June 8, 2021, 20:35 [IST]
English summary
Nissan Introduces Subscription Options For Its Portfolio In India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+