ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಇಂಡಿಯಾ ತನ್ನ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ನಿಸ್ಸಾನ್ ತನ್ನ ಕಿಕ್ಸ್ ಎಸ್‍ಯುವಿಯ ಮೇಲೆ ರೂ.80,000 ಗಳವರೆಗೆ ಆಫರ್ ಅನ್ನು ನೀಡುತ್ತಿದೆ.

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಜಪಾನ್ ಮೂಲದ ಕಾರು ತಯಾರಕ ನಿಸ್ಸಾನ್ ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಕಿಕ್ಸ್ ಎಸ್‍ಯುವಿಯ ಮೇಲಿನ ಆಫರ್ ಅನ್ನು ಘೋಷಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಇದರಿಂದ ಮಾರಾಟವನ್ನು ಹೆಚ್ಚಿಸಲು ತನ್ನ ಕಿಕ್ಸ್ ಎಸ್‍ಯುವಿಯ ಮೇಲೆ ರೂ.80,000 ಗಳವರೆಗಿನ ರಿಯಾಯಿತಿ ಘೋಷಿಸಲಾಗಿದೆ.

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಇದರಲ್ಲಿ ರೂ.50,000 ಗಳ ಎಕ್ಸ್‌ಚೆಂಜ್ ಬೋನಸ್, ರೂ.20,000ಗಳ ಲಾಯಲ್ಟಿ ಬೋನಸ್ ಮತ್ತು ರೂ.10,000 ನಗದು ರಿಯಾಯಿತಿಯನ್ನು ಒಳಗೊಂಡಿದೆ. ಈ ಆಫರ್ ಈ ತಿಂಗಳ ಅಂತ್ಯದವರೆಗೆ ಲಭ್ಯವಿರುತ್ತದೆ.

MOST READ: ನವೆಂಬರ್ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ಕಾರುಗಳಿವು

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ನಿಸ್ಸಾನ್ ಎಸ್‍ಯುವಿಗ ಬಗ್ಗೆ ಹೇಳುವುದಾದರೆ, ಇದರ ಬೇಸ್ ಸ್ಪೆಕ್ ಎಕ್ಸ್‌ಎಲ್ ಮತ್ತು ಎಕ್ಸ್‌ವಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 142 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೊಡಿಸಲಾಗಿದೆ.

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಇನ್ನು ಹೊಸ ನಿಸ್ಸಾನ್ ಕಿಕ್ಸ್ ಮಿಡ್ ಸ್ಪೆಕ್ ಮತ್ತು ಟಾಪ್-ಸ್ಪೆಕ್ ರೂಪಾಂತರಗಳಲ್ಲಿ 1.3 ಲೀಟರ್ ನಾಲ್ಕು-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 156 ಬಿಹೆಚ್‍ಪಿ ಪವರ್ ಮತ್ತು 254 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ಎಂಜಿನ್ ನೊಂದಿಗೆ ಸ್ಟ್ಯಾಂಡರ್ಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್‌ ಅಥವಾ ಬ್ರ್ಯಾಂಡ್‌ನ ಹೊಸ ಎಕ್ಸ್-ಟ್ರೋನಿಕ್ ಸಿವಿಟಿ ಗೇರ್‌ಬಾಕ್ಸ್‌ ಹೊಂದಿರುತ್ತದೆ. ನಿಸ್ಸಾನ್ ಸರಣಿಯಲ್ಲಿ ಅತಿ ಹೆಚ್ಚು ಪವರ್‍ ಫುಲ್ ಎಂಜಿನ್ ಇದಾಗಿದೆ.

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ಹೊಸ ನಿಸ್ಸಾನ್ ಕಿಕ್ಸ್ ಎಸ್‍ಯುವಿಯಲ್ಲಿ ಹಲವಾರು ನೂತನ ಫೀಚರ್‍ಗಳನ್ನು ಹೊಂದಿದೆ. ನಿಸ್ಸಾನ್ ಕಿಕ್ಸ್ ಟಾಪ್ ಅಂಡ್ ಕಾರುಗಳು ರಿಮೋಟ್ ಎಂಜಿನ್ ಸ್ಟಾರ್ಟ್, ಪುಶ್-ಬಟನ್ ಸ್ಟಾರ್ಟ್ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಫೀಚರ್ ಗಳನ್ನು ಹೊಂದಿದೆ.

MOST READ: 2020ರ ಡಿಸೆಂಬರ್‌ ತಿಂಗಳ ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದ ಟೊಯೊಟಾ

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ಎಸ್‍ಯುವಿಯಲ್ಲಿ ಕ್ರೂಸ್ ಕಂಟ್ರೋಲ್, 'ಅರೌಂಡ್ ವ್ಯೂ ಮಾನಿಟರ್' 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಲೆದರ್ ಸೀಟುಗಳು, ಕಾರ್ನರಿಂಗ್ ಫಾಗ್ ಲ್ಯಾಂಪ್‌ಗಳು, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್, ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

ಜನಪ್ರಿಯ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮೇಲೆ ಭರ್ಜರಿ ರಿಯಾಯಿತಿ

ಈ ಹೊಸ ನಿಸ್ಸಾನ್ ಕಿಕ್ಸ್ ಪವರ್ ಫುಲ್ ಎಂಜಿನ್ ಮತ್ತು ಹೊಸ ಫೀಚರ್ ಗಳನ್ನು ಕೂಡ ಹೊಂದಿದೆ. ಈ ಹೊಸ ನಿಸ್ಸಾನ್ ಕಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಭರ್ಜರಿ ಆಫರ್ ಅನ್ನು ಘೋಷಿಸಿರುವುದರಿಂದ ನಿಸ್ಸಾನ್ ಕಿಕ್ಸ್ ಎಸ್‍ಯುವಿಯ ಮಾರಾಟವನ್ನು ಹೆಚ್ಚಿಸಲು ನೆರವಾಗಬಹುದು.

Article Published On: Thursday, January 7, 2021, 17:26 [IST]
English summary
Nissan Kicks Suv January 2021 Offer. Read In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+