ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ನಿಸ್ಸಾನ್ ಇಂಡಿಯಾ ಕಂಪನಿಯು ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಿದ ನಂತರ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಖರೀದಿಗಾಗಿ ಇದುವರೆಗೆ ಸುಮಾರು 32 ಸಾವಿರಕ್ಕೂ ಅಧಿಕ ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಹೊಸ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರ ಕಾಯುವಿಕೆ ಅವಧಿಗೂ ಹೆಚ್ಚುತ್ತಿದ್ದು, ಉತ್ಪಾದನಾ ಸಾಮಾರ್ಥ್ಯದ ಆಧಾರದ ಮೇಲೆ ಹೊಸ ಕಾರನ್ನು ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ 4 ತಿಂಗಳಿನಿಂದ 10 ತಿಂಗಳ ಕಾಯಬೇಕಿದೆ. ಇದಕ್ಕಾಗಿ ಹೊಸ ಕಾರಿನ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಿರುವ ಕಂಪನಿಯು ಮೂರು ಶಿಫ್ಟ್‌ಗಳಲ್ಲಿ ಕಾರು ಉತ್ಪಾದನೆಯನ್ನು ಮಾಡಲಾಗುತ್ತಿದ್ದು, ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಹೊಸದಾಗಿ 1 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಲಾಗಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಹೊಸ ಉದ್ಯೋಗಿಗಳ ನೇಮಕವು ಕಾರು ಉತ್ಪಾದನೆಯನ್ನು ಹೆಚ್ಚಿಸಲು ಸಾಕಷ್ಟು ಸಹಕಾರಿಯಾಗುತ್ತಿದ್ದು, ಕಾರು ಉತ್ಪಾದನೆಯನ್ನು ಈಗಾಗಲೇ ಮೂರನೇ ಶಿಫ್ಟ್‌ನಲ್ಲೂ ಶುರುಮಾಡಿರುವುದು ಗ್ರಾಹಕರ ಕಾಯುವಿಕೆ ಅವಧಿಯನ್ನು ತಗ್ಗಿಸಲಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಕಾರಿನ ಉತ್ಪಾದನೆ ಪ್ರಮಾಣವು ಹೆಚ್ಚಿರುವುದರಿಂದ ಗ್ರಾಹಕರ ಕಾಯುವಿಕೆ ಪ್ರಮಾಣವು ಸುಮಾರು 2 ರಿಂದ 3 ತಿಂಗಳು ತಗ್ಗಲಿದ್ದು, ನಿಗದಿತ ಅವಧಿಯೊಳಗೆ ಕಾರು ಪೂರೈಕೆ ಮಾಡಲು ಸಹಕಾರಿಯಾಗಲಿದೆ ಎಂದು ನಿಸ್ಸಾನ್ ಇಂಡಿಯಾ ಕಂಪನಿಯು ಹೇಳಿಕೊಂಡಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಇನ್ನು ಹೊಸ ಕಾರು ಬಿಡುಗಡೆಯ ಸಂದರ್ಭದಲ್ಲೇ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬೆಲೆಯನ್ನು ಒಂದು ತಿಂಗಳ ನಂತರ ಹೆಚ್ಚಳ ಮಾಡಲಾಗುವುದಾಗಿ ತಿಳಿಸಿದ್ದ ನಿಸ್ಸಾನ್ ಕಂಪನಿಯು ಇದೀಗ ಪೂರ್ವ ನಿಗದಿಯಂತೆ ಬೆಲೆ ಹೆಚ್ಚಳ ಮಾಡಲಾಗಿದ್ದು, ಹೊಸ ದರಪಟ್ಟಿಯಲ್ಲಿ ಆರಂಭಿಕ ಆವೃತ್ತಿಯಾದ ಮ್ಯಾಗ್ನೈಟ್ ಎಂಟಿ ಎಕ್ಸ್ಇ ಬೆಲೆಯಲ್ಲಿ ರೂ. 50 ಸಾವಿರ ಹೆಚ್ಚಳದೊಂದಿಗೆ ಇನ್ನುಳಿದ ಆವೃತ್ತಿಗಳಲ್ಲಿ ಈ ಹಿಂದಿನ ಬೆಲೆಯನ್ನೇ ಮುಂದುವರಿಸಲಾಗಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಹೊಸ ದರ ನಿಗದಿ ನಂತರ ಮ್ಯಾಗ್ನೈಟ್ ಕಾರು ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.49 ಲಕ್ಷ ಬೆಲೆ ಪಡೆದುಕೊಂಡಿದ್ದು, ಟಾಪ್ ಎಂಡ್ ಮಾದರಿಯ ಬೆಲೆಯು ರೂ. 9.35 ಲಕ್ಷ ಬೆಲೆ ಪಡೆದುಕೊಂಡಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಮಾಗ್ನೈಟ್ ಟರ್ಬೊ ಸಿವಿಟಿ ಆಪ್ಷನ್ ಮಾದರಿಗಾಗಿ ಗ್ರಾಹಕರು ಹೆಚ್ಚುವರಿಯಾಗಿ ರೂ.24 ಸಾವಿರ ಪಾವತಿ ಮಾಡಬೇಕಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಇ, ಎಕ್ಸ್ಎಲ್, ಎಕ್ಸ್‌ವಿ ಮತ್ತು ಎಕ್ಸ್‌ವಿ ಪ್ರೀಮಿಯಂ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಮಾರಾಟಗೊಳ್ಳುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಮ್ಯಾಗ್ನೈಟ್ ಕಾರಿನಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ 1.0-ಲೀಟರ್ ಬಿ4ಡಿ ಪೆಟ್ರೋಲ್ ಎಂಜಿನ್ ಮತ್ತು ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಗಳನ್ನು ಜೋಡಣೆ ಮಾಡಲಾಗಿದ್ದು, 1.0-ಲೀಟರ್ ಬಿ4ಡಿ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಗಳಲ್ಲಿ ನೀಡಲಾಗಿರುವ ಹೆಚ್ಆರ್‌ಎಓ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಕ್ಸ್-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

1.0-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮಾದರಿಯು 70-ಬಿಎಚ್‌ಪಿ, 96-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದರೆ 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯು 100-ಬಿಎಚ್‌ಪಿ, 160-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಮ್ಯಾಗ್ನೈಟ್ ಕಾರಿಗೆ ಭರ್ಜರಿ ಬೇಡಿಕೆ- ಉತ್ಪಾದನೆ ಹೆಚ್ಚಳಕ್ಕೆ 1 ಸಾವಿರ ಹೆಚ್ಚುವರಿ ಉದ್ಯೋಗಿಗಳ ನೇಮಕ

ಈ ಮೂಲಕ ಹೊಸ ಕಾರು ಪ್ರೀಮಿಯಂ ಫೀಚರ್ಸ್ ಮತ್ತು ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಆವೃತ್ತಿಗಳಿಂತಲೂ ಕಡಿಮೆ ಬೆಲೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹೊಸ ಕಾರು ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ನಾಲ್ಕು ಸ್ಟಾರ್ ರೇಟಿಂಗ್ ಪಡೆದಕೊಂಡಿರುವುದು ಕೂಡಾ ಮತ್ತಷ್ಟು ಬೇಡಿಕೆ ಹೆಚ್ಚಿಸುವ ನೀರಿಕ್ಷೆಯಿದೆ.

Most Read Articles

Kannada
English summary
Nissan India To Hire 1,000 Plus Workers To Increase Magnite Production. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X